ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬತ್ತಿದ ಜಲಮೂಲಗಳು: ರೈತರಲ್ಲಿ ಹೆಚ್ಚಿದ ಆತಂಕ

ಬತ್ತಿದ ಜಲಮೂಲಗಳು: ರೈತರಲ್ಲಿ ಹೆಚ್ಚಿದ ಆತಂಕ

ಬೀದರ್ ಜಿಲ್ಲೆಯ ಪ್ರಮುಖ ಕಾರಂಜಾ ಜಲಾಶಯದಲ್ಲಿ ನೀರಿನ ಮಟ್ಟ ಶೇ.59.50ಕ್ಕೆ ಕುಸಿದಿದ್ದು, ಚುಳಕಿನಾಲಾದಲ್ಲಿ ಶೇ.57.04 ರಷ್ಟಿದೆ. ಅಪ್ಪರ್ ಮುಲ್ಲಾಮಾರಿ ಜಲಾಶಯವು ಶೇ.27.64 ರಷ್ಟಕ್ಕೆ ಕುಸಿದಿರುವುದು ಆ ಭಾಗದ ರೈತರ ಕೃಷಿ ಆಧಾರಿತ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಯಾದಗಿರಿ ಜಿಲ್ಲೆಯ ಪರಿಸ್ಥಿತಿಯಂತೂ ಅತ್ಯಂತ ಗಂಭೀರವಾಗಿದ್ದು, ಹತ್ತಿಕುಣಿ ಜಲಾಶಯದಲ್ಲಿ ಕಳೆದ ವರ್ಷ ಶೇ. 80.11 ರಷ್ಟು ನೀರಿದ್ದರೆ, ಈ ಬಾರಿ ಕೇವಲ ಶೇ.25.00 ರಷ್ಟು ಮಾತ್ರ ಇದೆ.

ಮೋದಿಯವರಿಂದ ಇಂಡೊನೇಷಿಯಾ ಜತೆ 100 ಟನ್ ಬೀಜ ಪೂರೈಕೆ ಒಪ್ಪಂದ

ಮೋದಿಯವರಿಂದ ಇಂಡೊನೇಷಿಯಾ ಜತೆ 100 ಟನ್ ಬೀಜ ಪೂರೈಕೆ ಒಪ್ಪಂದ

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು ಇಂಡೋನೇಷಿಯಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಹತ್ವದ ಒಪ್ಪಂದ ಮಾಡಿ ಕೊಂಡು ಬಂದಿದ್ದಾರೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಡಿಡಬ್ಲೂಆರ್-162 ಹೆಸರಿನ ಗೋಧಿ ತಳಿಯ 100 ಟನ್ ಬೀಜ ಇಂಡೊ ನೇಷಿಯಾಗೆ ಕೊಡುವ ಒಪ್ಪಂದ ಅದಾಗಿದೆ.

GBA elections: ಜಿಬಿಎ ಚುನಾವಣೆ ಮುಂದೂಡಲು ಕೋರಿ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ

ಜಿಬಿಎ ಚುನಾವಣೆ ಮುಂದೂಡುವಂತೆ ಸುಪ್ರೀಂಗೆ ರಾಜ್ಯ ಸರ್ಕಾರ ಮನವಿ

ಎಸ್​ಐಆರ್ ಪ್ರಕ್ರಿಯೆ ನಂತರ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7 ರಂದು ಪ್ರಕಟಿಸಲು ದಿನಾಂಕ ನಿಗದಿಪಡಿಸಲಾಗಿದೆ. ನಿಖರ ಮತದಾರರ ಪಟ್ಟಿಯಿಲ್ಲದೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಹಾಗಾಗಿ ಡಿಸೆಂಬರ್ 31 ರವರೆಗೆ ಜಿಬಿಎ ಚುನಾವಣೆ ಗಡುವು ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ ಅನ್ನು ಸರ್ಕಾರ ಕೋರಿದೆ.

