ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಇಂಟರ್‌ನ್ಯಾಷನಲ್ ವರ್ಕ್‌ಪ್ಲೇಸ್ ಗ್ರೂಪ್ ಬೆಂಗಳೂರಿನ ಎಂ.ಎಸ್.ಆರ್ ನಾರ್ತ್ ಟವರ್‌ನಲ್ಲಿ ಹೊಸ ರೀಗಸ್ ಕೇಂದ್ರ ಆರಂಭ

ಎಂ.ಎಸ್.ಆರ್ ನಾರ್ತ್ ಟವರ್‌ನಲ್ಲಿ ಹೊಸ ರೀಗಸ್ ಕೇಂದ್ರ ಆರಂಭ

ಹೊಸ ಕೇಂದ್ರವು IWG ಅವರ ಹೆಜ್ಜೆಗುರುತನ್ನು ಭಾರತದ ಮಂಚೂಣಿ ತಂತ್ರಜ್ಞಾನ ಹಬ್ಸ್ ಗಳನ್ನು ಹೆಚ್ಚಿಸುತ್ತದೆ, ಈ ಮೂಲಕ ಹೆಚ್ಚಿನ ಅನುಕೂಲಕರ, ಸಂಪರ್ಕಿತ ಮತ್ತು ದಕ್ಷತೆ ಯೊಂದಿಗೆ ವ್ಯವಹಾರಗಳ ಕಾರ್ಯಾಚರಣೆ ನಡೆಸುವುದನ್ನು ಚಾಲನೆಗೊಳುಸಲು ಪ್ರೀಮಿಯರ್, ಆನ್-ಡಿಮ್ಯಾಂಡ್ ಕಚೇರಿ ಪರಿಹಾರಗಳನ್ನು ಒದಗಿಸುತ್ತದೆ.

Karnataka Lokayukta: ಆಸ್ತಿ ವಿವರ ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಬಿಡುಗಡೆ ಮಾಡಿದ ಲೋಕಾಯುಕ್ತ

ಆಸ್ತಿ ವಿವರ ಸಲ್ಲಿಸದ ರಾಜ್ಯದ ಸಚಿವರು, ಶಾಸಕರ ಪಟ್ಟಿ ಬಿಡುಗಡೆ

Minister and MLA asset data: ಕರ್ನಾಟಕ ಲೋಕಾಯುಕ್ತ ಕಾಯಿದೆ ಅನ್ವಯ ಶಾಸಕರು, ಸಚಿವರು ಪ್ರತಿ ವರ್ಷ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ, ಹಲವು ಶಾಸಕರು ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪಟ್ಟಿ ಬಿಡುಗಡೆ ಮಾಡಿದೆ.

HD Kumaraswamy: ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸ್ಥಳ ಕೇಳಿ ಸಿಎಂಗೆ ಪತ್ರ ಬರೆದ ಎಚ್.ಡಿ. ಕುಮಾರಸ್ವಾಮಿ

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸ್ಥಳ ಕೇಳಿ ಸಿಎಂಗೆ ಪತ್ರ ಬರೆದ ಎಚ್‌ಡಿಕೆ

Mandya News: ಮಂಡ್ಯದಲ್ಲಿ ದಿಶಾ ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆ ಸ್ಥಾಪನೆ ಮಾಡಬೇಕೆನ್ನುವ ಬೇಡಿಕೆ ಇದೆ. ನಾನು ಸಂಸದನಾಗಿ ಒಂದೂವರೆ ವರ್ಷ ಆಯಿತು. ಕೈಗಾರಿಕೆಗೆ ಜಾಗ ಕೊಡಿ ಎಂದು ಡಿಸಿ ಅವರಿಗೆ ಪತ್ರ ಬರೆದಿದ್ದೇನೆ. ಪಾಪ.. ಅವರು ಜಾಗ ಹುಡುಕುತ್ತಲೇ ಇದ್ದಾರೆ ಎಂದು ತಿಳಿಸಿದ್ದಾರೆ.

