ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Gauribidanur News: ವೃತ್ತಿಯ ಬಗ್ಗೆ ಅಭಿಮಾನವಿರಲಿ: ಸ್ವಾಮಿ ವೀರೇಶಾನಂದ ಸರಸ್ವತಿ

ವೃತ್ತಿಯ ಬಗ್ಗೆ ಅಭಿಮಾನವಿರಲಿ: ಸ್ವಾಮಿ ವೀರೇಶಾನಂದ ಸರಸ್ವತಿ

ಶಿಕ್ಷಕರು ತಮ್ಮ ವೃತ್ತಿಯನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು. ಸಮಾಜ ಶಿಕ್ಷಕರ ವೃತ್ತಿಯನ್ನು ಕಡೆಗಣಿಸಿದರೆ ತಮ್ಮ ಕರ್ತವ್ಯ ಮತ್ತು ಸಾಧನೆಯ ಮೂಲಕವೇ ಉತ್ತರ ನೀಡಬೇಕು. ಶಿಕ್ಷಕರು ಕಿಂಗ್ ಆಗದಿರಬಹುದು, ಆದರೆ ಕಿಂಗ್ ಮೇಕರ್ ಆಗುತ್ತಾರೆ. ಹೀಗಾಗಿ ಶಿಕ್ಷಕರಿಗೆ ಸಮಾಜದಲ್ಲಿ ಸದಾ ಗೌರವ ಹಾಗೂ ಪವಿತ್ರ ಸ್ಥಾನವಿದೆ ಎಂದರು.

Chikkaballapur News: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ: ಜಿಲ್ಲೆಯಲ್ಲಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ: 25,584 ಮತದಾರರು; ಸೆ.29ಕ್ಕೆ ಅಧಿಸೂಚನೆ, ಅ.23ರಂದು ಮತದಾನ

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಂತೆ ಒಟ್ಟು 25,584 ಪದವೀಧರ ಮತದಾರ ರಿದ್ದು, 14,597 ಪುರುಷರು ಹಾಗೂ 10,987 ಮಹಿಳಾ ಮತದಾರರು ಇದ್ದಾರೆ. ಅರ್ಹ ಪದವೀಧರರು ಸೆ.29ರೊಳಗಾಗಿ ನಮೂನೆ-18ರಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವಂತೆ ಮನವಿ ಮಾಡಿದರು.

ಅತ್ಯಾಧುನಿಕ ಕೇಶ ವಿನ್ಯಾಸ ಸಂಸ್ಥೆಯನ್ನು ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

ಅತ್ಯಾಧುನಿಕ ಕೇಶ ವಿನ್ಯಾಸ ಸಂಸ್ಥೆಯನ್ನು ಉದ್ಘಾಟಿಸಿದ ಸಿಎಂ

ರಾಜಧಾನಿಗೆ ತನ್ನ ಸೇವೆಯನ್ನು ವಿಸ್ತರಿಸುತ್ತಿರುವುದು ವಿಶೇಷ ಕೂದಲು ಮರುಸ್ಥಾಪನಾ ಸಂಸ್ಥೆಯ ಪಾಲಿಗೆ ಒಂದು ಮಹತ್ವದ ಮೈಲುಗಲ್ಲಾಗಿದೆ; ಈ ಕೇಂದ್ರವು ಸುಧಾರಿತ ವೈದ್ಯಕೀಯ ಮೂಲ ಸೌಕರ್ಯ, ಅನುಭವಿ ವೈದ್ಯರು ಮತ್ತು ವೈದ್ಯರ ನೇತೃತ್ವದ ಕೂದಲು ಮರುಸ್ಥಾಪನಾ ವಿಧಾನ ವನ್ನು ಒಂದೇ ಸೂರಿನಡಿ ಒದಗಿಸುತ್ತದೆ.

