ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Hubli News: ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಲ್ಯಾಬ್‌ ಟೆಕ್ನಿಷಿಯನ್‌ ಸಾವು

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಲ್ಯಾಬ್‌ ಟೆಕ್ನಿಷಿಯನ್‌ ಸಾವು

ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿ ಬಳಿ ಘಟನೆ ನಡೆದಿದೆ. ಮನೆಯಿಂದ ಲ್ಯಾಬ್‌ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಕತ್ತಿಗೆ ಮಾಂಜಾ ದಾರ ಸಿಲುಕಿ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಮೃತಪಟ್ಟಿದ್ದಾರೆ. ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಶಿ-ತಮಿಳು ಸಂಗಮ 5.0: ನವೆಂಬರ್ 28ರಿಂದ ವಾರಣಾಸಿಯಲ್ಲಿ ಸಾಂಸ್ಕೃತಿಕ ಮಹೋತ್ಸವ; ನೋಂದಣಿ ಪೋರ್ಟಲ್ ಉದ್ಘಾಟಸಿದ ಪ್ರಲ್ಹಾದ್‌ ಜೋಶಿ

ಕಾಶಿ-ತಮಿಳು ಸಂಗಮ 5.0: ನೋಂದಣಿ ಪೋರ್ಟಲ್ ಉದ್ಘಾಟಸಿದ ಜೋಶಿ

ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಭಾರತೀಯ ಜ್ಞಾನ ವ್ಯವಸ್ಥೆಗಳು ಮತ್ತು ಸಾಂಸ್ಕೃತಿಕ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾಶಿ ತಮಿಳು ಸಂಗಮ ಮುಂಚೂಣಿಯಲ್ಲಿದೆ. ಈ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಹಬ್ಬದ ಐದನೇ ಆವೃತ್ತಿಯು ಮುಂಬರುವ ನವೆಂಬರ್ 28 ರಿಂದ ಡಿಸೆಂಬರ್ 12ರವರೆಗೆ ವಾರಣಾಸಿಯಲ್ಲಿ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Chikkaballapur News: ತಹಶೀಲ್ದಾರ್ ರಶ್ಮಿ ಅವರಿಂದ ಪೂಜೆ, ಬಿಲ್ಲಿಗೆ ಹೆದೆಯೇರಿಸಿ ಬಾಣ ಪ್ರಯೋಗ; ಬನ್ನಿ ಎಲೆಗಳಿಗಾಗಿ ಭಕ್ತರ ನೂಕುನುಗ್ಗಲು

ವಿಜಯದಶಮಿ ಸಂಭ್ರಮ: ವಾಪಸಂದ್ರದಲ್ಲಿ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ

ನಗರದ ಒಂದನೇ ವಾರ್ಡ್‌ನ ವಾಪಸಂದ್ರದಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಸಂಜೆ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮಂಟಪದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು.

Private Hospital Charges: ಖಾಸಗಿ ಆಸ್ಪತ್ರೆಗಳ ವಿಪರೀತ ಶುಲ್ಕ ವಸೂಲಿಗೆ ಬ್ರೇಕ್; ಚಿಕಿತ್ಸಾ ದರಪಟ್ಟಿ ಪ್ರದರ್ಶನಕ್ಕೆ ಸಚಿವ ಯು.ಟಿ.ಖಾದರ್‌ ಸೂಚನೆ

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯ

ಜನರ ಮೇಲಿನ ವೈದ್ಯಕೀಯ ವೆಚ್ಚದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಗುರುವಾರ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳ ಸಂಘದೊಂದಿಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರು ಮಹತ್ವದ ಸಭೆ ನಡೆಸಿದ್ದಾರೆ. ಜನಸಾಮಾನ್ಯರ ಹಿತವೇ ನಮ್ಮ ಮೊದಲ ಆದ್ಯತೆ. ಯಾವುದೇ ಕಾರಣಕ್ಕೂ ರೋಗಿಗಳ ಮೇಲೆ ವಿಪರೀತ ಶುಲ್ಕದ ಹೊರೆ ಬೀಳಬಾರದು ಎಂದು ಆಸ್ಪತ್ರೆಗಳಿಗೆ ಸಚಿವರು ಸೂಚಿಸಿದ್ದಾರೆ.

