ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Student Murder: ಅನ್ಯಕೋಮಿನ ಬಾಲಕರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಹತ್ಯೆ; ಅಲ್ಲಿ ಆಗಿದ್ದೇನು?

ಅನ್ಯಕೋಮಿನ ಬಾಲಕರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಹತ್ಯೆ; ಆಗಿದ್ದೇನು?

ಗೆಳೆಯನ ರಕ್ಷಣೆಗೆ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಲೆಯಾಗಿದ್ದಾನೆ. ಬಾಲಕನ ಕೊಲೆಯ ನಂತರ, ಶಿವಮೊಗ್ಗ ನಗರದಲ್ಲಿ ಕೋಮು ಗಲಭೆ ಆಗದಂತೆ ಜಿಲ್ಲಾ ಪೊಲೀಸರು ಎಲ್ಲ ರೀತಿಯ ಮುಂಜಾಗ್ರತೆ ವಹಿಸಿದ್ದಾರೆ. ಘಟನಾ ಸ್ಥಳ, ಮೆಗ್ಗಾನ್ ಜಿಲ್ಲಾಸ್ಪತ್ರೆ ಸೇರಿದಂತೆ ನಗರದಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Heart Attack: ದಾವಣಗೆರೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

ದಾವಣಗೆರೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

ಮುಝುಮ್ಮಿಲ್ ನಿನ್ನೆ ಬೆಳಗಿನ ಜಾವ ಮನೆಯಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾನೆ. ಕುಟುಂಬಸ್ಥರು ಆತಂಕಗೊಂಡು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಹೃದಯಘಾತವೇ ಸಾವಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Karnataka weather: ರಾಜ್ಯಾದ್ಯಂತ ಒಣ ಹವೆ, ಇಂದು ತುಂತುರು ಮಳೆ ಸಂಭವ

ರಾಜ್ಯಾದ್ಯಂತ ಒಣ ಹವೆ, ಇಂದು ತುಂತುರು ಮಳೆ ಸಂಭವ

ಬೀದರ್, ಕಲಬುರ್ಗಿ, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಅಬ್ಬರಿಸಲಿದ್ದು, ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಬೆಂಗಳೂರು ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ.

Bengaluru news: ಸಿಲಿಕಾನ್‌ ಸಿಟಿಗೆ ಬರುವ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ

ಸಿಲಿಕಾನ್‌ ಸಿಟಿಗೆ ಬರುವ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ

ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸೀಸದ (ಲೆಡ್) ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದ್ದು, ಈ ತರಕಾರಿ ತಿಂದರೆ ಕಿಡ್ನಿ, ಮೆದುಳಿಗೆ ಸಮಸ್ಯೆಯಾಗಬಹುದು. ಸಂಗ್ರಹಿಸಿದ 72 ಮಾದರಿಗಳ ಪೈಕಿ 10 ಮಾದರಿಗಳಲ್ಲಿ 8 ಕೀಟನಾಶಕ ಅವಶೇಷಗಳು ಪತ್ತೆಯಾಗಿದೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಂಡುಬರುವ ತರಕಾರಿಗಳಲ್ಲಿ ಸೀಸದ ಪ್ರಮಾಣ ಮಿತಿಗಿಂತ ಹೆಚ್ಚು ಮಟ್ಟದಲ್ಲಿದೆ.

Doctors Strike: ಮಾ.11ರಿಂದ ರಾಜ್ಯಾದ್ಯಂತ ಸರ್ಕಾರಿ OPD ಬಂದ್: ವೈದ್ಯರಿಂದ ಪ್ರತಿಭಟನೆ

ಮಾ.11ರಿಂದ ರಾಜ್ಯಾದ್ಯಂತ ಸರ್ಕಾರಿ OPD ಬಂದ್: ವೈದ್ಯರಿಂದ ಪ್ರತಿಭಟನೆ

ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಆರೋಗ್ಯ ಇಲಾಖೆಯ ನೌಕರರ ಸಂಘಗಳು ಈ ಪ್ರತಿಭಟನೆಗೆ ಕರೆ ನೀಡಿವೆ. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಹಂತ-ಹಂತವಾಗಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್ ಎಂ.ಮೇಟಿ ಅವರು ಮಾಹಿತಿ ನೀಡಿದರು.

