Rishabh Pant: ಪಂತ್ ಪಲ್ಟಿ ಹೊಡೆದದ್ದೇ ಭಾರತ ಸೋಲಿಗೆ ಕಾರಣ!
Rishabh Pant somersault: ಇಂಗ್ಲೆಂಡ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ವೇಳೆಯೂ ಪಂತ್ ಪಲ್ಟಿ ಹೊಡೆದಿದ್ದರು. ಅದಾಗಲೇ ಭಾರತ ಸೋಲು ಕಾಣಲಿದೆ ಎಂದು ನೆಟ್ಟಿಗರು ಭವಿಷ್ಯ ನುಡಿದಿದ್ದರು. ಅದರಂತೆ ಭಾರತ ಸೋಲು ಕೂಡ ಕಂಡಿತು. ಕೆಲ ನೆಟ್ಟಿಗರು ಪಂತ್‌ಗೆ ಸಲಹೆ ನೀಡಿದ್ದು ಇನ್ನು ಮುಂದೆ ಎಷ್ಟೇ ದೊಡ್ಡ ಮೊತ್ತ ಪೇರಿಸಿದರೂ ಯಾವುದೇ ಕಾರಣಕ್ಕೂ ಪಲ್ಟಿ ಹೊಡಿಬೇಡಿ ಎಂದಿದ್ದಾರೆ.


ಲೀಡ್ಸ್: ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ ಅಂತರದ ಸೋಲು ಕಂಡ ಬಳಿಕ ತಂಡದ ಸೋಲಿಗೆ ರಿಷಭ್ ಪಂತ್(Rishabh Pant) ಅವರು ಮೈದಾನದಲ್ಲಿ ಪಲ್ಟಿ ಹೊಡೆದದ್ದೇ(Rishabh Pant somersault) ಕಾರಣ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಹೌದು ರಿಷಭ್ ಪಂತ್ ಶತಕ ಬಾರಿಸಿದ ಬಳಿಕ ಮೈದಾನದಲ್ಲಿ ಪಲ್ಟಿ ಹೊಡೆದು ಸಂಭ್ರಮಾಚರಿಸಿದ ವೇಳೆ ತಂಡ ಎರಡು ಬಾರಿ ಸೋಲು ಕಂಡಿದೆ. ಇದೇ ಕಾರಣಕ್ಕೆ ನೆಟ್ಟಿಗರು ಪಂದ್ಯ ಸೋಲಿಗೆ ಪಂತ್ ಕಾರಣ ಎಂದಿದ್ದಾರೆ.
18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಪಂತ್ ಭರ್ಜರಿ ಶತಕ ಬಾರಿಸಿ ಪಲ್ಟಿ ಹೊಡೆದಿದ್ದರು. ಈ ವೇಳೆಯೂ ಲಕ್ನೋ ತಂಡ ಸೋಲು ಕಂಡಿತ್ತು.
ಇಂಗ್ಲೆಂಡ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ವೇಳೆಯೂ ಪಂತ್ ಪಲ್ಟಿ ಹೊಡೆದಿದ್ದರು. ಅದಾಗಲೇ ಭಾರತ ಸೋಲು ಕಾಣಲಿದೆ ಎಂದು ನೆಟ್ಟಿಗರು ಭವಿಷ್ಯ ನುಡಿದಿದ್ದರು. ಅದರಂತೆ ಭಾರತ ಸೋಲು ಕೂಡ ಕಂಡಿತು. ಕೆಲ ನೆಟ್ಟಿಗರು ಪಂತ್‌ಗೆ ಸಲಹೆ ನೀಡಿದ್ದು ಇನ್ನು ಮುಂದೆ ಎಷ್ಟೇ ದೊಡ್ಡ ಮೊತ್ತ ಪೇರಿಸಿದರೂ ಯಾವುದೇ ಕಾರಣಕ್ಕೂ ಪಲ್ಟಿ ಹೊಡಿಬೇಡಿ ಎಂದಿದ್ದಾರೆ.
ಇದನ್ನೂ ಓದಿ IND vs ENG: ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳು ಹೀಗಿದೆ
ಗೆಲ್ಲಲು 371 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 82 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 373 ರನ್ ಗಳಿಸಿದೆ. ಜೋ ರೂಟ್(53 ರನ್, 84 ಎಸೆತ, 6 ಬೌಂಡರಿ)ಹಾಗೂ ಜೇಮೀ ಸ್ಮಿತ್(ಔಟಾಗದೆ 44, 55 ಎಸೆತ, 4 ಬೌಂಡರಿ, 2 ಸಿಕ್ಸರ್) 6ನೇ ವಿಕೆಟ್‌ಗೆ ಮುರಿಯದ ಜತೆಯಾಟದಲ್ಲಿ 88 ಎಸೆತಗಳಲ್ಲಿ 71 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕ ಆಟಗಾರರಾದ ಬೆನ್ ಡಕೆಟ್(149 ರನ್, 170 ಎಸೆತ, 21 ಬೌಂಡರಿ, 1 ಸಿಕ್ಸರ್)ಹಾಗೂ ಝ್ಯಾಕ್ ಕ್ರಾಲಿ(65 ರನ್, 126 ಎಸೆತ, 7 ಬೌಂಡರಿ)ಭರ್ಜರಿ ಆರಂಭ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.