ಬರಗಾಲದ ನಡುವೆ ಫೈನಾನ್ಸ್ ಕಂಪನಿಗಳ ದೌರ್ಜನ್ಯ: ಕಠಿಣ ಕ್ರಮದ ಭರವಸೆ ನೀಡಿದ ಚಿಂತಾಮಣಿ ಡಿವೈಎಸ್‌ಪಿ

ರೈತರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯಿರಿ: ರೈತ ಸಂಘ ಆಗ್ರಹ

ನಮ್ಮ ಭಾಗದಲ್ಲಿ ಭೀಕರ ಬರವಿದ್ದು, ಕೊಳವೆ ಬಾವಿಗಳಲ್ಲಿ ನೀರು ಆರೋಗುತ್ತಿದೆ. ಕೆಲಸ-ಕೂಲಿ ಇಲ್ಲದೆ ರೈತರು ಹಾಗೂ ಸಾರ್ವಜನಿಕರು ಕಷ್ಟದಲ್ಲಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಖಾಸಗಿ ಬ್ಯಾಂಕ್‌ಗಳ ಸಿಬ್ಬಂದಿ ರೈತರ ಮನೆಗಳಿಗೆ ತೆರಳಿ ಸಾಲ ಮರು ಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆ.

ACB Raid: ಲಂಚ ಪಡೆಯುವಾಗ ಎಸಿಬಿ ಬಲೆಗೆ: ಲಂಚಕ್ಕೆ ಕೈ ಚಾಚಿದ ಆರೋಗ್ಯಾಧಿಕಾರಿ ಸೇವೆಯಿಂದ ವಜಾ

ಲಂಚಕ್ಕೆ ಕೈ ಚಾಚಿದ ಆರೋಗ್ಯಾಧಿಕಾರಿ ಸೇವೆಯಿಂದ ವಜಾ

ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ವೆಂಕಟೇಶಮೂರ್ತಿ ಅವರು 2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಪ್ರಕರಣದ ವಿಚಾರಣೆ ಹಾಗೂ ಲಭ್ಯ ದಾಖಲೆಗಳ ಆಧಾರದ ಮೇಲೆ ಅವರ ವಿರುದ್ಧ ಇಲಾಖಾ ಕ್ರಮಕ್ಕೆ ಮುಂದಾ ಗಲಾಗಿದೆ.

Dr. Nandini K L: ಪತ್ರಕರ್ತೆ, ಕಂಟೆಂಟ್ ಕ್ರಿಯೇಟರ್ ಡಾ. ನಂದಿನಿ ಕೆ.ಎಲ್.ಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ‘ವಿಡಿಯೊ ಕ್ರಿಯೇಟರ್ ಅವಾರ್ಡ್ 2026’

ಪತ್ರಕರ್ತೆ ಡಾ. ನಂದಿನಿ ಕೆ.ಎಲ್.ಗೆ ‘ವಿಡಿಯೊ ಕ್ರಿಯೇಟರ್ ಅವಾರ್ಡ್ 2026’

Video Creator Award 2026: ಕರ್ನಾಟಕದ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು, ಸಂಸ್ಕೃತಿ, ಪರಂಪರೆ ಹಾಗೂ ರಾಜ್ಯದ ವೈವಿಧ್ಯಮಯ ಪ್ರವಾಸೋದ್ಯಮ ಸಾಧ್ಯತೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವಲ್ಲಿ ಪತ್ರಕರ್ತೆ ಡಾ. ನಂದಿನಿ ಕೆ.ಎಲ್. ಅವರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

Gyanesh Kumar: ಜ್ಞಾನೇಶ್ ಕುಮಾರ್ ವಜಾಕ್ಕೆ ಕಾಂಗ್ರೆಸ್ ಆಗ್ರಹ, ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ

ಜ್ಞಾನೇಶ್ ಕುಮಾರ್ ವಜಾಕ್ಕೆ ಕಾಂಗ್ರೆಸ್ ಆಗ್ರಹ, ಪ್ರತಿಭಟನೆ

ಜಿಲ್ಲಾಧ್ಯಕ್ಷ ಕೇಶವ ರೆಡ್ಡಿ ಅವರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು.ಈ ವೇಳೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Salute to Nari Shakti: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಬಿಸಿಯೂಟ ನೌಕರರ ಅ.13ರಂದು ‘ನಾರಿ ಶಕ್ತಿ ನಮನ’ ಕಾರ್ಯಕ್ರಮ

