ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Karnataka Janapada Academy: ಕಠೋರ ಕಾಲಕ್ಕೆ ಹಾಡುಗಳೇ ಉತ್ತರವಾಗಬೇಕು: ಗೊಲ್ಲಹಳ್ಳಿ ಶಿವಪ್ರಸಾದ್

ಗಾನಯಾನ ಯುವಪೀಳಿಗೆಗೆ ಹೊಸ ಚೈತನ್ಯ: ರಾಜಪ್ಪ ದಳವಾಯಿ

ನಗರದಲ್ಲಿ ಇಂಡಿಯನ್ ಫೋಕ್ ಬ್ಯಾಂಡ್ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದಲ್ಲಿ ನಡೆದ ‘ಗೊಲ್ಲಹಳ್ಳಿ ಗಾನಯಾನ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಲ್ಕೈದು ದಶಕಗಳಲ್ಲಿ ತಾವು ಬರೆದ ಅರಿವಿನ ಪದಗಳು, ಪರಿಸರದ ಪದಗಳು, ಬದುಕಿನ ಹಾಡುಗಳು ಹಾಗೂ ಜನಪದ ಗೀತೆಗಳನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಗಾನಯಾನ ರೂಪುಗೊಂಡಿದೆ ಎಂದರು.

Chikkaballapur News: ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಕೃಷಿ ಅಭಿವೃದ್ಧಿಗೆ ಸಹಕಾರ: ವಿ.ಮಧುಚಂದ್ರ

ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಕೃಷಿ ಅಭಿವೃದ್ಧಿಗೆ ಸಹಕಾರ

ಸಂಘವು 78 ವರ್ಷಗಳಿಂದ ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದೆ. ಪ್ರಸ್ತುತ ಅಧ್ಯಕ್ಷ ಚೆನ್ನಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಷೇರುದಾರರು ಹಾಗೂ ರೈತರಿಗೆ ಕೆಸಿಸಿ ಸಾಲ, ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸ್ತ್ರೀಶಕ್ತಿ ಸಾಲ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ವ್ಯಾಪಾರ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಆರೋಗ್ಯ ಹಾಗೂ ಆತ್ಮಜ್ಞಾನ ಬೇರೆಬೇರೆಯಲ್ಲ: ರಾಘವೇಶ್ವರ ಭಾರತೀ ಶ್ರೀ

ಆರೋಗ್ಯ ಹಾಗೂ ಆತ್ಮಜ್ಞಾನ ಬೇರೆಬೇರೆಯಲ್ಲ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ತುಪ್ಪ ಅಗ್ನಿವರ್ಧಕವೂ ಹೌದು ಹಾಗೂ ದೇಹಕ್ಕೆ ತಂಪು ನೀಡುವ ಸಾಮರ್ಥವೂ ಇದೆ. ಪರಮಾತ್ಮನಲ್ಲಿ ಕೋಟಿಸೂರ್ಯನ ಬೆಳಕು ಹಾಗೂ ಕೋಟಿಚಂದ್ರರ ತಂಪು ಇರುವಂತೆ ತುಪ್ಪದಲ್ಲಿಯೂ ಇದೇ ಗುಣವನ್ನು ಕಾಣಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ನಿಗಮಗಳಿಗೆ 8 ಸಾವಿರ ಕೋಟಿ ನಷ್ಟ: ಪರಿಷತ್ತಿನಲ್ಲಿ ನಿಗಮಗಳ ಆರ್ಥಿಕ ಪರಿಸ್ಥಿತಿ ಬಿಚ್ಚಿಟ್ಟ ಸಾರಿಗೆ ಸಚಿವ

ಪರಿಷತ್ತಿನಲ್ಲಿ ನಿಗಮಗಳ ಆರ್ಥಿಕ ಪರಿಸ್ಥಿತಿ ಬಿಚ್ಚಿಟ್ಟ ಸಾರಿಗೆ ಸಚಿವ

ವಿಧಾನಪರಿಷತ್ತಿನಲ್ಲಿ ಗುರುವಾರ ಬರ ಪರಿಸ್ಥಿತಿ ಬಗ್ಗೆ ನಡೆದ ಚರ್ಚೆಯ ವೇಳೆ ಹೇಳಿಕೆ ನೀಡಿದ ಅವರು, ಡೀಸೆಲ್ ಬೆಲೆ ಹೆಚ್ಚಳವಾಗಿದ್ದರೂ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳಿಗೆ ವಾರ್ಷಿಕ 8 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದರು.