Student Murder: ಶಿವಮೊಗ್ಗದಲ್ಲಿ ಸಹಪಾಠಿಗಳಿಂದಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕೊಲೆ

ಶಿವಮೊಗ್ಗದಲ್ಲಿ ಸಹಪಾಠಿಗಳಿಂದಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕೊಲೆ

ಇತರ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ ಸಂಕೇತ್ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chhatrapati Shivaji Maharaja: ಧೈರ್ಯ ಮತ್ತು ಸಹಿಷ್ಣುತೆಯ ಪ್ರತೀಕ ಛತ್ರಪತಿ ಶಿವಾಜಿ: ರಂಜಿತ್ ಕಾಳೆ

ಧೈರ್ಯ ಮತ್ತು ಸಹಿಷ್ಣುತೆಯ ಪ್ರತೀಕ ಛತ್ರಪತಿ ಶಿವಾಜಿ

ಶಿವಾಜಿ ಮಹಾರಾಜರ ಧೈರ್ಯ ಮತ್ತು ಸ್ಪೂರ್ತಿದಾಯಕ ಕಾರ್ಯಗಳನ್ನು ಗೌರವಿಸ ಬೇಕಿದೆ. ಶಿವಾಜಿಯ ತಾಯಿ ಜೀಜಾಬಾಯಿ ಮತ್ತು ಮಾರ್ಗದರ್ಶಕ ದಾದಾಜಿ ಕೊಂಡದೇವ ಅವರು ಶಿವಾಜಿ ರೂಪ ನಿರ್ಮಾಣ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಚಿಕ್ಕ ವಯಸ್ಸಿ ನಿಂದಲೇ ಅವರಿಗೆ ಧೈರ್ಯ ಮತ್ತು ನ್ಯಾಯಯುತತೆಯಂತಹ ಮೌಲ್ಯಗಳನ್ನು ಕಲಿಸಿದ್ದರು. ಇವರ ಆದರ್ಶಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು

Mandya News: ಮಂಡ್ಯದಲ್ಲಿ ಅಮಾನವೀಯ ಕೃತ್ಯ; ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ

ಮಂಡ್ಯದಲ್ಲಿ ಅಮಾನವೀಯ ಕೃತ್ಯ; ವ್ಯಕ್ತಿಯ ಮೇಲೆ ಮನಸೋ ಇಚ್ಛೆ ಹಲ್ಲೆ

Mandya Assault Case: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಘಟನೆ ನಡೆದಿದೆ. ಯುವತಿ ನಾಪತ್ತೆಗೆ ಕಾರಣವೆಂದು ಆರೋಪಿಸಿ ವ್ಯಕ್ತಿಯ ಮೇಲೆ ಐವರ ಗುಂಪು ಹಲ್ಲೆ ಮಾಡಿದೆ. ಈ ವೇಳೆ ದೊಡ್ಡ ಸೈಜುಗಲ್ಲು ಎತ್ತಿ ಹಾಕಿ ವ್ಯಕ್ತಿಯ ಕಾಲು ಮುರಿದಿದ್ದಾರೆ.

DCM D.K. Shivakumar: ಜನವಿರೋಧಿ ಆಡಳಿತದ ಮೂಲಕ ಬಿಜೆಪಿ ಅಂತಿಮ ದಿನಗಳು ಸಮೀಪಿಸುತ್ತಿವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಭವಿಷ್ಯ

ಜನವಿರೋಧಿ ಆಡಳಿತದ ಮೂಲಕ ಬಿಜೆಪಿ ಅಂತಿಮ ದಿನಗಳು ಸಮೀಪಿಸುತ್ತಿವೆ

ಈ ದೇಶ ಉಳಿಸಲು ಇಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಸದಾ ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ನೀಡುತ್ತಾ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ 20 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಉದ್ಯೋಗ ಖಾತರಿ ಕಾರ್ಯಕ್ರಮ ನೀಡಿತ್ತು

ಏಷ್ಯಾದಲ್ಲಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

ಭಾರತದಲ್ಲಿ ಅಮೆಜಾನ್‌ ನ ನಿರಂತರ ಹೂಡಿಕೆಯ ಭಾಗವಾಗಿ ಈ ಹೊಸ ಕ್ಯಾಂಪಸ್‌ ನ ಉದ್ಘಾಟನೆಗೊಂಡಿದೆ. ಕಂಪನಿಯು ಈಗಾಗಲೇ ಭಾರತದಲ್ಲಿ 40 ಶತಕೋಟಿ ಡಾಲರ್‌ ಗಿಂತಲೂ ಹೆಚ್ಚು ಹೂಡಿಕೆ ಮಾಡಿದ್ದು, 2030ರ ವೇಳೆಗೆ ಹೆಚ್ಚುವರಿಯಾಗಿ 35 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಬದ್ಧವಾಗಿದೆ.

