ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ರಾಜ್ಯದಲ್ಲಿ ಬರಗಾಲ, ʼಕಹಿʼಯಾಗಲಿದೆ ಸಕ್ಕರೆ

ರಾಜ್ಯದಲ್ಲಿ ಬರಗಾಲ, ʼಕಹಿʼಯಾಗಲಿದೆ ಸಕ್ಕರೆ

ಕಳೆದ ವರ್ಷ ರಾಜ್ಯದಲ್ಲಿರುವ 81 ಸಕ್ಕರೆ ಕಾರ್ಖಾನೆ ಗಳಿಂದ 576 ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ಕಳೆದ ವರ್ಷ ಕರ್ನಾಟಕ ಹಾಗೂ ಮಹಾ ರಾಷ್ಟ್ರದಲ್ಲಿ ಇಳುವರಿ ಹೆಚ್ಚಾಗಿದ್ದರಿಂದ ದೇಶದ ಒಟ್ಟು ಸಕ್ಕರೆ ಉತ್ಪಾದನೆ ಶೇ.7ರಷ್ಟು ಏರಿಕೆಯಾಗಿತ್ತು. ಆದರೆ ಈ ಬಾರಿ ಕರ್ನಾಟಕದಲ್ಲಿ ಭೀಕರ ಕ್ಷಾಮ ಆವರಿಸಿರುವುದರಿಂದ, ಶೇ.35ರಿಂದ 40ರಷ್ಟು ಕಬ್ಬು ಇಳುವರಿ ಕಡಿಮೆಯಾಗಲಿದೆ ಎನ್ನುವ ಆತಂಕ ಶುರುವಾಗಿದೆ.

ಶೃಂಗೇರಿಯಲ್ಲಿ ವೈದ್ಯಕೀಯ ಕ್ರಾಂತಿ: ಅತ್ಯಾಧುನಿಕ ಕ್ಯಾಥ್‌ ಲ್ಯಾಬ್‌ ಮತ್ತು ಎಮ್‌ಆರ್‌ʼಐ ಘಟಕ ಉದ್ಘಾಟನೆ

ಶೃಂಗೇರಿಯಲ್ಲಿ ಅತ್ಯಾಧುನಿಕ ಎಮ್‌ಆರ್‌ʼಐ ಘಟಕ ಉದ್ಘಾಟನೆ

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರಂಗೇರಿ ಮಠದ ಸಿಇಒ ಮತ್ತು ಆಡಳಿತಾಧಿಕಾರಿಗಳಾದ ಪಿ.ಎ.ಮುರಳಿ,‘ ಶೃಂಗೇರಿ ಸಂಸ್ಥಾನವು ಮೊದಲಿನಿಂದಲೂ ನಮ್ಮ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಇದೇ ಉದ್ದೇಶದಿಂದ ಮಲೆನಾಡಿಗರಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಈಗ ಅತ್ಯಾಧುನಿಕ ಹೃದ್ರೋಗ ಚಿಕಿತ್ಸೆ ಹಾಗೂ ಎಮ್‌ಆರ್‌ʼಐ ಸೌಲಭ್ಯಗಳನ್ನು ಆರಂಭಿಸಲಾಗಿದೆ.

Belagavi Accident: ಹುಕ್ಕೇರಿಯಲ್ಲಿ ದುರ್ಗಾ ಮಾತೆ ಮೆರವಣಿಗೆ ವೇಳೆ ಭೀಕರ ಅಪಘಾತ; ಟ್ರ್ಯಾಕ್ಟರ್‌ಗೆ ಟ್ರಕ್ ಡಿಕ್ಕಿಯಾಗಿ ಮೂವರ ಸಾವು

ಹುಕ್ಕೇರಿಯಲ್ಲಿ ದುರ್ಗಾ ದೇವಿ ಮೆರವಣಿಗೆ ವೇಳೆ ಅಪಘಾತ; ಮೂವರ ಸಾವು

Hukkeri Accident: ದುರ್ಗಾದೇವಿ ಮೂರ್ತಿಯನ್ನು ಬೆಳಗಾವಿಯಿಂದ ಹುಕ್ಕೇರಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮಕ್ಕೆ ಟ್ರ್ಯಾಕ್ಟ‌ರ್‌ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಯಮಕನಮರಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Mysuru Dasara 2026: ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದೇ ದಸರಾ: ಸಿಎಂ ಡಿಕೆಶಿ

ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದೇ ದಸರಾ: ಸಿಎಂ

ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಬದುಕಿನ ಸ್ಮರಣೀಯ ಕ್ಷಣ. ಇವತ್ತು ಚಾಮುಂಡಿಯ ದರ್ಶನ ಪಡೆದು, ಶ್ರೀಗಳ ಕೈಯಲ್ಲಿ ದಸರಾ ಉದ್ಘಾಟನೆ ಮಾಡಿಸಿರುವುದು ನನಗೆ ಸಿಕ್ಕ ಭಾಗ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು‌ ಹೇಳಿದರು.

Mysuru Dasara 2026: ನಾಡಿನ ಭೂತ, ವರ್ತಮಾನ, ಭವಿಷ್ಯದ ಸಂಗಮವೇ ಮೈಸೂರು ದಸರಾ: ಅಭಿನವ ಗವಿಸಿದ್ದೇಶ್ವರ ಶ್ರೀ

ಭೂತ, ವರ್ತಮಾನ, ಭವಿಷ್ಯದ ಸಂಗಮವೇ ದಸರಾ: ಗವಿಸಿದ್ದೇಶ್ವರ ಶ್ರೀ

ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ದಸರಾ ಉದ್ಘಾಟನೆ ಕಾರ್ಯಕ್ರಮಲ್ಲಿ ಗವಿಮಠದ ಶ್ರೀಗಳು ಮಾತನಾಡಿದ್ದಾರೆ. ಒಂದು ಕಾಲಕ್ಕೆ ಯಾವ ದಸರಾ ಕೇವಲ ದೊರೆಗಳ ಹಬ್ಬವಾಗಿತ್ತೋ ಇಂದು ಅದು ಧರೆಯ ಹಬ್ಬವಾಗಿ ವಿಶ್ವವಿಖ್ಯಾತವಾಗಿದೆ. ಇಡೀ ಆರು ಕೋಟಿ ಕನ್ನಡಿಗರ ಪರವಾಗಿ ಚಾಮುಂಡಿ ತಾಯಿ ಸನ್ನಿಧಿಯನ್ನು ದೀಪ ಹಚ್ಚಿ, ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಶ್ರೀಗಳು ಹೇಳಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ; ಈ ಬಾರಿ ವಿಶೇಷತೆ ಏನು?

ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ

ವಿಶ್ವವಿಖ್ಯಾತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವ 2026 ಕ್ಕೆ ಇಂದು ಅಧಿಕೃತವಾಗಿ ಅದ್ಧೂರಿ ಚಾಲನೆ ದೊರೆತಿದೆ. ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಈ ಬಾರಿ ಅಧಿಕೃತವಾಗಿ ದಸರಾಗೆ ಚಾಲನೆ ನೀಡಿದ್ದಾರೆ. ಇನ್ನು ಭಾನುವಾರ ಸಂಜೆ ದಸರಾ ಮಹೋತ್ಸದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 10 ದಿನಗಳ ನಾಡಹಬ್ಬ ದಸರಾ ಆರಂಭ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 10 ದಿನಗಳ ನಾಡಹಬ್ಬ ದಸರಾ ಆರಂಭ

ಅ.11ರ ಭಾನುವಾರ ಬೆಳಗ್ಗೆ 11.50ರಿಂದ 12.13ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ 2026ರ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕೊಪ್ಪಳ ಗವಿಮಠದ ಶ್ರೀಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದಸರಾ ಉದ್ಘಾಟಿಸಲಿದ್ದಾರೆ.