Gruhalakshmi scheme: ಗೃಹಲಕ್ಷ್ಮಿ ಯೋಜನೆ ಒಂದು ವರ್ಷ ನಿಲ್ಲಿಸಿಬಿಡಿ: ಕಾಂಗ್ರೆಸ್‌ ಸರ್ಕಾರಕ್ಕೆ ಸ್ವಪಕ್ಷದ ಎಂಎಲ್‌ಸಿಯಿಂದಲೇ ಆಗ್ರಹ!

ಗೃಹಲಕ್ಷ್ಮಿ ಯೋಜನೆಯನ್ನು ಮೊದಲು ನಿಲ್ಲಿಸಿ ಎಂದ ಕಾಂಗ್ರೆಸ್‌ ಎಂಎಲ್‌ಸಿ!

Congress Guarantee: ವಿಧಾನ ಪರಿಷತ್ತಿನ ಕಲಾಪದಲ್ಲಿ ನಡೆದ ಚರ್ಚೆಯ ವೇಳೆ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಂಎಲ್‌ಸಿ ತಿಪ್ಪಣ್ಣ ಕಮಕನೂರ್ ಅವರು, ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Mysuru Dasara 2026: ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ: ಸಿಎಂ ಡಿಕೆಶಿ ಘೋಷಣೆ

ಗವಿಮಠದ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ

ಸಮಾಜಮುಖಿ ಕಾಯಕದಿಂದ ಖ್ಯಾತಿಯಾಗಿರುವ ಕೊಪ್ಪಳ ಗವಿಮಠದ ಶ್ರೀಗಳಿಗೆ ದಸರಾ ಉದ್ಘಾಟನೆ ಮಾಡುವ ಗೌರವ ಒಲಿದಿದೆ. ಅಕ್ಟೋಬರ್ 11ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅಕ್ಟೋಬರ್ 21ರ ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ.

ಸಿಂಗಾಪುರದಲ್ಲಿ ಸಚಿವ ಎಂ‌.ಬಿ. ಪಾಟೀಲ್‌; ನಾರ್ಡಿಕ್, ತಕ್ರಾಲ್, ಜಾಪ್ಫಾ ಸೇರಿ ಹಲವು ಕಂಪನಿಗಳ ಜತೆ ಮಾತುಕತೆ

ಸಿಂಗಾಪುರದಲ್ಲಿ ಪ್ರಮುಖ ಕಂಪನಿಗಳ ಜತೆ ಸಚಿವ ಎಂ.ಬಿ. ಪಾಟೀಲ್‌ ಮಾತುಕತೆ

Invest Karnataka: ಸಿಂಗಾಪುರ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಗುರುವಾರ ತಕ್ರಾಲ್ ಕಾರ್ಪೊರೇಷನ್, ನಾರ್ಡಿಕ್ ಫ್ಲೋ ಕಂಟ್ರೋಲ್‌, ಜಾಪ್ಫಾ, ಎಸ್ಎಟಿಎಸ್ ಮತ್ತು ಎಸ್.ಟಿ ಎಂಜಿನಿಯರಿಂಗ್ ಕಂಪನಿಗಳ ಜತೆ ಮಾತುಕತೆ ನಡೆಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಕೃಷ್ಣಾ ತೀರದ ನೀರಾವರಿ ಹೋರಾಟಗಾರ ಬಸವರಾಜ ಕುಂಬಾರ ಇನ್ನಿಲ್ಲ

ಕೃಷ್ಣಾ ತೀರದ ನೀರಾವರಿ ಹೋರಾಟಗಾರ ಬಸವರಾಜ ಕುಂಬಾರ ಇನ್ನಿಲ್ಲ

Basavaraj Kumbar: ನಿಡಗುಂದಿಯ ಬಸವರಾಜ ಕುಂಬಾರ ಅವರು ರೈತರ ಹಕ್ಕು, ಕೃಷ್ಣಾ ನೀರು ಹಾಗೂ ನೀರಾವರಿ ಯೋಜನೆಗಳಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ರೈತರ ಸಮಸ್ಯೆಗಳಿಗಾಗಿ ಹೋರಾಟ ಮುಂದುವರಿಸಿದ್ದರು.