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಸಿಎಂಗೆ ಎಚ್‌ಡಿಕೆ ತೀವ್ರ ತರಾಟೆ

ಪ್ರಗತಿ ಪರಿಶೀಲನಾ ನೆಪದಲ್ಲಿ ಮುಖ್ಯಮಂತ್ರಿ ಜಾಲಿ ಟ್ರಿಪ್: ಎಚ್‌ಡಿಕೆ ಕಿಡಿ

HD Kumaraswamy: ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಡಿ.ಕೆ. ಶಿವಕುಮಾರ್‌ ನಡೆಸಿದ ಪ್ರಗತಿ ಪರಿಶೀಲನೆ ಕೇವಲ ಜಾಲಿಟ್ರಿಪ್ ಮಾತ್ರ. ಹಾಗೆಯೇ ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಇದೆ ಎಂದು ಹೇಳಿರುವ ಮುಖ್ಯಮಂತ್ರಿ ವರ್ತನೆ ಅತ್ಯಂತ ಹೊಣೆಗೇಡಿತನದಿಂದ ಕೂಡಿದೆ. ರಾಜ್ಯದ ನೀರಾವರಿಯ ಸಂಕಷ್ಟಗಳ ಬಗ್ಗೆ ಅವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

SIR: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಭಾಗವಹಿಸಿ: ನಾಗಮಣಿ ಎಂ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಭಾಗವಹಿಸಿ

ಜೂನ್ 30ರಿಂದ ಆರಂಭಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯು ಜು.29ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಹೊಸ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಹಾಗೂ ಹೆಸರು ಕೈಬಿಡುವಿಕೆ ಸೇರಿದಂತೆ ವಿವಿಧ ಸೇವೆಗಳಿಗೆ ಮತದಾರರು ಬಿಎಲ್ಒಗಳ ಮೂಲಕ ಮೂಲಕ ಅರ್ಜಿ ಸಲ್ಲಿಸಬಹುದು

Belagavi News: ಅಣಬೆ ತಿನ್ನೋ ಮುನ್ನ ಎಚ್ಚರ; ಮಶ್ರೂಮ್ ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ!

ಬೆಳಗಾವಿಯಲ್ಲಿ ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ!

ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಅಣಬೆಗಳ ಬಗ್ಗೆ ಜಾಗ್ರತೆ ಇರಬೇಕಾಗುತ್ತದೆ. ಹೊಲಗಳಲ್ಲಿ ಬೆಳೆಯುವ ಅಣಬೆಗಳ ಮೇಲೆ ಕ್ರಿಮಿನಾಶಕಗಳು ಬಿದ್ದಿರುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಕೆಲವು ಜಾತಿಯ ಅಣಬೆಗಳು ನೈಸರ್ಗಿಕವಾಗಿಯೇ ವಿಷಕಾರಿಯಾಗಿರುತ್ತವೆ. ಹೀಗಾಗಿ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

Vijayapura Car Accident: ವಿಜಯಪುರದಲ್ಲಿ ಭೀಕರ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ತಾಯಿ, ಇಬ್ಬರು ಮಕ್ಕಳ ಸಾವು

ವಿಜಯಪುರದಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ತಾಯಿ, ಇಬ್ಬರು ಮಕ್ಕಳ ಸಾವು

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಮೀಪ ಅಪಘಾತ ನಡೆದಿದೆ. ದುರ್ಘಟನೆ ನಡೆದಿದೆ. ನಿದ್ದೆ ಮಂಪರಿನಲ್ಲಿ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ದುರ್ಘಟನೆ ನಡೆದಿದೆ. ಕಾರಟಗಿಯಿಂದ ಶಿರಡಿಗೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮೂವರು ಮೃತಪಟ್ಟಿದ್ದಾರೆ.

ಆಲಮಟ್ಟಿ ಜಲಾಶಯದಲ್ಲಿ ನಾಲ್ಕು ದಿನಗಳಲ್ಲಿ 40 ಟಿಎಂಸಿ ನೀರು ಸಂಗ್ರಹ

ಆಲಮಟ್ಟಿ ಜಲಾಶಯದಲ್ಲಿ ನಾಲ್ಕು ದಿನಗಳಲ್ಲಿ 40 ಟಿಎಂಸಿ ನೀರು ಸಂಗ್ರಹ

ಶುಕ್ರವಾರದಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆಯ ಪ್ರಮಾಣ ಕಡಿಮೆ ಯಾಗಿದೆ ಎಂದು ಮಹಾರಾಷ್ಟ್ರ ದ ಜಲ ಸಂಪನ್ಮೂಲ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಕೃಷ್ಣಾ ನದಿಯ ಮುಖ್ಯ ಹರವಿನಲ್ಲಿ ಒಳಬರುವ ನೀರಿನ ಪ್ರಮಾಣದಲ್ಲಿ ಯಾವದೆ ಕ್ಷಣದಲ್ಲಿ ಕಡಿಮೆಯಾಗಲಿದೆ ಎಂಬ ಆತಂಕ ಮೂಡಿದೆ.