ರಾಜ್ಯದಲ್ಲಿ ಮುಂಗಾರು ಕ್ಷೀಣ: ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ, ಉತ್ತರ ಕರ್ನಾಟಕದಲ್ಲಿ ಒಣ ಹವೆ

ರಾಜ್ಯದಲ್ಲಿ ಮುಂಗಾರು ಕ್ಷೀಣ: ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ

ರಾಜ್ಯದಲ್ಲಿ ಮುಂಗಾರು ಮಾರುತಗಳ ಪ್ರಭಾವ ಕ್ಷೀಣಿಸುತ್ತಿದ್ದರೂ, ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

Navaratri Celebration in Bengali Style: ಸತ್ಯಸಾಯಿ ಗ್ರಾಮದಲ್ಲಿ ಬಂಗಾಳ ಶೈಲಿಯಲ್ಲಿ ನವರಾತ್ರಿ ಆಚರಣೆ: 18ರಿಂದ ನಾಲ್ಕು ದಿನ ಮಹಾ ರುದ್ರಯಾಗ

ಸತ್ಯಸಾಯಿ ಗ್ರಾಮದಲ್ಲಿ ಬಂಗಾಳ ಶೈಲಿಯಲ್ಲಿ ನವರಾತ್ರಿ ಆಚರಣೆ

ಸತ್ಯಸಾಯಿ ಹೃದಯ ಮಂದಿರದ ಆವರಣದಲ್ಲಿರುವ ಯಾಗಶಾಲೆಯಲ್ಲಿ ಅ.11ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 7.30ಕ್ಕೆ ವಿವಿಧ ಹೋಮಗಳು ನಡೆಯಲಿವೆ. ಮೊದಲ ದಿನ ಸಹಸ್ರ ಮೋದಕ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಶನಿ ಶಾಂತಿ ಕಾರ್ಯಕ್ರಮಗಳೊಂದಿಗೆ ಆರಂಭವಾಗಲಿದ್ದು, ನಂತರದ ದಿನಗಳಲ್ಲಿ ದುರ್ಗಾ ಹೋಮ, ಧನ್ವಂತರಿ ಹೋಮ, ಲಲಿತಾ ಹೋಮ, ಮಹಾ ಸರಸ್ವತಿ ಹೋಮ, ಲಕ್ಷ್ಮೀನರಸಿಂಹ ಹೋಮ, ಶಿವ ಪಂಚಾಕ್ಷರಿ ಹೋಮ ಸೇರಿದಂತೆ ವಿವಿಧ ಹೋಮಗಳು ನಡೆಯಲಿವೆ

Gubbi News: ಚೇಳೂರು ಜಿಪಂ ಕ್ಷೇತ್ರಕ್ಕೆ ಮೈತ್ರಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಗುಡ್ಡದಹಳ್ಳಿ ಬಸವರಾಜು

ಚೇಳೂರು ಕ್ಷೇತ್ರ: ಮೈತ್ರಿ ಪಕ್ಷದ ಆಕಾಂಕ್ಷಿಯಾಗಿ ಗುಡ್ಡದಹಳ್ಳಿ ಬಸವರಾಜು

ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮೂಕ ಪ್ರೇಕ್ಷಕನಾಗಿ ಮತ ಹಾಕುತ್ತಾ ಬಂದಿರುವ ಕಾಡು ಗೊಲ್ಲ ಸಮುದಾಯಕ್ಕೆ ಚೇಳೂರು ಕ್ಷೇತ್ರ ಮಾತ್ರ ಅವಕಾಶ ಒದಗಿಸಿದೆ. ಸಿಕ್ಕಿದ ಈ ಸ್ಥಾನಕ್ಕೆ ಕಳೆದ 32 ವರ್ಶದಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿರುವ ನನಗೆ ಪಕ್ಷ ಟಿಕೆಟ್ ನೀಡಿ ಗೆಲುವಿಗೆ ಅವಕಾಶ ಮಾಡಿಕೊಡಲಿದೆ

ಔಷಧಿಗಳ ಹೆಸರಿನಲ್ಲಿ ದುಪ್ಪಟ್ಟು ಹಣ ವಸೂಲಿಗೆ ಬ್ರೇಕ್‌; ಇನ್ನುಮುಂದೆ ಮೂಲ ಬೆಲೆ, ಎಂಆರ್‌ಪಿ ವಿವರ ಕಡ್ಡಾಯ