ಎ.ಪಿ.ಎಸ್. ಒಲಿಂಪಿಕ್ಸ್ – 2025 – ಕ್ರೀಡಾಕೂಟಕ್ಕೆ ತೆರೆ

ಎ.ಪಿ.ಎಸ್. ಒಲಿಂಪಿಕ್ಸ್ – 2025 – ಕ್ರೀಡಾಕೂಟಕ್ಕೆ ತೆರೆ

ಟ್ರಸ್ಟಿ ತಂಡವನ್ನು ಸಿ.ಎ. ಡಾ. ವಿಷ್ಣು ಭಾರತ್‌ ಅಲಂಪಲ್ಲಿ (ಟ್ರಸ್ಟ್ ಅಧ್ಯಕ್ಷರು) ನೇತೃತ್ವ ವಹಿಸಿದ್ದ ಅವರು, ಉತ್ತಮ ಕ್ರೀಡಾಪಟುವಾಗಿ ಎಪಿಎಸ್ ಸ್ಥಾಪಕರಾದ ಪ್ರೊ.ಅನಂತಚಾರ್ ಅವರಿಗೆ ಗೌರವ ಸಲ್ಲಿಸಬೇಕು. ಅವರು ಪ್ರಸಿದ್ಧ ಕ್ರೀಡಾಪಟು ಮತ್ತು ದೂರದೃಷ್ಟಿ ನಾಯಕ ರಾಗಿದ್ದು, ಅವರ ಶಾಶ್ವತ ಪರಂಪರೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಿಸುತ್ತದೆ

Karnataka Weather: ನಾಳೆ ಶಿವಮೊಗ್ಗ, ಕೊಡಗು ಸೇರಿ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಗುಡುಗು ಸಹಿತ ಮಳೆ ನಿರೀಕ್ಷೆ

ಹವಾಮಾನ ವರದಿ; ನಾಳೆ ಶಿವಮೊಗ್ಗ ಸೇರಿ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗು (Weather forecast) ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿಗ್ರಿ ಸೆ. ಮತ್ತು 20 ಡಿಗ್ರಿ ಸೆ. ಆಗಿರಬಹುದು.

Belagavi Farmers Protest: ಕಬ್ಬು ಬೆಳೆಗಾರರ ಪ್ರತಿಭಟನೆ; ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಜತೆ ಸಿಎಂ ಸಭೆ

ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಸಿಎಂ ಸಭೆ

Sugarcane Growers Protest: ಕಬ್ಬಿಗೆ ಬೆಲೆ ನಿಗದಿ (ಎಫ್‌ಆರ್‌ಪಿ) ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ನಾಳೆ ಪಿಎಂ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಅವರು ಭೇಟಿಗೆ ಸಮಯ ನೀಡಿದರೆ, ರೈತರ ಬೇಡಿಕೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

DK Shivakumar: ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ರೇಖೆ ದಾಟುವುದಿಲ್ಲ- ಡಿ.ಕೆ. ಶಿವಕುಮಾರ್‌ ಹೀಗ್ಯಾಕೆ ಅಂದ್ರು?

ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ರೇಖೆ ದಾಟುವುದಿಲ್ಲ: ಡಿಕೆಶಿ

DK Shivakumar Latest Statement: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ʼನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ನನ್ನ ಬಳಿ ಯಾರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು. ಮತಗಳ್ಳತನ ವಿಚಾರವಾಗಿ ನಿನ್ನೆ ರಾತ್ರಿಯೂ ಸಭೆ ಮಾಡಿದ್ದೇವೆ, ಇಂದು ಸಭೆ ಮಾಡಿದ್ದೇವೆ. ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಏನಿದ್ದರೂ ನಿಮ್ಮದು ಎಂದು ತಿಳಿಸಿದ್ದಾರೆ.

Chikkamagaluru News: ಜಮೀನು ವಿವಾದ; ಕಾಂತಾರ ಸ್ಟೈಲ್‌ನಲ್ಲಿ ಪಂಜು ಹಿಡಿದು ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ!

ಕಾಂತಾರ ಸ್ಟೈಲ್‌ನಲ್ಲಿ ಪಂಜು ಹಿಡಿದು ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ!

