ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Karnataka Drought: ರಾಜ್ಯದಲ್ಲಿ ತೀವ್ರ ಬರಸ್ಥಿತಿ; ಮಧ್ಯಂತರ ಆರ್ಥಿಕ ನೆರವಿಗಾಗಿ ಪ್ರಧಾನಿ ಮೋದಿಗೆ ಸಿಎಂ ಡಿಕೆಶಿ ಪತ್ರ

ತೀವ್ರ ಬರಸ್ಥಿತಿ; ಮಧ್ಯಂತರ ಆರ್ಥಿಕ ನೆರವಿಗಾಗಿ ಪ್ರಧಾನಿ ಮೋದಿಗೆ ಸಿಎಂ ಪತ್ರ

ಪ್ರಸ್ತುತ ಮಾನ್ಸೂನ್‌ನಲ್ಲಿ ಗಣನೀಯ ಮಳೆ ಕೊರತೆ ಈ ಎಲ್ಲ ವಲಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿರುವುದು ಗಂಭೀರ ಕಳವಳದ ವಿಷಯ. 40 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬರ ಪರಿಹಾರ ಕ್ರಮಗಳಿಗೆ ಆರ್ಥಿಕ ನೆರವು ಒದಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕೋರಿದ್ದಾರೆ.

ಮನೋವೈಜ್ಞಾನಿಕ ಕೌನ್ಸೆಲಿಂಗ್‌ ವ್ಯವಸ್ಥೆಗೆ ಡಾ. ಸುಧೀರ್ ಕೆ.ವಿ.ಗೆ ಭಾರತೀಯ ಪೇಟೆಂಟ್

ಮನೋವೈಜ್ಞಾನಿಕ ಕೌನ್ಸೆಲಿಂಗ್‌ ವ್ಯವಸ್ಥೆಗೆ ಡಾ. ಸುಧೀರ್‌ಗೆ ಪೇಟೆಂಟ್

Ujire News: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಅವರು “A Psychological Counselling Support System Based on Emotional Pattern Recognition” ಎಂಬ ಆವಿಷ್ಕಾರಕ್ಕೆ ಭಾರತೀಯ ಪೇಟೆಂಟ್ ಪಡೆದಿದ್ದಾರೆ.

Chikkaballapur News: ಗ್ರಾಮೀಣ ಮಹಿಳಾ ಉದ್ಯಮಶೀಲತೆಗೆ ಮೆಚ್ಚುಗೆ: ಸ್ವಸಹಾಯ ಸಂಘಗಳ ಚಟುವಟಿಕೆ ವೀಕ್ಷಿಸಿದ ಕೇಂದ್ರ ಜಂಟಿ ಕಾರ್ಯದರ್ಶಿ

ಗ್ರಾಮೀಣ ಮಹಿಳಾ ಉದ್ಯಮಶೀಲತೆಗೆ ಮೆಚ್ಚುಗೆ

ಯಳುವಹಳ್ಳಿ ಗ್ರಾಮದ ಮಾರಿಕಾಂಬ ಸ್ವಸಹಾಯ ಸಂಘದ ಕಮಲಮ್ಮ ನಡೆಸುತ್ತಿರುವ ಬಟ್ಟೆ ಅಂಗಡಿಗೆ ಭೇಟಿ ನೀಡಿದ ಜಂಟಿ ಕಾರ್ಯದರ್ಶಿಗಳ ತಂಡ, NRLM ಯೋಜನೆಯಡಿ ಕೃಷಿಯೇತರ ವಲಯದಲ್ಲಿ ಕೈಗೊಂಡಿರುವ ಜೀವನೋಪಾಯ ಚಟುವಟಿಕೆ, ಅಂಗಡಿಯ ವಹಿವಾಟು ಹಾಗೂ ಉದ್ಯಮದಿಂದ ದೊರೆಯುತ್ತಿರುವ ಆದಾಯದ ಕುರಿತು ಮಾಹಿತಿ ಪಡೆದುಕೊಂಡಿತು.

