ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Gubbi News: ಏ.6ಕ್ಕೆ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಏ.6ಕ್ಕೆ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ

ತಾಲ್ಲೂಕಿನಲ್ಲಿ ಪತ್ರಕರ್ತರ ಸಂಘದ ಚಟುವಟಿಕೆ ಚುರುಕಿನಿಂದ ಸಾಗಿದ್ದು ಪದಾಧಿಕಾರಿ ಗಳು, ಸದಸ್ಯರು ಹಾಗೂ ಸದಸ್ಯತ್ವ ಆಕಾಂಕ್ಷಿ ಪತ್ರಕರ್ತರು ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ. ಪತ್ರಕರ್ತರ ಸಕ್ರಿಯ ಚಟುವಟಿಕೆ ಮೂಲಕ ಸಂಘದ ಇರುವಿಕೆ ಗುರುತಿಸಲು ಕಚೇರಿ ಆರಂಭಿಸಿ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಸಲಹೆ ನೀಡಿದರು

Chikkaballapur News: ಬಜಾರ್ ರಸ್ತೆ ಮತ್ತು ಗಂಗಮ್ಮಗುಡಿ ರಸ್ತೆ ಅಭಿವೃದ್ದಿಪಡಿಸಲು ಸಜ್ಜಾದ ಜಿಲ್ಲಾಡಳಿತ: ಜಿಲ್ಲಾಧಿಕಾರಿ ಜಿ.ಪ್ರಭು

ಗಂಗಮ್ಮಗುಡಿ ರಸ್ತೆ ಅಭಿವೃದ್ದಿಪಡಿಸಲು ಸಜ್ಜಾದ ಜಿಲ್ಲಾಡಳಿತ

ಗಂಗಮ್ಮಗುಡಿ ರಸ್ತೆ ಮತ್ತು ಬಜಾರ್ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಯು ದಶಕಗಳ ಕನಸಾಗಿದೆ.ಜಿಲ್ಲಾ ಕೇಂದ್ರದ ಪ್ರಮುಖ ವಾಣಿಜ್ಯ ಚಟವಟಿಕೆಗಳ ತಾಣವಾದ ಈ ರಸ್ತೆಗಳ ಜನರ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿವೆ. ಇದನ್ನು ಮನಗಂಡಿರುವ ಜಿಲ್ಲಾಡಳಿತ ಸರಕಾರಿ ನಿಯಮಗಳಿಗೆ ಅನುಸಾರವಾಗಿ ಕ್ರಮವಹಿಸಿದೆ.

64ನೇ ವರ್ಷದ ಊರದೇವತೆ ಜಾಲಾರಿ ಗಂಗಮ್ಮದೇವಿ, ಧರ್ಮರಾಯಸ್ವಾಮಿ ಅದ್ಧೂರಿ ಹೂವಿನ ಕರಗ ಮಹೋತ್ಸವಕ್ಕೆ ದಿನಗಣನೆ

1 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ, 11 ತಂಡಗಳಿಂದ ರಸಸಂಜೆ

ಪೊಲೀಸ್ ಇಲಾಖೆ, ಮಾಧ್ಯಮ ಬಳಗ ಎಂದೆಂದಿಗೂ ಜತೆಯಾಗಿ ನಿಂತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಡಳಿತವೂ ನೆರವು ನೀಡಲಿದೆ. ಇಂತಹ ಮಹೋನ್ನತ ಧಾರ್ಮಿಕ ಕಾರ್ಯಕ್ರಮದಲ್ಲಿ  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮದೇವತೆಯ ಕೃಪೆಗೆ ಪಾತ್ರ ರಾಗಬೇಕೆಂದು ಎಂದು ಕರಗ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಮನವಿ ಮಾಡಿದರು.

