ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Karnataka CM Row: ನಾನು, ಸಿದ್ದರಾಮಯ್ಯ ಒಂದೇ ಗುಂಪು ಎಂದ ಡಿ.ಕೆ. ಶಿವಕುಮಾರ್‌; ಸಿಎಂ ರೇಸ್‌ನಿಂದ ಹಿಂದೆ ಸರಿದ್ರಾ?

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ: ಡಿ.ಕೆ. ಶಿವಕುಮಾರ್‌

DK Shivakumar: ಡಿನ್ನರ್ ಮೀಟಿಂಗ್ ಮೂಲಕ ಬಲ ಪ್ರದರ್ಶನ ಮಾಡಲಾಗುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ಅದರ ಅಗತ್ಯ ನನಗಿಲ್ಲ. ನನ್ನ ಹಿಂದೆ ಯಾರೂ ಬರುವುದು ಬೇಡ, ನನ್ನ ಪರವಾಗಿ ಯಾರು ಮಾತನಾಡುವುದೂ ಬೇಡ. ನಾನು ಸಿಎಂ ಸೇರಿದಂತೆ 140 ಶಾಸಕರದೂ ಒಂದೇ ಗುಂಪು. ಅದು ಕಾಂಗ್ರೆಸ್ ಗುಂಪು. ಯಾವುದೇ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡಬೇಡಿ ಎಂದು ತಿಳಿಸಿದ್ದಾರೆ.

ಡಿಸೆಂಬರ್‌ 16ರಂದು ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ; ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿಯಲ್ಲಿ ಭಾಗಿ

ಡಿಸೆಂಬರ್‌ 16ರಂದು ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು

Droupadi Murmu: ರಾಷ್ಟ್ರಪತಿ ದ್ರೌಪದಿ ಮರ್ಮು ಡಿಸೆಂಬರ್‌ 16ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯಲಿರುವ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಸಜೆ ಕಾಂಗ್ರೆಸ್‌ನ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್‌ ಜೋಶಿ ಕಿಡಿ

ರಾಜ್ಯ ಸರ್ಕಾರ ವಾಕ್ ಸ್ವತಂತ್ರ ಕಿತ್ತುಕೊಳ್ಳುತ್ತಿದೆ: ಜೋಶಿ

Pralhad Joshi: ರಾಜ್ಯದಲ್ಲಿ ದುರಾಡಳಿತ ವಿರುದ್ಧದ ಧ್ವನಿ ಅಡಗಿಸಲು ಹಾಗೂ ಸಾರ್ವಜನಿಕ ಅಭಿಪ್ರಾಯಗಳಿಗೆ ಕಡಿವಾಣ ಹಾಕಲು ದ್ವೇಷ ಭಾಷಣಕ್ಕೆ 10 ವರ್ಷಗಳ ಜೈಲು ಶಿಕ್ಷೆ ಎಂಬ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಶಾಸನ ರಚನೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

Tumkur News: ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ವಿಶ್ವೇಶ್ವರ ಭಟ್‌ ಕರೆ

ವಿಪುಲ ಅವಕಾಶಗಳಿವೆ ಸದುಪಯೋಗಪಡಿಸಿಕೊಳ್ಳಿ: ವಿಶ್ವೇಶ್ವರ ಭಟ್‌

Vishweshwar Bhat: ತುಮಕೂರು ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಜಿ ಆಡಿಟೋರಿಯಂ ಅನ್ನು ವಿಶ್ವವಾಣಿ ಸಮೂಹ ಸಂಸ್ಥೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ನೀವು ಏನಾಗಬೇಕೆಂಬುದನ್ನು ಇಂದೇ ನಿರ್ಧರಿಸಿ. ಅಚಲ ವಿಶ್ವಾಸದಿಂದ ಗುರಿಯಕಡೆಗೆ ನಡೆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದ್ದಾರೆ.