MLC Election: ಅ.23ರಂದು ಇಂದು ಎಂಎಲ್‌ಸಿ ಚುನಾವಣೆ: ಜಿಲ್ಲೆಯಲ್ಲಿ ಸಕಲ ಸಿದ್ಧತೆ ಪೂರ್ಣ

ಲೋಪವಿಲ್ಲದೆ, ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿ

ರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ಅ.23ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಲೋಪಕ್ಕೆ ಅವಕಾಶ ನೀಡದೆ, ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಸೂಚಿಸಿದರು.

ಮೈಸೂರು ದಸರಾದಲ್ಲಿ ದಲಿತ ಸಚಿವರಿಗೆ ಅವಮಾನ ಆರೋಪ; ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ

ದಲಿತ ಸಚಿವರಿಗೆ ಅವಮಾನ ಖಂಡಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ

ಮೈಸೂರಿನಲ್ಲಿ ಜಂಬೂ ಸವಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಜತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ ಹಾಗೂ ಕೆ.ಎಸ್. ಬಸವಂತಪ್ಪ ಅವರನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಅಗತ್ಯ ಕ್ರಮವಹಿಸಬೇಕು ಎಂದು ಸಮಾನತೆ ವೇದಿಕೆ ಹೊಸಪೇಟೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಗ್ಯಾಲರಿ ಜಿ: 'ಬಿಯಾಂಡ್ ದಿ ಫ್ಯಾಮಿಲಿಯರ್' ಕಲಾ ಪ್ರದರ್ಶನ –  ದಕ್ಷಿಣ ಭಾರತದ ಕಲಾ ವೈವಿಧ್ಯದ ಅನಾವರಣ

ಗ್ಯಾಲರಿ ಜಿ: 'ಬಿಯಾಂಡ್ ದಿ ಫ್ಯಾಮಿಲಿಯರ್' ಕಲಾ ಪ್ರದರ್ಶನ

ಪ್ರತಿಷ್ಠಿತ 'ಗ್ಯಾಲರಿ ಜಿ'ಯಲ್ಲಿ ದಕ್ಷಿಣ ಭಾರತದ 16 ಸಮಕಾಲೀನ ಕಲಾವಿದರ 47 ವಿಶಿಷ್ಟ ಕಲಾಕೃತಿ ಗಳನ್ನೊಳಗೊಂಡ 'ಬಿಯಾಂಡ್ ದಿ ಫ್ಯಾಮಿಲಿಯರ್: ಬಿಟ್ವೀನ್ ರಿಯಾಲಿಟಿ, ಅಬ್‌ಸ್ಟ್ರಾಕ್ಷನ್ ಅಂಡ್ ಇಮ್ಯಾಜಿನೇಷನ್' ಗುಂಪು ಕಲಾ ಪ್ರದರ್ಶನವನ್ನು ಆಯೋಜಿಸ ಲಾಗಿದೆ. ನವೆಂಬರ್ 30ರವರೆಗೆ ಈ ಪ್ರದರ್ಶನ ಕಲಾಭಿಮಾನಿಗಳಿಗೆ ಮುಕ್ತವಾಗಿರಲಿದೆ.

Navikotsava 2026: ನವೆಂಬರ್ 22ರಂದು ಜಪಾನ್‌ನಲ್ಲಿ ಕನ್ನಡದ ಜಾತ್ರೆ: 8ನೇ ನಾವಿಕೋತ್ಸವಕ್ಕೆ ಭರ್ಜರಿ ಸಿದ್ಧತೆ

ನವೆಂಬರ್ 22ರಂದು ಜಪಾನ್‌ನಲ್ಲಿ ಎಂಟನೇ ನಾವಿಕೋತ್ಸವ

Navikotsava 2026: ಈ ಬಾರಿಯ ನಾವಿಕೋತ್ಸವಕ್ಕೆ ‘ಕಿಜುನಾ’ ಎಂಬ ಅರ್ಥಪೂರ್ಣ ಜಪಾನಿ ಹೆಸರನ್ನಿಡಲಾಗಿದೆ. ಜಪಾನಿ ಭಾಷೆಯಲ್ಲಿ ಕಿಜುನಾ ಎಂದರೆ ಬಾಂಧವ್ಯ, ಆತ್ಮೀಯ ಸಂಬಂಧ ಎಂದರ್ಥ. ಕಾರ್ಯಕ್ರಮಕ್ಕೆ ಅಮೆರಿಕದಿಂದ ಸುಮಾರು 300 ಕನ್ನಡಿಗರು ಜಪಾನ್‌ಗೆ ಆಗಮಿಸುವ ನಿರೀಕ್ಷೆಯಿದೆ.