Mysuru Dasara 2026: ಈ ಬಾರಿ 11 ದಿನಗಳ ವಿಜೃಂಭಣೆಯ ಮೈಸೂರು ದಸರಾ; ಅ.11ಕ್ಕೆ ಉದ್ಘಾಟನೆ, ಅ.21ಕ್ಕೆ ಜಂಬೂ ಸವಾರಿ

ಈ ಬಾರಿ 11 ದಿನಗಳ ವಿಜೃಂಭಣೆಯ ದಸರಾ: ಸಿಎಂ

CM DK Shivakumar: ದಸರಾ ಆಯೋಜನೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾರ್ಯಕಾರಿ ಸಮಿತಿ ರಚನೆ ಮಾಡಲಿದ್ದೇನೆ. ಈ ಬಾರಿ ಏರ್ ಶೋ ನಡೆಸಲು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಬೇಕು ಎಂದು ಸಲಹೆ ಬಂದಿದೆ. ಹೀಗಾಗಿ ಈ ವಿಚಾರವಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Chikkaballapur News: ವಿದ್ಯಾರ್ಥಿಗಳಿಗೆ ವಿವಿಧ ಕಾನೂನುಗಳ ಕುರಿತು ಅರಿವು ಮೂಡಿಸಿದ ಕಾನೂನು ಅಭಿರಕ್ಷಕರು

ವಿದ್ಯಾರ್ಥಿಗಳಿಗೆ ವಿವಿಧ ಕಾನೂನುಗಳ ಕುರಿತು ಅರಿವು

ಯಾರಾದರೂ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದರೆ, ಬೆದರಿಕೆ ಹಾಕಿದರೆ ಅಥವಾ ಯಾವುದೇ ರೀತಿಯ ಲೈಂಗಿಕ ಕಿರುಕುಳ ನೀಡಿದರೆ ಅದನ್ನು ಮರೆಮಾಚದೆ ಪೋಷಕರು, ಶಿಕ್ಷಕರು, ಶಾಲಾ ಮುಖ್ಯೋಪಾಧ್ಯಾಯರು, ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು

ಬೆಂಗಳೂರಲ್ಲಿ ಈವರೆಗೂ 435 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಒತ್ತುವರಿ ತೆರವು; ಕಾರ್ಯಾಚರಣೆ ಮುಂದುವರಿಯಲಿದೆ ಎಂದ ಸಿಎಂ

ಪಾದಚಾರಿ ಮಾರ್ಗ ಒತ್ತುವರಿ ತೆರವು ಮುಂದುವರೆಯಲಿದೆ: ಡಿ.ಕೆ. ಶಿವಕುಮಾರ್

CM DK Shivakumar: ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕುರಿತು ಶುಕ್ರವಾರ ಸಿಎಂ ಡಿ.ಕೆ. ಶಿವಕುಮಾರ್ ನಗರ ಪ್ರದಕ್ಷಿಣೆ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ, ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಸ್ಯಾಟ್ಸ್ ಸರ್ವರ್‌ ಸಮಸ್ಯೆ: ಪಾಲಕರ ಪರದಾಟ

ಸ್ಯಾಟ್ಸ್ ಸರ್ವರ್‌ ಸಮಸ್ಯೆ: ಪಾಲಕರ ಪರದಾಟ

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡು ತಿಂಗಳು ಕಳೆದಿದ್ದು, ಸಕಾಲದಲ್ಲಿ ಪ್ರವೇಶಾತಿ ಸಿಗದೆ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಈಗಾಗಲೇ ಶಾಲಾ, ಕಾಲೇಜು ಪ್ರವೇಶಾತಿ ಭರದಿಂದ ಸಾಗಬೇಕಿತ್ತು. ಆದರೆ ರಾಯಚೂರು ಜಿಲ್ಲೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಶಾಲಾ ದಾಖಲಾತಿಗೆ ಬಳಸುವ ಸ್ಯಾಟ್ಸ್ ವೆಬ್ಸೈಟ್ನಲ್ಲಿ ಉಂಟಾಗಿರುವ ಸರ್ವರ್‌ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಜಲಪಾತದ ಸೊಬಗು, ಮನಸೋತ ಪ್ರವಾಸಿಗ

