ಮ್ಯೂಟೇಷನ್‌ಗೆ ₹10 ಸಾವಿರ: ಮಧ್ಯವರ್ತಿ ಲೋಕಾಯುಕ್ತ ಬಲೆಗೆ
ಜಮೀನಿನ ಮ್ಯೂಟೇಷನ್ ಮಾಡಿಕೊಡಲು ವಿಲೇಜ್ ಅಕೌಂಟೆಂಟ್ ರಮೇಶ್ ಅವರು ₹10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಅಧಿಕಾರಿಯ ಸೂಚನೆಯಂತೆ ಸಾಗರ್ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.