ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಪ್ರೀತಮ್ ತಯಾರಿಸಿದ ವಿಠ್ಠಲ ರೂಪದ ಗಣೇಶ ಮೂರ್ತಿ

ಪ್ರೀತಮ್ ತಯಾರಿಸಿದ ವಿಠ್ಠಲ ರೂಪದ ಗಣೇಶ ಮೂರ್ತಿ

ಮನೆಯಲ್ಲಿಯೇ ಮೂರ್ತಿಗಳನ್ನು ತಯಾರಿಸು ವುದರ ಜತೆಗೆ, ನಗರದ ಕಲ್ಮಠ ಗಲ್ಲಿಯ ವಿನೋದ ಬಡಿಗೇರ ಅವರ ಗಣೇಶ ಮೂರ್ತಿ ತಯಾರಿಕಾ ಕಾರ್ಯದಲ್ಲಿಯೂ ಪ್ರೀತಮ್ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾನೆ. ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡುವ ಮೂಲಕ ಮೂರ್ತಿ ತಯಾರಿಕೆಯ ವಿವಿಧ ಸೂಕ್ಷ್ಮತೆಗಳನ್ನು ಕಲಿಯುತ್ತಿರುವ ಈ ಬಾಲಕ,

ಟಿ ನರಸೀಪುರ ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಗಣಪತಿ ಪ್ರತಿಷ್ಠಾಪನೆ!  ಶೋಭಾಯಾತ್ರೆಗೆ ಸಜ್ಜು

ಟಿ ನರಸೀಪುರ ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಗಣಪತಿ ಪ್ರತಿಷ್ಠಾಪನೆ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ವಿವಾದದ ಕಿಚ್ಚು ಹೆಚ್ಚಾಗಿದ್ದು, , ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆಯನ್ನು ಮಾಡಿದೆ. ಅಲ್ಲದೇ, ಸೆಪ್ಟೆಂಬರ್ 18 ರಂದು ಲಿಂಕ್ ರಸ್ತೆಯಲ್ಲಿ ಹಿಂದೂ ಶೋಭಾ ಯಾತ್ರೆ ನಡೆಸಲು ಹಿಂದೂ ಪರ ಸಂಘಟನೆ ನಿರ್ಧರಿಸಿದೆ.

Bike Accident: ಗಣೇಶ ಮೂರ್ತಿ ನೋಡಲು ಹೋಗಿ ಮಸಣ ಸೇರಿದ ಯುವಕ

ಗಣೇಶ ಮೂರ್ತಿ ನೋಡಲು ಹೋಗಿ ಮಸಣ ಸೇರಿದ ಯುವಕ

ಗಣೇಶ ಮೂರ್ತಿ ವೀಕ್ಷಿಸಲು ತೆರಳಿದ್ದ ಯುವಕರು ಬೈಕ್‌ಗಳಲ್ಲಿ ರೇಸಿಂಗ್ ಕಟ್ಟಿಕೊಂಡು ವೇಗವಾಗಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ರೇಸ್‌ನಲ್ಲಿ ಭಾಗಿಯಾಗಿದ್ದ ಯುವಕರ ಬೈಕ್‌ಗಳೇ ಅಪಘಾತಕ್ಕೀಡಾಗಿದ್ದು, ಡಿಕ್ಕಿಯ ರಭಸಕ್ಕೆ ಪ್ರಶಾಂತ ಹಾಗೂ ಲಿಂಗರಾಜ್ ಅವರ ತಲೆಗೆ ಗಂಭೀರ ಗಾಯಗಳಾಗಿ ಧಾರಾಕಾರ ರಕ್ತಸ್ರಾವವಾಗಿದೆ.

ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ: ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಸಾವು

ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸ್ಥಳದಲ್ಲಿಯೇ ಸಾವು

ಗಣೇಶ ಚತುರ್ಥಿಗೆ ಊರಿಗೆ ಬಂದಿದ್ದ ಬಂದಿದ್ದ ಮೂವರು ವಾಪಸ್ ಬೆಂಗಳೂರಿಗೆ ಹೊರಡುವಾಗ ತಾವು ಚಲಿಸುತ್ತಿದ್ದ ಸ್ಕೂಟರ್‌ಗೆ ಕೊಪ್ಪ ಗ್ರಾಮದ ಬಳಿ ಹಾಲಿನ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಕಾವ್ಯ, ಮುತ್ತುರಾಜ್ ಮತ್ತು ಕೀರ್ತನಾ ಎಂದು ಗುರುತಿಸಲಾಗಿದೆ.