Chandrashekhar N P: ಲೋಕಸಭೆಯ ಜಂಟಿ ಕಾರ್ಯದರ್ಶಿ ಚಂದ್ರಶೇಖರ್ ಎನ್.ಪಿ. ಅವರಿಗೆ ಮೈಸೂರು ವಿವಿಯಿಂದ ಪಿಎಚ್‌.ಡಿ

ದೆಹಲಿ ಕನ್ನಡಿಗ ಚಂದ್ರಶೇಖರ್ ಎನ್.ಪಿ. ಅವರಿಗೆ ಮೈಸೂರು ವಿವಿಯಿಂದ ಪಿಎಚ್‌.ಡಿ

ಚಂದ್ರಶೇಖರ್ ಎನ್.ಪಿ ಅವರು ‘ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ವ್ಯಾಪ್ತಿಯ ಕನ್ನಡ ಸಾಂಸ್ಕೃತಿಕ ಅಧ್ಯಯನ’ ವಿಷಯದ ಕುರಿತು ಮೈಸೂರು ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಡಾ. ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಇದಕ್ಕಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಲಭಿಸಿದೆ

Lokayukta Raid: ಖಾತೆ ಮಾಡಲು ₹1 ಲಕ್ಷ ಲಂಚ: ಸಿಕ್ಕಿಬಿದ್ದ ಆರ್.ಐ. ನಾಗೇಶ್

ಖಾತೆ ಮಾಡಲು ₹1 ಲಕ್ಷ ಲಂಚ: ಸಿಕ್ಕಿಬಿದ್ದ ಆರ್.ಐ. ನಾಗೇಶ್

ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ವಾಸಿ ರೇಣುಕೇಶ್ ಎಂಬುವವರು ತಮ್ಮ ತಾತನ ಜಮೀನನ್ನು ಪೌತಿ ಖಾತೆ ಮಾಡಿಕೊಡುವಂತೆ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು. ಖಾತೆ ಮಾಡಲು ಆರ್.ಐ. ನಾಗೇಶ್ ₹1 ಲಕ್ಷ ಲಂಚ ಕೇಳಿದ್ದರು. ಈ ಪೈಕಿ ಮೊದಲ ಕಂತಾಗಿ ₹35,000 ಹಣವನ್ನು ನೀಡಲಾಗಿತ್ತು. ನಂತರ ಕೆಲಸ ಮಾಡಿಕೊಡದೆ ಉಳಿದ ಹಣಕ್ಕೆ ಸತಾಯಿಸುತ್ತಿದ್ದಾಗ ರೋಸಿ ಹೋದ ರೇಣುಕೇಶ್ ಲೋಕಾಯುಕ್ತ ಕಚೇರಿಯ ಬಾಗಿಲು ತಟ್ಟಿದ್ದರು.

ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಯಸ್ಸಿನ ಬಾಲಕಿ; ವಿಟ್ಲ ಠಾಣೆಯಲ್ಲಿ ಕೇರಳದ ಬಾಲಕನ ವಿರುದ್ಧ ಪೋಕ್ಸೋ ಕೇಸ್‌!

ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಯಸ್ಸಿನ ಬಾಲಕಿ; ಪೋಕ್ಸೋ ಕೇಸ್‌

ಕೇರಳ ರಾಜ್ಯದ ನಿವಾಸಿಯಾಗಿರುವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಂದಿಗೆ ಅಪ್ರಾಪ್ತ ವಯಸ್ಸಿನ ಬಾಲಕಿ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಬಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕೇಸ್‌ ದಾಖಲಾಗಿದೆ.

ಕತಾರ್‌ನಲ್ಲಿ ಕರ್ನಾಟಕ ಸಂಘದಿಂದ ʼಅಭಿಯಂತರರ ದಿನʼ ಆಚರಣೆ; ʼಅಭಿಯಂತರ ಶ್ರೀʼ ಪ್ರಶಸ್ತಿ ಪ್ರದಾನ

ಕತಾರ್‌ನಲ್ಲಿ ಕರ್ನಾಟಕ ಸಂಘದಿಂದ ʼಅಭಿಯಂತರರ ದಿನʼ ಆಚರಣೆ

“ಭವಿಷ್ಯವನ್ನು ನಿರ್ಮಿಸುವ ದೂರದೃಷ್ಟಿಯ ಸಾಧಕರಿಗೆ ನಮನ” ಎಂಬ ಆಶಯದೊಂದಿಗೆ ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗಿ ಸಂಸ್ಥೆ ಕರ್ನಾಟಕ ಸಂಘ ಕತಾರ್ ವತಿಯಿಂದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರರ ದಿನಾಚರಣೆಯನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಮುಂಬೈ ಹಾಲ್‌ನಲ್ಲಿ ಆಚರಿಸಲಾಯಿತು.

