ಸೋಂಕಿನ ಚಿಕಿತ್ಸೆಗೆ ಪೇಟೆಂಟ್: ಅತ್ಯಾಧುನಿಕ ಸ್ಕಿನ್ ರಿವೈವ್ ಉತ್ಪನ್ನ ಪರಿಚಯಿಸಿದ ಎಥ್ನಿಕ್
ವಿಶೇಷವಾಗಿ ಮಳೆಗಾಲದ ತಿಂಗಳುಗಳಲ್ಲಿ ಫಂಗಲ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತವೆ. ಅದರ ಲ್ಲೂ ಸಾಮಾನ್ಯವಾಗಿ ಈ ಫಂಗಲ್ ಸೋಂಕಿಗೆ ಸ್ಟಿರಾಯ್ಡ್ ಒಳಗೊಂಡ ಕ್ರೀಮ್ ಗಳನ್ನು ಸಾಂಪ್ರ ದಾಯಿಕವಾಗಿ ಬಳಸಲಾಗುತ್ತದೆ. ಆದರೆ ಅದರಿಂದ ಸಮಸ್ಯೆ ಮತ್ತೆ ಮರುಕಳಿಸುವುದು ಮತ್ತು ಔಷಧ ನಿರೋಧಕತೆ ಇತ್ಯಾದಿ ಉಂಟಾಗುವ ಅಪಾಯವಿದೆ. ಇದು ಇದು ಚರ್ಮರೋಗ ತಜ್ಞರಲ್ಲಿ ಆತಂಕವನ್ನು ಉಂಟು ಮಾಡಿದೆ.


ಬೆಂಗಳೂರು: ಭಾರತದಲ್ಲಿ ಫಂಗಲ್ ಸೋಂಕುಗಳ ಸೀಸನ್ ಆರಂಭವಾಗುತ್ತಿರುವ ವೇಳೆಯಲ್ಲಿ ಫಂಗಲ್ (ಶಿಲೀಂಧ್ರ) ಸೋಂಕಿನ ಚಿಕಿತ್ಸೆಗೆ ಅತ್ಯಾಧುನಿಕ ನೈಸರ್ಗಿಕ ಚಿಕಿತ್ಸೆ ಒದಗಿಸುವ ಸ್ಕಿನ್ ರಿವೈವ್ ಉತ್ಪನ್ನವನ್ನು ಎಥ್ನಿಕ್ ಸಂಸ್ಥೆಯು ಬಿಡುಗಡೆ ಮಾಡಿದೆ. ಈ ಉತ್ಪನ್ನವು ದೀರ್ಘಕಾಲದ ಫಂಗಲ್ ಚರ್ಮ ಸೋಂಕುಗಳಿಗೆ ನೀಡಲಾಗುವ ಸ್ಟಿರಾಯ್ಡ್ ಮುಕ್ತ, ಪೇಟೆಂಟ್ ಪಡೆದ ಔಷಧ ಎಂಬ ಹೆಗ್ಗಳಿಕೆ ಗಳಿಸಿದ್ದು, ಇದನ್ನು ಎಥ್ನಿಕ್ ಸಂಸ್ಥೆಯು ಸಿದ್ಧಪಡಿಸಿದೆ. ಎಥ್ನಿಕ್ ಆಹಾರ ಆಧಾರಿತ ಚಿಕಿತ್ಸಾ ಪದ್ಧತಿಯನ್ನು ವೈಜ್ಞಾನಿಕತೆಯೊಂದಿಗೆ ಸಂಯೋಜಿಸುವ ಒಂದು ಮಹತ್ವದ ವೆಲ್ನೆಸ್ ಬ್ರಾಂಡ್ ಆಗಿದೆ.