Adichunchanagiri Sri: ಆಧ್ಯಾತ್ಮಿಕ ಸಾಧನೆಯೇ ಮಾನಸಿಕ ಆರೋಗ್ಯದ ಸಾಧನ: ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ

ಆಧ್ಯಾತ್ಮಿಕ ಸಾಧನೆಯೇ ಮಾನಸಿಕ ಆರೋಗ್ಯದ ಸಾಧನ

ದೇಹ ಹಾಗೂ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳುವುದರ ಅಗತ್ಯವಿದೆ. ತಿಳಿಯಾದ ನೀರು ಕದಡುವಂತೆ, ಹಾಗೆಯೇ ಕಲ್ಮಶಗೊಂಡಿರುವ ನೀರನ್ನು ಶುದ್ದೀಕರಣ ಗೊಳಿಸುವ ಮಾದರಿಯಲ್ಲಿ ಆಂತರಿಕ ಬೌದ್ಧಿಕ ಪ್ರಜ್ಞೆಯು ಎಚ್ಚೆತ್ತುಕೊಳ್ಳುತ್ತಿರಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಸತ್ಕಾರ್ಯ ಚಟುವಟಿಕೆಯು ಒಳ್ಳೆಯ ಪ್ರಭಾವ ಬೀರುತ್ತದೆ

Adichunchanagiri Sri: ಆಧ್ಯಾತ್ಮಿಕ ಸಾಧನೆಯೇ ಮಾನಸಿಕ ಆರೋಗ್ಯದ ಸಾಧನ: ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ

ಆಧ್ಯಾತ್ಮಿಕ ಸಾಧನೆಯೇ ಮಾನಸಿಕ ಆರೋಗ್ಯದ ಸಾಧನ

ದೇಹ ಹಾಗೂ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳುವುದರ ಅಗತ್ಯವಿದೆ. ತಿಳಿಯಾದ ನೀರು ಕದಡುವಂತೆ, ಹಾಗೆಯೇ ಕಲ್ಮಶಗೊಂಡಿರುವ ನೀರನ್ನು ಶುದ್ದೀಕರಣ ಗೊಳಿಸುವ ಮಾದರಿಯಲ್ಲಿ ಆಂತರಿಕ ಬೌದ್ಧಿಕ ಪ್ರಜ್ಞೆಯು ಎಚ್ಚೆತ್ತುಕೊಳ್ಳುತ್ತಿರಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಸತ್ಕಾರ್ಯ ಚಟುವಟಿಕೆಯು ಒಳ್ಳೆಯ ಪ್ರಭಾವ ಬೀರುತ್ತದೆ

MNarega Bachav Movement: ಚಿಕ್ಕಬಳ್ಳಾಪುರದಲ್ಲಿ ಮೇಳೈಸಿದ ನರೇಗಾ ಬಚಾವ್ ಜನಾಂದೋಲನದ ರಣಕಹಳೆ : ಲಕ್ಷ ಲಕ್ಷ ಜನಸಂಗಮ

ಚಿಕ್ಕಬಳ್ಳಾಪುರದಲ್ಲಿ ಮೇಳೈಸಿದ ನರೇಗಾ ಬಚಾವ್ ಜನಾಂದೋಲನದ ರಣಕಹಳೆ

ತಾಲೂಕಿನ ಅಗಲಗುರ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ 30 ಎಕರೆ ಬಯಲು ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಸೋಮವಾರ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗಿಯಾಗಿದ್ದ ಗಣ್ಯರು ವಿರಾಜಮಾನವಾಗಿದ್ದರೆ ವೇದಿಕೆ ಯ ಮುಂಭಾಗದ ಬೃಹತ್ ಅವರಣದಲ್ಲಿ ಜನತೆಗಾಗಿ ಮೀಸಲಾಗಿದ್ದ ಆಸನಗಳಲ್ಲಿ ಆಸೀನರಾಗಿ ಮುಖ್ಯಮಂತ್ರಿ ಸಹಿತ ಗಣ್ಯರ ಮಾತುಗಳಿಗೆ ಕಿವಿಯಾದರು.