Kolar Car accident: ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ!

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಕಾರು ಅಪಘಾತ; 3 ಸಾವು!

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಮರಗಲ್ ಸಮೀಪ ಭೀಕರ ಅಪಘಾತ ನಡೆದಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಹೊಡೆದು ಪಲ್ಟಿಯಾಗಿದೆ. ಇದರಿಂದ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

ಬರದ ನಡುವೆ ರಾಜ್ಯಕ್ಕೆ ಶಾಕ್; ತಮಿಳುನಾಡಿಗೆ ನಿತ್ಯ 4,000 ಕ್ಯುಸೆಕ್ ಕಾವೇರಿ ನೀರು ಹರಿಸಲು ಸಿಡಬ್ಲ್ಯುಆರ್‌ಸಿ ಶಿಫಾರಸು

ತಮಿಳುನಾಡಿಗೆ ನಿತ್ಯ 4,000 ಕ್ಯುಸೆಕ್ ಕಾವೇರಿ ನೀರು ಹರಿಸಲು ನಿರ್ದೇಶನ

Cauvery Water Dispute: ದೆಹಲಿಯಲ್ಲಿ ಸಿಡಬ್ಲ್ಯೂಆರ್‌ಸಿ ಮುಖ್ಯಸ್ಥ ವಿನೀತ್ ಗುಪ್ತಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಆದೇಶದಿಂದಾಗಿ ಕರ್ನಾಟಕವು ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 4 ಸಾವಿರ ಕ್ಯೂಸೆಕ್‌ ನೀರು ಹರಿಸಬೇಕಾಗಿದೆ.

ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಮೆಂಟ್‌; ಆಕಾಶ್ ಚಾಂಪಿಯನ್‌

ಟೆನ್‌ಪಿನ್ ಬೌಲಿಂಗ್ ಟೂರ್ನಮೆಂಟ್‌ನಲ್ಲಿ ಆಕಾಶ್ ಚಾಂಪಿಯನ್‌

Tenpin Bowling Tournament: ಬೆಂಗಳೂರಿನಲ್ಲಿ ನಡೆದ 1ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಮೆಂಟ್‌ನಲ್ಲಿ ಆಕಾಶ್ ಅಶೋಕ್ ಕುಮಾರ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅದ್ಭುತ ಹಾಗೂ ಪ್ರಭಾವಶಾಲಿ ಪ್ರದರ್ಶನ ನೀಡಿದ ಆಕಾಶ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅವರು ಅಗ್ರ ಶ್ರೇಯಾಂಕದ ಕಿಶನ್ ಆರ್. ವಿರುದ್ಧದ ಫೈನಲ್ ಪಂದ್ಯದಲ್ಲಿ ಪ್ರಾಬಲ್ಯ ಮೆರೆದು ಚಾಂಪಿಯನ್‌ ಪಟ್ಟಕ್ಕೇರಿದರು.

Lokayukta: ಮ್ಯೂಟೇಷನ್‌ಗೆ ₹10 ಸಾವಿರ: ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಮ್ಯೂಟೇಷನ್‌ಗೆ ₹10 ಸಾವಿರ: ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಜಮೀನಿನ ಮ್ಯೂಟೇಷನ್ ಮಾಡಿಕೊಡಲು ವಿಲೇಜ್ ಅಕೌಂಟೆಂಟ್ ರಮೇಶ್ ಅವರು ₹10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಅಧಿಕಾರಿಯ ಸೂಚನೆಯಂತೆ ಸಾಗರ್ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ; ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತೀವ್ರ ಸಂತಾಪ

ಡಾ. ಆನಂದ ಪಾಂಡುರಂಗಿ ನಿಧನ; ಪ್ರಲ್ಹಾದ್‌ ಜೋಶಿ ತೀವ್ರ ಸಂತಾಪ

Dr Anand Pandurangi Passes Away: ಡಾ. ಆನಂದ ಪಾಂಡುರಂಗಿ ಒಬ್ಬ ಅತ್ಯಾಪ್ತ ಸ್ನೇಹಿತರಲ್ಲೊಬ್ಬರಾಗಿ ಅನೇಕ ವಿಷಯದಲ್ಲಿ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದರು. ನಾನಿಂದು ಒಬ್ಬ ಅತ್ಯುತ್ತಮ ಮಾರ್ಗದರ್ಶಕ, ಹಿತೈಷಿ, ಹಿರಿಯ ಸ್ನೇಹಿತನನ್ನು ಕಳೆದುಕೊಂಡ ದುಃಖ ಆವರಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

