ಬೆಂಗಳೂರಿನಲ್ಲಿ ರೌಡಿಗಳ ದಾಂಧಲೆ, ಮಾರಕಾಸ್ತ್ರಗಳಿಂದ ಹಲ್ಲೆ
ಕ್ಷುಲ್ಲಕ ಕಾರಣಕ್ಕೆ ಬಷೀರ್ ಎಂಬವರ ಮನೆಗೆ ನುಗ್ಗಿ 10ಕ್ಕೂ ಹೆಚ್ಚು ಪುಡಿ ರೌಡಿಗಳು ಹಲ್ಲೆ ನಡೆಸಿ ದಾಂಧಲೆ ಮಾಡಿದ್ದಾರೆ. ಪಾನ್ ಶಾಪ್ನಲ್ಲಿದ್ದ ಬಾಟಲ್ಗಳನ್ನ ಒಡೆದು ಹಾಕಿ ಎಸ್ಕೇಪ್ ಆಗಿದ್ದಾರೆ. ಇದರ ಜೊತೆಗೆ, ಕಾರೊಂದರ ಮೇಲೂ ರೌಡಿಗಳು ದಾಳಿ ಮಾಡಿದ್ದಾರೆ. ಕಾರಿನ ಒಳಗೆ ಇದ್ದ ಇಬ್ಬರು ಯುವಕರ ಮೇಲೆ ಪುಡಿ ರೌಡಿಗಳು ದಾಳಿ ಮಾಡಲು ಯತ್ನಿಸಿದ್ದಾರೆ. ಕಾರಿನೊಳಗಿದ್ದ ಯುವಕರು ಅದೃಷ್ಟವಶಾತ್ ಗ್ರೇಟ್ ಎಸ್ಕೇಪ್ ಆಗಿದ್ದಾರೆ.