ಕುರುಬ ಸಮುದಾಯಕ್ಕೆ ಎಸ್‌ಟಿ ಸಿಂಧುತ್ವ ಪ್ರಮಾಣಪತ್ರ ನೀಡಲು ಆಗ್ರಹ; ಯಾದಗಿರಿಯಲ್ಲಿ ಕುರಿ ಹಿಂಡುಗಳೊಂದಿಗೆ ಪ್ರತಿಭಟನೆ

ಕುರುಬರಿಗೆ ಎಸ್‌ಟಿ ಪ್ರಮಾಣಪತ್ರ ನೀಡಲು ಆಗ್ರಹಿಸಿ ಯಾದಗಿರಿಯಲ್ಲಿ ಪ್ರತಿಭಟನೆ

2016ರ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅರ್ಹ ಕುರುಬ ಸಮುದಾಯದವರಿಗೆ ತಕ್ಷಣ ಎಸ್.ಟಿ ಸಿಂಧುತ್ವ ಪ್ರಮಾಣಪತ್ರ ನೀಡಬೇಕು. ಓಆರ್ಜಿಐ ಮತ್ತು ಎಸ್.ಟಿ ಆಯೋಗದ ನಡುವೆ ಸಮನ್ವಯ ಸಭೆ ನಡೆಸಿ ತಾರತಮ್ಯ ನಿವಾರಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಎಸ್.ಟಿ ಹೋರಾಟ ಸಮಿತಿ ಹಾಗೂ ಕುರುಬ ಹೋರಾಟ ಸಮಿತಿ ಆಗ್ರಹಿಸಿವೆ.

ಈ ಬಾರಿ ಬಜೆಟ್‌ನಲ್ಲಿ ಪತ್ರಕರ್ತ ಸಮುದಾಯಕ್ಕೆ ಸಿಹಿ ಸುದ್ದಿ ಇರುತ್ತೆ: ಕೆ.ವಿ. ಪ್ರಭಾಕರ್

ಈ ಬಾರಿ ಬಜೆಟ್‌ನಲ್ಲಿ ಪತ್ರಕರ್ತ ಸಮುದಾಯಕ್ಕೆ ಸಿಹಿ ಸುದ್ದಿ: ಕೆವಿಪಿ

KV Prabhakar: ಪತ್ರಕರ್ತ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನೆರಳಾಗಿ ನಿಂತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲೂ ಶ್ರಮಿಕ ಪತ್ರಕರ್ತ ಸಮುದಾಯಕ್ಕೆ ಉತ್ತಮ‌ ಅನುಕೂಲಗಳು ಆಗುವ ಭರವಸೆ ಇದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

ಹುಳಿಯಾರು, ಹಂದನಕೆರೆ ಠಾಣೆಗಳಿಗೆ ಬೇಕಿದೆ 'ಕಾಯಂ' ಸಾರಥಿ: ಪ್ರಭಾರ ಹೊರೆಯಿಂದ ತಿಪಟೂರು ಪಿಎಸ್‌ಐ ಯತೀಶ್ ಹೈರಾಣ!

ಹುಳಿಯಾರು, ಹಂದನಕೆರೆ ಠಾಣೆಗಳಿಗೆ ಬೇಕಿದೆ 'ಕಾಯಂ' ಸಾರಥಿ

Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ರಮುಖ ವ್ಯಾಪ್ತಿ ಹೊಂದಿರುವ ಹುಳಿಯಾರು ಮತ್ತು ಹಂದನಕೆರೆ ಪೊಲೀಸ್ ಠಾಣೆಗಳು ಈಗ ಪೂರ್ಣ ಪ್ರಮಾಣದ ಅಧಿಕಾರಿಯಿಲ್ಲದೆ ಅನಾಥವಾಗಿವೆ. ತಿಪಟೂರು ನಗರ ಪಿಎಸ್‌ಐ ಯತೀಶ್ ಅವರಿಗೆ ಈ ಎರಡೂ ಠಾಣೆಗಳ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇದರಿಂದ ಅವರು ಹೈರಾಣಾಗುವಂತಾಗಿದೆ.