Chikkaballapur News: 1564 ಬಾಕಿ ಯುಡಿಐಡಿ ಕಾರ್ಡ್ಗಳ ವಿಲೇ ಬಗ್ಗೆ ತ್ವರಿತ ಕ್ರಮ ವಹಿಸಿ: ಜಿಲ್ಲಾಧಿಕಾರಿ ಜಿ.ಪ್ರಭು

1564 ಬಾಕಿ ಯುಡಿಐಡಿ ಕಾರ್ಡ್ಗಳ ವಿಲೇ ಬಗ್ಗೆ ತ್ವರಿತ ಕ್ರಮ ವಹಿಸಿ

“ವಿಕಲಚೇತನ ವಿಶಿಷ್ಟ ಗುರುತಿನ ಚೀಟಿ” ಸೃಜನೆಗಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ದೃಢೀಕರಣ ಪ್ರಮಾಣ ಪತ್ರ ನೀಡುವ ಹಂತದಲ್ಲಿ ಪ್ರಸ್ತುತ 1564 ಅರ್ಜಿಗಳು ಬಾಕಿ ಇವೆ. ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಯೋಜಿತ ಕಾರ್ಯಕ್ರಮ ರೂಪಿಸಬೇಕು

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಕಡ್ಡಾಯ ಆದೇಶ ಹಿಂಪಡೆದಿಲ್ಲ: ಸಾರಿಗೆ ಇಲಾಖೆ ಸ್ಪಷ್ಟನೆ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಕಡ್ಡಾಯ ಆದೇಶ ಹಿಂಪಡೆದಿಲ್ಲ

ಹೈಕೋರ್ಟ್ ಆದೇಶದಿಂದಾಗಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯ ಬಗ್ಗೆ ಪ್ರಚಾರ ನಡೆಸಲು ಸಾಧ್ಯವಾಗಿಲ್ಲ. ಆದರೆ, HSRP ಅಳವಡಿಕೆ ಕಡ್ಡಾಯ ಆದೇಶಕ್ಕೆ ಯಾವುದೇ ತಡೆಯಾಜ್ಞೆ ಇಲ್ಲ. ಇದರಿಂದಾಗಿ ಸಾರ್ವಜನಿಕರು ತಮ್ಮ ವಾಹನಗಳಿಗೆ HSRP ಅಳವಡಿಸಿಕೊಳ್ಳಬೇಕಾಗಿರುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

Chikkaballapur News: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದಾಖಲೆ ರಹಿತ ನಿವಾಸಿಗಳ ಆಶಾಕಿರಣವಾದ ಕಂದಾಯ ಗ್ರಾಮ ಅಭಿಯಾನ

ದಾಖಲೆ ರಹಿತ ನಿವಾಸಿಗಳ ಆಶಾಕಿರಣವಾದ ಕಂದಾಯ ಗ್ರಾಮ ಅಭಿಯಾನ

ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನ ವಸತಿಗಳಾದ ತಾಂಡ, ಹಟ್ಟಿ, ಹಾಡಿ, ಪಾಳ್ಯ, ಮಜಿರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ವಾಸದ ಮನೆಗಳ ಹಕ್ಕು ದಾಖಲೆಗಳು ಇಲ್ಲದೆ ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇಂತಹ ಅನೇಕ ಗ್ರಾಮಗಳು ಮೂಲಭೂತ ಸೌಕರ್ಯ ಪಡೆಯಲು ಹರ ಸಾಹಸ ಪಡಬೇಕಾಗಿತ್ತು