Ashwini Vaishnaw: 15,767 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ

ಬೆಂಗಳೂರು ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ. ಅಗತ್ಯ

148 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ. ವೆಚ್ಚವಾಗಲಿದ್ದು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ತಲಾ ಶೇ. 20ರಷ್ಟು ಹಣಕಾಸು ಒದಗಿಸುತ್ತವೆ. ಉಳಿದ ಶೇ. 60ರಷ್ಟು ಹಣವನ್ನು ಸಾಲದ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಜಿ.ಸಿ. ಚಂದ್ರಶೇಖರ್‌ ಈರಣ್ಣ ಕಡಾಡಿ ಅವರ ಪ್ರಶ್ನೆಗಳಿಗೆ ಅಶ್ವಿನಿ ವೈಷ್ಣವ್‌ ಉತ್ತರಿಸಿದರು.

ಗಿಳಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ; ಏನಿದು ಹೃದಯ ವಿದ್ರಾವಕ ಘಟನೆ?

ಗಿಳಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಹೈಟೆನ್ಷನ್ ವೈರ್​ ಕಂಬದ ಮೇಲೆ ಕುಳಿತಿದ್ದ ಗಿಳಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೆಂಗಳೂರಿನ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್​ನಲ್ಲಿ ಈ ದುರಂತ ಸಂಭವಿಸಿದ್ದು, ಮೃತನನ್ನು ಅರುಣ್ ಕುಮಾರ್ (32) ಎಂದು ಗುರುತಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಬೆಂಗಳೂರಿನ ರಸ್ತೆ ಬದಿ ಕಸ ಸುರಿಯುವ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಬಿತ್ತು ಫೈನ್‌; ಕಿರಣ್ ಮಜುಂದಾರ್ ಶಾ ಅಸಮಾಧಾನಗೊಂಡಿದ್ದೇಕೆ?

ರಸ್ತೆಗೆ ಕಸ ಎಸೆದವರಿಗೆ ತಕ್ಕ ಶಾಸ್ತ್ರಿ: ಐದು ಸಾವಿರ ದಂಡ ವಿಧಿಸಿದ ಅಧಿಕಾರಿ

ಇತ್ತೀಚೆಗೆ ನಗರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಎಷ್ಟೇ ಎಚ್ಚರಿಕೆ ನೀಡಿದರೂ ಪದೇ ಪದೇ ತ್ಯಾಜ್ಯ ನಿರ್ವಹಣೆಯಲ್ಲಿ ಉಲ್ಲಂಘನೆಗಳು ಹೆಚ್ಚಾಗುತ್ತಿದೆ. ಇದೀ‌ಗ ಬೆಂಗಳೂರು ನಗರದ ಸರ್ವಜ್ಞನಗರ ವಿಭಾಗದ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಸವನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಅಧಿಕಾರಿಗಳು ವಾಹನ ಮಾಲೀಕರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

Mekedatu Project: ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ಮುಂದಾದ ಸರ್ಕಾರ; ತಂಡ ರಚಿಸಿ ಆದೇಶ

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿದ ಸರ್ಕಾರ

Karnataka Government: ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕೆಇಆರ್‌ಎಸ್ (ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ) ನಿರ್ದೇಶಕರ ನೇತೃತ್ವದಲ್ಲಿ ತಂಡವನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಮನಗರದಲ್ಲೇ ಮೇಕೆದಾಟು ಯೋಜನೆ ಕಚೇರಿ ಸ್ಥಾಪಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ಸೂಚಿಸಲಾಗಿರುವ ಜಿಎಲ್‌ಪಿ-1  ಔಷಧ ಓಝೆಂಪಿಕ್® ಈಗ ಭಾರತದಲ್ಲಿ ಲಭ್ಯ