Adichunchanagiri Seer: ವಿದ್ಯಾರ್ಥಿಗಳು ಸಂಶೋಧನೆ, ಕಠಿಣ ಪರಿಶ್ರಮದಿಂದ ಗುರಿ ಸಾಧಿಸಲಿ: ನಿರ್ಮಲಾನಂದನಾಥ ಮಹಾಸ್ವಾಮೀಜಿ

ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ವಿಜ್ಞಾನಿಗಳು ಸಂಶೋಧನೆಯ ಮೂಲಕ ಜನರ ಜೀವನಶೈಲಿ ಸುಧಾರಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಬೇಕು. ಜೀವನದಲ್ಲಿ ಏಳು-ಬೀಳುಗಳು ಸಹಜವಾಗಿದ್ದು, ಮೊದಲು ಪ್ರತಿಯೊಬ್ಬರೂ ತಮಗೆ ತಾವೇ ಸ್ನೇಹಿತರಾಗಬೇಕು. ಕೃತಕ ಬುದ್ಧಿಮತ್ತೆ (ಎಐ) ತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು, ವೈಜ್ಞಾನಿಕ ಹಾಗೂ ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳ ಬೇಕು.

8 ವರ್ಷಗಳಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ, ಪಕ್ಷದ ನಿರ್ಧಾರಕ್ಕೆ ಬದ್ಧ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಂಜುನಾಥ ನೀಲಗುಂದ

8 ವರ್ಷಗಳಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ, ಪಕ್ಷದ ನಿರ್ಧಾರಕ್ಕೆ ಬದ್ಧ

ಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿದ್ದೇನೆ. ಪಕ್ಷದ ಹಿರಿಯರ ಮನಸ್ಸು ಗೆದ್ದು, ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುವ ಉದ್ದೇಶ ಹೊಂದಿದ್ದೇನೆ. ಕಬ್ಬೂರ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಮುಂದುವರಿದಿದೆ ಎಂದು ಕಬ್ಬೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನ ಆಕಾಂಕ್ಷಿ ಮಂಜುನಾಥ ನೀಲಗುಂದ ಹೇಳಿದ್ದಾರೆ.

ಕಳೆದುಹೋದ ಮೊಬೈಲ್ ನೀಡಲು 3,000 ರೂಪಾಯಿ ಬೇಡಿಕೆ ಇಟ್ಟ ಕ್ಯಾಬ್ ಚಾಲಕ: ಸಮಯ ಪ್ರಜ್ಞೆ ಮೆರೆದು ಮರಳಿ ಕೊಡಿಸಿದ ಖಾಕಿ ಪಡೆ

ಕಳೆದುಹೋದ ಮೊಬೈಲ್ ನೀಡಲು 3,000 ರೂಪಾಯಿ ಬೇಡಿಕೆ ಇಟ್ಟ ಕ್ಯಾಬ್ ಚಾಲಕ

Viral News: ವ್ಯಕ್ತಿಯೊಬ್ಬರು ರ‍್ಯಾಪಿಡೋದಲ್ಲಿ ಪ್ರಯಾಣಿಸುವಾಗ ಮೊಬೈಲ್ ಫೋನ್‌ ಮರೆತು ಬಿಟ್ಟಿದ್ದರು. ಬಳಿಕ ವಿಚಾರಿಸಿದಾಗ ಚಾಲಕ ಫೋನ್ ಸಿಕ್ಕರೂ ಇಲ್ಲವೆಂದು ಸುಳ್ಳು ಹೇಳಿದ್ದ. ಕೊನೆಗೆ ಮೊಬೈಲ್ ಕಳೆದುಕೊಂಡ ವ್ಯಕ್ತಿ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಮೊಬೈಲ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Chitradurga accident: ಚಿತ್ರದುರ್ಗದಲ್ಲಿ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; ಚಾಲಕ, ಪ್ರಯಾಣಿಕ ಸಾವು, 15 ಮಂದಿಗೆ ಗಾಯ