MLA B.N.Ravikumar: ತ್ಯಾಜ್ಯ ಘಟಕ ಬೆಂಕಿಗೆ ಕಂಗಾಲಾದ ಗ್ರಾಮಸ್ಥರು: ಸ್ಥಳಕ್ಕೆ ಧಾವಿಸಿದ ಶಾಸಕ

ತ್ಯಾಜ್ಯ ಘಟಕ ಬೆಂಕಿಗೆ ಕಂಗಾಲಾದ ಗ್ರಾಮಸ್ಥರು: ಸ್ಥಳಕ್ಕೆ ಧಾವಿಸಿದ ಶಾಸಕ

ತ್ಯಾಜ್ಯ ಸಂಸ್ಕರಣಾ ಘಟಕದ ಯಂತ್ರೋಪಕರಣಗಳನ್ನು ದುರಸ್ತಿ ಮಾಡಿ ಗೊಬ್ಬರ ತಯಾರಿಕಾ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುವಂತೆ ಹಾಗೂ ಅಗತ್ಯವಿದ್ದಲ್ಲಿ ಹೊಸ ಟೆಂಡರ್ ಕರೆಯುವ ಮೂಲಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸುಧಾರಿಸುವಂತೆ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು.

MLA K.H.PuttaswamyGowda: ಉದ್ಯಮಿಗಳಿಗೆ ಬೇಕಾದ ವ್ಯವಸ್ಥೆ ಮಾಡಲು ತಾಲೂಕು ಆಡಳಿತ ಸದಾ ಸಿದ್ಧ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಉದ್ಯಮಿಗಳಿಗೆ ಬೇಕಾದ ವ್ಯವಸ್ಥೆ ಮಾಡಲು ತಾಲೂಕು ಆಡಳಿತ ಸದಾ ಸಿದ್ಧ

ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿ ಸಲು ಮುಂದೆ ಬರುವ ಉದ್ಯಮದಾರರಿಗೆ ಎಲ್ಲಾ ರೀತಿಯ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕೈಗಾ ರಿಕಾ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವುದಾಗಿ ಶಾಸಕ ಕೆಎಚ್.ಪುಟ್ಟಸ್ವಾಮಿ ಗೌಡರು(MLA K.H. Puttaswamy Gowda) ತಿಳಿಸಿದರು.

ಉಪ ಚುನಾವಣೆ; 2 ಕ್ಷೇತ್ರ ಕೈಜಾರುವ ಭೀತಿಯಿಂದ ಸಿಎಂಗೆ ನಿದ್ರೆ ಬರುತ್ತಿಲ್ಲ ಎಂದ ವಿಜಯೇಂದ್ರ

2 ಕ್ಷೇತ್ರ ಕೈಜಾರುವ ಭೀತಿಯಿಂದ ಸಿಎಂಗೆ ನಿದ್ರೆ ಬರುತ್ತಿಲ್ಲ ಎಂದ ವಿಜಯೇಂದ್ರ

BY Vijayendra: ಎರಡೂ ಕಡೆಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಗೊಂದಲದಲ್ಲಿ ಮುಖ್ಯಮಂತ್ರಿಗಳು ಇದ್ದಾರೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಸೋಲುವ ಭೀತಿ ಎದುರಾಗಿದೆ: ಬಿ.ವೈ. ವಿಜಯೇಂದ್ರ

Kalaburagi News: ಕಮಲಾಪುರದಲ್ಲಿ ಯುವತಿಯನ್ನು ಕೊಂದು, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

ಕಲಬುರಗಿಯಲ್ಲಿ ಯುವತಿಯನ್ನು ಕೊಂದು, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

Kalaburagi News: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಅಪರಿಚಿತ ಮಹಿಳೆಯೊಬ್ಬಳ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹಾಗೂ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊಬೈಲ್‌ ಕಳ್ಳತನ; ಒಂಬತ್ತು ಅಪ್ರಾಪ್ತರು ಸೇರಿ 13 ಆರೋಪಿಗಳ ಅರೆಸ್ಟ್‌, 75 ಫೋನ್‌ ವಶಕ್ಕೆ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊಬೈಲ್‌ ಕಳ್ಳತನ; 13 ಆರೋಪಿಗಳ ಅರೆಸ್ಟ್‌