ಜಿಎಲ್‌ಪಿ-1 ಔಷಧ ಓಝೆಂಪಿಕ್® ಈಗ ಭಾರತದಲ್ಲಿ ಲಭ್ಯ

ಭಾರತದಲ್ಲಿ ಬಹಳ ನಿರ್ಣಾಯಕ ಸಂದರ್ಭದಲ್ಲಿ ಓಝೆಂಪಿಕ್® ಬಿಡುಗಡೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ 2023-24 ಅಂದಾಜಿನ ಪ್ರಕಾರ, ಭಾರತದಲ್ಲಿ 101 ಮಿಲಿಯನ್ (ಸುಮಾರು ಶೇ.11.4 ಜನ ಸಂಖ್ಯೆ) ಜನರಿಗೆ ಮಧುಮೇಹ ಇದೆ. ಭಾರತವು ಚೀನಾದ ನಂತರ ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಮಧುಮೇಹ ಪೀಡಿತ ದೇಶ ಎಂಬ ಹೆಸರು ಗಳಿಸಿದೆ.

ಚಿಕ್ಕಮಗಳೂರು ಕಾಫಿ ತೋಟಗಳಲ್ಲಿ ‘ಡೀಪ್‌ಫ್ಲೋ’ ಹೈಪರ್‌ಲೋಕಲ್ ಹವಾಮಾನ ತಂತ್ರಜ್ಞಾನ: ಕೇಳಚಂದ್ರ ಕಾಫಿ ಜೊತೆ ಮಹತ್ವದ ಒಪ್ಪಂದ

ಕಾಫಿ ತೋಟಗಳಲ್ಲಿ ‘ಡೀಪ್‌ಫ್ಲೋ’ ಹೈಪರ್‌ಲೋಕಲ್ ಹವಾಮಾನ ತಂತ್ರಜ್ಞಾನ

ಚಂದ್ರಪೋರ್ ಎಸ್ಟೇಟ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಈ ಯೋಜನೆ ಯಶಸ್ವಿಯಾದ ನಂತರ, ಈಗ ದೀರ್ಘಕಾಲೀನ ಅನುಷ್ಠಾನಕ್ಕೆ ಸಜ್ಜಾಗಿದೆ. ಈ ಯೋಜನೆಯನ್ನು ಕುಮೇರ್‌ಗೋಡ್ ಕ್ಲಸ್ಟರ್‌ಗೆ ವಿಸ್ತರಿಸಲಾಗುತ್ತಿದ್ದು, ಕೇಳಚಂದ್ರದ 6,500 ಎಕರೆ ವಿಸ್ತಾರವಾದ ತೋಟಗಳಲ್ಲಿನ ಮೈಕ್ರೋ ಕ್ಲೈಮೇಟ್ (ಸ್ಥಳೀಯ ಸೂಕ್ಷ್ಮ ಹವಾಮಾನ) ಅಪಾಯಗಳನ್ನು ತಗ್ಗಿಸಿ, ಸಾಂಪ್ರದಾಯಿಕ ಕೃಷಿಯನ್ನು ಆಧುನಿಕ ಡೇಟಾ ಆಧಾರಿತ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.

DK Shivakumar: ಪ್ರೀತಿಯಿಂದ ಊಟಕ್ಕೆ ಕರೆದರೆ ಬರಲ್ಲ ಅನ್ನಲು ಆಗುತ್ತದೆಯೇ? ಡಿನ್ನರ್‌ ಮೀಟ್‌ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್

ಊಟಕ್ಕೆ ಕರೆದರೆ ಇಲ್ಲ ಅನ್ನೋಕಾಗುತ್ತಾ: ಡಿನ್ನರ್‌ ಮೀಟ್‌ ಬಗ್ಗೆ ಡಿಸಿಎಂ

ಬೆಳಗಾವಿ ಹೊರವಲಯದಲ್ಲಿ ನಿನ್ನೆ ರಾತ್ರಿ ಶಾಸಕರ ಜತೆ ಔತಣಕೂಟ ಮಾಡಿದ ಕುರಿತು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರನ್ನು ಪತ್ರಕರ್ತರು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ʼಅವರು ಪ್ರೀತಿಯಿಂದ ಹೇಳಿದಾಗ, ಕರೆದಾಗ ಬೇಡ ಎನ್ನಲು ಆಗುತ್ತದೆಯೇ? ನಾಳಿದ್ದು ನಮ್ಮ ಆಸೀಫ್ ಸೇಠ್, ಫಿರೋಜ್ ಸೇಠ್ ಅವರು ಊಟಕ್ಕೆ ಕರೆದಿದ್ದಾರೆʼ ಎಂದಿದ್ದಾರೆ.