Gold Price Today On 24 September 2026: ಕೊನೆಗೂ ಇಳಿಯಿತು ಬಂಗಾರ ದರ; ಇಂದು ಚಿನ್ನದ ಅಗ್ಗವಾಗಿದ್ದು ಇಷ್ಟು

ಕೊನೆಗೂ ಚಿನ್ನದ ದರದಲ್ಲಿ ಇಳಿಕೆ; ಇಂದಿನ ರೇಟ್‌ ಇಲ್ಲಿದೆ

Gold Silver Rate Today: ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 140 ರೂಪಾಯಿ ಕಡಿಮೆಯಾಗಿ 14 ಸಾವಿರ ರೂಪಾಯಿ ಗಡಿಯಿಂದ ಇಳಿದು 13,995 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 152 ರುಪಾಯಿ ಇಳಿಕೆಯಾಗಿ 15,268 ರೂಪಾಯಿ ಕಂಡು ಬಂದಿದೆ.

KPSC: ಕೆಪಿಎಸ್‌ಸಿ: ನ್ಯಾಯಾಂಗ V/s ಶಾಸಕಾಂಗ ಸಂಘರ್ಷ

KPSC: ಕೆಪಿಎಸ್‌ಸಿ: ನ್ಯಾಯಾಂಗ V/s ಶಾಸಕಾಂಗ ಸಂಘರ್ಷ

ಎರಡು ದಿನಗಳ ಹಿಂದೆ ಕೆಪಿಎಸ್‌ಸಿ ವಿಚಾರಣೆ ನಡೆಸಿದ ಹೈಕೋರ್ಟ್ ಪಶುವೈದ್ಯಾಧಿಕಾರಿ ನೇಮ ಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಧಾರವಾಡ ಹೈಕೋರ್ಟ್ ಪೀಠ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಲ್ಲೂ, ತನಿಖಾ ತಂಡದ ನೇತೃತ್ವ ವಹಿಸಬೇಕಾದ ಅಧಿಕಾರಿಯನ್ನು ಹೈಕೋರ್ಟ್ ಸ್ವತಃ ಹೆಸರಿಸಿ ಆದೇಶಿಸಿರುವುದಕ್ಕೆ ಸರಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ಹೋರಾಟ ನಡೆಸಲು ಮುಂದಾಗಿದೆ.

ಸೌಜನ್ಯ ಹತ್ಯೆಯ ನೈಜ ಹಂತಕ ಸಿಗಲು ಸಾಧ್ಯವೇ..?

ಸೌಜನ್ಯ ಹತ್ಯೆಯ ನೈಜ ಹಂತಕ ಸಿಗಲು ಸಾಧ್ಯವೇ..?

ಪ್ರಮುಖ ಶಂಕಿತನನ್ನೇ ಕಾನೂನು ಬದ್ಧವಾಗಿ ತನಿಖೆಯ ಪರಿಧಿಯಿಂದ ಹೊರಗಿಟ್ಟ ಮೇಲೆ, ಈ ಹೊಸ ವಿಚಾರಣೆಯು ಯಾರ ಸುತ್ತ ನಡೆಯಬೇಕು ಮತ್ತು ಅಸಲಿ ಆರೋಪಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಹೇಗೆ ಎಂಬುದು ಈ ವಿಷಯದಲ್ಲಿರುವ ನಿಷ್ಠುರ ಸತ್ಯ. ಮತ್ತೊಂದೆಡೆ, ಸಾರ್ವಜನಿಕ ವಾಗಿ ಮತ್ತು ಸಂತ್ರಸ್ತೆಯ ಕುಟುಂಬದಿಂದ ಗುರಿಯಾಗಿಸಲ್ಪಟ್ಟಿದ್ದ ಇತರ ವ್ಯಕ್ತಿಗಳ ಮೇಲೆ ಯಾವುದೇ ಸಾಕ್ಷ್ಯಾಧಾರಗ ಳಿಲ್ಲವೆಂದು ನ್ಯಾಯಾಲಯಗಳು ಈ ಹಿಂದೆಯೇ ತೀರ್ಮಾನಿಸಿವೆ.