Mobile phone theft at Chinnaswamy Stadium: ಉತ್ತರ ಭಾರತ ಮೂಲದ 13 ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಕೃತ್ಯ ಎಸಗಲು ಪ್ಲ್ಯಾನ್‌ ಮಾಡಿಕೊಂಡು ವಿಮಾನದಲ್ಲಿ ನಗರಕ್ಕೆ ಬಂದಿದ್ದರು. ಐಪಿಎಲ್‌ ಪಂದ್ಯಗಳ ವೇಳೆ ಅಭಿಮಾನಿಗಳ ಸೋಗಿನಲ್ಲಿ ಸ್ಟೇಡಿಯಂ ಪ್ರವೇಶಿಸಿ ಕೃತ್ಯವೆಸುಗುತ್ತಿದ್ದರು ಎಂದು ತಿಳಿದುಬಂದಿದೆ.

Lekana Hegde interview: ಇಲ್ಲಿದೆ, ಮಿಸ್‌ ಯೂನಿವರ್ಸ್ ಕರ್ನಾಟಕ ವಿಜೇತೆ ಲೇಖನಾ ಹೆಗ್ಡೆ ಮೊದಲ ಫ್ಯಾಷನ್‌ ಮಾತು!

ಮಿಸ್‌ ಯೂನಿವರ್ಸ್ ಕರ್ನಾಟಕ ವಿಜೇತೆ ಲೇಖನಾ ಹೆಗ್ಡೆ ಮೊದಲ ಫ್ಯಾಷನ್‌ ಮಾತು

Miss universe Karnataka 2026: ಮಿಸ್‌ ಯೂನಿವರ್ಸ್ ಕರ್ನಾಟಕ 2026 ಕಿರೀಟ ಗೆದ್ದ ನಂತರ ಲೇಖನಾ ಹೆಗ್ಡೆ ಮೊತ್ತ ಮೊದಲ ಸಂದರ್ಶನ ವಿಶ್ವವಾಣಿ ನ್ಯೂಸ್‌ಗೆ ನೀಡಿದ್ದು, ಅವರ ಮೊದಲ ಫ್ಯಾಷನ್‌ ಸಂದರ್ಶನದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.

PES University: ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಅದ್ಧೂರಿಯಾಗಿ ನಡೆದ ʼಕಲ್‌ನೈಟ್ 26  ಕಾರ್ಯಕ್ರಮ

ಪಿಇಎಸ್ ವಿವಿಯಲ್ಲಿ ಅದ್ಧೂರಿಯಾಗಿ ನಡೆದ ʼಕಲ್‌ನೈಟ್ʼ ಕಾರ್ಯಕ್ರಮ

PES University: ಪಿಇಎಸ್ ವಿಶ್ವವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಉತ್ಸವ 'ಆತ್ಮತೃಷ' ದ ಸಾಂಸ್ಕೃತಿಕ ರಾತ್ರಿ ʼಕಲ್‌ನೈಟ್ʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜೆ. ಸೂರ್ಯಪ್ರಸಾದ್ ಹಾಗೂ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ವಿ. ಕೃಷ್ಣ ಅವರು ಶನಿವಾರ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು.

Bagalkot Bypoll 2026: ಬಿಜೆಪಿ ಅಧಿಕಾರದಲ್ಲಿ ಶ್ರೀಮಂತರು-ಬಡವರ ನಡುವಿನ ಅಂತರ ಹೆಚ್ಚಿದೆ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರದಲ್ಲಿ ಶ್ರೀಮಂತರು-ಬಡವರ ನಡುವಿನ ಅಂತರ ಹೆಚ್ಚಿದೆ: ಸಿಎಂ

ಬಾಗಲಕೋಟೆಯ ಜನಪ್ರತಿನಿಧಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಎಚ್.ವೈ. ಮೇಟಿ ಅವರು ಅಕಾಲಿಕ ನಿಧನರಾದ ಕಾರಣದಿಂದ ಅವರ ಪುತ್ರ ಉಮೇಶ್ ಮೇಟಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಉಮೇಶ್ ಅವರನ್ನು ಜನರು ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Tumkur News: ಕೌಟುಂಬಿಕ ಕಲಹ: ನಾಪತ್ತೆಯಾಗಿದ್ದ ತುಮಕೂರಿನ ಮಹಿಳಾ ಪಿಎಸ್ಐ ಪತ್ತೆ