Road Accident: ಮಾಜಿ ಸಚಿವ ಹೆಚ್‌ಎಂ ರೇವಣ್ಣ ಪುತ್ರನ ಕಾರು ಡಿಕ್ಕಿ, ಬೈಕ್‌ ಸವಾರ ಸಾವು

ಮಾಜಿ ಸಚಿವ ಹೆಚ್‌ಎಂ ರೇವಣ್ಣ ಪುತ್ರನ ಕಾರು ಡಿಕ್ಕಿ, ಬೈಕ್‌ ಸವಾರ ಸಾವು

HM Revanna Son: ಸಚಿವ ಹೆಚ್ಎಂ ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದು, ನನ್ನ ಮಗನ ಕಾರು ಅಪಘಾತ ಆಗಿರುವುದು ನಿಜ. ಕಾರು ಓಡಿಸುತ್ತಿದ್ದದ್ದು ನನ್ನ ಮಗ ಅಲ್ಲ, ಡ್ರೈವರ್. ಓವರ್ಟೇಕ್ ಮಾಡುವಾಗ ಈ ಅಪಘಾತ ಆಗಿದೆ. ಮೃತ ಯುವಕನ ಕುಟುಂಬಸ್ಥರು ನನಗೆ ಪರಿಚಯ, ಕುಟುಂಬದವರ ಜೊತೆಗೆ ನಾನು ಮಾತನಾಡುತ್ತೇನೆ ಎಂದಿದ್ದಾರೆ.

Karnataka Politics: 40 ಆಪ್ತ ಶಾಸಕರ ಜೊತೆ ಡಿಕೆ ಶಿವಕುಮಾರ್‌ ಡಿನ್ನರ್‌ ಮೀಟಿಂಗ್, ಏನೇನು ಚರ್ಚೆ?

40 ಆಪ್ತ ಶಾಸಕರ ಜೊತೆ ಡಿಕೆ ಶಿವಕುಮಾರ್‌ ಡಿನ್ನರ್‌ ಮೀಟಿಂಗ್, ಏನೇನು ಚರ್ಚೆ?

ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramiah) ಆಪ್ತ ವಲಯದ ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು. ಆದರೆ, ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹಾಗೂ ಅವರ ಬಣದ ಯಾವೊಬ್ಬ ಶಾಸಕರೂ ಭಾಗವಹಿಸಿರಲಿಲ್ಲ. ಇದೀಗ ಡಿಸಿಎಂ ಬಣ ಪ್ರತ್ಯೇಕ ಡಿನ್ನರ್ ಮೀಟಿಂಗ್ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Bengaluru Weather: ಈ ಚಳಿಗಾಲದಲ್ಲಿ ಬೆಂಗಳೂರು ಗಡಗಡ! 10 ವರ್ಷದ ನಂತರ ಕನಿಷ್ಠ ತಾಪಮಾನ! ಏನಿದರ ಕಾರಣ?

ಈ ಚಳಿಗಾಲದಲ್ಲಿ ಬೆಂಗಳೂರು ಗಡಗಡ! 10 ವರ್ಷದ ನಂತರ ಕನಿಷ್ಠ ತಾಪಮಾನ!

ಕಳೆದ ವಾರದಿಂದ ಸುಮಾರು 16 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದ ಬೆಂಗಳೂರಿನಲ್ಲಿ ಮುಂದಿನ ವಾರದ ವೇಳೆಗೆ ಕನಿಷ್ಠ ತಾಪಮಾನ (bengaluru weather) ಸುಮಾರು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ತಾಪಮಾನ 12 ಡಿಗ್ರಿಗೆ ಇಳಿದರೆ, 2016ರ ನಂತರ ಬೆಂಗಳೂರು ಕಂಡ ಅತೀ ಶೀತಲ ಡಿಸೆಂಬರ್‌ ಎನಿಸಲಿದೆ. ಮಂಜಿನೊಂದಿಗೆ ನಗರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳುತ್ತದೆ.

