ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ಕಾರಣಕ್ಕೆ ಸೋಶಿಯಲ್ ಮೀಡಿಯಾ ಬಳಕೆದಾರರ ಮನಗೆದ್ದ 79ರ ವೃದ್ಧೆ

ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮಹಿಳೆಯೊಬ್ಬರು ನಿವೃತ್ತಿ ಪಡೆದ ನಂತರ, ರಸ್ತೆ ಬದಿಯಲ್ಲಿ ಹೋಟೆಲ್ ಬ್ಯುಸಿನೆಸ್ ಶುರು ಮಾಡಿದ್ದಾರೆ. ಫುಡ್ ವ್ಲಾಗರ್ ಕಾಶಿಶ್ ಸೋನಿ ಅವರ ಫುಡ್‌ಸ್ಟಾಲ್‌ ವಿಡಿಯೊ ಮಾಡಿದ್ದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಸೇನಾ ನಿವೃತ್ತಿ ಪಡೆದ ನಂತರ ಈ ಮಹಿಳೆ ಮಾಡಿದ್ದೇನು ನೋಡಿ

Profile pavithra Jun 24, 2025 8:45 PM

ಭೋಪಾಲ್‌: ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಫುಡ್‌ ಹಾಗೂ ರಸ್ತೆ ಬದಿಯ ಫುಡ್‌ಸ್ಟಾಲ್‌ಗಳ ವಿಡಿಯೊ ವೈರಲ್‌ ಆಗುತ್ತಿರುತ್ತದೆ. ಕೆಲವರು ಬದುಕಿನ ಜಟಕಾಬಂಡಿ ನಡೆಸಲು ಈ ಫುಡ್‌ಸ್ಟಾಲ್‌ ನಡೆಸುತ್ತಿದ್ದರೆ, ಇನ್ನು ಕೆಲವರು ಹವ್ಯಾಸಕ್ಕಾಗಿ ಇದನ್ನು ಮಾಡಿಕೊಂಡಿರುತ್ತಾರೆ. ಇದೀಗ ರಸ್ತೆಬದಿಯಲ್ಲಿ ಫುಡ್‌ಸ್ಟಾಲ್‌ ಇಟ್ಟುಕೊಂಡ 79 ವರ್ಷದ ವೃದ್ಧೆಯ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಾರೀಕೆ ಎಂಬ ಕುತೂಹಲ ನಿಮಗೂ ಇದೆಯಾ...? ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಈ ಮಹಿಳೆ ಸೇನಾ ನಿವೃತ್ತಿ ಪಡೆದ ನಂತರ ಹೋಟೆಲ್ (Hotel) ಬ್ಯುಸಿನೆಸ್ ಶುರುಮಾಡಿದ್ದಾರೆ. ಫುಡ್ ವ್ಲಾಗರ್ ಕಾಶಿಶ್ ಸೋನಿ ಇಂದೋರ್‌ನಲ್ಲಿ ಈ ಫುಡ್‌ಸ್ಟಾಲ್‌ನ ವಿಡಿಯೊ ಮಾಡಿದ್ದು ಇದೀಗ ವೈರಲ್‌ (Viral Video) ಆಗಿದ್ದು, ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ವೃದ್ಧೆ ಫುಡ್ ವ್ಲಾಗರ್‌ಗಾಗಿ ಬಿಸಿ ಬಿಸಿ ಇಡ್ಲಿ ಹಾಗೂ ಸಾಂಬಾರು ಮಾಡಿ ಬಡಿಸುತ್ತಿರುವುದು ಕಂಡು ಬಂದಿದೆ. ಇದರ ರುಚಿ ನೋಡಿ ಫುಡ್‌ ವ್ಲಾಗರ್‌ ಕೂಡ ಖುಷಿಯಾಗಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಈ ಸುದ್ದಿಯನ್ನೂ ಓದಿ:Viral Video: ಅಬ್ಬಾ...ಎಂಥಾ ದುರಂತ! ನೋಡ ನೋಡ್ತಿದ್ದಂತೆ ಏರ್‌ ಬಲೂನ್‌ ಸ್ಫೋಟ- ಶಾಕಿಂಗ್‌ ವಿಡಿಯೊ ನೋಡಿ

ಇಲ್ಲಿಯವರೆಗೆ, ಈ ವಿಡಿಯೊ 3.5 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ. ನೆಟ್ಟಿಗರು ವೃದ್ಧೆಯನ್ನು ಹೊಗಳಿದ್ದಾರೆ. "ಇದು ತುಂಬಾ ಸ್ಪೂರ್ತಿದಾಯಕವಾಗಿದೆ" ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು “ತುಂಬಾ ಹೃದಯಸ್ಪರ್ಶಿ ಮತ್ತು ಸ್ಪೂರ್ತಿದಾಯಕ" ಎಂದು ಕಾಮೆಂಟ್ ಮಾಡಿದ್ದಾರೆ. "ಆಕೆ ತುಂಬಾ ಸ್ಟ್ರಾಂಗ್ ವುಮೆನ್‍" ಎಂದು ಇನ್ನೊಬ್ಬರು ಹೇಳಿದ್ದಾರೆ.