ಲಾಭದ ಲೆಕ್ಕಾಚಾರವಿಲ್ಲದೆ ಜನಸೇವೆ: ಸಂದೀಪ್ ಬಿ. ರೆಡ್ಡಿ

ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ಮೂಡಿಸುವುದು, ಆತ್ಮವಿಶ್ವಾಸ ತುಂಬುವುದು ತಮ್ಮ ಸಮಾಜಮುಖಿ ಕಾರ್ಯಕ್ರಮಗಳ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಭಾವನೆಗಳನ್ನು ತುಂಬುವುದಿಲ್ಲ. ಇತರರೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಂದ ಪ್ರೇರಣೆ ಪಡೆದು ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಳ್ಳಲಿ ಎಂದರು.

Chikkaballapur News: ಹಿಂದೂ ಕಾರ್ಯಕರ್ತರ ಮೇಲಿನ ದಾಳಿ ಖಂಡಿಸಿ ಮನವಿ

ಹಿಂದೂ ಕಾರ್ಯಕರ್ತರ ಮೇಲಿನ ದಾಳಿ ಖಂಡಿಸಿ ಮನವಿ

ಸಂಘಟನೆಯ ಜಿಲ್ಲಾಧ್ಯಕ್ಷ ನಂದಿ ವಿನೋದ್ ಮಾತನಾಡಿ, ಹಿಂದೂ ಕಾರ್ಯಕರ್ತರನ್ನು ಗುರಿ ಯಾಗಿಸಿಕೊಂಡು ನಡೆದಿರುವ ಇಂತಹ ಘಟನೆಗಳು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುತ್ತವೆ. ಘಟನೆಗೆ ಸಂಬಂಧಿಸಿದವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

ಎಫ್‌ಕೆಸಿಸಿಐ ಚುನಾವಣೆ; ಆತಿಥ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ಕೆ. ರಾಧಾಕೃಷ್ಣ ಹೊಳ್ಳ, ಪಿ.ಸಿ. ರಾವ್‌ ಸೇರಿ ನಾಲ್ವರ ಆಯ್ಕೆ

ಎಫ್‌ಕೆಸಿಸಿಐ ಚುನಾವಣೆ; ನಿರ್ದೇಶಕರಾಗಿ ರಾಧಾಕೃಷ್ಣ ಹೊಳ್ಳ ಆಯ್ಕೆ

ಎಫ್‌ಕೆಸಿಸಿಐನ 2026-27ನೇ ಸಾಲಿನ ಅಧ್ಯಕ್ಷರಾಗಿ ಟಿ. ಸಾಯಿರಾಮ್ ಪ್ರಸಾದ್, ಹಿರಿಯ ಉಪಾಧ್ಯಕ್ಷರಾಗಿ ಬಿ.ಪಿ. ಶಶಿಧರ್ ಮತ್ತು ಉಪಾಧ್ಯಕ್ಷರಾಗಿ ಎನ್. ಸತೀಶ್ ಅವರು ಆಯ್ಕೆಯಾಗಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) 109ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