ಈ ವಿಶೇಷ ಉತ್ಪನ್ನವನ್ನು ಮಹತ್ವದ ಸಮಯದಲ್ಲಿ ಭಾರತದಲ್ಲಿ ಪರಿಚಯಿಸಲಾಗಿದೆ. ಇಂಡಿ ಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್ಸ್, ವೆನಿರಿಯಾಲಜಿಸ್ಟ್ಸ್ ಮತ್ತು ಲೆಪ್ರಾಲಜಿಸ್ಟ್ಸ್ (ಐಎಡಿವಿಎಲ್) ಪ್ರಕಾರ, ಡರ್ಮಟೋಫೈಟೋಸಿಸ್ ನಂತಹ ಫಂಗಲ್ ಸೋಂಕುಗಳು ಭಾರತದ ಹಲವು ರಾಜ್ಯಗಳ ಶೇಕಡ 61ರಷ್ಟು ಜನರ ಮೇಲೆ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಲಗೇಜ್ ನಿರ್ವಹಣೆ
ವಿಶೇಷವಾಗಿ ಮಳೆಗಾಲದ ತಿಂಗಳುಗಳಲ್ಲಿ ಫಂಗಲ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತವೆ. ಅದರಲ್ಲೂ ಸಾಮಾನ್ಯವಾಗಿ ಈ ಫಂಗಲ್ ಸೋಂಕಿಗೆ ಸ್ಟಿರಾಯ್ಡ್ ಒಳಗೊಂಡ ಕ್ರೀಮ್ ಗಳನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಆದರೆ ಅದರಿಂದ ಸಮಸ್ಯೆ ಮತ್ತೆ ಮರುಕಳಿಸುವುದು ಮತ್ತು ಔಷಧ ನಿರೋಧಕತೆ ಇತ್ಯಾದಿ ಉಂಟಾಗುವ ಅಪಾಯವಿದೆ. ಇದು ಇದು ಚರ್ಮರೋಗ ತಜ್ಞರಲ್ಲಿ ಆತಂಕವನ್ನು ಉಂಟು ಮಾಡಿದೆ.
ಸ್ಕಿನ್ ರಿವೈವ್ ಉತ್ಪನ್ನ ಅಥವಾ ಚಿಕಿತ್ಸೆಯು ವಿಭಿನ್ನ ಮಾರ್ಗವನ್ನು ತೆಗೆದುಕೊಂಡಿದ್ದು, ಈ ಸೂತ್ರವು ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ವಿಶಿಷ್ಟ ಸಂಯೋಜನೆ ಮತ್ತು ಕಾರ್ಯವಿಧಾನಕ್ಕಾಗಿ ಪೇಟೆಂಟ್ ಪಡೆದಿದೆ. ಇದರಲ್ಲಿ ಬಾದಾಮಿ ತೈಲ, ತೆಂಗಿನ ಎಣ್ಣೆ, ಯೂಕ ಲಿಪ್ಟಸ್ ತೈಲ ಮತ್ತು ಕ್ಯಾಮೊಮೈಲ್ ಅನ್ನು ಬಳಸಲಾಗಿದೆ. ವಿಶೇಷ ತಾಪಮಾನ ಮತ್ತು ಪ್ರೆಷರ್ ಎಕ್ಸ್ ಟ್ರಾಕ್ಷನ್ ವಿಧಾನದ ಮೂಲಕ ಇದನ್ನು ಸಂಸ್ಕರಿಸಲಾಗಿದ್ದು, ಈ ಮೂಲಕ ಈ ಔಷಧಿಯು ಸಂಪೂರ್ಣ ಔಷಧೀಯ ಶಕ್ತಿಯನ್ನು ಹೊಂದಿರುವಂತೆ ನೋಡಿಕೊಳ್ಳಲಾಗಿದೆ. ಸಿ ಟಿ ಆರ್ ಐ ನಲ್ಲಿ ನೋಂದಾಯಿತಗೊಂಡು ನಡೆಯಸಲಾದ ಕ್ಲಿನಿಕಲ್ ಟ್ರಯಲ್ ಗಳು ಶೇಕಡಾ 90ಕ್ಕಿಂತ ಹೆಚ್ಚು ಯಶಸ್ಸು ಪಡೆದಿವೆ.