VTU convocation: ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವದಲ್ಲಿ ‘ವಂದೇ ಮಾತರಂ’ ಗೀತೆ ಪೂರ್ತಿ ಹಾಡಬೇಕು: ರಾಜ್ಯಪಾಲರ ನಿರ್ದೇಶನ

‘ವಂದೇ ಮಾತರಂ’ ಗೀತೆ ಪೂರ್ತಿ ಹಾಡಬೇಕು: ರಾಜ್ಯಪಾಲರ ನಿರ್ದೇಶನ

Governor Thawar Chand Gehlot: ಸೆಪ್ಟೆಂಬರ್‌ 26ರಂದು ಹಮ್ಮಿಕೊಂಡಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ನಿರ್ದೇಶಿಸಿದ್ದಾರೆ.

Gauribidanur News: ಕಸಬಾ ಸೊಸೈಟಿಗೆ 10 ಕೋಟಿ ರೂ. ಸಾಲ ಸೌಲಭ್ಯ: ಕೆ.ಎನ್.ವೆಂಕಟರಾಮರೆಡ್ಡಿ

ಕಸಬಾ ಸೊಸೈಟಿಗೆ 10 ಕೋಟಿ ರೂಪಾಯಿ ಸಾಲ ಸೌಲಭ್ಯ

ಸೊಸೈಟಿ ತನ್ನ ವ್ಯಾಪ್ತಿಯ ರೈತರು ಹಾಗೂ ಸದಸ್ಯರಿಗೆ ಆರ್ಥಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಮೂಲಕ ಸ್ವಾವಲಂಬಿಯಾಗಿ ಬೆಳೆಯಬೇಕು. ಸೊಸೈಟಿಯ ಕಟ್ಟಡ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಡಿಸಿಸಿ ಬ್ಯಾಂಕ್ ಸಹಕಾರ ನೀಡಲಿದೆ. ಕಾದಲವೇಣಿ ಸೊಸೈಟಿ ನಿವೇಶನ ದಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಭಾಗದ ಸದಸ್ಯರಿಗೆ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು

Chikkaballapur News: ಹೆದ್ದಾರಿ ಅಗಲೀಕರಣಕ್ಕೆ ಜೆಸಿಬಿ ಗರ್ಜನೆ; ಎರಡು ತಿಂಗಳಲ್ಲಿ ರಸ್ತೆ ಪೂರ್ಣ

ಹೆದ್ದಾರಿ ಅಗಲೀಕರಣಕ್ಕೆ ಜೆಸಿಬಿ ಗರ್ಜನೆ; ಎರಡು ತಿಂಗಳಲ್ಲಿ ರಸ್ತೆ ಪೂರ್ಣ

ನಗರದ ಪ್ರಮುಖ ಎಂಜಿ ರಸ್ತೆಯಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲ ಕಾಮಗಾರಿ ನಿಧಾನಗತಿ ಯಲ್ಲಿ ಸಾಗಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಮಧ್ಯರಸ್ತೆಯಿಂದ ಎಡಕ್ಕೆ 40 ಅಡಿ ಹಾಗೂ ಬಲಕ್ಕೆ 40 ಅಡಿ ಜಾಗವನ್ನು ಹೆದ್ದಾರಿ ಅಗಲೀಕರಣಕ್ಕೆ ಗುರುತಿಸಲಾಗಿತ್ತು. ಕೆಲ ಅಂಗಡಿ ಮಾಲೀಕರು ತಾವೇ ಮುಂಭಾಗ ತೆರವುಗೊಳಿಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಮತ್ತೆ ಕಟ್ಟಡ ನಿರ್ಮಿಸಿಕೊಂಡಿದ್ದರು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ತಯಾರಿಸಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ: ಗ್ಲೌಸ್ ಧರಿಸದ ಬಗ್ಗೆ ನೆಟ್ಟಿಗರಿಂದ ಟೀಕೆ