ಔಷಧಿ ಹೆಸರಲ್ಲಿ ದುಪ್ಪಟ್ಟು ಹಣ ವಸೂಲಿಗೆ ಬ್ರೇಕ್‌; ಹೊಸ ಮಾರ್ಗಸೂಚಿ

Medicine purchase and selling prices: ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌ಗಳು, ಕ್ಲಿನಿಕ್‌ಗಳು, ಡೇ ಕೇರ್‌ ಸೆಂಟರ್‌ಗಳು ಹಾಗೂ ಡಯಾಗ್ನಸ್ಟಿಕ್‌ ಸೆಂಟರ್‌ಗಳಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. ಔಷಧಿಗಳ ಹೆಸರಿನಲ್ಲಿ ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

Boy drowns: ದನಗಳಿಗೆ ನೀರು ಕುಡಿಸಲು ಹೋದ ಬಾಲಕ ನೀರುಪಾಲು..!!

ದನಗಳಿಗೆ ನೀರು ಕುಡಿಸಲು ಹೋದ ಬಾಲಕ ನೀರುಪಾಲು..!!

ದನಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ಬಿದರೆ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಿದರೆ ಗ್ರಾಮದ ಮಂಜೇಂದ್ರ ಎಂಬುವರ ಮಗ ಯಶವಂತ(14)ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದಿದ್ದರಿಂದ ದನಗಳನ್ನು ಮೇಯಿಸಿ ನಂತರ ನೀರು ಕುಡಿಸಲು ಕೆರೆಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿರುವ ಘಟನೆ ನಡೆದಿದೆ. ಕೆರೆಯ ಬಳಿ ಇಡೀ ಬಿದರೆ ಗ್ರಾಮವೇ ನೆರೆದಿತ್ತು.

Mahalaya Amavasye: ಸ್ಮಶಾನಗಳಲ್ಲಿ ಹಿರಿಯರಿಗೆ ಪೂಜೆ, ಪ್ರಿಯ ಆಹಾರಗಳ ನೈವೇದ್ಯ; ಪೂರ್ವಜರನ್ನು ಸ್ಮರಿಸಿ ಗೌರವ ಸಲ್ಲಿಸಿದ ಜನತೆ

ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಪಿತೃಪಕ್ಷ ಆಚರಣೆ

ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಪಿತೃಪಕ್ಷಕ್ಕೆ ವಿಶೇಷ ಮಹತ್ವವಿದೆ. ಅಗಲಿದ ಹಿರಿಯರನ್ನು ಸ್ಮರಿಸಿ ಅವರ ಹೆಸರಿನಲ್ಲಿ ತರ್ಪಣ, ಪಿಂಡಪ್ರದಾನ ಹಾಗೂ ಶ್ರಾದ್ಧ ಕರ್ಮಗಳನ್ನು ನೆರವೇರಿಸುವುದು ಈ ಅವಧಿಯ ಪ್ರಮುಖ ಆಚರಣೆಗಳಾಗಿವೆ. ಪೂರ್ವಜರ ತ್ಯಾಗ, ಪರಿಶ್ರಮ ಮತ್ತು ಕುಟುಂಬಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದು ಈ ಆಚರಣೆಯ ಉದ್ದೇಶವಾಗಿದೆ ಎಂಬ ನಂಬಿಕೆ ಇದೆ.

