ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಗಮನ ಸೆಳೆಯುತ್ತಿವೆ ಗಣೇಶ್‌ ಮೂರ್ತಿಗಳು

ಗಮನ ಸೆಳೆಯುತ್ತಿವೆ ಗಣೇಶ್‌ ಮೂರ್ತಿಗಳು

ಬೈಲಹೊಂಗಲದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆಗಳಲ್ಲಿ ಪ್ರತಿಷ್ಠಾಪಿಸಲು ಸಿದ್ಧವಾಗಿರುವ ವೈವಿಧ್ಯಮಯ ಗಣೇಶ ಮೂರ್ತಿಗಳು ಹಬ್ಬದ ಕಳೆ ಹೆಚ್ಚಿಸಿವೆ. ನಗರದ ಕಲಾವಿದ ಆನಂದ ಬಡಿಗೇರ ಅವರ ಕಲಾಕುಂಚದಲ್ಲಿ ಮೂಡಿಬಂದಿರುವ ಈ ವಿಶಿಷ್ಟ ಗಣೇಶ ಮೂರ್ತಿಗಳು ಕಲಾಭಿಮಾನಿಗಳು ಹಾಗೂ ಭಕ್ತರನ್ನು ಆಕರ್ಷಿಸುತ್ತಿವೆ.

ತುಮಕೂರು ಎಸ್‌ಐಟಿಯಲ್ಲಿ ನಾಳೆ 17ನೇ ಪದವಿ ಪ್ರದಾನ: 1,400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ನಾಳೆ ತುಮಕೂರಿನ ಎಸ್‌ಐಟಿಯಲ್ಲಿ 17ನೇ ಪದವಿ ಪ್ರದಾನ ಸಮಾರಂಭ

Tumkur News: ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆ. 12ರಂದು ಬೆಳಗ್ಗೆ 11ಕ್ಕೆ 17ನೇ ಪದವಿ ಪ್ರದಾನ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಏರ್ಪಾಡಾಗಿದ್ದು, ವಿವಿಧ ವಿಭಾಗಗಳ ಸುಮಾರು 1,400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಸಿದ್ಧಗಂಗಾ ಎಜ್ಯುಕೇಷನ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಡಾ. ಶಿವಕುಮಾರಯ್ಯ ತಿಳಿಸಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಎಕ್ಸ್‌ʼಪ್ರೆಸ್‌ ರೈಲಿಗಿಂತಲೂ ವೇಗವಾಗಿ ತಲುಪಿದ ಕಾರು !

ದೆಹಲಿಯಿಂದ ಬೆಂಗಳೂರಿಗೆ ಎಕ್ಸ್‌ʼಪ್ರೆಸ್‌ ರೈಲಿಗಿಂತಲೂ ತಲುಪಿದ ಕಾರು !

ಈ ಇಬ್ಬರೂ ಪ್ರಯಾಣಿಸಿದ್ದು ದೆಹಲಿಯಿಂದ ಬೆಂಗಳೂರಿಗೆ. ಒಟ್ಟು 2,075 ಕಿಲೋ ಮೀಟರ್‌ಅಂತರದ ಪ್ರಯಾಣ ಅದು. ಈ ದೂರವನ್ನು ಈ ಈರ್ವರೂ ಚಾಲಕರು ಕೇವಲ 29 ಗಂಟೆಗಳಲ್ಲಿ ಕ್ರಮಿಸಿದ್ದು ನಿಬ್ಬೆರಗಾಗುವ ದಾಖಲೆಯೇ ಹೌದು. ಒಂದು ದೇಶದಲ್ಲಿ ಕಾರಿನಲ್ಲಿ ಅತೀ ದೀರ್ಘದ ನಿರಂತರ ಪ್ರಯಾಣ ಕ್ಕಾಗಿ ಕೇಶವಪ್ರಸಾದ್ ಮುಳಿಯ ಮತ್ತು ಡಾ. ಅನಿಲ್ ಬೈಪಾಡಿ ತ್ತಾಯ ಅವರಿಗೆ ಜಂಟಿಯಾಗಿ ವಿಶ್ವದಾಖಲೆಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರಧಾನ ಮಾಡಲಾಯಿತು.

