ತುಂಗಭದ್ರೆ ಹೊಸ ಗೇಟ್ʼಗಳು ಇಂದು ಲೋಕಾರ್ಪಣೆ
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜನರ ಜೀವನಾಡಿ, ತುಂಗಭದ್ರಾ ಜಲಾಶಯದ 33 ನೂತನ ಸ್ಪಿಲ್ ವೇ ಗೇಟ್ಗಳ ಲೋಕಾರ್ಪಣೆ ಗುರುವಾರ ನಡೆಯಲಿದೆ. ಐತಿಹಾಸಿಕ ಕ್ಷಣಕ್ಕೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ಮುಖ್ಯಮಂತ್ರಿಗಳು ಸಾಕ್ಷಿಯಾಗ ಲಿದ್ದಾರೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.