ಸಿಜೆಪಿ ಹೋರಾಟಗಾರರಿಗೆ ಬೆದರುವ ಸರ್ಕಾರ ಅಧಃಪತನದತ್ತ ಸಾಗುವುದು ನಿಶ್ಚಿತ: ಡಾ.ಆನಂದ ಕುಮಾರ್

ಸಿಜೆಪಿ ಹೋರಾಟಗಾರರಿಗೆ ಬೆದರುವ ಸರ್ಕಾರ ಅಧಃಪತನದತ್ತ ಸಾಗುವುದು ನಿಶ್ಚಿತ

ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮುಂದಾಗುವ ಮೂಲಕ ಕೇಂದ್ರ ಸರ್ಕಾರ ಜೇನು ಗೂಡಿಗೆ ಕಲ್ಲು ಹೊಡೆದಿದೆ. ಹೋರಾಟಕ್ಕೆ ಸಹಸ್ರಾರು ಹಾದಿಗಳು. ಜನಪರ ಇರುವವರನ್ನು ಬಂಧಿಸುವ ಮೂಲಕ ಆಕ್ರೋಶವನ್ನು ನಂದಿಸುತ್ತೇವೆ ಎಂಬುದು ಕೇವಲ ಭ್ರಮೆ. ಹೋರಾಟದ ಕಿಚ್ಚಿಗೆ ಸರ್ಕಾರ ತುಪ್ಪು ಸುರಿಯುವ ಕೆಲಸ ಮಾಡುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಜ್ವಾಲಾಮುಖಿ ಸ್ವರೂಪ ಪಡೆಯ ಲಿದೆ ಎಂದು ಎಚ್ಚರಿಸಿದ್ದಾರೆ.

Mysuru Dasara 2026: ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜು; ನಾಳೆ ಬೆಳಗ್ಗೆ ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ

ದಸರಾ ಮಹೋತ್ಸವಕ್ಕೆ ನಾಳೆ ಬೆಳಗ್ಗೆ ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ಅಂತಿಮ ಹಂತಕ್ಕೆ ಬಂದಿದ್ದು, ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಶುದ್ಧಿ ಕಾರ್ಯ ನೆರವೇರಿದೆ. ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಾಳೆಯಿಂದ 'ನವರಾತ್ರ ನಮಸ್ಯಾ': ಬೆಂಗಳೂರಿನ ಶಾಖಾ ಮಠದಲ್ಲಿ ಸಕಲ ಸಿದ್ಧತೆ

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಾಳೆಯಿಂದ 'ನವರಾತ್ರ ನಮಸ್ಯಾ'

Sri Raghaveshwara Bharathi Mahaswamiji: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 11 ದಿನಗಳ ಕಾಲ 'ನವರಾತ್ರ ನಮಸ್ಯಾ' ಅಕ್ಟೋಬರ್‌ 11ರಿಂದ ನಡೆಯಲಿದೆ.

Save Bedti Aghanashini: ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ವಿರುದ್ಧ ಭುಗಿಲೆದ್ದ ಜನಾಕ್ರೋಶ; ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆ‌, 11 ನಿರ್ಣಯ

ಬೇಡ್ತಿ ನದಿ ತಿರುವು ಯೋಜನೆಗೆ ಜನಾಕ್ರೋಶ; ಪ್ರತಿಭಟನಾ ಸಭೆ‌ಯಲ್ಲಿ 11 ನಿರ್ಣಯ

Bedti and Aghanashini river diversion projects: ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಜನಾಕ್ರೋಶದ ಸಭೆಯಲ್ಲಿ ಬೆಂಗಳೂರಿನಲ್ಲಿರುವ ಸಾವಿರಾರು ಉತ್ತರ ಕನ್ನಡ ಜಿಲ್ಲೆಯ ಜನತೆ ಭಾಗವಹಿಸಿದ್ದರು. ಸಭೆಯಲ್ಲಿ 11 ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಸರ್ಜಾಪುರದ ಅಪೋಲೋ ಆಸ್ಪತ್ರೆಯಿಂದ ಹೃದಯದ ಆರೋಗ್ಯದ ಅರಿವು ಮೂಡಿಸಲು ನಡಿಗೆ ಮತ್ತು ಓಟದ ಕಾರ್ಯಕ್ರಮ

ಹೃದಯದ ಆರೋಗ್ಯದ ಅರಿವು ಮೂಡಿಸಲು ನಡಿಗೆ ಮತ್ತು ಓಟದ ಕಾರ್ಯಕ್ರಮ

ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞರ ತಂಡವು ಭಾಗವಹಿಸಿದವರಿಗೆ ಸಿಪಿಆರ್ (CPR) ಕುರಿತು ಮಾಹಿತಿ ನೀಡುವುದರ ಜೊತೆಗೆ, ಯಾವುದೇ ಸಮಯದಲ್ಲಿ ಹೃದಯಾಘಾತ ಅಥವಾ ಹೃದಯ ಸ್ತಂಭನ ದಿಂದ ತುರ್ತು ಪರಿಸ್ಥಿತಿಗೆ ಒಳಗಾದ ವ್ಯಕ್ತಿಯ ಜೀವವನ್ನು ಸಿಪಿಆರ್ ಮೂಲಕ ಹೇಗೆ ಉಳಿಸಬಹುದು ಎಂಬುದನ್ನು ತಿಳಿಸಿಕೊಟ್ಟರು.

