ಸಭೆಯಿಂದ ಅಧಿಕಾರಿಗಳ ನಿರ್ಗಮನಕ್ಕೆ ರೈತರ ಆಕ್ರೋಶ
ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಆರ್.ರವಿಚಂದ್ರರೆಡ್ಡಿ ಮಾತನಾಡಿ, ರೈತರ ಸಮಸ್ಯೆ ಆಲಿಸಲು ಸಭೆ ಕರೆದ ಅಧಿಕಾರಿಗಳೇ ಸಮರ್ಪಕವಾಗಿ ಸ್ಪಂದಿಸದೆ, ಸರ್ಕಾರಿ ವಿಡಿಯೋ ಕಾನ್ಫರೆನ್ಸ್ ಇದೆ ಎಂಬ ಕಾರಣ ನೀಡಿ ಸಭೆಯಿಂದ ಹೊರನಡೆದಿರುವುದು ಖಂಡನೀಯ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.