Kalyana Karnataka Festival: ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಲು ಸಚಿವ ಪ್ರಿಯಾಂಕ್ ಖರ್ಗೆ ಕರೆ

79ನೇ ಕಲ್ಯಾಣ ಕರ್ನಾಟಕ ಉತ್ಸವ–2026

ಸೆಪ್ಟೆಂಬರ್ 16 ಮತ್ತು 17 ರಂದು ಕಲಬುರಗಿ ನಗರದಲ್ಲಿ ಆಯೋಜಿಸಲಾಗಿರುವ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಯುವ ಜನರು, ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವ ವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಕರೆ ನೀಡಿದ್ದಾರೆ.

79th Kalyana Karnataka Utsava celebration: ಸೆ.16, 17 ರಂದು 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಕಲಬುರಗಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ, ಬೀದಿ ಉತ್ಸವ

ಸೆ.16, 17 ರಂದು 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ

ಅಪ್ಪನ ಕೆರೆಯಲ್ಲಿ ಸಂಜೆ 7ರಿಂದ ಭೈರವ್ ಮತ್ತು ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ 8.30ಕ್ಕೆ ಮುಖ್ಯಮಂತ್ರಿ ಅವರಿಂದ ಕೆರೆ ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ನಡೆಯಲಿದ್ದು, ರಾತ್ರಿ 9ರಿಂದ ಧ್ವನಿ ಮತ್ತು ಬೆಳಕಿನ ಪ್ರದರ್ಶನದ ಜತೆಗೆ ಡ್ರೋನ್ ಪ್ರದರ್ಶನವೂ ನಡೆಯಲಿದೆ.

ಚಾಮರಾಜನಗರದಲ್ಲಿ ಹುಲಿ ದಾಳಿಗೆ ರೈತ ಬಲಿ; ಮತ್ತೊಂದೆಡೆ ಆನೆ ದಾಳಿಗೆ ವ್ಯಕ್ತಿ ಸಾವು

ಚಾಮರಾಜನಗರದಲ್ಲಿ ಹುಲಿ ದಾಳಿಗೆ ರೈತ ಬಲಿ

ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತರೊಬ್ಬರು ಅತ್ಯಂತ ದಾರುಣವಾಗಿ ಬಲಿಯಾಗಿದ್ದಾರೆ. ರೈತನನ್ನು ಕೊಂದ ಹುಲಿಯು ಆತನ ಮೃತದೇಹದ ಭಾಗವನ್ನು ತಿಂದು ಹಾಕಿರುವುದು ಇಡೀ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

Health Camp: ಲಯನ್ಸ್ ಸಂಸ್ಥೆಯಿಂದ 233ನೇ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ: 75ಕ್ಕೂ ಅಧಿಕ ವಯೋವೃದ್ಧರ ತಪಾಸಣೆ; 34 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ

ಲಯನ್ಸ್ ಸಂಸ್ಥೆಯಿಂದ 233ನೇ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

ನಗರದ ಮುನೇಶ್ವರ ಬಡಾವಣೆಯಲ್ಲಿರುವ ಲಯನ್ಸ್ ಕಣ್ಣಿನ ತಪಾಸಣಾ ಕೇಂದ್ರದಲ್ಲಿ ನಡೆದ 233ನೇ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವಯೋವೃದ್ಧರು ದೃಷ್ಟಿದೋಷದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿತಿಂಗಳು ದಾನಿಗಳ ಸಹಕಾರದಿಂದ ಸಂಸ್ಥೆ ನಡೆಸುತ್ತಿರುವ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳು ಇಂತಹವರಿಗೆ ಆಸರೆಯಾಗಿವೆ

Horrific tragedy in Belagavi; ಬೆಳಗಾವಿಯಲ್ಲಿ ಭೀಕರ ದುರಂತ ; ಹಬ್ಬದ ದಿನವೇ ಒಂದೇ ಕುಟುಂಬದ ನಾಲ್ವರು ಸಾವು

