ಯುಗಾದಿ ವಿಶೇಷ ಕೊಡುಗೆ ಘೋಷಿಸಿದ ಯಮಹಾ
ಇಂಡಿಯಾ ಯಮಹಾ ಮೋಟಾರ್ ಯುಗಾದಿ ಹಬ್ಬದ ಪ್ರಯುಕ್ತ ತನ್ನ ಜನಪ್ರಿಯ ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳ ಶ್ರೇಣಿಯ ಮೇಲೆ ವಿವಿಧ ಹಬ್ಬದ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಈ ಹಬ್ಬದ ಋತುವಿನಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಯಮಹಾ ವಾಹನಗಳನ್ನು ಮನೆಗೆ ಕೊಂಡೊಯ್ಯುವುದನ್ನು ಸುಲಭಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.