ಕೆಫೆಯಲ್ಲಿ ದೋಸೆ ತಯಾರಿಸಿದ ಜ್ಯೋತಿರಾದಿತ್ಯ ಸಿಂಧಿಯಾ: ವಿಡಿಯೊ ವೈರಲ್

Jyotiraditya Scindia: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬೆಂಗಳೂರಿನ ಪ್ರಸಿದ್ಧ 'ದಿ ರಾಮೇಶ್ವರಂ ಕೆಫೆ'ಗೆ ಭೇಟಿ ನೀಡಿ ಭಾರೀ ಸುದ್ದಿಯಾಗಿದ್ದಾರೆ. ಕೆಫೆಯಲ್ಲಿ ಸ್ವತಃ ದೋಸೆ ಹೊಯ್ದು ಹಾಗೂ ಫಿಲ್ಟರ್ ಕಾಫಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Chinthamani News: ಚಿನ್ನಸಂದ್ರದಲ್ಲಿ ನೀರಿಗಾಗಿ ಏಕಾಂಗಿ ಪ್ರತಿಭಟನೆ: 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥನ ಆರೋಪ

ಚಿನ್ನಸಂದ್ರದಲ್ಲಿ ನೀರಿಗಾಗಿ ಏಕಾಂಗಿ ಪ್ರತಿಭಟನೆ

ಚಿನ್ನಸಂದ್ರ ಗ್ರಾಮದ ತಮ್ಮ ಬಡಾವಣೆಯಲ್ಲಿ 15 ದಿನಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಯಾಗುತ್ತಿಲ್ಲ. ಈ ಕುರಿತು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ನೀರುಗಂಟಿ ಬಳಿ ವಿಚಾರಿಸಿದಾಗ ಮೋಟಾರ್ ಕೆಟ್ಟಿದೆ ಎಂಬ ಉತ್ತರ ನೀಡುತ್ತಿದ್ದಾರೆ. ನಿಗದಿತ ಸಮಯಕ್ಕೆ ನೀರು ಬಿಡದೆ, ಗೇಟ್‌ವಾಲ್ವ್‌ ಗಳನ್ನು ಮನಬಂದಂತೆ ತಿರುಗಿಸಿ ಅರ್ಧಂಬರ್ಧ ನೀರು ಪೂರೈಸಲಾಗುತ್ತಿದೆ

ಪಿಎಲ್‌ಡಿ, ಡಿಸಿಸಿ ಬ್ಯಾಂಕ್ ಪುನಶ್ಚೇತನದಿಂದ ರೈತರಿಗೆ ಹೆಚ್ಚಿನ ಅನುಕೂಲ

ಪಿಎಲ್‌ಡಿ, ಡಿಸಿಸಿ ಬ್ಯಾಂಕ್ ಪುನಶ್ಚೇತನದಿಂದ ರೈತರಿಗೆ ಹೆಚ್ಚಿನ ಅನುಕೂಲ

ಪಿಎಲ್‌ಡಿ ಬ್ಯಾಂಕ್‌ಗೆ ಪುನಶ್ಚೇತನ ನೀಡಿರುವ ಶಾಸಕ ಸುಧಾಕರ್ ರೆಡ್ಡಿ ಅವರಿಗೆ ತಾಲೂಕಿನ ರೈತರು ಹಾಗೂ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸಿದ ಅವರು, ಕೋಲಾರ ಶಾಸಕ ಮಂಜುನಾಥ್ ಅವರ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್‌ಗೂ ಮರುಚಾಲನೆ ದೊರೆತಿದೆ. ಇದರಿಂದ ರೈತರು ಹಾಗೂ ಮಹಿಳೆಯರಿಗೆ ಸಾಲ ಸೌಲಭ್ಯ ಸೇರಿದಂತೆ ಹಲವು ಪ್ರಯೋಜನಗಳು ದೊರೆಯುವ ನಿರೀಕ್ಷೆಯಿದೆ ಎಂದರು