Dharwad Agricultural University: ಧಾರವಾಡ ಕೃಷಿ ವಿವಿ ನೀರು, ಊಟ ಕಳಪೆ: ವಿದ್ಯಾರ್ಥಿನಿಯರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಧಾರವಾಡ ಕೃಷಿ ವಿವಿ ನೀರು, ಊಟ ಕಳಪೆ

ನೀರಿನ ಗುಣಮಟ್ಟ ಪರೀಕ್ಷೆಗೆ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವಿವಿ ಮುಖ್ಯಸ್ಥರು ಹೇಳಿದ್ದಾರೆ. ಆದರೆ ನೀರು ಕುಡಿಯಲು ಹೆದರಿಕೆಯಾಗುತ್ತಿದೆ. ಊಟದಲ್ಲೂ ಆಗಾಗ ಹುಳಗಳು ಸಿಗುತ್ತವೆ. ಈ ಬಗ್ಗೆ ದೂರು ನೀಡಿದಾಗ ಸರಿಯಾಗುತ್ತದೆ, ಮತ್ತೆ ಅದೇ ಸ್ಥಿತಿ ಶುರು ವಾಗುತ್ತದೆ ಎಂದು ವಿದ್ಯಾರ್ಥಿಗಳು ನೊಂದು ನುಡಿದಿದ್ದಾರೆ.

ಕೆಳಮನೆಯಲ್ಲಿ ಬರಕ್ಕಿಂತ ಇಂಡಿ ಶಾಸಕರ ರಾಜೀನಾಮೆಯೇ ಚರ್ಚಾವಸ್ತು: ಬರದ ಚರ್ಚೆಗೂ ʼಬರʼ

ಬರದ ಚರ್ಚೆಗೂ ʼಬರʼ

ರಾಜ್ಯ ಸರಕಾರದ ಆರ್ಥಿಕ ದುಸ್ಥಿತಿ, ಬರದ ಬಗ್ಗೆ ಚರ್ಚೆಯ ನಡುವೆ ವಿಧಾನಸಭೆ ಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಭಾರೀ ಸದ್ದು ಮಾಡಿತು. ಬಿಜೆಪಿ ನಾಯಕರು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮದೇ ಶಾಸಕರು ನಿಮ್ಮ ಸರಕಾರವನ್ನೇ ವಿರೋಧಿಸಿ ರಾಜೀನಾಮೆ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದರು.

Karnataka Drought: ರಾಜ್ಯದಲ್ಲಿ ತೀವ್ರ ಬರಸ್ಥಿತಿ; ಮಧ್ಯಂತರ ಆರ್ಥಿಕ ನೆರವಿಗಾಗಿ ಪ್ರಧಾನಿ ಮೋದಿಗೆ ಸಿಎಂ ಡಿಕೆಶಿ ಪತ್ರ

ತೀವ್ರ ಬರಸ್ಥಿತಿ; ಮಧ್ಯಂತರ ಆರ್ಥಿಕ ನೆರವಿಗಾಗಿ ಪ್ರಧಾನಿ ಮೋದಿಗೆ ಸಿಎಂ ಪತ್ರ

ಪ್ರಸ್ತುತ ಮಾನ್ಸೂನ್‌ನಲ್ಲಿ ಗಣನೀಯ ಮಳೆ ಕೊರತೆ ಈ ಎಲ್ಲ ವಲಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿರುವುದು ಗಂಭೀರ ಕಳವಳದ ವಿಷಯ. 40 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬರ ಪರಿಹಾರ ಕ್ರಮಗಳಿಗೆ ಆರ್ಥಿಕ ನೆರವು ಒದಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕೋರಿದ್ದಾರೆ.

ಮನೋವೈಜ್ಞಾನಿಕ ಕೌನ್ಸೆಲಿಂಗ್‌ ವ್ಯವಸ್ಥೆಗೆ ಡಾ. ಸುಧೀರ್ ಕೆ.ವಿ.ಗೆ ಭಾರತೀಯ ಪೇಟೆಂಟ್

ಮನೋವೈಜ್ಞಾನಿಕ ಕೌನ್ಸೆಲಿಂಗ್‌ ವ್ಯವಸ್ಥೆಗೆ ಡಾ. ಸುಧೀರ್‌ಗೆ ಪೇಟೆಂಟ್

Ujire News: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಅವರು “A Psychological Counselling Support System Based on Emotional Pattern Recognition” ಎಂಬ ಆವಿಷ್ಕಾರಕ್ಕೆ ಭಾರತೀಯ ಪೇಟೆಂಟ್ ಪಡೆದಿದ್ದಾರೆ.

Loading...