Namma Metro Pink Line: ನಮ್ಮ ಮೆಟ್ರೋ ಗುಡ್‌ ನ್ಯೂಸ್‌, ಗುಲಾಬಿ ಮಾರ್ಗದಲ್ಲಿ ಮೊದಲ ಚಾಲಕರಹಿತ ರೈಲು ಅನಾವರಣ

ನಮ್ಮ ಮೆಟ್ರೋ ಗುಡ್‌ ನ್ಯೂಸ್‌, ಗುಲಾಬಿ ಮಾರ್ಗದಲ್ಲಿ ಮೊದಲ ಚಾಲಕರಹಿತ ರೈಲು

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸುಮಾರು ‌21.25 ಕಿಮೀ ಸಂಪರ್ಕಿಸುವ ಗುಲಾಬಿ ಮಾರ್ಗ (Namma Metro Pink Line) 2026ರ ಡಿಸೆಂಬರ್ ಅಥವಾ 2027 ರಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಮೊದಲ ಹಂತವಾಗಿ ಐದು ಹೊಸ ʻಚಾಲಕರಹಿತʼ ರೈಲುಗಳನ್ನ ಓಡಿಸಲು ಸಿದ್ಧತೆ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಹೊಸ ರೈಲು ಮಾದರಿಯನ್ನ ಅನಾವರಣಗೊಳಿಸಿದೆ.

Cabinet meeting: ಒಳಮೀಸಲು ಬಡ್ತಿ ಜಾರಿ, ಚಿನ್ನಸ್ವಾಮಿಯಲ್ಲಿ ಕ್ರಿಕೆಟ್: ಕ್ಯಾಬಿನೆಟ್‌ ಸಭೆ ನಿರ್ಣಯಗಳು‌

ಒಳಮೀಸಲು ಬಡ್ತಿ, ಚಿನ್ನಸ್ವಾಮಿಯಲ್ಲಿ ಕ್ರಿಕೆಟ್: ಕ್ಯಾಬಿನೆಟ್‌ ನಿರ್ಣಯಗಳು

ನಿನ್ನೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವ ಸಂಪುಟ ಸಭೆ (Cabinet meeting) ನಡೆದಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶರತ್ತುಗಳೊಂದಿಗೆ ಕ್ರಿಕೆಟ್‌ ಆಡಿಸಲು ಅವಕಾಶ, ಒಳಮೀಸಲು ಮೊದಲಿದ್ದಂತೆ ಜಾರಿ, ಹೊಸ ವಾಹನ ಖರೀದಿದಾರರಿಗೆ ಕಾರಿನ ಬೆಲೆ ಆಧರಿಸಿ ಶೇಕಡವಾರು ಸೆಸ್ ಜಾರಿ,ಸಿಲ್ಕ್ ರಸ್ತೆ ಜಂಕ್ಷನ್‌ನಿಂದ ಕೆ.ಆರ್ ಪುರದವರೆಗೆ 307 ಕೋಟಿ ರೂ ವೆಚ್ಚದಲ್ಲಿ ನೂತನ ವಿನ್ಯಾಸದ ರಸ್ತೆ ಇತ್ಯಾದಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

Prajwal Revanna Case: ಪ್ರಜ್ವಲ್‌ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಶಾಕ್

ಪ್ರಜ್ವಲ್‌ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಶಾಕ್

ತಮ್ಮ ವಿರುದ್ಧ ಬಾಕಿ ಇರುವ ಇನ್ನೂ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು 81ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಿಂದ ಬೇರೆ ಕೋರ್ಟ್ ಗೆ ವರ್ಗಾಯಿಸಬೇಕೆಂದು ಕೋರಿ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​​ ವಜಾಗೊಳಿಸಿತ್ತು. ಹೀಗಾಗಿ ಪ್ರಜ್ವಲ್ ಸುಪ್ರೀಂಕೋರ್ಟ್​​​ ಮೊರೆ ಹೋಗಿದ್ದು, ಅಲ್ಲೂ ಸಹ ಹಿನ್ನಡೆಯಾಗಿದೆ.

