ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Triple Murder Case: ಕಲಬುರಗಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ, ಅಮಾನುಷವಾಗಿ ಕೊಚ್ಚಿ ಮೂವರ ಕೊಲೆ

Kalaburagi Triple Murder Case: ಹಳೆ ವೈಷಮ್ಯದಿಂದ ಮೂವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಮೂವರೂ ಒಂದು ಢಾಬಾದಲ್ಲಿ ಕೆಲಸ ಮಾಡುತ್ತಿದ್ದರು. ದುಷ್ಕರ್ಮಿಗಳು ಆ ಢಾಬಾಗೇ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ.

ಕಲಬುರಗಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ, ಅಮಾನುಷವಾಗಿ ಕೊಚ್ಚಿ ಮೂವರ ಕೊಲೆ

ಹರೀಶ್‌ ಕೇರ ಹರೀಶ್‌ ಕೇರ Jun 25, 2025 7:29 AM

ಕಲಬುರಗಿ: ಕಲಬುರಗಿಯಲ್ಲಿ (Kalaburagi news) ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಏಕಕಾಲಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಹತ್ಯೆ (Triple murder Case) ಮಾಡಿರುವ ಘಟನೆ ನಡೆದಿದೆ. ಕಲಬುರಗಿ (Kalaburagi Crime News) ನಗರದ ಹೊರವಲಯದ ಪಟ್ನಾ ಗ್ರಾಮದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಸಿದ್ಧಾರೂಢ (32), ಜಗದೀಶ (25), ರಾಮಚಂದ್ರ (35) ಎಂಬವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಯಾದ ಮೂವರು ವ್ಯಕ್ತಿಗಳು ಸಂಬಂಧಿಕರಾಗಿದ್ದಾರೆ.

ಹಳೆ ವೈಷಮ್ಯದಿಂದ ಮೂವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಮೂವರೂ ಒಂದು ಢಾಬಾದಲ್ಲಿ ಕೆಲಸ ಮಾಡುತ್ತಿದ್ದರು. ದುಷ್ಕರ್ಮಿಗಳು ಆ ಢಾಬಾಗೇ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸಬ್ ಅರ್ಬನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ಹಾವೇರಿಯಲ್ಲಿ ನಡುಬೀದಿಯಲ್ಲಿ ಕಾಂಟ್ರಾಕ್ಟರ್‌ ಕೊಲೆ

ಹಾವೇರಿ: ಹಾವೇರಿಯಲ್ಲಿ ಹಾಡಹಗಲೇ ಭೀಕರವಾದ ಕೊಲೆ ನಡೆದಿದೆ. ನಡುಬೀದಿಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಗುತ್ತಿಗೆದಾರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಿನ್ನೆ ಹೊಟೇಲ್​ನಲ್ಲಿ ಊಟ ಮಾಡಿ ವಾಪಸ್​ ಕಾರಿನ ಕಡೆಗೆ ಹೋಗುತ್ತಿದ್ದ ವೇಳೆ ನಾಲ್ಕು ಜನರ ತಂಡ ಅಟ್ಯಾಕ್​ ಮಾಡಿ, ಕಬ್ಬಿಣದ ರಾಡ್ ಮತ್ತು ತಲವಾರ್‌ನಿಂದ ಹೊಡೆದು ಕೊಲೆ ಮಾಡಿದೆ. ನಾಲ್ವರು ಯುವಕರ ಗ್ಯಾಂಗ್​​ ಶಿವಾನಂದನನ್ನು ಹತ್ಯೆಗೈಯುವ ದೃಶ್ಯ ಮೊಬೈಲ್‌​ನಲ್ಲಿ ಸೆರೆಯಾಗಿದೆ.

ಇದರಿಂದ ರೊಚ್ಚಿಗೆದ್ದ ಗುತ್ತಿಗೆದಾರರ ಸಂಬಂಧಿಕರು ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದಾರೆ. ಶಿವಾನಂದ ಕುನ್ನೂರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಗ್ಗಾಂವಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಆರೋಪಿ ನಾಗರಾಜ್ ಮನೆಗೆ ಸಂಬಂಧಿಕರು ಬೆಂಕಿ ಹಚ್ಚಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಗಂಗೆಭಾವಿ ಕ್ರಾಸ್ ಬಳಿ ಗುತ್ತಿಗೆದಾರರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಆಸ್ತಿಯ ವಿಚಾರಕ್ಕೆ ಗುತ್ತಿಗೆದಾರ ಶಿವಾನಂದ ಕುನ್ನೂರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುಪಾರಿ ಕೊಟ್ಟು ಸಂಬಂಧಿಕರೇ ಶಿವಾನಂದ ಅವರನ್ನು ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟಕ ಶಿಗ್ಗಾವಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral News: ಯೂಟ್ಯೂಬ್‌ ನೋಡಿ ಗಂಡನ ಕೊಲೆಗೆ ಸ್ಕೆಚ್‌; ಪತಿ ಮಲಗಿದ್ದಾಗ ಕುದಿಯುವ ಎಣ್ಣೆ ಸುರಿದ ಪತ್ನಿ!