ನೀರನ್ನು ಹೇಗೆ, ಯಾವಾಗ ಸೇವಿಸಬೇಕು? ಸರಿಯಾದ ವಿಧಾನ ತಿಳಿಸಿದ ರಾಘವೇಶ್ವರ ಭಾರತೀ ಶ್ರೀ

ಸುಲಭದ ದಾರಿ ಬಿಟ್ಟು ಸರಿಯಾದ ದಾರಿ ಆರಿಸಿಕೊಳ್ಳಿ: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಜೀವನದಲ್ಲಿ ನಾವು ಸುಲುಭದ ದಾರಿ ಹುಡುಕಬಾರದು. ಸರಿಯಾದ ದಾರಿಯನ್ನೇ ಆರಿಸಿಕೊಳ್ಳಬೇಕು. ಶಾಸ್ತ್ರಗಳು ಬೋಧಿಸಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಪ್ರಯತ್ನಪೂರ್ವಕವಾಗಿ ನಾವು ಜೀವನ ಪದ್ಧತಿಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಸರ್ಕಾರದ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡನೆಗೆ ಒತ್ತು ನೀಡಿ; ಪ್ರಾಸಿಕ್ಯೂಷನ್‌ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

ಸಮರ್ಥ ವಾದ ಮಂಡನೆಗೆ ಒತ್ತು ನೀಡಿ: ಪ್ರಿಯಾಂಕ್ ಖರ್ಗೆ

Priyank Kharge: ಸರ್ಕಾರದ ಪರವಾಗಿ ನ್ಯಾಯಾಲಯಗಳಲ್ಲಿ ವಾದಿಸುವ ವಕೀಲರಿಗೆ ಅಗತ್ಯ ದಾಖಲೆಗಳು ಮತ್ತು ಮಾಹಿತಿ ಸಮಯಕ್ಕೆ ಸರಿಯಾಗಿ ತಲುಪುವುದು, ಇಲಾಖೆಗಳ ನಡುವೆ ನಿರಂತರ ಸಮನ್ವಯ, ಪ್ರಕರಣಗಳ ಪರಿಣಾಮಕಾರಿ ಮೇಲ್ವಿಚಾರಣೆ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆ ಈ ನಾಲ್ಕೂ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸರ್ಕಾರದ ಪ್ರಕರಣಗಳ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Lokayukta Raid: ಎರಡೂವರೆ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ; ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್‌ಚಂದ್ರ ಲೋಕಾಯುಕ್ತ ಬಲೆಗೆ

ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್‌ಚಂದ್ರ ಲೋಕಾಯುಕ್ತ ಬಲೆಗೆ

Tumkur News: ಅರಣ್ಯ ಇಲಾಖೆಯಿಂದ ಮಂಜೂರಾದ ಕಾಮಗಾರಿ ಕೆಲಸ ಮಾಡಲು ಕಾಂಟ್ರಾಕ್ಟರ್‌ ಒಬ್ಬರಿಂದ 2,60,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ಹಣ ಪಡೆಯುತ್ತಿದ್ದ ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್‌ಚಂದ್ರ ಕೆ.ಎಸ್., ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅಕ್ರಮ ಬಂದೂಕು, ಶಸ್ತ್ರಾಸ್ತ್ರ ನವೆಂಬರ್ 1ರೊಳಗೆ ಸರ್ಕಾರಕ್ಕೆ ಒಪ್ಪಿಸಿ: ಡಿ.ಕೆ. ಶಿವಕುಮಾರ್ ಕರೆ

ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ನ. 1ರೊಳಗೆ ಒಪ್ಪಿಸಿ: ಸಿಎಂ

CM DK Shivakumar: ಅರಣ್ಯ‌ ಇಲಾಖೆಯ ಸಿಬ್ಬಂದಿಯ ಭತ್ಯೆಯ ವಿಚಾರವಾಗಿ ಸಚಿವರ ಮನವಿಯ ಬಗ್ಗೆ ಆಲೋಚಿಸಲಾಗುವುದು. ಆರ್ಥಿಕ ಇಲಾಖೆಯ ಬಳಿ ಚರ್ಚೆ ನಡೆಸಿ ಪೊಲೀಸ್ ಇಲಾಖೆಯನ್ನೂ ಒಳಗೊಂಡಂತೆ ಒಟ್ಟಾಗಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಸೆಪ್ಟೆಂಬರ್‌ 21ರಿಂದ ವಿಶೇಷ ವಿಧಾನಮಂಡಲ ಅಧಿವೇಶನ ಕರೆದ ರಾಜ್ಯ ಸರ್ಕಾರ; ಕಸ್ತೂರಿರಂಗನ್ ವರದಿಯ ಸಾಧಕ-ಬಾಧಕ ಬಗ್ಗೆ ಚರ್ಚೆ

ಕಸ್ತೂರಿರಂಗನ್ ವರದಿ: ರೈತರ ಹಿತವೇ ಮೊದಲ ಆದ್ಯತೆ ಎಂದ ಸಿಎಂ

Kasturirangan Report: ಸೆಪ್ಟೆಂಬರ್‌ 21ರಿಂದ 23ರವರೆಗೆ ಕಸ್ತೂರಿ ರಂಗನ್‌ ವರದಿ ವಿಚಾರವಾಗಿ ಚರ್ಚೆ ನಡೆಸಲು ವಿಶೇಷ ವಿಧಾನಮಂಡಲ ಅಧಿವೇಶನ ಕರೆಯಲಾಗಿದ್ದು, ರೈತರ ಹಿತದೃಷ್ಟಿಯಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಅಸಮಾಧಾನದಿಂದಲೇ ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ರ ಸಿದ್ದರಾಮಯ್ಯ? 100 ದಿನಗಳ ಬಳಿಕ ರಹಸ್ಯ ಬಿಚ್ಚಿಟ್ರು ಡಿಸಿಎಂ ಡಾ.ಜಿ. ಪರಮೇಶ್ವರ

ಅಸಮಾಧಾನವಿದ್ದಿದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಿರಲಿಲ್ಲ: ಡಿಸಿಎಂ

Dr G Parameshwara: ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುವುದಾಗಿ ಸಿದ್ದರಾಮಯ್ಯ ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಮುಗಿದು ಹೋದ ಅಧ್ಯಾಯ. ಈ ವಿಚಾರವಾಗಿ ಪುನಃ ಪುನಃ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

105 ವರ್ಷದ ತಾಯಿಯನ್ನು ನೋಡಲು ಬೆಟ್ಟ, ಗುಡ್ಡ ದಾಟಿ ಬಂದ 85 ವರ್ಷದ ಮಗಳು; ಎರಡು ದಶಕಗಳ ಬಳಿಕ ಕರುಳ ಬಳ್ಳಿಯ ಮಿಲನ

ಎರಡು ದಶಕಗಳ ಬಳಿಕ ಕರುಳ ಬಳ್ಳಿಯ ಮಿಲನ

ಕರುಳು ಬಳ್ಳಿಯ ಸಂಬಂಧವೇ ಹಾಗೆ ಎಷ್ಟೇ ದೂರವಿದ್ದರೂ ಮನಸ್ಸು ಅವರನ್ನು ನೋಡಲು ಹಾತೊರೆಯುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ವೈರಲ್‌ ಆಗಿದ್ದು, 105 ವರ್ಷದ ತಾಯಿಯನ್ನು ನೋಡಲು 85 ವರ್ಷದ ಮಗಳು ಬೆಟ್ಟ ಗುಡ್ಡವನ್ನು ದಾಟಿ, ದುರ್ಗಮ ಹಾದಿಯಲ್ಲಿ ಸಂಚರಿಸಿ ಬರೋಬ್ಬರಿ 20 ವರ್ಷಗಳ ಬಳಿಕ ತವರು ಮನೆ ಸೇರಿದ್ದಾರೆ.