Karnataka Janapada Academy: ಗೊಲ್ಲಹಳ್ಳಿಗೆ ತವರ ಬಾಗೀನ: ಗಾನಯಾನದ ಮೂಲಕ ಹಾಡಿನ ಗೌರವ

ಗೊಲ್ಲಹಳ್ಳಿಗೆ ತವರ ಬಾಗೀನ: ಗಾನಯಾನದ ಮೂಲಕ ಹಾಡಿನ ಗೌರವ

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಷ್ಟೇ ಅಲ್ಲದೆ ರಾಜ್ಯದ ಹಲವು ಭಾಗಗಳ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಅವರ ಬೆಳವಣಿಗೆಗೆ ಪ್ರೇರಣೆಯಾದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಬಹುಮುಖ ಪ್ರತಿಭೆಯ ಸಾಂಸ್ಕೃತಿಕ ವ್ಯಕ್ತಿತ್ವ. ಗಡಿಗಳ ಮಿತಿಗೆ ಒಳಗಾಗದೆ ವಿಶಾಲವಾಗಿ ಚಿಂತಿಸುವ ಅವರು, ಸಾಹಿತ್ಯ, ಸಂಗೀತ, ಹೋರಾಟ ಮತ್ತು ಸಂಘಟನೆಯ ಮೂಲಕ ಜನರೊಂದಿಗೆ ನಿರಂತರವಾಗಿ ಬೆಸೆದುಕೊಂಡಿದ್ದಾರೆ

ಹೃದಯ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ: 136 ಜೀವಗಳಿಗೆ ಮರುಜನ್ಮ ನೀಡಿದ ಸಾಧನೆಯ ಸಂಭ್ರಮಾಚರಣೆ ಮಾಡಿದ ನಾರಾಯಣ ಹೆಲ್ತ್

ಹೃದಯ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ: 136 ಜೀವಗಳಿಗೆ ಮರುಜನ್ಮ

ನಾರಾಯಣ ಹೆಲ್ತ್ ಸಿಟಿಯು ಈವರೆಗೆ ಸಂಕೀರ್ಣವಾದ 136 ಜೀವ ರಕ್ಷಕ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿಂದಾಗಿ ವಯಸ್ಕರು ಹಾಗೂ ಪುಟ್ಟ ಮಕ್ಕಳ ಸಂಕೀರ್ಣ ಕಸಿ ಶಸ್ತ್ರಚಿಕಿತ್ಸೆಗಳನ್ನು ಸಮರ್ಥವಾಗಿ ನಿರ್ವಹಿಸ ಲಾಗುತ್ತಿದೆ.

Karnataka Drought: ಕೇಂದ್ರವು ಬರ ಘೋಷಣೆಗಿರುವ ನಿಯಮ ಸಡಿಲಿಸಿ ಅಗತ್ಯ ಆರ್ಥಿಕ ನೆರವು ನೀಡಲಿ: ಡಿಸಿಎಂ ಪರಮೇಶ್ವರ್‌

ಕೇಂದ್ರ ಬರ ಘೋಷಣೆಗಿರುವ ನಿಯಮ ಸಡಿಲಿಸಿ ಅಗತ್ಯ ಆರ್ಥಿಕ ನೆರವು ನೀಡಲಿ

ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆಯಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಪರಿಸ್ಥಿತಿಯನ್ನು ವಿಶೇಷವಾಗಿ ಪರಿಗಣಿಸಿ ಎನ್‌ಡಿಆರ್‌ಎಫ್‌ ನಿಯಮಗಳನ್ನು ಸಡಿಲಿಸಬೇಕು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಕೋರಿದ್ದಾರೆ. ‌

ತುಪ್ಪಕ್ಕೆ ಎಕ್ಸ್‌ಪೈರಿ ಡೇಟ್ ಇಲ್ಲ, ಹಳತಾದಷ್ಟೂ ಹೆಚ್ಚುತ್ತದೆ ತುಪ್ಪದ ಗುಣ: ರಾಘವೇಶ್ವರ ಭಾರತೀ ಶ್ರೀ