Chikkanayakanahalli News: ಉಪ್ಪಾರ ನಿಗಮದ ಯೋಜನೆಗಳ ಪ್ರಕಟ

ಉಪ್ಪಾರ ನಿಗಮದ ಯೋಜನೆಗಳ ಪ್ರಕಟ

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೇರಿದಂತೆ ಉನ್ನತ ವೃತ್ತಿಪರ ಕೋರ್ಸ್ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಶೈಕ್ಷಣಿಕ ಸಾಲ ನೀಡ ಲಾಗುತ್ತದೆ. ರೈತರ ಅನುಕೂಲಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಬೊರ್‌ವೇಲ್ ಕೊರೆಸಲು ಸಹಾಯಧನದ ನೆರವು ನೀಡಲಾಗುವುದು ಎಂದರು

ಇಂದಿನಿಂದ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ : ನಿಯಮ ಪಾಲಿಸಿ ದಂಡದಿಂದ ಪಾರಾಗಲು ಜಿಲ್ಲಾಡಳಿತ ಮನವಿ

ಇಂದಿನಿಂದ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸುವುದು ಕಡ್ಡಾಯ

ಕರ್ನಾಟಕ ಹೈಕೋರ್ಟ್, ದ್ವಿಚಕ್ರ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು ವೇಗಮಿತಿ ಗಂಟೆಗೆ ೪೦ ಕಿ.ಮೀ. ಮೀರಬಾರದು

ಅಗತ್ಯ ದಾಖಲೆ ಇಲ್ಲದೆ ರಾಜಾರೋಷವಾಗಿ ಓಡಾಡುತ್ತಿರುವ ಆಟೋಗಳಿಗೆ ದಂಡ ಹಾಕುವವರು ಯಾರು?

ಹಲವು ಆಟೋಗಳಿಗೆ ಇನ್ಸೂರೆನ್ಸ್ ಇಲ್ಲ ಸಂಬಂಧಪಟ್ಟ ಇಲಾಖೆಗಳು ಸೈಲೆಂಟ್

ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರತಿನಿತ್ಯ ವಾಹನಗಳು ಓಡಾಡು ತ್ತಿರುತ್ತವೆ ಅದರಲ್ಲಿ ಹಲವು ಆಟೋಗಳಿಗೆ ಇನ್ಸೂರೆನ್ಸ್,ಪರ್ಮಿಟ್,ಎಫ್ ಸಿ, ಹಾಗೂ ಅಗತ್ಯ ದಾಖಲೆ ಗಳಿಲ್ಲದೆ ರಾಜಾರೋಷವಾಗಿ ಓಡಾಡುತ್ತಿದ್ದರು ಪೊಲೀಸ್ ಇಲಾಖೆ ಮಾತ್ರ ಅವರಿಗೆ ಏನು ಗೊತ್ತಿಲ್ಲ ದಂತೆ ಸೈಲೆಂಟ್ ಆಗಿದ್ದಾರೆ.

Lokayukta Raid: ತುಮಕೂರಿನಲ್ಲಿ ಉದ್ಯಮಿಯಿಂದ ಲಂಚಕ್ಕೆ ಬೇಡಿಕೆ: ಜಂಟಿ ನಿರ್ದೇಶಕ, ಸಹಾಯಕ ಲೋಕಾ ಬಲೆಗೆ

ಲಂಚಕ್ಕೆ ಬೇಡಿಕೆ; ತುಮಕೂರಿನಲ್ಲಿ ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ

Tumkur News: ಸರ್ಕಾರದ ಸಹಾಯಧನ ಮಂಜೂರು ಮಾಡಲು ಸಣ್ಣ ಉದ್ದಿಮೆದಾರರೊಬ್ಬರಿಂದ 1.15 ಲಕ್ಷ ಲಂಚದ ಹಣ ಪಡೆಯುತ್ತಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ, ಸಹಾಯಕ ಇಬ್ಬರೂ, ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ.