ಭಾರತದಲ್ಲಿ ವಿದ್ಯಾರ್ಥಿಗಳ ಸಾಧನೆ ಸಂಭ್ರಮಿಸುವ ಪಿವಿಐ 3ನೇ ಘಟಿಕೋತ್ಸವ

ಭಾರತದಲ್ಲಿ ವಿದ್ಯಾರ್ಥಿಗಳ ಸಾಧನೆ ಸಂಭ್ರಮಿಸುವ ಪಿವಿಐ 3ನೇ ಘಟಿಕೋತ್ಸವ

ಒಂದು ವರ್ಷ ಮತ್ತು ಎರಡು ವರ್ಷಗಳ ಕಲಿಕೆ ಮತ್ತು ವೈಯಕ್ತಿಕ ಕೋರ್ಸ್‍ಗಳನ್ನು ಪೂರ್ಣ ಗೊಳಿಸಿದ ಕಲಿಕಾರ್ಥಿಗಳಿಗೆ ಔಪಚಾರಿಕ ಪದವಿ ಪ್ರದಾನ ಸಮಾರಂಭ, ವಿಶೇಷ ಅತಿಥಿಗಳ ಸ್ಪೂರ್ತಿದಾಯಕ ಭಾಷಣಗಳು ಮತ್ತು ಪಿವಿಐನ ಸೇರ್ಪಡೆಗಾಗಿ ಪ್ರತಿಜ್ಞೆಯ ಮೂಲಕ ಸಾಮೂಹಿಕ ಕ್ರಮಕ್ಕಾಗಿ ಬಲವಾದ ಸಂದೇಶ ಕಾರ್ಯಕ್ರಮದ ವಿಶೇಷವಾಗಿತ್ತು.

ಮ್ಯಾಟ್ರಿಮೋನಿಯಲ್ಲಿ ವಧು ಹುಡುಕುವವರೇ ಎಚ್ಚರ; ಬರೋಬ್ಬರಿ 21 ಲಕ್ಷ ಕಳೆದುಕೊಂಡ ಬೆಂಗಳೂರಿನ ಯುವಕ!

ಮ್ಯಾಟ್ರಿಮೋನಿ ವಂಚನೆ; ಬೆಂಗಳೂರಿನ ಯುವಕನಿಗೆ 21 ಲಕ್ಷ ವಂಚಿಸಿದ ಯುವತಿ!

Matrimony Fraud: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳು ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದ್ದಾಳೆ. ಇದರಿಂದ ಬೆಂಗಳೂರಿನ ಯುವಕ 21.22 ಲಕ್ಷ ರೂಪಾಯಿ ನೀಡಿ ವಂಚನೆಗೊಳಗಾಗಿದ್ದಾನೆ.

ಕಾಂಗ್ರೆಸ್ಸಿನವರು ಎಷ್ಟು ಬಟ್ಟೆ ಬಿಚ್ಚಿಕೊಂಡರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತ: ಛಲವಾದಿ ನಾರಾಯಣಸ್ವಾಮಿ

ಕಾಂಗ್ರೆಸ್ಸಿನವರು ಎಷ್ಟು ಬಟ್ಟೆ ಬಿಚ್ಚಿದರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತ

Chalavadi Narayanaswamy: ವಿಬಿ ಜಿ ರಾಮ್ ಜಿ ಜಾಗೃತಿಗಾಗಿ ಎಲ್ಲ ಕಡೆ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಇಡೀ ದೇಶವ್ಯಾಪಿ ಬೆಂಬಲವೂ ಅದಕ್ಕೆ ವ್ಯಕ್ತವಾಗಿದೆ. ಅದನ್ನು ವಾಪಸ್ ಪಡೆಯುವ ಸಂದರ್ಭ ಒದಗಿಬರಲಾರದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇದು ಜುಮ್ಕಿ ಕಮಾಲ್‌; ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿದ ಚಾಲಕ: ವಿಡಿಯೊ ವೈರಲ್

ಆಟೋದಲ್ಲಿ ಪತ್ನಿಯ ಕಿವಿಯೋಲೆ: ಪ್ರೀತಿ ಗೆದ್ದ ಬೆಂಗಳೂರು ಚಾಲಕ

Viral Video: ಪ್ರೀತಿ ಅನ್ನೋದು ಕೇವಲ ದುಬಾರಿ ಕಾರು, ಮನೆ, ಐಷಾರಾಮಿ ವಸ್ತುಗಳಿಗೆ ಸೀಮಿತವಾಗಿಲ್ಲ.‌ ಅದು ದೈನಂದಿನ ಬದುಕಿನ ಸಣ್ಣ ಪುಟ್ಟ ಸಂಗತಿಯಲ್ಲೂ ಅಡಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ನಗರದ ಆಟೋ ಚಾಲಕನೊಬ್ಬ ತನ್ನ ಮಡದಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲಿಸಿ: ಸಿಎಂ ಕರೆ