ಜಲಪಾತದ ಸೊಬಗು, ಮನಸೋತ ಪ್ರವಾಸಿಗ

ರಸ್ತೆಯ ಬದಿಯಲ್ಲೇ ಚಿಮ್ಮುವ ಜಲಪಾತಗಳು: ನಮ್ಮ ಚಿತ್ರದಲ್ಲಿ ಕಾಣುವ ದೃಶ್ಯವೇ ಇದಕ್ಕೆ ಸಾಕ್ಷಿ. ಇಲ್ಲಿ ಹೆದ್ದಾರಿಯ ಪಕ್ಕದಲ್ಲಿರುವ ಬೃಹತ್ ಬಂಡೆಗಲ್ಲುಗಳ ನಡುವಿನಿಂದ ಸೋರುವ ನೀರು ಸಣ್ಣ ಪುಟ್ಟ ಜಲಪಾತಗಳಂತೆ ಮೈದಳೆಯುತ್ತದೆ. ಮಳೆಗಾಲದ ಮಂಜು ಮತ್ತು ಹಸಿರಿನ ಹೊದಿಕೆಯನ್ನು ಹೊದ್ದು ಕೊಂಡಿರುವ ಈ ಕಲ್ಲುಬಂಡೆಗಳು, ಮಳೆನೀರಿನ ಸ್ಪರ್ಶದಿಂದ ಜೀವಂತಿಕೆ ಪಡೆದುಕೊಂಡಿವೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಲು ಸಮನ್ವಯದಿಂದ ಕೆಲಸ: ಬಿ.ವೈ. ವಿಜಯೇಂದ್ರ

ರಾಜ್ಯ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಲು ಸಮನ್ವಯದಿಂದ ಕೆಲಸ: ಬಿವೈವಿ

BY Vijayendra: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಕ್ರವಾರ ಭೇಟಿ ಮಾಡಿದ್ದು, ಈ ವೇಳೆ ಮುಂಬರುವ ಹಿರಿಯೂರು ಹಾಗೂ ಧಾರವಾಡ ಉಪ ಚುನಾವಣೆ ಹಾಗೂ ನಾಲ್ಕು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗಳ ಕುರಿತು ಚರ್ಚಿಸಿದ್ದಾರೆ.

CITU: ಸಾವಿರಾರು ನೌಕರರ ಪ್ರತಿಭಟನೆ; ಸಮಾನ ವೇತನ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಮನವಿ

ಕರಾಳ ದಿನಾಚರಣೆಯಲ್ಲಿ ಸ್ಕೀಂ ನೌಕರರ ಆಕ್ರೋಶ

ಸಮಾನ ಕೆಲಸಕ್ಕೆ ಸಮಾನ ವೇತನ, ಗೌರವಧನ ಹೆಚ್ಚಳ, ಅಂಗನವಾಡಿ ಮತ್ತು ಅಕ್ಷರ ದಾಸೋಹ ಯೋಜನೆಗಳಿಗೆ ಸಮರ್ಪಕ ಅನುದಾನ, ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಪ್ರಸ್ತಾವ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಪ್ರತಿಭಟನಾ ಕಾರರು, ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

Chinthamani News: ಮನೆಯಿಂದ ಹೋದ ಬಾಲಕ ಮರಳಿ ವಾಪಸ್ ಬರಲಿಲ್ಲ: ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು

ಮನೆಯಿಂದ ಹೋದ ಬಾಲಕ ಮರಳಿ ವಾಪಸ್ ಬರಲಿಲ್ಲ

ಸಂಜೆಯಾದರೂ ಮನೆಗೆ ಬಾರದೇ ಇರುವ ಕಾರಣಕ್ಕೆ ಅವರ ತಂದೆ ತಾಯಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದೇ ಇರುವ ಕಾರಣಕ್ಕೆ ಇಂದು ಅವರ ಅಣ್ಣ ಹಿದಾಯತ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

Chinthamani News: ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಕೂಡ ಉತ್ತಮ ಕಾರ್ಯ: ಆರ್.ನರಸಿಂಹಮೂರ್ತಿ

ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಕೂಡ ಉತ್ತಮ ಕಾರ್ಯ

ಗ್ರಾ ಪಂ. ಮಾಜಿ ಅಧ್ಯಕ್ಷ ಎಸ್.ಅಂಜನಪ್ಪನವರು ಮಾತನಾಡಿ, ಶ್ರೀಯುತ ನರಸಿಂಹಮೂರ್ತಿ ರವರು ಇದೇ ಗ್ರಾಮದಲ್ಲಿ ಹುಟ್ಟಿದವರಾಗಿದ್ದು, ತನ್ನ ಹುಟ್ಟೂರಿನ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಿದ್ದಾರೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳಿಗೆ ,ದೇಗುಲಗಳಿಗೆ, ಶಾಲೆಗಳಿಗೆ, ಬಡ ಬಗ್ಗರಿಗೆ ಹಾಗೂ ಇತರೆ ಸೇವಾ ಕಾರ್ಯಗಳಿಗೆ ವಿಶೇಷ ಕೊಡುಗೆ ನೀಡಿದ್ದಾರೆಂದು ತಿಳಿಸಿ ಅವರ ಸೇವಾ ಭಾವನೆಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

Gubbi News: ಧರ್ಮಸ್ಥಳ ಸಂಸ್ಥೆಯಿಂದ ಒಂದು ಕೋಟಿ ಅರವತ್ತು ಲಕ್ಷ ಮಾಶಾಸನ ವಿತರಣೆ

ಧರ್ಮಸ್ಥಳ ಸಂಸ್ಥೆಯಿಂದ ಒಂದು ಕೋಟಿ ಅರವತ್ತು ಲಕ್ಷ ಮಾಶಾಸನ ವಿತರಣೆ

ಚತುರ್ಥನಗಳಿಗೆ ಹೆಸರುವಾಸಿಯಾದ ಶ್ರೀ ಕ್ಷೇತ್ರದಿಂದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದೆಂದು ಮಾತೃಶ್ರೀ ಹೇಮಾವತಿ ಹೆಗಡೆ ಯವರ ಮಾರ್ಗದರ್ಶನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡು ತ್ತಿರುವ ಒಟ್ಟು ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕ ವಾದ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ

Gubbi News: ಪಂಚವಟಿ, ನವಗ್ರಹ ಮತ್ತು ಶಿವಲಿಂಗ ದೇವಾಲಯಕ್ಕೆ ಗುದ್ದಲಿಪೂಜೆ

ಪಂಚವಟಿ, ನವಗ್ರಹ ಮತ್ತು ಶಿವಲಿಂಗ ದೇವಾಲಯಕ್ಕೆ ಗುದ್ದಲಿಪೂಜೆ

ಭೂಮಿಪೂಜೆ ನೆರವೇರಿಸಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಯುವಕರ ತಂಡ ಗಣಪತಿ ಪ್ರತಿಷ್ಠಾಪನೆ ಮಾಡಿ ತಿಂಗಳು ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಅದ್ದೂರಿಯಾಗಿ ಗಣಪತಿ ಹಬ್ಬ ಮಾಡುತ್ತಿದ್ದ ಟ್ರಸ್ಟ್ ಈಗ ಆಸ್ತಿಕರ ಭಾವನೆಗೆ ತಕ್ಕಂತೆ ಹೊಸ ಯೋಜನೆ ರೂಪಿಸಿಕೊಂಡು ನೂತನ ದೇವಾಲಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರ ಈ ಸತ್ಕಾರ್ಯಕ್ಕೆ ಶುಭ ಹಾರೈಸುವುದಾಗಿ ತಿಳಿಸಿದರು

Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್‌; ಅ.11ಕ್ಕೆ ನಾಡಹಬ್ಬ ಉದ್ಘಾಟನೆ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್‌

ಸಿಎಂ ಡಿಕೆ ಶಿವಕುಮಾರ್ ಅವರ ​ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು ದಸರಾ ವೇಳಾಪಟ್ಟಿ ಬಗ್ಗೆ ತೀರ್ಮಾನಿಸಲಾಗಿದೆ. ನಾಡಹಬ್ಬದ ರೂಪುರೇಷೆ ಸೇರಿದಂತೆ ಗಜ ಪಯಣ, ದಸರಾ ಉದ್ಘಾಟನೆ, ಜಂಬೂ ಸವಾರಿ ಸೇರಿದಂತೆ ಈ ಬಾರಿ ದಸರಾದ ಪ್ರಮುಖ ಕಾರ್ಯಕ್ರಮಗಳ ಕುರಿತು ಸಿಎಂ ಚರ್ಚೆ ನಡೆಸಿದ್ದಾರೆ.

