ಸಫಾರಿ ವಾಹನಗಳಿಗೆ ಡ್ಯಾಷ್ ಕ್ಯಾಮೆರಾ, ಜಿಪಿಎಸ್ ಕಡ್ಡಾಯ
ರಾಜ್ಯದ ಎರಡು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿನ ಎಲ್ಲ ಸಫಾರಿ ವಾಹನಗಳಲ್ಲಿ ಜಿಪಿಎಸ್ ಆಧಾರಿತ ಸಾಧನಗಳು ಮತ್ತು ಟ್ರ್ಯಾಕರ್ಗಳ ಕಾರ್ಯಾಚರಣೆ ಆರಂಭವಾಗಿದೆ. ಸಫಾರಿ ವೇಳೆ ಪ್ರವಾಸಿಗರು ಹಾಗೂ ಅರಣ್ಯಾಧಿಕಾರಿ ಗಳಿಂದ ಮಾರ್ಗ ಬದಲಾವಣೆ, ನಿಗದಿತ ಮಾರ್ಗಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವ ಕುರಿತು ಹೆಚ್ಚುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.