ಒಬಿಸಿ ಸರ್ಕಾರಿ ನೌಕರರ ಮಕ್ಕಳ ಮೀಸಲಾತಿ ಪ್ರಮಾಣ ಪತ್ರಕ್ಕೆ ವೇತನದ ಆದಾಯ ಪರಿಗಣಿಸಬೇಡಿ: ಸರ್ಕಾರಕ್ಕೆ ಸಿ.ಎಸ್‌ .ಷಡಾಕ್ಷರಿ ಪತ್ರ

ಸರ್ಕಾರಿ ನೌಕರರ ಮಕ್ಕಳ ಮೀಸಲಾತಿ ಪತ್ರಕ್ಕೆ ವೇತನದ ಆದಾಯ ಪರಿಗಣಿಸಬೇಡಿ

ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಗೆ ಸರ್ಕಾರಿ ನೌಕರರ ಒಟ್ಟು ವಾರ್ಷಿಕ ಆದಾಯದ ಲೆಕ್ಕಾಚಾರದಲ್ಲಿ ವೇತನದ ಆದಾಯವನ್ನು ಪರಿಗಣಿಸುತ್ತಿರುವುದರಿಂದ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಅಧಿಕಾರಿ, ನೌಕರರ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಒಬಿಸಿ ಆದಾಯ ಕೆನೆಪದರ ಮಿತಿಯನ್ನು 8 ಲಕ್ಷದಿಂದ 15 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌ .ಷಡಾಕ್ಷರಿ ಕೋರಿದ್ದಾರೆ.

ಮೆಟ್ರೋ ಟಿಕೆಟ್ ಪಡೆಯುವ ಸೇವೆ ಆರಂಭಿಸಿದ ಉಬರ್

ಮೆಟ್ರೋ ಟಿಕೆಟ್ ಪಡೆಯುವ ಸೇವೆ ಆರಂಭಿಸಿದ ಉಬರ್

ಉಬರ್ ತನ್ನ ಲಾಜಿಸ್ಟಿಕ್ಸ್ ಸೇವೆಗಳನ್ನು ಓಎನ್‌ಡಿಸಿ ನೆಟ್‌ವರ್ಕ್‌ ಗೆ ವಿಸ್ತರಿಸುತ್ತಿರುವ ಈ ಸಂದರ್ಭ ದಲ್ಲಿ ತನ್ನ ಹೊಸ ಬಿ2ಬಿ ಸೇವೆಯು ಈಗಾಗಲೇ ಇರುವ ಗ್ರಾಹಕರ ಡೆಲಿವರಿ ಆಯ್ಕೆಗಿಂತ ಹೇಗೆ ಭಿನ್ನ ಎಂಬು ದನ್ನು ಸ್ಪಷ್ಟಪಡಿಸಿದೆ. ಉಬರ್ ಈಗಾಗಲೇ ಒದಗಿಸುತ್ತಿರುವ ಉಬರ್ ಕೊರಿಯರ್ ಸೇವೆಗಿಂತ ಇದು ಭಿನ್ನವಾಗಿದ್ದು, ಉಬರ್ ಕೊರಿಯರ್ ಅನ್ನು ಗ್ರಾಹಕರು ನೇರವಾಗಿ ಉಬರ್ ಆಪ್‌ ನಲ್ಲಿ ಬುಕ್ ಮಾಡು ತ್ತಾರೆ.

M Chinnaswamy Stadium: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಕ್ಕೆ ಗ್ರೀನ್‌ ಸಿಗ್ನಲ್‌; ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಕ್ಕೆ ಸಚಿವ ಸಂಪುಟ ಅನುಮತಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಬೇಕು ಎಂದು ನೂತನವಾಗಿ ಕೆಎಸ್‌ಸಿಎ ನೂತನ ಅಧ್ಯಕ್ಷ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮತ್ತು ತಂಡದವರು ಮನವಿ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ.

Loading...