Hospet News: ಜು.12ರಂದು ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಜು.12ರಂದು ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಹೊಸಪೇಟೆ ರೋಟರಿ ಕ್ಲಬ್ ಸಾಮಾಜಿಕ ಸೇವೆಯಲ್ಲಿ ವಿಶ್ವಾಸಾರ್ಹತೆಯನ್ನು ಪಡೆದಿದ್ದು ಈಗಾಗಲೇ ರೋಟರಿ ಬ್ಲಡ್ ಬ್ಯಾಂಕ್ ಡಯಾಲಿಸಿಸ್ ಸೆಂಟರ್ ಫಿಸಿಯೋಥೆರಪಿ ಪ್ಯಾಥಲಾಜಿ ಲ್ಯಾಬ್, ಕಣ್ಣಿನ ಆಸ್ಪತ್ರೆ ಸೇರಿದಂತೆ ಹಲವಾರು ಶಾಶ್ವತ ಯೋಜನೆಗಳನ್ನು ಅತ್ಯಂತ ಹೆಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದೇವೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣ ಆಡಳಿತ ವೈಫಲ್ಯಕ್ಕೆ ಸಾಕ್ಷಿ: ಜೋಶಿ ಕಿಡಿ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣ ಆಡಳಿತ ವೈಫಲ್ಯಕ್ಕೆ ಸಾಕ್ಷಿ

Pralhad Joshi: ರಾಜ್ಯದ ಸಹಸ್ರಾರು ಸರ್ಕಾರಿ ಶಾಲೆಗಳಲ್ಲಿ ಇಂದು ಮಕ್ಕಳ ದಾಖಲಾತಿ ಭಾರೀ ಕುಸಿದಿದೆ. UDISE+ ವರದಿಯೇ ಇದನ್ನು ಬಹಿರಂಗಪಡಿಸಿದ್ದು, ಪ್ರತಿ ವರ್ಷವೂ ಮಕ್ಕಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಲೇ ಇದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸಿಗರೇಟ್ ಖರೀದಿಸಲು 500 ರೂ. ಖೋಟಾ ನೋಟು ಕೊಟ್ಟು ಸಿಕ್ಕಿಬಿದ್ದ MBA ಪದವೀಧರ; ರಾಜ್ಯದಲ್ಲಿ ಬೃಹತ್ ಖೋಟಾ ನೋಟು ದಂಧೆ ಬೆಳಕಿಗೆ!

ರಾಜ್ಯದಲ್ಲಿ ಖೋಟಾ ನೋಟು ದಂಧೆ ಬೆಳಕಿಗೆ; 6 ಮಂದಿ ಅರೆಸ್ಟ್‌

Fake currency racket: ಅಂಗಡಿಯೊಂದರಲ್ಲಿ ಚಲಾವಣೆಯಾದ ಕೇವಲ ಒಂದು ನಕಲಿ ನೋಟಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಸದ್ಯ ಪ್ರಕರಣಕ್ಕೆ ಸಂಬಂಧಿಸಿ ದಂಧೆಯ ಕಿಂಗ್‌ಪಿನ್ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 500 ರೂ. ಮುಖಬೆಲೆಯ 60ಕ್ಕೂ ಹೆಚ್ಚು ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದಲ್ಲಿ ಅಕ್ರಮ ವಲಸಿಗರ ರಕ್ಷಣೆಗೆ ಹುನ್ನಾರ; ಶಾಶ್ವತ ನಿವಾಸಿ ಪ್ರಮಾಣಪತ್ರಕ್ಕೆ ಶೋಭಾ ಕರಂದ್ಲಾಜೆ ಆಕ್ಷೇಪ

ಶಾಶ್ವತ ನಿವಾಸಿ ಪ್ರಮಾಣಪತ್ರಕ್ಕೆ ಶೋಭಾ ಕರಂದ್ಲಾಜೆ ಆಕ್ಷೇಪ

Shobha Karandlaje: ದೇಶದ ನಾಗರಿಕರಿಗೆ ಪೌರತ್ವ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ವಿದೇಶಿಗ ಯಾರು ಎಂಬ ಪ್ರಮಾಣ ಪತ್ರ ಕೊಡುವ, ವಲಸೆ ಪ್ರಮಾಣಪತ್ರ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಆದರೆ ರಾಜ್ಯ ಸರ್ಕಾರ ಈಗ ನಿವಾಸಿ ಪ್ರಮಾಣ ಪತ್ರ ನೀಡುತ್ತಿರುವುದು ಏಕೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

Loading...