ಈ ಕುರಿತು ಮಾತನಾಡಿರುವ ಎಥ್ನಿಕ್ ನ ಸಹ-ಸಂಸ್ಥಾಪಕ ತಾಜಿಂದರ್ ವಿರ್ಕ್ ಅವರು, “ಫಂಗಲ್ ಚರ್ಮ ಸೋಂಕುಗಳಿಗೆ ಇದೇ ಮೊದಲ ಬಾರಿಗೆ ಪೇಟೆಂಟ್ ಪಡೆದ ನೈಸರ್ಗಿಕ ಚಿಕಿತ್ಸೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಸಾಂಪ್ರದಾಯಿಕ ಔಷಧಿಗಳು ಸಂಪೂರ್ಣವಾಗಿ ಪರಿಣಾಮ ತೋರಿಸದೇ ಇದ್ದಾಗ ಉತ್ತಮ ಪರಿಹಾರಗಳನ್ನು ಒದಗಿಸಲೇಂದೆ ಎಥ್ನಿಕ್ ಬ್ರಾಂಡ್ ಅನ್ನು ರಚಿಸಲಾಗಿದ್ದು, ಇದು ಆಹಾರ ಆಧಾರಿತ ಚಿಕಿತ್ಸೆಗಳನ್ನು ಕ್ಲಿನಿಕಲ್ ವಿಜ್ಞಾನದೊಂದಿಗೆ ಸಮ್ಮಿಲನ ಗೊಳಿಸುವ ಮೂಲಕ ಉತ್ತಮ ಪರಿಹಾರಗಳನ್ನು ಒದಗಿಸುತ್ತಿದೆ. ಸ್ಕಿನ್ ರಿವೈವ್ ಇದಕ್ಕೆ ಅತ್ಯುತ್ತಮ ಪುರಾವೆಯಾಗಿದೆ ಮತ್ತು ಇದು ಕೇವಲ ಆರಂಭ ಮಾತ್ರವೇ ಆಗಿದೆ” ಎಂದು ಹೇಳಿದರು.
ಭಾರತದ ಪುರಾತನ ಆಹಾರ ಆಧಾರಿತ ಚಿಕಿತ್ಸಾ ಸಂಪ್ರದಾಯಗಳನ್ನು ಆಧುನಿಕ ಕ್ಲಿನಿಕಲ್ ವಿಜ್ಞಾನದೊಂದಿಗೆ ಸಂಯೋಜಿಸುವುದು, ಪರಿಣಾಮಕಾರಿ ಮತ್ತು ಪಾರದರ್ಶಕವಾದ ನೈಸರ್ಗಿಕ ಚಿಕಿತ್ಸೆಗಳನ್ನು ರೂಪುಗೊಳಿಸುವುದು ಎಥ್ನಿಕ್ ಬ್ರಾಂಡ್ ನ ಮೂಲ ಉದ್ದೇಶವಾಗಿದೆ. ಈ ಬ್ರಾಂಡ್ ಪ್ರಕೃತಿಯಿಂದ ಸ್ಫೂರ್ತಿ ಪಡೆದ, ಕಠಿಣ ಸಂಶೋಧನೆಯಲ್ಲಿ ಹಾದು ಬಂದ ಮತ್ತು ಇಂದಿನ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾದ ಆರೋಗ್ಯ ಉತ್ಪನ್ನಗಳನ್ನು ಒದಗಿಸಲು ಬದ್ಧವಾಗಿದೆ.
ಪೇಟೆಂಟ್ ನಲ್ಲಿ ಹೆಸರಿಸಲಾಗಿರುವ ಸಂಶೋಧಕರಲ್ಲಿ ಒಬ್ಬರಾಗಿರುವ ಡಾ. ಸುನೀತಾ ಕುಮಾರಿ ಅವರು ಅಭಿವೃದ್ಧಿಪಡಿಸಿರುವ ಸ್ಕಿನ್ ರಿವೈವ್ ಉತ್ಪನ್ನವು ಆಯುಷ್ ಪ್ರಮಾಣೀಕೃತವಾಗಿದೆ, ಜಿಎಂಪಿಯಿಂದ ತಯಾರಾಗಿದೆ ಮತ್ತು ಎಲ್ಲಾ ರೀತಿಯ ಫಂಗಲ್ ನಿರೋಧಕತೆಯನ್ನು ಪರೀಕ್ಷಿಸ ಲಾಗಿದೆ. ಸಾಮಾನ್ಯ ಆಂಟಿಫಂಗಲ್ ಗಳಂತೆ ಇವು ರೋಗಲಕ್ಷಣಗಳನ್ನು ಮರೆಮಾಚದೆ, ಸ್ಟಿರಾಯ್ಡ್ ಗಳ ಅಪಾಯಗಳಿಲ್ಲದೆ ಕಾರ್ಯ ನಿರ್ವಹಿಸುತ್ತದೆ. ಫಂಗಲ್ ಬೆಳವಣಿಗೆಯ ಮೂಲ ಕಾರಣವನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ.