ಹಬ್ಬದ ದಿನವೇ ಒಂದೇ ಕುಟುಂಬದ ನಾಲ್ವರು ಸಾವು

ಮನೆಯಲ್ಲಿ ಫ್ರಿಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಮನೆಗೆ ಬೆಂಕಿ ಆವರಿಸಿದೆ. ಮನೆಯಲ್ಲಿದ್ದವರು ಬೆಂಕಿಯಿಂದ ಹೊರಬರಲಾಗದೆ ಸಿಲುಕಿಕೊಂಡ ಪರಿಣಾಮ ದುರಂತ ಸಂಭವಿಸಿದೆ. ಗಜಾನನ ದಮೋನೆ (65), ರೋಷನ ದಮೋನೆ (21), ಶಾರಧಾ ದಮೋನೆ (45) ಹಾಗೂ ಭಾರತಿ ರದಮೋನೆ (50) ಮೃತಪಟ್ಟವರು.

Unique Ganeshotsav: ಸಾಯಿರಾಂ ಶಾಲೆಯಲ್ಲಿ ವಿಭಿನ್ನ ಗಣೇಶೋತ್ಸವ; ಆರೋಗ್ಯ, ಶಿಸ್ತು–ಏಕತೆಯ ಸಂದೇಶ

ಗಣೇಶನ ಆಕೃತಿಯಲ್ಲಿ ಕುಳಿತು ವ್ಯಾಯಾಮ ಮಾಡಿದ ವಿದ್ಯಾರ್ಥಿಗಳು!

ಶಾಲೆಯ ದೈಹಿಕ ಶಿಕ್ಷಣ ಅವಧಿಯಲ್ಲಿ ನೂರಾರು ವಿದ್ಯಾರ್ಥಿಗಳು ಮೈದಾನದಲ್ಲಿ ಗಣೇಶನ ಆಕೃತಿಯ ವಿನ್ಯಾಸದಲ್ಲಿ ವ್ಯವಸ್ಥಿತವಾಗಿ ಕುಳಿತುಕೊಂಡು ಸಾಮೂಹಿಕ ವ್ಯಾಯಾಮ ಪ್ರದರ್ಶಿಸಿದರು. ವಿವಿಧ ಬಣ್ಣಗಳ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ನಿಗದಿತ ವಿನ್ಯಾಸದಲ್ಲಿ ಕುಳಿತು ಕೊಂಡಾಗ, ಮೇಲಿನಿಂದ ವೀಕ್ಷಿಸಿದವರಿಗೆ ಮೈದಾನದಲ್ಲಿ ಬೃಹತ್ ಗಣೇಶನ ಆಕೃತಿ ಮೂಡಿಬಂದಂತೆ ಕಂಡುಬಂತು.

B N Ravikumar: ಜನರ ಅಹವಾಲುಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲು ಶಾಸಕ ಬಿ.ಎನ್.ರವಿಕುಮಾರ್ ಸೂಚನೆ

ಕುಡಿಯುವ ನೀರಿನ ಸಮಸ್ಯೆ ಕಂಡ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು

ಬಶೆಟ್ಟಿಹಳ್ಳಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ‘ಪ್ರಜಾಸೇವೆ–ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಪಿಡಿಒಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಲಭ್ಯತೆ ಪರಿಶೀಲಿಸಬೇಕು ಎಂದರು.

26.90 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣ: ನಾಲ್ಕು ತಿಂಗಳಿನಿಂದ ಶೌಚಾಲಯಕ್ಕೆ ಬೀಗ,, ಸಾರ್ವಜನಿಕರಿಗೆ ಬಯಲೇ ಗತಿ

ನಾಲ್ಕು ತಿಂಗಳಿನಿಂದ ಶೌಚಾಲಯಕ್ಕೆ ಬೀಗ,, ಸಾರ್ವಜನಿಕರಿಗೆ ಬಯಲೇ ಗತಿ

ನಗರಸಭೆ ಅನುದಾನದಡಿ ಸ್ವಚ್ಛ ಭಾರತ್ ಮಿಷನ್ (ನಗರ 2.0) ಯೋಜನೆಯಡಿ ಅಂದಾಜು 26.90 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಈ ಶೌಚಾಲಯ, ನಿರ್ಮಾಣ ಗೊಂಡು ಕೇವಲ ಮೂರು ವರ್ಷಗಳಲ್ಲೇ ಬಳಕೆಗೆ ಬಾರದ ಸ್ಥಿತಿಗೆ ತಲುಪಿದೆ. ಕಳೆದ ನಾಲ್ಕು ತಿಂಗಳಿಂದ ಬಾಗಿಲು ತೆರೆಯದ ಕಾರಣ, ಸಾರ್ವಜನಿಕರ ಹಣದಲ್ಲಿ ನಿರ್ಮಿಸಿದ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.