ಕೌಟುಂಬಿಕ ಕಲಹ: ನಾಪತ್ತೆಯಾಗಿದ್ದ ತುಮಕೂರಿನ ಮಹಿಳಾ ಪಿಎಸ್ಐ ಪತ್ತೆ

ತಾಯಿ ಮನೆಗೆ ಬಾರದೆ ಮತ್ತು ಫೋನ್ ಸಂಪರ್ಕಕ್ಕೂ ಸಿಗದ ಕಾರಣ ಆತಂಕಗೊಂಡ ಮಂಗಳಮ್ಮ ಅವರ ಪುತ್ರಿ, ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತೀವ್ರ ಹುಡುಕಾಟದ ನಂತರ ಚಿಕ್ಕಮಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಮಹಿಳಾ ಪಿಎಸ್‌ಐ ಪತ್ತೆಯಾಗಿದ್ದಾರೆ.

ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು: ದಿಯಾ ಅಜಯ್

ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು: ದಿಯಾ ಅಜಯ್

SDM College: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ಕಾಂ ಹಾಗೂ ಬಿ.ಬಿ.ಎ. ವಿಭಾಗಗಳು ಜಂಟಿಯಾಗಿ ಶನಿವಾರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಒಂದು ದಿನದ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ 'ವೆಂಚುರ- 2026' ನಡೆಸಿದವು. ಕರ್ನಾಟಕ ಮತ್ತು ಕೇರಳದ ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕಿನ ಕಸ್ಟಮರ್ ಕೇರ್ ಆಪರೇಷನ್ಸ್ ಮುಖ್ಯಸ್ಥೆ ದಿಯಾ ಅಜಯ್ ಕಾರ್ಯಕ್ರಮ ಉದ್ಘಾಟಿಸಿದರು.

SSLC Exam: ಕನ್ನಡ ಭಾಷೆ ವಿಚಾರದಲ್ಲಿ ನಿಮ್ಮ ಅಧಿಕಪ್ರಸಂಗ ಒಪ್ಪಲ್ಲ; ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ

ರಾಜ್ಯಪಾಲರ ಅಧಿಕಪ್ರಸಂಗ ಒಪ್ಪಲ್ಲ; ಕರವೇ ನಾರಾಯಣಗೌಡ ಕಿಡಿ

third language in SSLC exam: ಮೊದಲು ಉತ್ತರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ ಎಂದು ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ.

ಲೇಖನಾ ಹೆಗ್ಡೆ ಮುಡಿಗೇರಿದ ಮಿಸ್‌ ಯೂನಿವರ್ಸ್ ಕರ್ನಾಟಕ 2026ರ ಕಿರೀಟ

ಲೇಖನಾ ಹೆಗ್ಡೆ ಮಿಸ್‌ ಯೂನಿವರ್ಸ್ ಕರ್ನಾಟಕ 2026

Miss universe Karnataka 2026: ಉದ್ಯಾನನಗರಿ ಅರಮನೆ ಮೈದಾನದಲ್ಲಿ ವರ್ಣರಂಜಿತವಾಗಿ ನಡೆದ ಮಿಸ್‌ ಯೂನಿವರ್ಸ್ ಕರ್ನಾಟಕ 2026 ಪೇಜೆಂಟ್‌ನ ಫಿನಾಲೆಯಲ್ಲಿ ಲೇಖನಾ ಹೆಗ್ಡೆ ಕಿರೀಟವನ್ನು ಮುಡಿಗೇರಿಸಿಕೊಂಡು ವಿಜೇತರಾದರು. ಈ ಸೌಂದರ್ಯ ಸ್ಪರ್ಧೆಯ ಕುರಿತಂತೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್ .