Save Bedti Aghanashini: ಬೇಡ್ತಿ ಬಿಡೆವು, ಅಘನಾಶಿನಿ ಕೊಡೆವು; ನದಿ ಜೋಡಣೆ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಧರಣಿ

ಬೇಡ್ತಿ ಬಿಡೆವು, ಅಘನಾಶಿನಿ ಕೊಡೆವು; ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಧರಣಿ

Bedti-Varada River Interlinking Project: ಪಶ್ಚಿಮ ಘಟ್ಟ ಉಳಿಸಿ-ಉತ್ತರ ಕನ್ನಡ ಜಿಲ್ಲೆ ಉಳಿಸಿ, ಬೇಡ್ತಿ ಬಿಡೆವು-ಅಘನಾಶಿನಿ ಕೊಡೆವು ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಬೇಡ್ತಿ- ವರದಾ ನದಿ ಜೋಡಣೆ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.

ಸಮಾಜಮುಖಿ ಸಂತನಿಗೆ ದಸರಾ ಉದ್ಘಾಟನೆಯ ಗೌರವ : ಹಾಗರಗುಂಡಗಿ ಪರ್ವತಯ್ಯ ಜ್ಞಾನದ ಮೇರುಪರ್ವತ

ಹಾಗರಗುಂಡಗಿ ಪರ್ವತಯ್ಯ ಜ್ಞಾನದ ಮೇರುಪರ್ವತ

ಐತಿಹಾಸಿಕ ಹಾಗೂ ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನು ಅ.11ರಂದು ನಾಡದೇವಿ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳು ಉದ್ಘಾಟಿಸಲಿದ್ದಾರೆ. ನಾಡಿನ ಸಾಂಸ್ಕೃ ತಿಕ ಪರಂಪರೆಯ ಪ್ರತೀಕವಾದ ದಸರೆಯ ಉದ್ಘಾಟನೆಗೆ ಆಯ್ಕೆಯಾಗಿರುವ ಶ್ರೀಗಳ ಬದುಕು, ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳು ಈ ಸಂದರ್ಭದಲ್ಲಿ ವಿಶೇಷ ಗಮನ ಸೆಳೆಯುತ್ತಿವೆ.

Pravasi Prapancha: ಆತಿಥ್ಯಕ್ಕೆ ಹೊಸ ಭಾಷ್ಯ ಬರೆದ ಗೋಲ್ಡ್ ಫಿಂಚ್ ಹೊಟೇಲ್ ಬೆಂಗಳೂರು

ಬೆಂಗಳೂರಿನ ಗೋಲ್ಡ್ ಫಿಂಚ್ ಹೊಟೇಲ್: ಆತಿಥ್ಯಕ್ಕೆ ಹೊಸ ಹೆಸರು

Goldfinch Hotel Bengaluru: ಬೆಂಗಳೂರು ನಗರದಲ್ಲಿ ಹೊಟೇಲ್‌ಗಳಿಗೇನೂ ಕೊರತೆಯಿಲ್ಲ. ಐಷಾರಾಮಿ ವಾಸ್ತವ್ಯಕ್ಕೆ, ವ್ಯಾವಹಾರಿಕ ಸಭೆಗಳಿಗೆ, ಕುಟುಂಬದೊಂದಿಗೆ ಸಮಯ ಕಳೆಯಲು, ರುಚಿಕರ ಆಹಾರ ಸವಿಯಲು ಹೀಗೆ ಪ್ರತಿಯೊಂದು ಅಗತ್ಯಕ್ಕೂ ಹಲವು ಆಯ್ಕೆಗಳಿವೆ. ಆದರೆ, ಒಂದೇ ಸೂರಿನಡಿ ವಾಸ್ತವ್ಯ, ಆಹಾರ, ವಿಶ್ರಾಂತಿ ಮತ್ತು ಸಮಾರಂಭಗಳ ಸೌಲಭ್ಯಗಳನ್ನು ಒದಗಿಸುವ ಹೊಟೇೆಲ್‌ಗಳು ನಗರದ ಆತಿಥ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತವೆ. ಅಂಥ ಹೊಟೇಲ್‌ಗಳ ಸಾಲಿನಲ್ಲಿ ಗಮನ ಸೆಳೆಯುವ ಹೆಸರು ಗೋಲ್ಡ್ ಫಿಂಚ್ ಬೆಂಗಳೂರು.