Laxman Savadi: ಗಲಾಟೆ ಪ್ರಕರಣ; ಸಹಕಾರ ಸಚಿವ ಲಕ್ಷ್ಮಣ ಸವದಿಗೆ ಅಥಣಿ ಕೋರ್ಟ್‌ನಿಂದ ಸಮನ್ಸ್

ಸಹಕಾರ ಸಚಿವ ಲಕ್ಷ್ಮಣ ಸವದಿಗೆ ಅಥಣಿ ಕೋರ್ಟ್‌ನಿಂದ ಸಮನ್ಸ್ ಜಾರಿ

ತಳವಾರ ಸಮಾಜಕ್ಕೆ ಎಷ್ಟು ಅನುದಾನ ನೀಡಲಾಗಿದೆ ಎಂದು ಲಕ್ಷ್ಮಣ ಸವದಿ ಅವರನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಸವದಿ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂದು ರಾಜು ಜಮಖಂಡಿಕರ್ ಎಂಬುವವರು ಆರೋಪಿಸಿ, ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಅ.9ರಂದು ಖುದ್ದು ಹಾಜರಾಗಿ ವಿಚಾರಣೆ ಎದುರಿಸುವಂತೆ ಸಚಿವರಿಗೆ ಅಥಣಿಯ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ ಸೂಚಿಸಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ತುಮಕೂರಿನಲ್ಲಿ ರೈತ ಸಂಘದಿಂದ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತುಮಕೂರಿನಲ್ಲಿ ರೈತ ಸಂಘ ಪ್ರತಿಭಟನೆ

Tumkur News: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತುಮಕೂರು ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಮತ್ತು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ನೇತೃತ್ವದಲ್ಲಿ ನಗರದ ಬಿಎಸ್‌ಜೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಪಾದಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣದಲ್ಲಿ ಅಂಕ ಗಳಿಕೆಗಿಂತ ಸಮರ್ಪಣಾ ಭಾವ ಮುಖ್ಯ: ಡಾ. ಎಚ್.ಬಸವನಗೌಡಪ್ಪ

ವೈದ್ಯಕೀಯ ಶಿಕ್ಷಣದಲ್ಲಿ ಅಂಕ ಗಳಿಕೆಗಿಂತ ಸಮರ್ಪಣಾ ಭಾವ ಮುಖ್ಯ

Tumkur News: ವೈದ್ಯಕೀಯ ಶಿಕ್ಷಣದಲ್ಲಿ ಕೇವಲ ಅಂಕ ಗಳಿಸುವುದಕ್ಕಿಂತ ಸಮರ್ಪಣಾ ಭಾವ, ಸಂವಹನ ಕೌಶಲ್ಯ ಹಾಗೂ ಕರುಣೆ ಅತ್ಯಂತ ಅಗತ್ಯ. ಶೇ. 99ರಷ್ಟು ಅಹಿತಕರ ಘಟನೆಗಳಿಗೆ ರೋಗಿಗಳೊಂದಿಗೆ ಸರಿಯಾದ ಸಂವಹನ ಕೊರತೆಯೇ ಕಾರಣವಾಗಿದ್ದು, ವಿದ್ಯಾರ್ಥಿಗಳು ತಾಳ್ಮೆಯಿಂದ ರೋಗಿಗಳ ಮಾತು ಆಲಿಸಬೇಕು ಎಂದು ಜೆಎಸ್‌ಎಸ್ ಅಕಾಡೆಮಿ ಕುಲಪತಿ ಡಾ. ಎಚ್. ಬಸವನಗೌಡಪ್ಪ ತಿಳಿಸಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ ಡಿಕೆಶಿ; ಗೋದಾವರಿ-ಕಾವೇರಿ, ಬೇಡ್ತಿ-ವರದಾ ನದಿ ಜೋಡಣೆ ಸೇರಿ ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ; ಮಹತ್ವದ ಚರ್ಚೆ

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಚಂದ್ರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ, ಕರ್ನಾಟಕದ ಭವಿಷ್ಯ ಮತ್ತು ಜನರ ಕ್ಷೇಮಾಭಿವೃದ್ಧಿಗೆ ಅತ್ಯಂತ ಮುಖ್ಯವಾಗಿರುವ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆಗೆಳ ಕುರಿತು ಚರ್ಚಿಸಿದ್ದಾರೆ.