Assault Case: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಚಿಕ್ಕನಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನು ಸರ್ವೆ ಮಾಡುವ ವೇಳೆ ದೈವ ಮೈಮೇಲೆ ಬಂದಿದೆ ಎನ್ನುವ ರೀತಿ ವ್ಯಕ್ತಿಯೊಬ್ಬ ವರ್ತಿಸಿದ್ದು, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ನೋಡಿ ಪೊಲೀಸರು ಹಾಗೂ ಅಧಿಕಾರಿಗಳು ಶಾಕ್‌ ಆಗಿದ್ದಾರೆ.

BY Vijayendra: ಸಂಕಷ್ಟದಲ್ಲಿರುವ ರೈತರಿಗೆ ಬಿಡಿಗಾಸನ್ನೂ ನೀಡದ ಸಿದ್ದರಾಮಯ್ಯ ಸರ್ಕಾರ: ಬಿ.ವೈ. ವಿಜಯೇಂದ್ರ

ರಾಜ್ಯ ಸರ್ಕಾರ ರೈತರ ಬಗ್ಗೆ ನೈಜ ಕಾಳಜಿಯಿಂದ ಕೆಲಸ ಮಾಡುತ್ತಿಲ್ಲ: ಬಿವೈವಿ

Sugarcane Farmers Protest: ರೈತರಿಗೆ ಸಹಕಾರಿ ಆಗುವಂಥ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಅತಿವೃಷ್ಟಿ ಸಂದರ್ಭದಲ್ಲೂ ಕೃಷಿ ಸಚಿವರು, ಕಂದಾಯ ಸಚಿವರು, ಇಲಾಖೆಯ ಕಾರ್ಯದರ್ಶಿಗಳು ಯಾವುದೇ ಜಿಲ್ಲೆಗೆ ತೆರಳಿಲ್ಲ. ಅಲ್ಲಿನ ರೈತರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.

Bomb threat: ಯುವಕನಿಂದ ಪ್ರೀತಿ ಭಂಗ; ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ : ಮಹಿಳಾ ಟೆಕ್ಕಿ ಆರೆಸ್ಟ್

ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ: ಭಗ್ನಪ್ರೇಮಿ ಮಹಿಳಾ ಟೆಕ್ಕಿ ಸೆರೆ

Bengaluru Crime news: ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ರೆನೆ ಜೋಶಿಲ್ದಾ ಎನ್ನುವ ಮಹಿಳಾ ಟೆಕ್ಕಿಯನ್ನು ಆರೆಸ್ಟ್ ಮಾಡಿದ್ದಾರೆ. ಈಕೆ ಬೆಂಗಳೂರಿನ ಶಾಲೆಗಳಿಗೆ, ಜೊತೆಗೆ ಚೆನ್ನೈ, ಹೈದರಾಬಾದ್ ಹಾಗೂ ಗುಜರಾತಿನ ಶಾಲೆಗಳಿಗೂ ಕೂಡ ಈಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾಳೆ.

Zameer Ahmed: ಜೋಳದ ವ್ಯಾಪಾರಿಗೆ ವಂಚನೆ ಪ್ರಕರಣ; ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ದೂರು

ವಂಚನೆ ಪ್ರಕರಣ; ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ದೂರು

Complaint against Zameer Ahmed: ವಂಚನೆ ಮಾಡಿದ ವ್ಯಕ್ತಿಯ ಪರವಾಗಿ ಜಮೀರ್ ಅಹ್ಮದ್ ನಿಂತಿರುವ ಆರೋಪ ಕೇಳಿ ಬಂದಿತ್ತು. ಹೈದರಾಬಾದ್ ವ್ಯಕ್ತಿಗೆ ಸಹಕರಿಸುವಂತೆ ಪೊಲೀಸ್‌ ಅಧಿಕಾರಿಗೆ ಜಮೀರ್ ಅಹ್ಮದ್ ಫೋನ್ ಕರೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೂರು ನೀಡಿದ್ದಾರೆ.

Harsh Rai Death: ಭೂಗತ ಲೋಕದ ನಂಟು ಹೊಂದಿದ್ದ ಹರೀಶ್‌ ಆಚಾರಿ, ರಾಯ್‌ ಆಗಿದ್ದು ಹೇಗೆ?