ದೇಶದ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರೂಪಾಯಿ ಮೌಲ್ಯ ಕುಸಿಯಲು ಕೇಂದ್ರ ಕಾರಣ ಎಂದ ಪ್ರಿಯಾಂಕ್ ಖರ್ಗೆ

Priyank Kharge: ಬ್ರಿಕ್ಸ್‌ ವೇದಿಕೆಯಲ್ಲಿ ಭಾರತದ ರೂಪಾಯಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ವ್ಯವಹರಿಸಬಹುದಾದ ಕರೆನ್ಸಿಯಾಗಿ ರೂಪಿಸುವುದಾಗಿ ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇಂದು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದ್ದು, ಡಾಲರ್ ಎದುರು ರೂಪಾಯಿ ಹೊಸ ತಳಮಟ್ಟಗಳನ್ನು ತಲುಪುತ್ತಿರುವುದು ಆರ್ಥಿಕ ನೀತಿಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

‘ವಂದೇ ಮಾತರಂ’ ಗೀತೆ ಬಗ್ಗೆ ನಿಲುವು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ಕೇಂದ್ರದ ನಿರ್ಧಾರಕ್ಕೆ ಹೇಳಿದ್ದೇನು?

‘ವಂದೇ ಮಾತರಂ’ ಗೀತೆ ಬಗ್ಗೆ ನಿಲುವು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಡಿಕೆಶಿ

DK Shivakumar: ರಾಷ್ಟ್ರಗಾನ 'ವಂದೇ ಮಾತರಂ'ನ ಎಲ್ಲ 6 ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂದು ಕೇಂದ್ರ ಸರ್ಕಾರ ಕಾಯ್ದೆ ಮಾಡಿದ್ದರೂ, ರಾಜ್ಯ ಸರ್ಕಾರ ಬರೀ 2 ಚರಣ ಹಾಡುವುದಾಗಿ ನಿರ್ಧರಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ಸರ್ಕಾರದ ನಿಲುವು ಸಮರ್ಥಿಸಿಕೊಂಡಿದ್ದಾರೆ.

ಪಾವಗಡದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ? ಪೀಪಲ್ಸ್ ವಾ‌ರ್ ಜನಶಕ್ತಿ ಪಾರ್ಟಿ ಕಾಮ್ರೇಡ್‌ ದೇವನ್ನ ದಳಂ ಹೆಸರಲ್ಲಿ 5 ಲಕ್ಷ ರೂಪಾಯಿಗೆ ಬೇಡಿಕೆ; ಗೇಟ್‌ನಲ್ಲಿ ಪತ್ರ ಪತ್ತೆ

ಪಾವಗಡದಲ್ಲಿ ಮತ್ತೆ ಆರಂಭವಾಯ್ತ ನಕ್ಸಲ್ ಚಟುವಟಿಕೆ?

Naxal Movement: ಕೇಂದ್ರ ನಕ್ಸಲ್‌ ಮುಕ್ತ ಭಾರತ ಘೋಷಣೆ ಮಾಡುತ್ತಿದ್ದರೆ ಇತ್ತ ಆಂಧ್ರ ಪ್ರದೇಶ ಹಾಗೂ ತುಮಕೂರಿನ ಪಾವಗಡ ಗಡಿಭಾಗದಲ್ಲಿ ನಿಷ್ಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಶಂಕೆ ವ್ಯಕ್ತವಾಗಿದೆ. ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿಯ ಕಾಮ್ರೇಡ್‌ ದೇವನ್ನ ದಳಂ ಹೆಸರಿನ ಪತ್ರ ಪಾವಗಡದಲ್ಲಿಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಗಾನ ಕೋಗಿಲೆ ಎಸ್. ಜಾನಕಿಗೆ ದೋಹಾದಲ್ಲಿ ಗಾನ ನಮನ

