ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Illicit relationship: ಪ್ರಿಯಕರನ ಜೊತೆಗಿನ ಅಶ್ಲೀಲ ವಿಡಿಯೊ ಕಳಿಸಿದ ಪತ್ನಿ; ಮನನೊಂದ ಪತಿ ಆತ್ಮಹತ್ಯೆ

ಹರಿಯಾಣದ (Haryana) ದೊಹ್ನ ಗ್ರಾಮದಲ್ಲಿ ಜೂನ್ 18ರಂದು ಮಗನ್ ಅಲಿಯಾಸ್ ಅಜಯ್ ಎಂಬಾತ ಆತ್ಮಹತ್ಯೆ (Suicide) ಮಾಡಿಕೊಂಡಿದ್ದು, ಆತನ ಸಾವಿನ ಮುನ್ನ ರೆಕಾರ್ಡ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗನ್, ತನ್ನ ಸಾವಿಗೆ ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ ದೀಪಕ್ ಕಾರಣ ಎಂದು ಆರೋಪಿಸಿದ್ದಾನೆ.

ಲವ್ವರ್‌ ಜೊತೆಗಿನ ಅಶ್ಲೀಲ ವಿಡಿಯೊ ಪತಿಗೆ ಕಳಿಸಿದ ಪತ್ನಿ; ಆಮೇಲೆ ಏನಾಯ್ತು?

Profile Rakshita Karkera Jun 25, 2025 12:55 PM

ಚಂಡೀಗಢ: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಕ್ಕಾಗಿ ಬಾಳ ಸಂಗಾತಿಯ ಕಥೆಗೆ ಅಂತ್ಯ ಹಾಡುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಮತ್ತೊಂದು ಕೇಸ್‌ ಭಾರೀ ಸದ್ದು ಮಾಡುತ್ತಿದೆ. ಹರಿಯಾಣದ (Haryana) ದೊಹ್ನ ಗ್ರಾಮದಲ್ಲಿ ಜೂನ್ 18ರಂದು ಮಗನ್ ಅಲಿಯಾಸ್ ಅಜಯ್ ಎಂಬಾತ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದು, ಆತನ ಸಾವಿನ ಮುನ್ನ ರೆಕಾರ್ಡ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗನ್, ತನ್ನ ಸಾವಿಗೆ ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ ದೀಪಕ್ ಕಾರಣ ಎಂದು ಆರೋಪಿಸಿದ್ದಾನೆ. ಈ ಘಟನೆಯು ಪುರುಷರ ಮೇಲಿನ ಕೌಟುಂಬಿಕ ದೌರ್ಜನ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಆತನಿಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ಮಗನ್ ಕಣ್ಣೀರಿಡುತ್ತಾ ತನ್ನ ಯಾತನೆಯನ್ನು ವಿವರಿಸಿದ್ದಾನೆ. "ನನ್ನ ಹೆಸರು ಮಗನ್. ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ ದೀಪಕ್‌ನ ಕಿರುಕುಳದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ದೀಪಕ್ ಸಂಭಾಜಿ ನಗರದ ನಿವಾಸಿಯಾಗಿದ್ದು, ಪೊಲೀಸ್ ಸೇವೆಯಲ್ಲಿದ್ದಾನೆ. ಇವರಿಬ್ಬರು ನನಗೆ ಕಿರುಕುಳ ನೀಡಿ, ಹಣ ದೋಚಿದ್ದಾರೆ. ದೀಪಕ್‌ಗೆ ಬಡ್ತಿಗಾಗಿ ಲಂಚಕ್ಕೆ ಹಣ ಕೇಳುತ್ತಿದ್ದಾರೆ. ತಂದೆಯನ್ನು ಕೊಂದು, ಪೂರ್ವಜರ ಜಮೀನು ಮಾರಾಟ ಮಾಡಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ" ಎಂದು ಆರೋಪಿಸಿದ್ದಾನೆ.

ಈ ಸುದ್ದಿಯನ್ನೂ ಓದಿ: Drishyam 3: ಕಾಯುವಿಕೆಗೆ ಕೊನೆಗೂ ತೆರೆ ಬೀಳುವ ಸಮಯ; ಕ್ರೈಂ ಥ್ರಿಲ್ಲರ್‌ ಚಿತ್ರ ʼದೃಶ್ಯಂ 3ʼ ಆರಂಭಕ್ಕೆ ಮುಹೂರ್ತ ಫಿಕ್ಸ್‌

ದಿವ್ಯಾ ತನಗೆ ಕಳುಹಿಸಿದ ಆಕ್ಷೇಪಾರ್ಹ ವಿಡಿಯೊದಲ್ಲಿ ದೀಪಕ್ ಮುಂದೆ ನೃತ್ಯ ಮಾಡುತ್ತಿರುವುದು ನನ್ನನ್ನು ಮಾನಸಿಕವಾಗಿ ಕುಗ್ಗಿಸಿತು ಎಂದು ಮಗನ್ ಹೇಳಿದ್ದಾರೆ. "ದೀಪಕ್‌ಗೆ ಬಡ್ತಿಗಾಗಿ ಈಗಾಗಲೇ 3.5 ಲಕ್ಷ ರೂ. ನೀಡಿದ್ದೇನೆ. ಇದೀಗ ಮತ್ತೆ 1.5 ಲಕ್ಷ ರೂ. ಕೇಳುತ್ತಿದ್ದಾರೆ. ದಿವ್ಯಾಳಿಗೆ ನನ್ನನ್ನು ಮದುವೆಯಾಗುವ ಮೊದಲೇ ಮತ್ತೊಂದು ವಿವಾಹವಾಗಿತ್ತು. ಆ ಪ್ರಕರಣವನ್ನು ಹಣ ನೀಡಿ ಇತ್ಯರ್ಥ ಮಾಡಿದ್ದೆ" ಎಂದು ತಿಳಿಸಿದ್ದಾನೆ. ಇವರಿಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾನೆ.

ಬಹು ಅಕ್ಬರಪುರ ಠಾಣೆಯ ಎಎಸ್ಐ ಸಂಜಯ್, ಮಗನ್‌ನ ವಿಡಿಯೋ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ದಿವ್ಯಾ ಮತ್ತು ದೀಪಕ್ ನಡುವಿನ ಹಣಕಾಸಿನ ವ್ಯವಹಾರಗಳನ್ನೂ ತನಿಖೆ ನಡೆಸಲಾಗುತ್ತಿದೆ. ದಿವ್ಯಾಳ ಪೋಷಕರ ಮನೆಗೆ ಭೇಟಿ ನೀಡಿದಾಗ, ಆಕೆ ನಮ್ಮ ಸಂಪರ್ಕದಲ್ಲಿಲ್ಲ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ದಿವ್ಯಾ ಮುಂಬೈನಲ್ಲಿರುವುದಾಗಿ ಉಲ್ಲೇಖವಿದ್ದು, ಈ ಬಗ್ಗೆ ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ. ಮಗನ್‌ನ ಪೋಷಕರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.