ತುಪ್ಪಕ್ಕೆ ಎಕ್ಸ್‌ಪೈರಿ ಡೇಟ್ ಇಲ್ಲ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ಹಾಲು, ಮೊಸರು, ಬೆಣ್ಣೆಗಳ ಆಯಸ್ಸು ಸೀಮಿತ ಅವಧಿಯಾದರೆ, ತುಪ್ಪದ ಆಯಸ್ಸು ಅದು ಮುಗಿಯದ ಆಯಸ್ಸು. ತುಪ್ಪಕ್ಕೆ ಅವಧಿ ಮುಕ್ತಾಯ ಎಂಬುದೇ ಇಲ್ಲ. ಹಳತಾದಂತೆ ಅದರ ಗುಣ ಹೆಚ್ಚುತ್ತಾ ಹೋಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

BJP Karnataka: ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ, ಸಹ ಉಸ್ತುವಾರಿಯಾಗಿ ಕಾಸಂ ವೆಂಕಟೇಶ್ವರಲು ನೇಮಕ

ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ನೇಮಕ

ದೇಶದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಗೆ ಬಿಜೆಪಿ ನೂತನ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೇಮಕ ಮಾಡಿದ್ದಾರೆ. ಇನ್ನು ಕರ್ನಾಟಕ ಮೂಲದ ಇಬ್ಬರು ಬಿಜೆಪಿ ನಾಯಕರಿಗೆ ಇತರ ರಾಜ್ಯಗಳ ಸಂಘಟನಾ ಜವಾಬ್ದಾರಿ ನೀಡಲಾಗಿದೆ.

5 ಲಕ್ಷ ರೂ.ವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಿ: ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯ

5 ಲಕ್ಷ ರೂ.ವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಲು ಒತ್ತಾಯ

BY Vijayendra: ಇಂದು ಬಜೆಟ್ ಘೋಷಣೆಗಳನ್ನು ಪೂರೈಸಲು ಕರ್ನಾಟಕದ ರಾಜ್ಯವು ತನ್ನ ಸಾಲ ಮಾಡುವ ಸಾಮರ್ಥ್ಯವನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಂಡಿದೆ. ಆದ್ದರಿಂದ ಈ ಪ್ರಮಾಣದ ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ರಾಜ್ಯಕ್ಕೆ ಹೆಚ್ಚು ಸಾಲ ಮಾಡುವ ಅವಕಾಶವೇ ಇಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

Insurance fraud: ರಾಜ್ಯದಲ್ಲಿ ವಿಮೆ ವಂಚನೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆ

ವಿಮೆ ವಂಚನೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆ

ವಿಮೆ ಕಂಪನಿಗಳ ವಿರುದ್ಧದ ವಂಚನೆಪೂರಿತ ಕ್ಲೇಮ್‌ಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್‌ ಎಸ್‌ಎಲ್‌ಪಿ (ಸಿವಿಲ್) ಸಂಖ್ಯೆ 5582/2023ರ ತೀರ್ಪಿನಲ್ಲಿ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಎಸ್‌ಐಟಿ ರಚಿಸಲಾಗಿದೆ.

ಗ್ರಾಹಕರಿಗೆ ಸಿಹಿ ಸುದ್ದಿ; ಸೆ.27ರ ಭಾನುವಾರ ಕೂಡ ಇರಲಿದೆ ಬ್ಯಾಂಕಿಂಗ್ ಸೇವೆ!