ಈ ಕುರಿತು ಮಾತನಾಡಿರುವ ಡಾ. ಸುನೀತಾ ಕುಮಾರಿ ಅವರು, “ನಾವು ಮಾಡಿರುವ ಪ್ರಯೋಗ ಗಳಿಂದ ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಸಮಸ್ಯೆ ಗುಣವಾಗದೇ ಹೋದ ಪ್ರಕರಣಗಳಲ್ಲಿ ಸ್ಕಿನ್ ರಿವೈವ್ ಅತ್ಯುತ್ತಮ ಮತ್ತು ನಿರಂತರ ಸುಧಾರಣೆಯನ್ನು ತೋರಿಸಿರುವುದು ಕಂಡು ಬಂದಿದೆ,” ಎಂದು ಹೇಳಿದ್ದಾರೆ.
ಎಥ್ನಿಕ್ ಬ್ರಾಂಡ್ ಅನ್ನು ತಾಜಿಂದರ್ ವಿರ್ಕ್, ಡಾ.ರಾಜೋರಿಯಾ, ಮತ್ತು ಡಾ. ಅಂಕಿತ್ ವಾತ್ಸಾ ಯನ್ ಸ್ಥಾಪಿಸಿದ್ದು, ಭಾರತದ ಶ್ರೀಮಂತ ಆಹಾರ ಆಧಾರಿತ ಚಿಕಿತ್ಸಾ ಸಂಪ್ರದಾಯಗಳ ಜೊತೆ ವೈಜ್ಞಾನಿಕತೆಯನ್ನು ಬಳಸಿಕೊಂಡು ಚಿಕಿತ್ಸೆ ನೀಡುವನ ಉದ್ದೇಶ ಹೊಂದಿದೆ. ಸ್ಕಿನ್ ರಿವೈವ್ ಈ ಬ್ರಾಂಡ್ ನ ಚೊಚ್ಚಲ ಉತ್ಪನ್ನವಾಗಿದ್ದು, ಇನ್ನೂ ಹೆಚ್ಚಿನ ಸಂಶೋಧನೆಗಳು ಮುಂದೆ ನಡೆಯಲಿವೆ.
10 ಎಂಎಲ್ ಮತ್ತು 30 ಎಂಎಲ್ ಬಾಟಲ್ ಗಳಲ್ಲಿ ಲಭ್ಯವಿರುವ ಸ್ಕಿನ್ ರಿವೈವ್, ದೀರ್ಘಕಾಲದ ಫಂಗಲ್ ಚರ್ಮ ಸೋಂಕುಗಳಿಗೆ ಪೇಟೆಂಟ್ ಪಡೆದ, ಕ್ಲಿನಿಕಲ್ ಆಗಿ ಸಾಬೀತಾದ ಚಿಕಿತ್ಸೆ ನೀಡುತ್ತದೆ. ಅತ್ಯುತ್ತಮ ವೈದ್ಯಕೀಯ ಸಾಮರ್ಥ್ಯ ಹೊಂದಿರುವ ಮತ್ತು ಅನೇಕ ಹೊಸ ಸಂಶೋಧನೆಗಳನ್ನು ನಡೆಸುತ್ತಿರುವ ಎಥ್ನಿಕ್ ಭಾರತದಲ್ಲಿನ ಆರೋಗ್ಯ ಕ್ಷೇತ್ರದಲ್ಲಿ ವಿಭಿನ್ನ ಚಿಕಿತ್ಸೆಗಳ ಮೂಲಕ ಸಂಚಲನ ಸೃಷ್ಟಿಸಲು ಮುಂದಾಗಿದೆ.