ಚಿತ್ರದುರ್ಗದಲ್ಲಿ ಲಾರಿಗೆ ಸಾರಿಗೆ ಬಸ್ ಡಿಕ್ಕಿ; ಚಾಲಕ, ಪ್ರಯಾಣಿಕ ಸಾವು

ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಅಪಘಾತ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಮತ್ತು ಪ್ರಯಾಣಿಕ ಸೇರಿ ಇಬ್ಬರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಡಾ. ಸುಧೀರ್ ರಚಿಸಿರುವ ಮನೋವಿಜ್ಞಾನ ಪಠ್ಯಪುಸ್ತಕ ಲೋಕಾರ್ಪಣೆಗೊಳಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆ

ಡಾ. ಸುಧೀರ್ ರಚಿತ ಮನೋವಿಜ್ಞಾನ ಪಠ್ಯಪುಸ್ತಕಗಳ ಲೋಕಾರ್ಪಣೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (ಸ್ವಾಯತ್ತ) ಮನೋವಿಜ್ಞಾನ ವಿಭಾಗದ ಉಪನ್ಯಾಸಕ ಡಾ. ಸುಧೀರ್ ಕೆ.ವಿ. ರಚಿಸಿರುವ ‘Research Methodology: Concepts, Methods and Practical Applications’ ಹಾಗೂ ‘Foundations of Psychology: Concepts and Applications’ ಎಂಬ ಎರಡು ಪಠ್ಯಪುಸ್ತಕಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆಗೊಂಡಿವೆ.

ಕರ್ನಾಟಕದಲ್ಲಿ ತೀವ್ರ ಬರ; 20,585 ಕೋಟಿ ತುರ್ತು ಪರಿಹಾರ ಮಂಜೂರು ಮಾಡಲು ಪ್ರಧಾನಿ ಮೋದಿಗೆ ಡಿಸಿಎಂ ಪತ್ರ

20,585 ಕೋಟಿ ತುರ್ತು ಪರಿಹಾರ ಮಂಜೂರು ಮಾಡಲು ಪಿಎಂಗೆ ಡಿಸಿಎಂ ಪತ್ರ

Dr G Parameshwara: ಎನ್‌ಡಿಆರ್‌ಎಫ್‌ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ₹20,585.73 ಕೋಟಿ ಪರಿಹಾರವನ್ನು ತುರ್ತಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಕೋರಿ ಪಿಎಂ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಡಿಸಿಎಂ ಡಾ.ಜಿ. ಪರಮೇಶ್ವರ ಪತ್ರ ಬರೆದಿದ್ದಾರೆ.

ಬೆಂಗಳೂರು ವಿಧಾನಸೌಧ ಸ್ಫೋಟಿಸುವಂತೆ ಎಐ ವಿಡಿಯೊ ಸೃಷ್ಟಿಸಿದ ಬಿಹಾರ ವ್ಯಕ್ತಿಯ ಬಂಧನ; ಕಂಬಿಯ ಹಿಂದೆ ನಿಲ್ಲಿಸಿದ ರೀಲ್ಸ್‌ ಹುಚ್ಚು

ಬಾಂಬ್ ಸ್ಫೋಟ ವಿಡಿಯೊ ಸೃಷ್ಟಿಸಿದ ವ್ಯಕ್ತಿಯ ಬಂಧನ

ಬೆಂಗಳೂರಿನ ವಿಧಾನಸೌಧವನ್ನು ಸ್ಫೋಟಿಸುವ ವಿಡಿಯೊ ಸೃಷ್ಟಿಸಿದ ಬಿಹಾರದ ವ್ಯಕ್ತಿಯನ್ನು ಬಂಧಿಸಲಾಗಿದೆ. ವಿಧಾನ ಸೌಧದಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ ಮತ್ತು ಈ ವಿಡಿಯೊ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದೆ. ಆರೋಪಿ ವಲಸೆ ಕಾರ್ಮಿಕನಾಗಿದ್ದು, ಪ್ಲಂಬರ್ ಆಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಜಂಬೂಸವಾರಿ ವೀಕ್ಷಣೆಗೆ ಬಂದಿದ್ದ 4 ವರ್ಷದ ಬಾಲಕನ ತಲೆಗೆ ಪೊಲೀಸರ ಲಾಠಿ ಏಟು; ಐಸಿಯುನಲ್ಲಿ ಚಿಕಿತ್ಸೆ