ಗ್ರಾಹಕರಿಗೆ ಸಿಹಿ ಸುದ್ದಿ; ಮುಂದಿನ ಭಾನುವಾರ ಕೂಡ ಇರಲಿದೆ ಬ್ಯಾಂಕಿಂಗ್ ಸೇವೆ

Pralhad Joshi: ಸೆಪ್ಟೆಂಬರ್ 28ರಿಂದ 30ರವರೆಗೆ ದೇಶಾದ್ಯಂತ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್' ಕರೆ ನೀಡಿದ್ದು, ಗ್ರಾಹಕರಿಗೆ ಆಗುವ ಅಡೆತಡೆ ತಪ್ಪಿಸಲೆಂದು ಸೆ.27ರ ಭಾನುವಾರ ರಜಾ ದಿನವಾದರೂ ಅಂದು ಎಂದಿನಂತೆ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Haveri accident: ಹಾವೇರಿಯಲ್ಲಿ ಸಾರಿಗೆ ಬಸ್-ಲಾರಿ ಡಿಕ್ಕಿಯಾಗಿ ಓರ್ವ ಸಾವು, ಆರು ಮಂದಿಗೆ ಗಾಯ

ಹಾವೇರಿಯಲ್ಲಿ ಸಾರಿಗೆ ಬಸ್-ಲಾರಿ ಡಿಕ್ಕಿ; ಓರ್ವ ಸಾವು, ಆರು ಮಂದಿಗೆ ಗಾಯ

ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಕಡೆಗೆ ಸಾರಿಗೆ ಬಸ್‌ ಹೋಗುತ್ತಿದ್ದ ವೇಳೆ ಎದುರಿನಿಂದ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಓರ್ವ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೇಸ್‌ ದಾಖಲಿಸಿಕೊಂಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ರನ್ನು ಪದಚ್ಯುತಗೊಳಿಸಿ: ಸಿದ್ದರಾಮಯ್ಯ ಆಗ್ರಹ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ರನ್ನು ಪದಚ್ಯುತಗೊಳಿಸಿ

CEC Gyanesh Kumar: ದೇಶದ ಜನರಿಗೆ ಬೇಕಿರುವುದು ಚುನಾವಣಾ ಆಯೋಗದ ಮೇಲೆ ವಿಶ್ವಾಸ. ಆದರೆ ಆಯೋಗದೊಳಗೇ ಇಬ್ಬರು ಸದಸ್ಯರು ಪದೇಪದೇ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಜನರ ದೇಶದ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಪದಚ್ಯುತಗೊಳಿಸಿ, ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

Pratap Simha: ಪ್ರಚೋದನಕಾರಿ ಭಾಷಣ ಆರೋಪ; ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್‌ಐಆರ್‌

ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್‌ಐಆರ್‌

ಮೈಸೂರು ಜಿಲ್ಲೆಯ ತಿ. ನರಸೀಪುರ ಪೊಲೀಸ್ ಠಾಣೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಣೇಶ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬಹಿರಂಗವಾಗಿ ದಲಿತ ಸಮುದಾಯವನ್ನು ಸಾರ್ವಜನಿಕವಾಗಿ ಹೀಯಾಳಿಸುವ ಮತ್ತು ನಿಂದನಾತ್ಮಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ನೀಡಿರುವ ದೂರಿನ ಹಿನ್ನೆಲೆ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲಾಗಿದೆ.

ತಿಪಟೂರಿನಲ್ಲಿ ರೋಟರಿ ಗುಲ್ಮೊಹರ್‌ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ವಿತರಣೆ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಮಾದರಿ ಪ್ರಶ್ನೆಪತ್ರಿಕೆ ವಿತರಣೆ

Tiptur News: ಹತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೋಟರಿ ಗುಲ್ಮೊಹರ್ ಬೆಂಗಳೂರು ಸಂಸ್ಥೆಯ ವತಿಯಿಂದ ಉಚಿತವಾಗಿ ಮಾದರಿ ಪ್ರಶ್ನೆ ಪತ್ರಿಕೆಯ ವಿತರಣೆ ಕಾರ್ಯಕ್ರಮ ತಿಪಟೂರು ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜರುಗಿತು.