Mysuru Dasara 2026: ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ

ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಆಹ್ವಾನ

ಕೊಪ್ಪಳದ ಗವಿಮಠಕ್ಕೆ ಸಚಿವ ಶಿವರಾಜ್ ತಂಗಡಗಿ ಅವರು ತೆರಳಿ, ಶ್ರೀ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದು, ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುವಂತೆ ಸರ್ಕಾರದ ಪರವಾಗಿ ಶ್ರೀಗಳಿಗೆ ಆಹ್ವಾನ ನೀಡಿದ್ದಾರೆ. ಅಕ್ಟೋಬರ್ ‌11ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ.

ಬೇಡ್ತಿ–ವರದಾ ನದಿ ತಿರುವು ಯೋಜನೆ; ಬಯಲುಸೀಮೆಯ ಬರ ನೀಗಿಸುವ ಕನಸು, ಪಶ್ಚಿಮಘಟ್ಟದ ಪರಿಸರಕ್ಕೆ ಆತಂಕ!

ಬೇಡ್ತಿ–ವರದಾ ನದಿ ತಿರುವು; ಬಯಲುಸೀಮೆಯ ಬರ ನೀಗಿಸುವ ಕನಸು

Bedti-Varada River Linking Project: ಪಶ್ಚಿಮಘಟ್ಟದಿಂದ ಹರಿದು ಸಮುದ್ರ ಸೇರುವ ಬೇಡ್ತಿ ನದಿಯ ನೀರನ್ನು ತಿರುಗಿಸಿ, ಬರಪೀಡಿತ ಪ್ರದೇಶಗಳಿಗೆ ಹರಿಸುವ ಯೋಜನೆ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯಾಗಿದ್ದು, ಈ ಯೋಜನೆಯಿಂದ ಉತ್ತರ ಕರ್ನಾಟಕದ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯ ನಡುವೆಯೇ, ಪಶ್ಚಿಮಘಟ್ಟದ ಪರಿಸರ ವ್ಯವಸ್ಥೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

Dasara Holidays 2026: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ಈ ಬಾರಿ 19 ದಿನ ದಸರಾ ರಜೆ!

ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ಈ ಬಾರಿ 19 ದಿನ ದಸರಾ ರಜೆ ಘೋಷಣೆ

ಶಿಕ್ಷಣ ಇಲಾಖೆಯ ಆದೇಶವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸುವ ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ. ​ದಸರಾ ಹಬ್ಬದ 19 ದಿನಗಳ ಸುದೀರ್ಘ ವಿರಾಮದ ನಂತರ, ಅಕ್ಟೋಬರ್ 22ರ ಗುರುವಾರದಿಂದ ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಳ್ಳಲಿವೆ.

ಸಿದ್ಧಿವಿನಾಯಕ ಸೇವಾ ಸಮಿತಿಯ 50ನೇ ವರ್ಷದ ಗಣಪತಿ ಪೂಜೆ; ಮುತ್ತೈದೆಯರಿಗೆ ಬಾಗಿನ ನೀಡಿ ಗೌರವ

ಸಿದ್ಧಿವಿನಾಯಕ ಸೇವಾ ಸಮಿತಿಯ 50ನೇ ವರ್ಷದ ಗಣಪತಿ ಪೂಜೆ

Tumkur News: ತುಮಕೂರು ನಗರದಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ 50ನೇ ವರ್ಷದ ಗಣಪತಿ ಪೂಜಾ ಮಹೋತ್ಸವದಲ್ಲಿ, ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಮುತ್ತೈದೆಯರಿಗೆ ಬಾಗಿನ ನೀಡಿ ಗೌರವಿಸಿದರು. ಈ ಕುರಿತ ವಿವರ ಇಲ್ಲಿದೆ.

KPSC scam: ಬಸವರಾಜ್ ಕನ್ನಾಳೆ ರಹಸ್ಯ ಡೈರಿ ಪತ್ತೆ; ಅಭ್ಯರ್ಥಿಗಳೊಂದಿಗೆ ಲಕ್ಷ ಲಕ್ಷ ಡೀಲ್!

