ಅಧ್ಯಕ್ಷರಾಗಿ ಕೆ.ಎಸ್.ರಮೇಶ್, ಉಪಾಧ್ಯಕ್ಷರಾಗಿ ನಟರಾಜ್ ಆಯ್ಕೆ
ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ರಮೇಶ್ ಹಾಗೂ ಹೊನ್ನಶೆಟ್ಟಿಹಳ್ಳಿ ಬೋರೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಟರಾಜ್ ಹಾಗೂ ರಾಜಣ್ಣ ಸ್ಪರ್ಧಿಸಿದ್ದರು. ಒಟ್ಟು 13 ಮತಗಳ ಪ್ರತಿಷ್ಠೆಯ ಈ ಚುನಾವಣೆಯಲ್ಲಿ ಏಳು ಮತಗಳನ್ನು ಪಡೆಯುವ ಮೂಲಕ ಕೋಣನಕೆರೆ ಕೆ.ಎಸ್.ರಮೇಶ್ ಅಧ್ಯಕ್ಷರಾಗಿ ಜಯಗಳಿಸಿದರು. ಪ್ರತಿಸ್ಪರ್ಧಿ ಬೋರೇಗೌಡ ಆರು ಮತಗಳನ್ನು ಪಡೆಯುವ ಮೂಲಕ ಒಂದು ಮತದಲ್ಲಿ ಪರಾಜಿತಗೊಂಡರು.