ಜಂಬೂಸವಾರಿ ವೀಕ್ಷಣೆಗೆ ಬಂದಿದ್ದ 4 ವರ್ಷದ ಬಾಲಕನ ತಲೆಗೆ ಲಾಠಿ ಏಟು!

Mysuru Dasara 2026: ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಪೋಷಕರೊಂದಿಗೆ ಆಗಮಿಸಿದ್ದ ಬಾಲಕ ಶಿಶಿರ್ ಎಂಬಾತನಿಗೆ ಪೊಲೀಸ್ ಸಿಬ್ಬಂದಿ ಬೀಸಿದ ಲಾಠಿ ತಲೆಗೆ ಬಡಿದು ಗಂಭೀರ ಗಾಯವಾಗಿದ್ದು, ಪ್ರಸ್ತುತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೈಸೂರು ದಸರಾದಲ್ಲಿ ಸಚಿವರಿಗೆ ಪ್ರವೇಶ ನಿರಾಕರಣೆ ಪ್ರಕರಣ: ವಿಚಾರಣೆಗೆ ಸಿಎಂ ಆದೇಶ

ದಸರಾದಲ್ಲಿ ಸಚಿವರಿಗೆ ಪ್ರವೇಶ ನಿರಾಕರಣೆ ಪ್ರಕರಣ: ವಿಚಾರಣೆಗೆ ಸಿಎಂ ಆದೇಶ

ಮೈಸೂರು ದಸರಾದಲ್ಲಿ ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಪೊಲೀಸ್‌ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಕಂಡು ಬಂದಿದೆ. ತಕ್ಷಣ ಖುದ್ದು ನಾನೇ ಮಧ್ಯಪ್ರವೇಶಿಸಿ ಮಂತ್ರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

World Iodine Deficiency Day 2026: ಆಪತ್ಫಾಂಧವ ಅಯೋಡಿನ್; ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಜೀವಧಾತು

ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಅಯೋಡಿನ್ ಪಾತ್ರ ಬಹುಮುಖ್ಯ

ಪ್ರತಿವರ್ಷ ಅಕ್ಟೋಬರ್ 21 ರಂದು ವಿಶ್ವ ಅಯೋಡಿನ್ ಕೊರತೆ ದಿನವಾಗಿ ಆಚರಿಸಲಾಗುತ್ತದೆ. ದೇಹಕ್ಕೆ ಅಯೋಡಿನ್‌ನ ಪ್ರಾಮುಖ್ಯತೆ ಏನು ಮತ್ತು ಅದರ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ. ಅಯೋಡಿನ್‌ ಮಹತ್ವದ ಬಗ್ಗೆ ಡಾ. ಮುರಲೀ ಮೋಹನ್ ಚೂಂತಾರು ಅವರ ಲೇಖನ ಇಲ್ಲಿದೆ.

Gold Price Today On October 22, 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಗ್ರಾಹಕರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

Gold Silver Price Today: ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 155 ರೂಪಾಯಿ ಕಡಿಮೆಯಾಗಿ 13,235 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 170 ರೂಪಾಯಿ ಅಗ್ಗವಾಗಿ 14,438 ರೂಪಾಯಿಗೆ ತಲುಪಿದೆ.

ಅ.23ರಂದು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಹಾವೇರಿ ಜಿಲ್ಲೆಯಲ್ಲಿ ಸಕಲ ಸಿದ್ಧತೆ

ಅ.23ರಂದು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಅ.23ರಂದು ಮತದಾನ ನಡೆಯಲಿದ್ದು, ಹಾವೇರಿ ಜಿಲ್ಲೆಯಲ್ಲಿ ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ. ವಿಜಯ ಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.