ವಿಡಿಯೊ ಇರುವುದು ನಿಜ, ಆದ್ರೆ ಆಕೆಯೇ ರೆಕಾರ್ಡ್‌ ಮಾಡಿದ್ದು; ಯುವತಿ ಮೊಬೈಲ್‌ ಚೆಕ್‌ ಮಾಡಿ ಎಂದ ಸಮೀರ್‌

ವಿಡಿಯೊ ಇರುವುದು ನಿಜ, ಆದ್ರೆ ಆಕೆಯೇ ರೆಕಾರ್ಡ್‌ ಮಾಡಿದ್ದು: ಸಮೀರ್‌

ಸಂತ್ರಸ್ತೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಎಂದು ಹೇಳಿರುವ ಸಮೀರ್, ವಿಡಿಯೊ ರೆಕಾರ್ಡ್ ಆಗಿರುವುದು ನಿಜ. ಆದರೆ ಅದು ಯಾರ ಮೊಬೈಲ್‌ನಲ್ಲಿ ತೆಗೆಯಲಾಗಿದೆ ಎಂಬುವುದು ನಿಮಗೆ ತಿಳಿಯಬೇಕು. ನನ್ನ ಫೋನ್‌ನಲ್ಲಿ ಯಾವುದೇ ವಿಡಿಯೊ, ಫೋಟೊಗಳು ಇಲ್ಲ ಎಂದು ಸಮೀರ್ ಸ್ಪಷ್ಟಪಡಿಸಿದ್ದಾನೆ.

Bangla immigrants: ಭಾರಿ ಕಾರ್ಯಾಚರಣೆ, ಬೆಂಗಳೂರಿನಿಂದ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಭಾರಿ ಕಾರ್ಯಾಚರಣೆ, ಬೆಂಗಳೂರಿನಿಂದ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಸಿಸಿಬಿ ಪೊಲೀಸರು ಇಡೀ ಬೆಂಗಳೂರಿನಾದ್ಯಂತ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಶುರು ಮಾಡಿದ್ದಾರೆ. ಸದ್ಯ ಗುರುತಿಸಲಾದ ಅಕ್ರಮ ವಲಸಿಗರನ್ನು ತಮ್ಮ ದೇಶಕ್ಕೆ ಬಿಡುವ ಕೆಲಸ ಮುಂದುವರಿಸಿದ್ದಾರೆ. ಈ ಪೈಕಿ 178 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಸೇರಿದ್ದಾರೆ. ಎಲ್ಲರನ್ನು ಪೊಲೀಸರು ಪತ್ತೆ ಮಾಡಿ ಒಟ್ಟಿಗೆ ಗಡಿಪಾರು ಮಾಡಿದ್ದಾರೆ.

Gold Price Today On 4th April 2026: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ; ದರ ಚೆಕ್‌ ಮಾಡಿ

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

Gold Rate Today: ಚಿನ್ನದ ದರ ಶನಿವಾರ ಯಥಾಸ್ಥಿತಿ ಕಾಯ್ತುಕೊಂಡಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,835 ರುಪಾಯಿಗೆ ಇದ್ದು, 24 ಕ್ಯಾರಟ್‌ನ 1 ಗ್ರಾಂ ಚಿನ್ನ 15,093 ರುಪಾಯಿಯಲ್ಲೇ ಮುಂದುವರಿದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,10,680 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,38,350 ರುಪಾಯಿ ಹಾಗೂ 100 ಗ್ರಾಂಗೆ 13,83,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,20,744 ರುಪಾಯಿ, 10 ಗ್ರಾಂಗೆ 1,50,930 ರುಪಾಯಿ ಹಾಗೂ 100 ಗ್ರಾಂಗೆ 15,09,300 ರುಪಾಯಿ ಇದೆ.