ಭೂಗತ ಲೋಕದ ನಂಟು ಹೊಂದಿದ್ದ ಹರೀಶ್‌ ಆಚಾರಿ, ರಾಯ್‌ ಆಗಿದ್ದು ಹೇಗೆ?

Harish rai no more: ಹರೀಶ್‌ ರಾಯ್‌ ಅವರು ಕರಾವಳಿಯ ಉಡುಪಿಯವರು. ಅವರ ಮೊದಲ ಹೆಸರು ಹರೀಶ್‌ ಆಚಾರಿ. ಅಪ್ಪನಿಗೆ ಹೆದರಿ ಭಯದಿಂದ ಊರು ಬಿಟ್ಟು ಬಾಂಬೆಗೆ ಓಡಿ ಹೋದ ಅವರು 2 ವರ್ಷ ಅಲ್ಲೇ ಇದ್ದರು. ಮುಂಬಯಿಯಲ್ಲಿ ಅವರ ಮೇಲೆ ಕೆಲವು ಕೇಸ್​ಗಳು ಇದ್ದವು. ಕೆಲವು ರೌಡಿಗಳನ್ನು ಎದುರು ಹಾಕಿಕೊಂಡಿದ್ದರು. ಭೂಗತ ಜಗತ್ತಿನ ಪರಿಚಯವೂ ಆಗಿತ್ತು. ಬೆಂಗಳೂರಿಗೆ ಬಂದ ನಂತರ ಉಪೇಂದ್ರ ಪರಿಚಯದಿಂದ ಸಿನಿಮಾ ಇಂಡಸ್ಟ್ರಿಗೆ ಬರುವಂತಾಯಿತು.

Harish Rai Death: ʼಕೆಜಿಎಫ್ ಚಾಚಾʼ ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ

ʼಕೆಜಿಎಫ್ ಚಾಚಾʼ ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ

Harish Rai no more: ʼಓಂʼ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದ ಹರೀಶ್ ರಾಯ್, ಜೋಡಿ ಹಕ್ಕಿ, ಚಕ್ರವರ್ತಿ, ಕಾಶಿ, ಸಂಜು ವೆಡ್ಸ್ ಗೀತ, ನಲ್ಲ,ತಾಯವ್ವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಜಿಎಫ್ ಚಿತ್ರದ ನಂತರ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದ್ದು, ಮೂರ್ನಾಲ್ಕು ವರ್ಷದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

RSS row: ಆರೆಸ್ಸೆಸ್‌ ಪಥಸಂಚಲನ ನಿರಾಳ, ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

ಆರೆಸ್ಸೆಸ್‌ ಪಥಸಂಚಲನ ನಿರಾಳ, ಸರ್ಕಾರದ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಜಾ

Karnataka high court: ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸರ್ಕಾರದ ಪರವಾಗಿ ಸಲ್ಲಿಕೆಯಾದ ಮೇಲ್ಮನವಿ ಅರ್ಜಿಯ ವಿಚಾರಣೆ ಹೈಕೋರ್ಟ್ ಧಾರವಾಡದ ವಿಭಾಗೀಯ ಪೀಠದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಚಟುವಟಿಕೆಗಳಿಗೆ ಪರೋಕ್ಷ ನಿಷೇಧ ಹೇರುವ ಉದ್ದೇಶದಿಂದ ಈ ನಿರ್ಬಂಧ ವಿಧಿಸಲಾಗಿತ್ತು. 10 ಜನಕ್ಕಿಂತ ಹೆಚ್ಚು ಜನರು ಸೇರಿಕೊಂಡರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಅಧಿಸೂಚನೆ ನಾಗರಿಕರ ಹಕ್ಕಿಗೆ ಧಕ್ಕೆ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಈ ಆದೇಶಕ್ಕೆ ಏಕ ಸದಸ್ಯ ಪೀಠ ತಡೆಯಾಜ್ಞೆ ತಂದಿತ್ತು.