ಗಟ್ಟಿಯಾಗುತ್ತಿದೆ ಹೋರಾಟದ ಧ್ವನಿ: ಹೊಸನಗರ ವಿದ್ಯುತ್ ಕತ್ತಲೆ ಕಳೆಯುವುದು ಯಾವಾಗ?

ಹೊಸನಗರ ವಿದ್ಯುತ್ ಕತ್ತಲೆ ಕಳೆಯುವುದು ಯಾವಾಗ?ಗೊಒ

ನಿತ್ಯ ಕತ್ತಲಾಗುವ ತಾಲೂಕಿನ ವಿದ್ಯುತ್ ಗೋಳು ತಪ್ಪಿಸುವ ಹಿನ್ನೆಲೆಯಲ್ಲಿ ಹಲವು ವರ್ಷದ ಬೇಡಿಕೆ ಮತ್ತು ಈ ಹಿಂದೆ ಇಲ್ಲಿನ ಕೆಲವರ ಆಗ್ರಹದ ಪ್ರತಿಫಲವಾಗಿ 110 ಕೆವಿ ಟವರ್ ವಿದ್ಯುತ್ ಮಾರ್ಗದ ಯೋಜನೆಯ ಅಂದಾಜು ಪಟ್ಟಿ ಈ ಹಿಂದೆಯೇ ಸಿದ್ಧಪಡಿಸಲಾಗಿತ್ತು. ಆದರೆ ಉದ್ದೇಶಿತ 110 ಕೆವಿ ವಿದ್ಯುತ್ ಮಾರ್ಗದ ಪ್ರಸ್ತಾಪವನ್ನು ಆಗ ವೃತ್ತಮಟ್ಟದ ಮತ್ತು ವಲಯ ಮಟ್ಟದ ಸಂಯೋಜಕ ಸಮಿತಿ ಯ ಸಭೆಯಲ್ಲಿ ಕೈ ಬಿಟ್ಟೂ ಆಗಿತ್ತು

ಪ್ಲಾಸ್ಟಿಕ್ ಮುಕ್ತ ಜೀವನಕ್ಕೆ ಪ್ರವಾಹದ ವಿರುದ್ಧ ಈಜುವ ಧೈರ್ಯ ಬೇಕು: ರಾಘವೇಶ್ವರ ಶ್ರೀ

ಪ್ಲಾಸ್ಟಿಕ್ ಮುಕ್ತ ಜೀವನಕ್ಕೆ ಪ್ರವಾಹದ ವಿರುದ್ಧ ಈಜುವ ಧೈರ್ಯ ಬೇಕು

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿ ಪ್ರವಚನ ನೀಡಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ನನಗೆ ಹುಡುಗಿ ಹುಡುಕಿಕೊಡಿ ಎಂದು ಯುವಕ ಮನವಿ; ಲವ್‌ ಮಾಡಿ ಮದುವೆಯಾಗು ಎಂದು ಸಲಹೆ ಕೊಟ್ಟ ಅರಕಲಗೂಡು ಶಾಸಕ!

ಹುಡುಗಿ ಹುಡುಕಿಕೊಡಿ ಎಂದು ಶಾಸಕನ ಬಳಿ ಯುವಕ ಮನವಿ!

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದ ಪ್ರಜಾ ಸೇವೆ ಅಭಿಯಾನ ಸಭೆಯಲ್ಲಿ ಶಾಸಕ ಎ.ಮಂಜು ಅವರ ಮುಂದೆ ಬೇಡಿಕೆ ಇಟ್ಟಿದ್ದಾನೆ. ಪದವೀಧರನಾದರೂ ಹುಡುಗಿ ಸಿಗುತ್ತಿಲ್ಲ. ರೈತನ ಮಗ ಎನ್ನುವ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪುತ್ತಿಲ್ಲ. ಅಪ್ಪ ಅಮ್ಮ ಇಲ್ಲದ ನನಗೆ ಹುಡುಗಿ ಹುಡುಕಿಕೊಡಿ ಎಂದು ಮೊರೆಯಿಟ್ಟಿದ್ದಾನೆ.

ಕನಕಪುರಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಭೇಟಿ; ಗಣೇಶೋತ್ಸವದಲ್ಲಿ ಭಾಗಿ, ಕ್ಷೇತ್ರದ ಜನರ ಕುಶಲೋಪರಿ ವಿಚಾರಣೆ

ಕನಕಪುರಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಭೇಟಿ; ಗಣೇಶೋತ್ಸವದಲ್ಲಿ ಭಾಗಿ

CM DK Shivakumar: ಕನಕಪುರ ತಾಲೂಕಿನ ಚಿಕ್ಕೇಗೌಡನದೊಡ್ಡಿಯಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ 10ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಶ್ರೀ ಗಣೇಶನಿಗೆ ಸಿಎಂ ಡಿ.ಕೆ. ಶಿವಕುಮಾರ್‌, ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

G S Hegde: ಐದು ದಶಕಗಳ ಸಂಗೀತ ಸೇವೆ; ಸೆ.19ರಂದು ಶಿರಸಿಯಲ್ಲಿ ಜಿ.ಎಸ್‌. ಹೆಗಡೆ ದಂಪತಿಗೆ ಸನ್ಮಾನ, ಸಂಗೀತ ಕಾರ್ಯಕ್ರಮ

ಸೆ.19ರಂದು ಜಿ.ಎಸ್‌. ಹೆಗಡೆ ದಂಪತಿಗೆ ಸನ್ಮಾನ, ಸಂಗೀತ ಕಾರ್ಯಕ್ರಮ

G S Hegde: ಕಳೆದ 50 ವರ್ಷಗಳಿಂದ ಸಂಗೀತ ಸೇವೆಯನ್ನು ಒಂದು ದೀಕ್ಷೆಯಂತೆ ಪರಿಗಣಿಸಿ ನಿರಂತರವಾಗಿ ಕಲಾ ಕ್ಷೇತ್ರದಲ್ಲಿ ಜಿ.ಎಸ್‌. ಹೆಗಡೆ ಅವರು ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ.ಎಸ್‌. ಹೆಗಡೆ ದಂಪತಿಗೆ ಅವರಿಗೆ ಗೌರವ ಸಲ್ಲಿಸಲು ಶಿರಸಿಯಲ್ಲಿ ಸೆ.19ರಂದು ಸನ್ಮಾನ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಹೊಸಪೇಟೆಯಲ್ಲಿ ಗಣೇಶ ಮೂರ್ತಿ ಸಾಗಿಸುವ ವೇಳೆ ಅವಘಡ; ವಿದ್ಯುತ್​ ಸ್ಪರ್ಶಿಸಿ ಇಬ್ಬರಿಗೆ ಗಂಭೀರ ಗಾಯ!

ಗಣೇಶ ಮೂರ್ತಿ ಸಾಗಿಸುವ ವೇಳೆ ವಿದ್ಯುತ್​ ಸ್ಪರ್ಶಿಸಿ ಇಬ್ಬರಿಗೆ ಗಾಯ!

Ganesh Chaturthi 2026: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಅನಂತಶಯನಗುಡಿಯ ಹೊರವಲಯದಲ್ಲಿ ಘಟನೆ ನಡೆದಿದೆ. ಗಣಪತಿ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Jobs only for Tamilians: ಬೆಂಗಳೂರಿನ ಕಂಪನಿಯಲ್ಲಿ ತಮಿಳಿಗರಿಗೆ ಮಾತ್ರ ಉದ್ಯೋಗ; ಭುಗಿಲೆದ್ದ ಕನ್ನಡಿಗರ ಆಕ್ರೋಶ

ಕಂಪನಿಯಲ್ಲಿ ತಮಿಳಿಗರಿಗೆ ಮಾತ್ರ ಉದ್ಯೋಗ; ಭುಗಿಲೆದ್ದ ಕನ್ನಡಿಗರ ಆಕ್ರೋಶ

ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು ಹಾಗೂ ನಮಕ್ಕಲ್‌ ನಗರಗಳಲ್ಲಿ ಡೇಟಾ ಅನಾಲಿಸ್ಟ್ ಹುದ್ದೆಗೆ ‘ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂದು ಖಾಸಗಿ ಕಂಪನಿಯೊಂದರ ಎಚ್‌ಆರ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದಕ್ಕೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