ದೋಹಾದಲ್ಲಿ 'ಜಾನಕಿ ಸ್ಮೃತಿ' ಗಾನ ನಮನ

S. Janaki: ಗಾನ ಕೋಗಿಲೆ, ಗಾನ ಗಂಧರ್ವೆ ಎಸ್. ಜಾನಕಿ ಅವರ ಸವಿನೆನಪಿಗಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್, ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ದೊಹಾದ ಅಶೋಕ ಸಭಾಂಗಣದಲ್ಲಿ ‘ಜಾನಕಿ ಸ್ಮೃತಿ’ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ಭಾರತೀಯ ಸಮುದಾಯದ ಅನೇಕ ಗಣ್ಯರು ಭಾಗವಹಿಸಿ ಎಸ್. ಜಾನಕಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಗ್ರಾಹಕರೇ ಗಮನಿಸಿ; ಇಂದಿನಿಂದ ನಾಲ್ಕು ದಿನ ಬ್ಯಾಂಕ್‌ ಸೇವೆ ಇರಲ್ಲ, ಕಾರಣವೇನು?

ಗ್ರಾಹಕರೇ ಗಮನಿಸಿ; ಇಂದಿನಿಂದ ನಾಲ್ಕು ದಿನ ಬ್ಯಾಂಕ್‌ ಸೇವೆ ಇರಲ್ಲ

ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಯೂನಿಯನ್‌ಗಳು ಇಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್‌ ಸೇವೆ ಲಭ್ಯವಿರುವುದಿಲ್ಲ.

8 Courses cancelled: ಜಾನಪದ ವಿವಿಯ 8 ಕೋರ್ಸ್‌ಗಳು ರದ್ದು: ಉನ್ನತ ಶಿಕ್ಷಣ ಇಲಾಖೆ ಆದೇಶ; 25ಕ್ಕೂ ಹೆಚ್ಚು ಬೋಧಕರ ಸೇವೆ ಸ್ಥಗಿತ

ಜಾನಪದ ವಿವಿಯ 8 ಕೋರ್ಸ್‌ಗಳು ರದ್ದು

ವಿಶ್ವವಿದ್ಯಾಲಯದಲ್ಲಿ ಅನುಮೋದನೆ ಇಲ್ಲದ ಕೋರ್ಸ್‌ಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ ವಿಚಾರದಲ್ಲಿ ಆಡಳಿತ ಮಂಡಳಿಯ ಹೊಣೆಗಾರಿಕೆ ಏನು ಎಂಬ ಪ್ರಶ್ನೆ ಎದುರಾ ಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗದಂತೆ ಸರ್ಕಾರ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಭಾವನಾತ್ಮಕ ಸಂಕಷ್ಟವನ್ನು ಒಬ್ಬರೇ ಎದುರಿಸುತ್ತಿರುವ ಭಾರತದ ಶೇ 49.5ರಷ್ಟು ಯುವಜನತೆ: ಎಂಪವರ್ ಸಮೀಕ್ಷೆ ಬಹಿರಂಗ

ಶೇ 49.5: ಭಾವನಾತ್ಮಕ ಸಂಕಷ್ಟವನ್ನು ಒಬ್ಬರೇ ಎದುರಿಸುತ್ತಿರುವ ಯುವಜನತೆ

ಯುವಜನರಲ್ಲಿ ಭಾವನಾತ್ಮಕ ಒತ್ತಡಕ್ಕೆ ಕಾರಣವಾಗುವ ಅಂಶಗಳು, ಅದನ್ನು ನಿಭಾಯಿಸುವ ವಿಧಾನಗಳು ಹಾಗೂ ಸಂಕಷ್ಟದ ಸಂದರ್ಭದಲ್ಲಿ ಸುತ್ತಮುತ್ತಲಿನವರ ಪ್ರತಿಕ್ರಿಯೆಗಳ ಕುರಿತು ಸಮೀಕ್ಷೆ ಅಧ್ಯಯನ ನಡೆಸಿದೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದರೂ, ನೆರವು ಪಡೆಯುವ ಮನೋಭಾವ ಮತ್ತು ವಾಸ್ತವವಾಗಿ ಸಹಾಯ ಪಡೆಯುವ ಸಾಮರ್ಥ್ಯದ ನಡುವೆ ದೊಡ್ಡ ಅಂತರ ಇರುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.