ಬಸವರಾಜ್ ಕನ್ನಾಳೆ ಡೈರಿ ಪತ್ತೆ; ಅಭ್ಯರ್ಥಿಗಳೊಂದಿಗೆ ಭಾರಿ ಡೀಲ್‌!

ತನಿಖಾಧಿಕಾರಿಗಳು ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ರಹಸ್ಯ ಸಿಕ್ಕಿದೆ. ಆತ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಟ್ಟಿ, ಪಾವತಿಯಾದ ಮೊತ್ತ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಜಲಸಂಪನ್ಮೂಲ ಇಲಾಖೆಯ ಉಲ್ಲೇಖದೊಂದಿಗೆ ಲೆಕ್ಕ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.

Kalaburagi News: ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ: ಗೃಹ ಸಚಿವರ ತವರಿನಲ್ಲಿಯೇ ಪೊಲೀಸರಿಂದ ಕಳ್ಳ ಪೊಲೀಸ್ ಆಟ?

ಗೃಹ ಸಚಿವರ ತವರಿನಲ್ಲಿಯೇ ಪೊಲೀಸರಿಂದ ಕಳ್ಳ ಪೊಲೀಸ್ ಆಟ?

ಆಳಂದ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣ ಇದೀಗ ಪೊಲೀಸ್ ಇಲಾಖೆ ಯ ಕಾರ್ಯವೈಖರಿ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸುಮಾರು 400 ಚೀಲ ಅಕ್ಕಿ ಸಾಗಿಸು ತ್ತಿದ್ದ ಲಾರಿಯನ್ನು 112 ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಾಹನ ಠಾಣೆಯಲ್ಲಿದ್ದ ವೇಳೆ ಅಕ್ಕಿ ದಂಧೆಕೋರರೊಂದಿಗೆ ಫೋನ್ ಮೂಲಕ ಮಾತುಕತೆ ನಡೆದಿದ್ದು, ಸುಮಾರು ₹1 ಲಕ್ಷಕ್ಕೆ ಡೀಲ್ ಕುದುರಿಸಿ ಲಾರಿ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮದುವೆ ಮಾಡಿಸದಿದ್ದರೆ ಕೆಳಗೆ ಬೀಳುವುದಾಗಿ ಬೆದರಿಕೆ; ದೇವರ ಹೆಸರಿನಲ್ಲಿ ಆಣೆ ಮಾಡಿ ಮನವೊಲಿಕೆ

ಪ್ರೀತಿಸಿದವಳನ್ನೇ ಮದುವೆಯಾಗಲು ಟವರ್ ಏರಿದ ಯುವಕ

ಮಾಡಿಯಾಳ ಗ್ರಾಮದ ಮಹೇಶ್ ಭಜಂತ್ರಿ ಎಂಬ ಯುವಕ ಪ್ರೀತಿಸಿದ ಯುವತಿಯೊಂದಿಗೆ ವಿವಾಹ ಮಾಡಿಸಬೇಕು ಎಂದು ಪಟ್ಟು ಹಿಡಿದು ಮೊಬೈಲ್‌ ಟವರ್ ಏರಿ ಕುಳಿತಿದ್ದ. ಕೆಳಗಿಳಿಯುವಂತೆ ಗ್ರಾಮಸ್ಥ ರು ಹಾಗೂ ಸಂಬಂಧಿಕರು ಮನವಿ ಮಾಡಿದರೂ, ತನ್ನ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಕೆಳಗಿಳಿಯುವುದಿಲ್ಲ ಎಂದು ಹಠ ಹಿಡಿದಿದ್ದಾನೆ.

ಬೆಂಗಳೂರಲ್ಲಿ ಕಾಡಾನೆ ಪ್ರತ್ಯಕ್ಷ: ವಾಕಿಂಗ್ ಮಾಡ್ತಿದ್ದ 60 ವರ್ಷದ ವೃದ್ಧನನ್ನು ತುಳಿದು ಸಾಯಿಸಿದ ಒಂಟಿ ಸಲಗ

ಬೆಂಗಳೂರಲ್ಲಿ ಕಾಡಾನೆ ಪ್ರತ್ಯಕ್ಷ!