MGNREGA Bachao Sangram: ಮನರೇಗಾ ಕಾಯ್ದೆಗೆ ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಮಹಾತ್ಮ ಗಾಂಧಿಯವರ ಹೆಸರನ್ನು ಇಡಲಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾ ಶಕ್ತಿ ತುಂಬಿತ್ತು. ಆದರೆ ಜನಪರ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮೋದಿ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಾಳೆ ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿ ಹಬ್ಬ; ಲೇಖಕ ಡಾ. ಜಿ.ರಾಮಕೃಷ್ಣ ಸೇರಿ ಮೂವರಿಗೆ ನಾಡೋಜ ಗೌರವ

ನಾಳೆ ಹಂಪಿ ಕನ್ನಡ ವಿವಿ 34ನೇ ನುಡಿ ಹಬ್ಬ; ಮೂವರಿಗೆ ನಾಡೋಜ ಗೌರವ

ಈ ಬಾರಿ ಬೆಂಗಳೂರಿನ ವಿದ್ವಾಂಸ ಮತ್ತು ಲೇಖಕ ಡಾ. ಜಿ.ರಾಮಕೃಷ್ಣ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ಮಹಾದೇವಪ್ಪ, ವಿಶ್ರಾಂತ ಆಡಳಿತಾಧಿಕಾರಿ ಡಾ.ಎಚ್‌.ಸಿ.ಸತ್ಯನ್‌ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆಯಾಗಿದ್ದಾರೆ. ಇನ್ನು 107 ಮಂದಿಗೆ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪ್ರದಾನ ಮಾಡಲಾಗುತ್ತದೆ.

ವಿದೇಶಕ್ಕೆ ಹೋಲಿಸಿದರೆ ಬೆಂಗಳೂರೇ ಬೆಸ್ಟ್‌: ವರ್ಲ್ಡ್ ಬೆಸ್ಟ್‌ ಪ್ಲೇಸ್ ಎಂದ ನೆಟ್ಟಿಗನ ಪೋಸ್ಟ್‌ ವೈರಲ್‌

ಬೆಂಗಳೂರಿನ ಹವಾಮಾನಕ್ಕೆ ವ್ಯಕ್ತಿ ಫಿದಾ

Viral Video: ಕೆಲಸದ ನಿಮಿತ್ತ ಬೆಂಗಳೂರನ್ನು ಆಯ್ಕೆ ಮಾಡಿಕೊಂಡವರು ಹಲವು ಮಂದಿ ಇದ್ದಾರೆ. ಇಲ್ಲಿನ ಜೀವನ ಶೈಲಿ ದುಬಾರಿಯಾಗಿದ್ದು, ಹೆಚ್ಚಿನವರಿಗೆ ಹೊಂದಿಕೊಳ್ಳುವುದು ಕಷ್ಟವೇ ಆಗಿದೆ. ಹಾಗೆಯೇ ಇಲ್ಲಿನ ಟ್ರಾಫಿಕ್ ಮತ್ತು ಮೂಲ ಸೌಕರ್ಯಗಳ ಬಗ್ಗೆ ಹೆಚ್ಚಿನ ದೂರುಗಳಿದ್ದರೂ, ಇಲ್ಲಿ ವರ್ಷಪೂರ್ತಿ ಆಹ್ಲಾದಕರವಾದ ಹವಾಮಾನ, ತಂಪಾದ ವಾತಾವರಣ ಇರುತ್ತದೆ ಎಂದು ಹೊಗಳುವವರೂ ಇದ್ದಾರೆ. ಇತ್ತೀಚೆಗೆ ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ಬೆಂಗಳೂರಿನ ಹವಾಮಾನಕ್ಕೆ ಫಿದಾ ಆಗಿದ್ದು, ವರ್ಲ್ಡ್ ಬೆಸ್ಟ್ ಸಿಟಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಉಡುಪಿಯ ನಡುರಸ್ತೆಯಲ್ಲೇ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ!

ಉಡುಪಿಯಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ!

Udupi News: ಉಡುಪಿ ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆತನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕೌಟುಂಬಿಕ ಕಲಹದಿಂದ ನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

Loading...