ಅಪೆಕ್ಸ್‌ ಬ್ಯಾಂಕಿಗೆ ರವಿ ಅಧ್ಯಕ್ಷ: ಸಿದ್ದು ಆಪ್ತ ರಾಜಣ್ಣಗೆ ನಿರಾಶೆ

ಅಪೆಕ್ಸ್‌ ಬ್ಯಾಂಕಿಗೆ ರವಿ ಅಧ್ಯಕ್ಷ: ಸಿದ್ದು ಆಪ್ತ ರಾಜಣ್ಣಗೆ ನಿರಾಶೆ

ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಚುನಾವಣೆ ಸಂಬಂಧ ಅಧಿಕಾರ ಹಂಚಿಕೆ ಸೂತ್ರದ ಅನ್ವಯ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮೊದಲ ಅವಧಿಗೆ ಅಧ್ಯಕ್ಷರಾಗುವ ಸಾಧ್ಯತೆ ಇತ್ತು. ಆದರೆ ರಾಜಣ್ಣಗೆ ಸ್ಥಾನ ಕೈತಪ್ಪಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ರವಿ ಹಾಗೂ ಉಪಾಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಶರಣಗೌಡ ಪಾಟೀಲ್ ಆಯ್ಕೆ ಆಗಿದ್ದಾರೆ

BJP Padayatra: ಬಿಜೆಪಿ ಚುನಾವಣಾ ರಣಕಹಳೆ

BJP Padayatra: ಬಿಜೆಪಿ ಚುನಾವಣಾ ರಣಕಹಳೆ

ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಗುರುವಾರ ಸಂಜೆ ಬಳ್ಳಾರಿ ಚಲೋ ಪಾದ ಯಾತ್ರೆಯ ಸಮಾರೋಪ ಸಮಾರಂಭವನ್ನು ಕೇಂದ್ರ ಸಚಿವ ಪ್ರಲ್ಹಾಹ ಜೋಶಿ ಉದ್ಘಾಟಿಸಿದರು. ಇದೇ ಸಂದರ್ಭ ದಲ್ಲಿ 10 ದಿನಗಳ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಅಭಿನಂದಿಸಲಾಯಿತು.

ಎಂಎಸ್‌ಡಿಯು ವಿಸ್ತರಿತ ಹೈದರಾಬಾದ್ ತಂತ್ರಜ್ಞಾನ ಕೇಂದ್ರ ಉದ್ಘಾಟನೆ

ಎಂಎಸ್‌ಡಿಯು ವಿಸ್ತರಿತ ಹೈದರಾಬಾದ್ ತಂತ್ರಜ್ಞಾನ ಕೇಂದ್ರ ಉದ್ಘಾಟನೆ

MSDಯ ಡಿಜಿಟಲ್ ಹ್ಯೂಮನ್ ಹೆಲ್ತ್ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅಭಿಷೇಕ್ ನಾರಾ ಯಣ್ ಸಿಂಗ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಾರತದಲ್ಲಿ MSDಯ ದೀರ್ಘಕಾಲದ ಉಪಸ್ಥಿತಿಯ ಮುಂದುವರಿಕೆಯಾಗಿ, ವಿಸ್ತರಿಸಲಾದ ಈ ಕಚೇರಿಯು ಕಂಪನಿಯ ಜಾಗತಿಕ ತಂತ್ರಜ್ಞಾನ ಜಾಲವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು MSDಯ ಜೀವಗಳನ್ನು ಉಳಿಸುವ ಹಾಗೂ ಜೀವನವನ್ನು ಸುಧಾರಿಸುವ ಉದ್ದೇಶವನ್ನು ಮುನ್ನಡೆಸಲು ಸಹಾಯ ಮಾಡುವ, ವಿಸ್ತರಿಸ ಬಹುದಾದ ಡಿಜಿಟಲ್ ಪರಿಹಾರಗಳ ಅಭಿವೃದ್ಧಿಯತ್ತ ಗಮನಹರಿಸಿರುವ ತಂತ್ರಜ್ಞಾನ ಪ್ರತಿಭೆ ಗಳನ್ನು ಒಂದೆಡೆ ಸೇರಿಸುತ್ತದೆ.