ಜನನಿಬಿಡ ವಸತಿ ಪ್ರದೇಶಕ್ಕೆ ಕಾಡಾನೆಯೊಂದು ನುಗ್ಗಿ ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವೃದ್ಧರೊಬ್ಬರನ್ನು ದಾರುಣವಾಗಿ ತುಳಿದು ಸಾಯಿಸಿರುವ ಭೀಕರ ಘಟನೆ ಬೆಂಗಳೂರಿನ ಆರ್‌.ಆರ್. ವೈದ್ಯಕೀಯ ಕಾಲೇಜಿನ ಹಿಂಭಾಗದ ಅಂಚೇಪಾಳ್ಯದಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಅಂಚೇಪಾಳ್ಯದ ನಾಗರಾಜ್‌ ಎಂದು ಗುರುತಿಸಲಾಗಿದೆ.

ಧರ್ಮಸ್ಥಳ ಅಸಹಜ ಸಾವು: ಅಂಕಿಅಂಶಗಳಲ್ಲಿ ವ್ಯತ್ಯಾಸ: 16 ವರ್ಷಗಳಲ್ಲಿ 30 ಪ್ರಕರಣಗಳ ಏರುಪೇರು

16 ವರ್ಷಗಳಲ್ಲಿ 30 ಪ್ರಕರಣಗಳ ಏರುಪೇರು

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವುಗಳ ಕುರಿತು ವಿಶೇಷ ತನಿಖಾ ತಂಡ ಸರಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಕಡತಗಳ ವ್ಯತ್ಯಾಸಗಳು ಪತ್ತೆಯಾ ದರೂ ಕೊಲೆ ಪಿತೂರಿ, ಅತ್ಯಾಚಾರ, ವ್ಯವಸ್ಥಿತ ಷಡ್ಯಂತ್ರಗಳು ಬಹಿರಂಗಗೊಂಡಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಎಸ್‌ಐಟಿ ವರದಿಯ ಅಂಕಿಅಂಶಗಳು, ಹಳೆಯ ಪೊಲೀಸ್ ವಹಿಗಳು ಮತ್ತು ಪಂಚಾಯಿತಿ ದಾಖಲೆಗಳ ನಡುವಿನ ತಾಂತ್ರಿಕ ವ್ಯತ್ಯಾಸಗಳನ್ನು ತೆರೆದಿಟ್ಟಿವೆ.

86 ರು. ಔಷಧಕ್ಕೆ 4228 ರು. ದರ: 254 ಕಂಪನಿಗಳ ಅಕ್ರಮ ಜಾಲ ಪತ್ತೆ; ಔಷಧ ಕಂಪನಿಗಳ ಕಳ್ಳಾಟ ಬಯಲು

ಔಷಧ ಕಂಪನಿಗಳ ಕಳ್ಳಾಟ ಬಯಲು

ಎಫ್‌ʼಡಿಎ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ, ಔಷಧಗಳ ಉತ್ಪಾದನಾ, ಲ್ಯಾಂಡಿಂಗ್ ವೆಚ್ಚಕ್ಕೂ ಹಾಗೂ ಆಸ್ಪತ್ರೆಗಳು-ಔಷಧ ಮಳಿಗೆಗಳು ರೋಗಿಗಳಿಗೆ ವಿಧಿಸುವ ಎಂಆರ್‌ಪಿ ಬೆಲೆಗೂ ಭಾರಿ ವ್ಯತ್ಯಾಸ ಬೆಳಕಿಗೆ ಬಂದಿದೆ. 86 ರು.ಗೆ ಖರೀದಿಸಿದ ಸಾಮಾನ್ಯ ಔಷಧ-1 ರ ಎಂಆರ್‌ಪಿ ಬೆಲೆ 4528 ರು. ನಿಗದಿಪಡಿಸ ಲಾಗಿದೆ.

Loading...