Gold price today on 6th November 2025: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and silver rate Today: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಏರಿಕೆ ಕಂಡು ಬಂದಿದ್ದು, 11,175 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 43 ರೂ. ಏರಿಕೆಯಾಗಿ, 12,191 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 89,400 ರೂ. ಬಾಳಿದರೆ, 10 ಗ್ರಾಂಗೆ ನೀವು 1,11,750 ಹಾಗೂ 100 ಗ್ರಾಂಗೆ 11,17,500 ರೂ., ನೀಡಬೇಕಾಗುತ್ತದೆ.

Bangalore News: 7 ರಂದು ಉಪಕುಲಪತಿಗಳ ಸಮಾವೇಶ

Bangalore News: 7 ರಂದು ಉಪಕುಲಪತಿಗಳ ಸಮಾವೇಶ

ಕೆಂಗೇರಿಯ ಮೈಸೂರು ರಸ್ತೆಯಲ್ಲಿರುವ ಬೆಂಗಳೂರಿನ ಐಸಿಎಫ್‌ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ), ಅಖಿಲ ಭಾರತ ನಿರ್ವಹಣಾ ಸಂಘ (ಎಐಎಂಎ) ಸಹಯೋಗದೊಂದಿಗೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿ ಟಿಇ) ಬೆಂಬಲದೊಂದಿಗೆ ನ.7-8 ರಂದು ಉಪಕುಲಪತಿ ಗಳ ಸಮಾವೇಶವನ್ನು ಆಯೋಜಿಸಲಿದೆ

Karnataka GST Collection: ಜಿಎಸ್‌ಟಿ ಮಾಸಿಕ ವರದಿ: ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಬೆಳವಣಿಗೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

ಅಕ್ಟೋಬರ್‌ ಜಿಎಸ್‌ಟಿ ಸಂಗ್ರಹ ಬೆಳವಣಿಗೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

Karnataka GST collection September 2025: ಸೆಪ್ಟೆಂಬರ್‌ನಲ್ಲಿ ನಡೆದ ವಹಿವಾಟುಗಳಲ್ಲಿ ಕರ್ನಾಟಕ ರಾಜ್ಯ 14,395 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 13,080 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿತ್ತು. ಕೇಂದ್ರ ಜಿಎಸ್‌ಟಿಯ ಅಂಶಗಳು, ಅಂತರರಾಜ್ಯ ವಹಿವಾಟಿನ ಮೇಲಿನ ತೆರಿಗೆ, ಸಂಯೋಜಿತ ಜಿಎಸ್‌ಟಿ ಮತ್ತು ಸೆಸ್ ಸೇರಿದಂತೆ ಒಟ್ಟು ಸಂಗ್ರಹ ಇದಾಗಿದೆ. ಈ ಘಟಕಗಳನ್ನು ಕಡಿತಗೊಳಿಸಿದ ನಂತರ ರಾಜ್ಯ ಖಜಾನೆಗೆ ನಿವ್ವಳ 7,065 ಕೋಟಿ ರೂ.ಗಳನ್ನು ಪಡೆಯಲಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್ -5 ರಾಜ್ಯಗಳೆಂದು ಪರಿಗಣಿಸಲಾದ ರಾಜ್ಯಗಳಲ್ಲಿ ಕರ್ನಾಟಕದ ಕಾರ್ಯಕ್ಷಮತೆ ಅತ್ಯುತ್ತಮವಾಗಿರುವುದು ಕಂಡುಬಂದಿದೆ.

Student Death: ಬೆಳಗ್ಗೆ ಊರಿಗೆ ಬರುತ್ತೇನೆಂದ ಮಗಳು ಹಾಸ್ಟೆಲ್‌ನಲ್ಲಿ ಅನುಮಾನಾಸ್ಪದವಾಗಿ ನೇಣಿಗೆ ಶರಣು

ಬೆಳಗ್ಗೆ ಊರಿಗೆ ಬರುತ್ತೇನೆಂದ ಮಗಳು ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು

Self Harming: ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವನಿಷಾ (21) ಇನ್ನೇನು ಕಾಲೇಜ್ ಹೋಗುವ ಸಮಯದಲ್ಲಿ ತಿಂಡಿ ಮಾಡಿಕೊಂಡು ಹಾಸ್ಟೆಲ್​​ ಟೆರೇಸ್ ಮೇಲೆ ಹೋಗಿದ್ದಾಳೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ಟ್ಯಾಂಕ್ ಪಕ್ಕದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮನಿಷಾ ಶವ ಪತ್ತೆಯಾಗಿದೆ. ಟೆರೇಸ್ ಮೇಲೆ ಬಟ್ಟೆ ಹಾಕಲು ಹೋಗಿದ್ದ ವಿದ್ಯಾರ್ಥಿನಿಯರು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮಗಳ ಸಾವಿನ ಸುದ್ದಿ ತಿಳಿದ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆ ಅವಳಿಗೆ ಇರಲಿಲ್ಲ ಎನ್ನುವುದು ಪೋಷಕರ ಮಾತು.

PUC students: ಸಿಹಿ ಸುದ್ದಿ, ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ನೀಡಲು ಸರಕಾರ ಚಿಂತನೆ

ಸಿಹಿ ಸುದ್ದಿ, ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ನೀಡಲು ಸರಕಾರ ಚಿಂತನೆ

Mid day meal: ಸರಕಾರಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸರಕಾರ ಚಿಂತನೆ ನಡೆಸಿದೆ. ಸರ್ಕಾರಿ ಕಾಲೇಜುಗಳ ಪ್ರವೇಶ ಅಧಿಕಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ ಹಾಗೂ ನಾನಾ ಕ್ರಮಗಳಿಗೆ ಮುಂದಾಗಿದೆ. ಅದರಲ್ಲಿ, ಇನ್ನು ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಕೂಡ ಮಧ್ಯಾಹ್ನದ ಬಿಸಿ ಊಟ ನೀಡುವುದು ಕೂಡ ಒಂದಾಗಿದೆ.

Karnataka Weather: ಇಂದಿನ ಹವಾಮಾನ; ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

ಇಂದಿನ ಹವಾಮಾನ; ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ (Rainfall) ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28° C ಮತ್ತು 20° C ಇರುವ ಸಾಧ್ಯತೆ ಇದೆ.

Sadhguru Shri Madhusudan Sai: ಯಶಸ್ಸಿಗೆ ಯಾವುದೇ ಶಾರ್ಟ್ಕಟ್ ಇರುವುದಿಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ

ಯಶಸ್ಸಿಗೆ ಯಾವುದೇ ಶಾರ್ಟ್ಕಟ್ ಇರುವುದಿಲ್ಲ

ಯಾರೊಬ್ಬರೂ ಬೇರೆಯವರಿಗೆ ಮೋಸ ಮಾಡಲು ಸಾಧ್ಯವಿಲ್ಲ. ನಿಮ್ಮ ಶಿಕ್ಷಕರು, ಪಾಲು ದಾರರು, ಹೆತ್ತವರಿಗೆ ಮೋಸ ಮಾಡಲು ಹೋದರೆ ಕೊನೆಗೆ ಅದು ನಿಮಗೆ ನೀವೇ ಮೋಸ ಮಾಡಿಕೊಂಡAತೆ ಆಗುತ್ತದೆ. ಇದರಿಂದ ಕೊನೆಯಲ್ಲಿ ದುಃಖವೇ ಸಿಗುತ್ತದೆ. ಯಶಸ್ಸು ಗಳಿಸ ಬೇಕು ಎಂದುಕೊಳ್ಳುವವರು ಸತತ ಪರಿಶ್ರಮದಿಂದ ಪ್ರಯತ್ನಿಸಬೇಕು

DK Shivakumar: ರಾಜ್ಯ ಜಲ ಯೋಜನೆಗಳ ಬಗ್ಗೆ ಒಂದು ದಿನವೂ ಬಾಯಿ ಬಿಟ್ಟಿಲ್ಲ; ಬಿಜೆಪಿ ಸಂಸದರ ವಿರುದ್ಧ ಡಿಕೆಶಿ ಕಿಡಿ