Self Harming: ಮದುವೆಯಾಗಲಿಲ್ಲ ಅಂತ ನೊಂದು ತೆಂಗಿನಮರಕ್ಕೆ ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ

ಮದುವೆಯಾಗಲಿಲ್ಲ ಅಂತ ನೊಂದು ಯುವಕ ಆತ್ಮಹತ್ಯೆ

ಮೃತ ಕುಮಾರ್ ಪೋಷಕರ ಬಳಿ ಮದುವೆ ಮಾಡುವಂತೆ ಕೇಳುತ್ತಿದ್ದ. ಆದರೆ, ಪೋಷಕರು ನಿನ್ನ ಅಣ್ಣಂದಿರಿಗೆ ಮದುವೆಗೆ ಆಗಿಲ್ಲ. ಹುಡುಗಿ ಸಿಗುತ್ತಿಲ್ಲ. ಅವರಿಗೆ ಆದ ಮೇಲೆ ನಿನಗೆ ಮಾಡುತ್ತೇವೆ. ಇಲ್ಲ ಅವನ ಜೊತೆಯೇ ಒಟ್ಟಿಗೆ ಮದುವೆ ಮಾಡುತ್ತೇವೆ‌ ಎಂದಿದ್ದರು.

Love Jihad: ಹುಬ್ಬಳ್ಳಿ ಲವ್ ಜಿಹಾದ್ ಕೇಸ್ : ಆರೋಪಿ ಸಮೀರ್, ಸಹೋದರಿ ಸೇರಿ 6 ಜನರ ವಿರುದ್ಧ ದೂರು

ಹುಬ್ಬಳ್ಳಿ ಲವ್ ಜಿಹಾದ್: ಆರೋಪಿ ಸಮೀರ್, ಸಹೋದರಿ ಸೇರಿ 6 ಜನರ ವಿರುದ್ಧ ದೂರು

ಯುವತಿಯ ದೂರಿನ ಆಧಾರದ ಮೇಲೆ ಜಿಮ್‌ ಟ್ರೈನರ್‌, ಪ್ರಮುಖ ಆರೋಪಿ ಸಮೀರ್ ವಿರುದ್ಧ ಬಿಎನ್‌ಎಸ್ 64(1), 351, 123 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಐವರನ್ನೂ ಹೆಸರಿಸಲಾಗಿದೆ. ಯುವತಿ ದೂರಿನ ಹಿನ್ನೆಲೆ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸದ್ಯ ಸಮೀರ್ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Rudrappa Lamani: ಸರ್ಕಾರಿ ಬಸ್ಸಿಗೆ ಗುದ್ದಿದ ರುದ್ರಪ್ಪ ಲಮಾಣಿ ಎಸ್ಕಾರ್ಟ್‌ ವಾಹನ

ಸರ್ಕಾರಿ ಬಸ್ಸಿಗೆ ಗುದ್ದಿದ ರುದ್ರಪ್ಪ ಲಮಾಣಿ ಎಸ್ಕಾರ್ಟ್‌ ವಾಹನ

ಎಸ್ಕಾರ್ಟ್ ವಾಹನದ (Escort Vehicle) ಚಾಲಕ ಚನ್ನಬಸಪ್ಪ ಅರ್ಚಕ್ ವಿರುದ್ಧ ದೂರು ದಾಖಲಾಗಿದೆ. ಅತೀವೇಗದ ಚಾಲನೆಯಿಂದ ಬಸ್‌ನ ಹಿಂಬದಿಗೆ ಗುದ್ದಿದ್ದಾನೆ ಎನ್ನಲಾಗಿದೆ. ಎಸ್ಕಾರ್ಟ್ ವಾಹನದ ಮುಂದಿನ ಭಾಗ ಮತ್ತು ಬಸ್‌ನ ಹಿಂದಿನ ಭಾಗ ಸಂಪೂರ್ಣ ಹಾನಿಯಾಗಿದೆ.

Loading...