KPSC ಮುಚ್ಚುತ್ತೇವೆ ಎಂಬ ಸಿಎಂ ಹೇಳಿಕೆ ಬುದ್ಧಿಗೇಡಿತನ, ಹೊಣೆಗೇಡಿತನ, ಅಜ್ಞಾನದ ಪರಮಾವಧಿ: ಎಚ್‌ಡಿಕೆ ಟೀಕೆ

KPSC ಮುಚ್ಚುತ್ತೇವೆ ಎಂಬುವುದು ಬುದ್ಧಿಗೇಡಿತನ; ಎಚ್‌ಡಿಕೆ ಕಿಡಿ

HD Kumaraswamy: ಕೆಪಿಎಸ್ಸಿ ಸಂಸ್ಥೆ ಚೆನ್ನಾಗಿಯೇ ಇದೆ, ಕೆಟ್ಟ ಜನ ಬಂದು ಕೂತಿದ್ದಾರಷ್ಟೇ. ಬೇಲಿಯೇ ಹೊಲ ಮೇಯುತ್ತಿದೆ. ಅಲ್ಲಿಗೆ ಖದೀಮರನ್ನು ನೇಮಕ ಮಾಡಿದ್ದು ಯಾರು? ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ಯಾರು? ವಿಧಾನಸೌಧದ 3ನೇ ಮಹಡಿಯಲ್ಲಿ ಕೂತವರೇ ಎಸಗಿದ ಪಾಪವಲ್ಲವೇ ಇದು? ಆ ಲೆಕ್ಕಕ್ಕೆ ಬಂದರೆ ವಿಧಾನಸೌಧವನ್ನೇ ಮುಚ್ಚಬೇಕು. ನಿಮ್ಮ ಸಾರಥ್ಯದಲ್ಲಿ ಅದೂ ನಡೆದುಹೋಗಲಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ.

ಪಾಂಡವಪುರದ ಐತಿಹಾಸಿಕ ʼಅಮ್ಮಣ್ಣಿ ಅಮ್ಮನ ಕಲ್ಯಾಣಿʼಗೆ ಕಾಯಕಲ್ಪ; ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ ಪರಿತ್ರಾಣ ಫೌಂಡೇಶನ್‌

ಪಾಂಡವಪುರದ ಐತಿಹಾಸಿಕ ಅಮ್ಮಣ್ಣಿ ಅಮ್ಮನ ಕಲ್ಯಾಣಿಗೆ ಕಾಯಕಲ್ಪ

Ammanni Ammana Kalyani: ಮೈಸೂರು ಅರಸರಾದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ತಮ್ಮ ಧರ್ಮ ಪತ್ನಿಯ ನೆನಪಿನಲ್ಲಿ ಮೇಲುಕೋಟೆ ಬೆಟ್ಟದ ಬಳಿ ಗೌಡಗೆರೆ ಗ್ರಾಮದಲ್ಲಿ ಕಲ್ಯಾಣಿಯನ್ನು ನಿರ್ಮಿಸಿದ್ದರು. ಈ ಕಲ್ಯಾಣಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಇದರ ಸ್ವಚ್ಛತಾ ಕಾರ್ಯಕ್ಕೆ ಗ್ರಾಮಸ್ಥರೊಂದಿಗೆ ಬೆಂಗಳೂರಿನ ಪರಿತ್ರಾಣ ಫೌಂಡೇಶನ್‌ ಕೈಜೋಡಿಸಿದೆ.

BJP Protest: ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಸಿಎಂಗೆ ಬಿ.ವೈ. ವಿಜಯೇಂದ್ರ ಆಗ್ರಹ

ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಬಿ.ವೈ. ವಿಜಯೇಂದ್ರ

BY Vijayendra: ಬೆಂಗಳೂರಿನ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಬುಧವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ, ದಿವಾಳಿ ಆಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಜಾಹೀರಾತುಗಳನ್ನು ನೀಡಿ, ಇಂದು ದಿನಗಳನ್ನು ಕಳೆಯುತ್ತಿದ್ದಾರೆ ಎಂದು ದೂರಿದ್ದಾರೆ.

Loading...