ಜಲ ಯೋಜನೆಗಳ ಬಗ್ಗೆ ಬಿಜೆಪಿ ಸಂಸದರು ಒಂದು ದಿನವೂ ಬಾಯಿ ಬಿಟ್ಟಿಲ್ಲ: ಡಿಕೆಶಿ

Irrigation Projects: ದೆಹಲಿಯಲ್ಲಿ ರಾಜ್ಯದ ಜಲ ಯೋಜನೆಗಳ ಸಂಬಂಧ ಕಾನೂನು ತಂಡ ಹಾಗೂ ಅಧಿಕಾರಿಗಳ ಜತೆಗಿನ ಸಭೆ ಬಳಿಕ ಬುಧವಾರ ಮಾಧ್ಯಮಗಳ ಜತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ʼಇದೊಂದು ಮಹತ್ವದ ಸಭೆ. ಇಂದಿನ ಸಭೆಯಲ್ಲಿ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದೇನೆ ಎಂದು ಡಿಕೆಶಿ ತಿಳಿಸಿದ್ದಾರೆ.

B.Y. Vijayendra's birthday celebration: ಎ.ಪಿ.ಎಂ.ಸಿ ಆವರಣದಲ್ಲಿ ಕಾರ್ಮಿಕರಿಗೆ ರಗ್ಗು ಮತ್ತು ಆಹಾರಧಾನ್ಯಗಳ ಕಿಟ್ ವಿತರಣೆ

ಸೇವಾ ಕಾರ್ಯಕ್ರಮಗಳ ಮೂಲಕ ಬಿ.ವೈ.ವಿಜಯೇಂದ್ರ ಜನ್ಮದಿನಾಚರಣೆಗೆ ಚಾಲನೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದಲ್ಲಿಯೇ ದೃಢವಾದ ಹೆಜ್ಜೆಗಳಿನ್ನಿಟ್ಟು ಸಾಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜನಪರ ಕಾಳಜಿಯುಳ್ಳ ಯುವ ಚೇತನವಾಗಿದ್ದಾರೆ. ಅನೇಕ ಏರಿಳಿತಗಳ ನಡುವೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಬಿಲಿಷ್ಟವಾಗಿ ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದಾರೆ.ಇವರಿಗೆ ಭಗವಂತ ಆಯುರಾರೋಗ್ಯ ಭಾಗ್ಯ ಕಲ್ಪಿಸಿ ನೂರಾರು ವರ್ಷಗಳ ಕಾಲ ಜನಸೇವೆಯನ್ನು ಮಾಡುವ ಶಕ್ತಿ ನೀಡಲಿ

Chikkaballapur News: ಚಿತ್ತ ಚಾಪಲ್ಯಕ್ಕೆ ಆಸೆಯೇ ಕಾರಣ : ಚಿಂತೆಯಿಲ್ಲದ ಸ್ಥಿರ ಮನಸ್ಸುಳ್ಳವರಾಗಬೇಕು

ಚಿತ್ತ ಚಾಪಲ್ಯಕ್ಕೆ ಆಸೆಯೇ ಕಾರಣ

ಆತ್ಮಚಿಂತನೆಯಿಂದ ಮಾನವನು ಮುಕ್ತಿಯೆಡೆಗೆ ತಲುಪಲು ಸಾಧ್ಯವಿದೆ. ಹಿಂದಿನ ಜನ್ಮಗಳಲ್ಲಿ ಮಾಡಿರುವ ಕರ್ಮಗಳೂ ಸಹ ಗುರುಕೃಪೆಯಿಂದ ನಾಶವಾಗುತ್ತದೆ. ಪ್ರತಿನಿತ್ಯ ವೂ ಬಿಡದೆ ನಿರಂತರವಾಗಿ ಗುರುಗಳ ಸ್ಮರಣೆಯನ್ನು ಮಾಡಬೇಕು.ಪ್ರಾಪಂಚಿಕ ವ್ಯವಹಾರಗಳಲ್ಲಿ ಅತಿಯಾದ ಮಮತೆಯನ್ನು ಇಟ್ಟುಕೊಳ್ಳಬಾರದು. ದುಡಿಮೆ ಮಾಡಿ ಕಾಯಕಷ್ಟದಿಂದ ಗಳಿಸಿದ ಸಂಪಾದನೆಯಲ್ಲಿ ಸಂತೃಪ್ತನಾಗಿರಬೇಕು

Loading...