Dasara 2026: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಅ.12ರಿಂದ 17ರವರೆಗೆ ದಸರಾ ಸಂಭ್ರಮ; ವಾರಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಅ.12ರಿಂದ 17ರವರೆಗೆ ದಸರಾ ಸಂಭ್ರಮ

Dasara 2026 At Bengaluru Airport: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 12ರಿಂದ 17ರವರೆಗೆ ನಾಡಹಬ್ಬ ದಸರಾವನ್ನು ಸಾಂಸ್ಕೃತಿಕ ಸಂಭ್ರಮದೊಂದಿಗೆ ಆಚರಿಸಲಾಗುತ್ತಿದೆ. ನಿಲ್ದಾಣದ ವಿವಿಧ ಭಾಗಗಳಲ್ಲಿ ನೇರ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಕಲಾ ಸ್ಥಾಪನೆ, ಹಬ್ಬದ ಅನುಭವಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಕರ್ನಾಟಕದ ಕಲೆ, ಸಂಪ್ರದಾಯ ಮತ್ತು ಪರಂಪರೆಯನ್ನು ಜೀವಂತಗೊಳಿಸಲಾಗುತ್ತದೆ.

Investment scam: ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಪ್ರಸಾರವಾದ ನಕಲಿ ಜಾಹೀರಾತು ನಂಬಿ ಹೂಡಿಕೆ; 21.93 ಲಕ್ಷ ಕಳೆದುಕೊಂಡ ಬೆಳಗಾವಿಯ ವ್ಯಕ್ತಿ!

ನಕಲಿ ಜಾಹೀರಾತು ನಂಬಿ ಹೂಡಿಕೆ; 21.93 ಲಕ್ಷ ಕಳೆದುಕೊಂಡ ವ್ಯಕ್ತಿ!

Online investment scam in Belagavi: ಕಳೆದ ಜೂನ್ 20ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಪ್ರಸಾರವಾಗಿದ್ದ ಷೇರು ಹೂಡಿಕೆ ಕುರಿತ ನಕಲಿ ಜಾಹೀರಾತನ್ನು ಬೆಳಗಾವಿ ವ್ಯಕ್ತಿಯೊಬ್ಬರು ವೀಕ್ಷಿಸಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ ಹೆಸರು, ವಿಳಾಸ ದಾಖಲಿಸಿ ನೋಂದಣಿ ಮಾಡಿಕೊಂಡಿದ್ದರು. ಬಳಿಕ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ.

Sand Mining: ಹರಳಹಳ್ಳಿ ಬಳಿ 146 ಮೆಟ್ರಿಕ್ ಟನ್ ಮರಳು ಜಪ್ತಿ: ಮರಳು ಸಾಗಿಸಲು ವಾಹನಗಳಿಲ್ಲದೆ ರಾತ್ರಿಯಿಡೀ ನದಿತೀರದಲ್ಲೇ ಬೀಡುಬಿಟ್ಟ ಅಧಿಕಾರಿಗಳು

ಹರಳಹಳ್ಳಿ ಬಳಿ 146 ಮೆಟ್ರಿಕ್ ಟನ್ ಮರಳು ಜಪ್ತಿ

ನದಿತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಅ.9ರಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಅಧಿಕಾರಿಗಳು ಸ್ಥಳಕ್ಕೆ ತೆರಳು ತ್ತಿದ್ದಂತೆ ಮರಳು ಸಂಗ್ರಹಿಸಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಹೀಗಾಗಿ ಮರಳು ಸಂಗ್ರಹಿಸಿದವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Loading...