ವಿಜಯ ಯಾತ್ರೆಯೊಂದಿಗೆ ನವರಾತ್ರಿ ಆಚರಣೆಗೆ ತೆರೆ

ವಿಜಯ ಯಾತ್ರೆಯೊಂದಿಗೆ ನವರಾತ್ರಿ ಆಚರಣೆಗೆ ತೆರೆ

ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿನ ಸಮ್ಮುಖದಲ್ಲಿ ನಡೆದ ಈ ಸಾಂಪ್ರದಾಯಿಕ ಮೆರವಣಿಗೆ ಅರಮನೆಯ ಧಾರ್ಮಿಕ ಹಾಗೂ ರಾಜಸಂಪ್ರದಾಯದ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಿತು. ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಯದುವೀರ್ ಅವರು ವಿಶೇಷ ಪೂಜೆ ಸಲ್ಲಿಸಿದರು.

ಪಾವಗಡದಲ್ಲಿ ಸಂಭ್ರಮದ ವಿಜಯದಶಮಿ ಆಚರಣೆ: ಶಮಿ ವೃಕ್ಷಕ್ಕೆ ವಿಶೇಷ ಪೂಜೆ, ತಹಸೀಲ್ದಾರ್‌ನಿಂದ ಅಂಬು ಹೊಡೆತ

ಪಾವಗಡದಲ್ಲಿ ಸಂಭ್ರಮದ ವಿಜಯದಶಮಿ ಆಚರಣೆ

ಪಾವಗಡ ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ರಾಜಬೀದಿಗಳ ಮೂಲಕ ಗುರುಭವನದ ಆವರಣದಲ್ಲಿರುವ ಶಮಿ ವೃಕ್ಷದ ಮಂಟಪದವರೆಗೆ ವಿವಿಧ ಗ್ರಾಮ ದೇವತೆಗಳು ಹಾಗೂ ದುರ್ಗಾದೇವಿಯ ವಿಗ್ರಹಗಳೊಂದಿಗೆ ತಹಸೀಲ್ದಾರ್ ವೈ. ರವಿ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಹೃನ್ಮನ ಸೆಳೆದ ಜಂಬೂ ಸವಾರಿ

ಹೃನ್ಮನ ಸೆಳೆದ ಜಂಬೂ ಸವಾರಿ

ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಲಕ್ಷಾಂತರ ಭಕ್ತರು ಶಿರಬಾಗಿದರೆ, ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಪ್ರಶಾಂತ ನೇತೃತ್ವದ ಗಜಪಡೆಯ ಠೀವಿಗೆ ಜನಸ್ತೋಮ ಮಂತ್ರಮುಗ್ಧವಾಯಿತು. ಈ ಮೂಲಕ 2026ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋ ತ್ಸವದ ಕಿರೀಟಪ್ರಾಯ ವಿಜಯದಶಮಿ ಜಂಬೂ ಸವಾರಿ ವೈಭವೋಪೇತವಾಗಿ ಸಂಪನ್ನಗೊಂಡು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

Hospet News: ಶ್ರೀಮಧ್ವಾಚಾರ್ಯ ಜಯಂತಿ ಆಚರಣೆ

Hospet News: ಶ್ರೀಮಧ್ವಾಚಾರ್ಯ ಜಯಂತಿ ಆಚರಣೆ

ಜ್ಞಾನ, ಭಕ್ತಿಗಳಿಂದ ಮೋಕ್ಷ ಸಾಧನಿಗೆ ಮನುಷ್ಯನು ಹಂತ ಹಂತವಾಗಿ ಸಾಧನೆಯನ್ನು ಮಾಡಬೇಕು ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟವರು. ಸರ್ಕಾರವು ಮಧ್ವ ಜಯಂತಿಯನ್ನು ಆಚರಿಸಲು ಆದೇಶ ನೀಡಿರುವುದರಿಂದ ನಮ್ಮ ಬ್ರಾಹ್ಮಣ ಸಮಾಜವು ಅದನ್ನು ಸ್ವಾಗತಿಸುತ್ತದೆ. ಸರ್ಕಾರಕ್ಕೆ ಧನ್ಯವಾದ ಗಳನ್ನು ಸಲ್ಲಿಸುತ್ತದೆ

Loading...