Suttur Sri: ‘ದಾಸೋಹ ರತ್ನ’ ಮಧುಸೂದನ ಸಾಯಿ: ಕರ್ನಾಟಕದ ಕೀರ್ತಿ ಹೆಚ್ಚಿಸುವ ಸೇವಾ ಸಾಧನೆ

ಬಸವ ತತ್ತ್ವಗಳನ್ನು ಕೃತಿರೂಪಕ್ಕೆ ತರುತ್ತಿರುವ ಸದ್ದುಗದ್ದಲವಿಲ್ಲದ ಸಾಧನೆ

ಮಕ್ಕಳಿಗೆ ಪೌಷ್ಟಿಕ ಆಹಾರ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ಗೋಶಾಲೆ, ಆಸ್ಪತ್ರೆ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಧುಸೂದನ ಸಾಯಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಅವರು, ಇಷ್ಟೆಲ್ಲ ಸಾಧನೆಗಳ ನಡುವೆಯೂ ವಿನಯದಿಂದ ಬದುಕುತ್ತಿರುವುದು ಶ್ಲಾಘನೀಯ

Chikkaballapur News: ಅಹವಾಲು ಆಲಿಕೆ, ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಒತ್ತು; ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ

ಸೆ.12ರಂದು ಜಿಲ್ಲೆಯಾದ್ಯಂತ ‘ಪ್ರಜಾಸೇವೆ ಆಂದೋಲನ’

ಸಾರಿಗೆ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಹಾಗೂ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ನೇತೃತ್ವದಲ್ಲಿ ನಡೆಯಲಿರುವ ಸಭೆಗಳಲ್ಲಿ ಸಾರ್ವಜನಿಕರು ತಮ್ಮ ಅಹವಾಲು, ಸಮಸ್ಯೆ ಹಾಗೂ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹು ದಾಗಿದೆ. ಇದೇ ವೇಳೆ ಸರ್ಕಾರದ ವಿವಿಧ ಜನಪರ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ನೆಲಮಂಗಲದಲ್ಲಿ 3 ವರ್ಷದ ಬಾಲಕಿ ಅನುಮಾನಾಸ್ಪದ ಸಾವು; ಮಲ ತಾಯಿಯಿಂದ ಕೊಲೆ ಶಂಕೆ!

ನೆಲಮಂಗಲದಲ್ಲಿ 3 ವರ್ಷದ ಬಾಲಕಿ ಅನುಮಾನಾಸ್ಪದ ಸಾವು; ಕೊಲೆ ಶಂಕೆ!

Nelamangala News: ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡಹಳ್ಳಿಯಲ್ಲಿ ಘಟನೆ ನಡೆದಿದೆ. ಬಾಲಕಿಯ ಸಾವಿನ ಹಿಂದೆ ಮಲತಾಯಿಯ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Chikkaballapur News: ಮುನ್ಸಿಪಲ್ ಬಡಾವಣೆಯ ಗಣೇಶೋತ್ಸವಕ್ಕೆ ‘ವರಾಹ ವೈಭವಹಾರ’ದ ವೈಭವ

29ನೇ ಮಹೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮ

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಘ್ನೇಶ್ವರನು ಸನಾತನ ಧರ್ಮದ ಪ್ರಥಮ ವಂದಿತ ದೇವತೆಯಾಗಿದ್ದು, ಗಣೇಶೋತ್ಸವವು ವಯಸ್ಸು, ಮತ-ಧರ್ಮದ ಭೇದವಿಲ್ಲದೆ ಜನರನ್ನು ಒಗ್ಗೂಡಿಸುವ ಭಕ್ತಿಯ ಹಬ್ಬ ವಾಗಿದೆ. ಈ ಪರಂಪರೆಯನ್ನು ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ಮುಂದುವರಿಸುವ ಉದ್ದೇಶ ದಿಂದ 29ನೇ ವರ್ಷದ ಗಣೇಶೋತ್ಸವವನ್ನು ಆಯೋಜಿಸಲಾಗಿದೆ

Loading...