ಭೂಮಿ ಕಸಿದರೆ ಸರ್ಕಾರವನ್ನೇ ಕಸಗುಡಿಸುತ್ತೇವೆ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆಯುತ್ತಿರುವ “ನಮ್ಮ ಭೂಮಿ–ನಮ್ಮ ಹಕ್ಕು”(Our land – our right) ಹೋರಾಟದ ಶತದಿನೋತ್ಸವದಲ್ಲಿ ನೂರಾರು ರೈತರು, ಮಹಿಳೆಯರು ಭಾಗವಹಿಸಿ ಸರ್ಕಾರದ ಭೂಸ್ವಾಧೀನ ನೀತಿಯನ್ನು ಖಂಡಿಸಿ ದರು. ಪ್ರತಿಭಟನೆಯ ವೇಳೆ ಮಹಿಳೆಯರು ಪೊರಕೆ ಪ್ರದರ್ಶಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದು ಗಮನ ಸೆಳೆಯಿತು.