BOB Recruitment 2026: ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 1,100 ಹುದ್ದೆ; ಯಾರೆಲ್ಲ ಅರ್ಜಿ ಸಲ್ಲಿಸಬಹುದು? ವಿದ್ಯಾರ್ಹತೆ ಏನು? ಇಲ್ಲಿದೆ ಇಂಚಿಂಚು ಮಾಹಿತಿ

ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 1,100 ಹುದ್ದೆ; ಹೀಗೆ ಅಪ್ಲೈ ಮಾಡಿ

Bank Jobs: ಬ್ಯಾಂಕ್‌ ಆಫ್‌ ಬರೋಡ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 1,100 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ವೆಲ್ತ್‌ ಎಕ್ಸಿಕ್ಯುಟೀವ್‌, ಕ್ರೆಡಿಟ್‌ ಅನಾಲಿಸ್ಟ್‌ ಹುದ್ದೆ ಇದಾಗಿದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 24.

ಮಾಡೆಲ್‌ ಮೇಲೆ ಅತ್ಯಾಚಾರ, ದಲಿತ ಯುವಕರ ಮೇಲೆ ಹಲ್ಲೆ; ಟಿ.ನರಸೀಪುರ ಇನ್ಸ್‌ಪೆಕ್ಟರ್ ಹಳೇ ಪ್ರಕರಣಗಳು ಬೆಳಕಿಗೆ!

ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ಹಳೇ ಪ್ರಕರಣಗಳು ಬೆಳಕಿಗೆ!

T Narasipura Inspector Dhananjay: ಗಣೇಶೋತ್ಸವ ಸಮಿತಿಯ ಯುವಕರಿಗೆ ಧಮ್ಕಿ ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಟಿ ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರ ಹಳೆಯ ದರ್ಪದ ನಡವಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಭಾರೀ ಸದ್ದು ಮಾಡುತ್ತಿವೆ.

ರಾಜ್ಯದ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿದ್ರಾ ಟ್ರಂಪ್? ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ರಾಜ್ಯದ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿದ್ರಾ ಟ್ರಂಪ್?

Did Trump Copy Karnataka’s Guarantee Scheme: ಗ್ಯಾರಂಟಿ ಯೋಜನೆಯನ್ನು ಮಹಾರಾಷ್ಟ್ರದಲ್ಲಿ ನಕಲು ಮಾಡಿದರು. ಮಧ್ಯಪ್ರದೇಶದಲ್ಲಿ ನಕಲು ಮಾಡಿದರು. ರಾಜಸ್ಥಾನದಲ್ಲಿ ನಕಲು ಮಾಡಿದರು. ಬಿಹಾರದಲ್ಲೂ ನಮ್ಮನ್ನೇ ನಕಲು ಮಾಡಿದರು. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ನಮ್ಮನ್ನು ನಕಲು ಮಾಡುತ್ತಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Chikkamagaluru Accident: ಚಿಕ್ಕಮಗಳೂರಿನ ಬಳಿ ಭೀಕರ ಅಪಘಾತ; ಸಾರಿಗೆ ಬಸ್‌ ಹರಿದು ಇಬ್ಬರು ಬೈಕ್‌ ಸವಾರರ ದುರ್ಮರಣ

ಚಿಕ್ಕಮಗಳೂರಿನಲ್ಲಿ ಸಾರಿಗೆ ಬಸ್‌ ಹರಿದು ಇಬ್ಬರು ಬೈಕ್‌ ಸವಾರರ ಸಾವು

ಕಡೂರಿನಿಂದ ಚಿಕ್ಕಮಗಳೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಇಬ್ಬರು ಸವಾರರು ರಸ್ತೆಯ ಮೇಲೆಯೇ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಸರ್ಕಾರಿ ಬಸ್ ಹರಿದು ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ; ಕೇಂದ್ರದ ನಿಯಮಾನುಸಾರ ಬರ ತಾಲೂಕುಗಳ ಘೋಷಣೆ ಎಂದ ಸಿಎಂ

ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ: ಸಿಎಂ

CM DK Shivakumar: ನಾನು ಅನೇಕ ಕಡೆ ಭೇಟಿ ನೀಡಿ ಬರ ಪರಿಶೀಲನೆ ಮಾಡಿದ್ದು, ಈಗಾಗಲೇ 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಉಳಿದ ಕಡೆ ಪರಿಶೀಲನೆ ನಡೆಯುತ್ತಿದೆ. ಯಾರೂ ಆತುರ ಪಡುವುದು ಬೇಡ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Loading...