ಲಾರಿ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾವು
Kalaburagi News: ಕೆಂಪು ಮಣ್ಣು ತುಂಬಿಕೊಂಡು ಸಿಮೆಂಟ್ ಕಾರ್ಖಾನೆಯೊಳಗಡೆ ತೆರಳುತ್ತಿದ್ದ ಖಾಸಗಿ ಲಾರಿಯೊಂದು ಐದು ವರ್ಷದ ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
Assembly Session: 2022-23 ರಲ್ಲಿ 1147 ಕೋಟಿ ರೂಪಾಯಿಗಳಷ್ಟು ಸಹಾಯಧನವನ್ನು ರೈತರಿಗೆ ಹಾಲಿನ ಪ್ರೋತ್ಸಾಹಧನವಾಗಿ ನೀಡಲಾಗಿತ್ತು. 2024-25 ರಲ್ಲಿ 1500 ಕೋಟಿ ರೂಪಾಯಿಗಳನ್ನು ಫೆಬ್ರವರಿ ಅಂತ್ಯದವರೆಗೆ ನೀಡಿದ್ದೇವೆ. ಇದರಲ್ಲಿ 2019 ರಿಂದ ಬಾಕಿ ಉಳಿಸಿದ್ದ ಮೊತ್ತವೂ ಸೇರಿದೆ. ಈ ವರ್ಷ ಮತ್ತೆ 1500 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
Fashion Interview: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿಂಪಲ್ ಫ್ಯಾಷನ್ ಕುರಿತಂತೆ ಫ್ಯಾಷನ್‌ಲೋಕದ ಶೋ ಡೈರೆಕ್ಟರ್, ಡಿಸೈನರ್ ಹಾಗೂ ಕೊರಿಯಾಗ್ರಾಫರ್ ರಾಜೇಶ್ ಶೆಟ್ಟಿಯವರು ಒಂದಿಷ್ಟು ಫ್ಯಾಷನ್ ಸ್ಟೈಲಿಂಗ್ ವಿಷಯಗಳನ್ನು ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಸಂದರ್ಶನದ ಸಾರಾಂಶ ಇಲ್ಲಿದೆ .
ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿಗಳು ಹಲವೆಡೆ ಹೂಳು ತುಂಬಿ ದ್ದು, ಮತ್ತೆ ಹಲವೆಡೆ ಸಂಪೂರ್ಣ ಮುಚ್ಚಿಹೋಗಿವೆ. ಇನ್ನೊಂದೆಡೆ ಕೊಳಚೆ ನೀರಿನಿಂದ ಮಡು ಗಟ್ಟುವ ಪರಿಸ್ಥಿತಿಯಲ್ಲಿದ್ದು, ಸರಾಗವಾಗಿ ಹರಿಯದೇ ಒಂದೆಡೆಯೇ ನಿಂತು ಕೊಳೆಯುತ್ತಿದೆ. ಇದರಿಂದಾಗಿ ಸೊಳ್ಳೆ ಗಳ ಕಾಟ ಹೆಚ್ಚಾಗಿದ್ದು, ದುರ್ವಾಸನೆಗೆ ಹೈರಾಣಾಗಬೇಕಿದೆ.
ಕಾಡ್ಗಿಚ್ಚಿಗೆ ಒಳಗಾಗಿ ಅಪಾರ ಪ್ರಮಾಣದ ಮರಗಳು ಸುಟ್ಟಿದ್ದು ಭಾರೀ ಪ್ರಮಾಣದ ನಷ್ಟಕ್ಕೆ ಒಳಗಾಗಿ ದ್ದೇನೆ. ದಯವಿಟ್ಟು ಜಿಲ್ಲಾ ಧಿಕಾರಿಗಳು ನನಗೆ ಆಗಿರುವ ನಷ್ಟದ ಅಂದಾಜನ್ನು ಅಧಿಕಾರಿಗಳ ಮೂಲಕ ಸಮೀಕ್ಷೆ ಮಾಡಿಸಿ ಪ್ರಾಕೃತಿಕ ವಿಕೋಪದ ನಿಧಿಯಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಲ್ಲದೆ, ಈಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿದ್ದಾರೆ
Congress guarantees: ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಗ್ಯಾರಂಟಿಗಳನ್ನು ಶ್ಲಾಘಿಸಿದ್ದಾರೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 1 ರಂದು ಬೆಳ್ಳಿಗ್ಗೆ 7.30 ರಿಂದ 9.30 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ.ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸ ಲಿದ್ದಾರೆ. ನಾಮಕರಣದ ಅರ್ಜಿ ನಾಮಕರಣದ ಅರ್ಜಿಯು, ಸಿದ್ದಗಂಗಾ ಮಠ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ನಾಮಕರಣಕ್ಕೆ ಅರ್ಜಿ : 73488 53276 ಸಂಖ್ಯೆಯನ್ನು ಸಂಪರ್ಕಿಸ ಬಹುದು.ಇನ್ನು ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತು ಮಾಡ ಬೇಕು
CM Siddaramaiah: ದಲಿತ ಸಮುದಾಯಕ್ಕೆ ಗುಜರಾತ್ ಬಿಜೆಪಿ ಸರ್ಕಾರ 2.38% ರಷ್ಟು, ಮಹಾರಾಷ್ಟ್ರ 3.6% ಹಾಗೂ ಕೇಂದ್ರ ಸರ್ಕಾರ ಕೇವಲ 2.87% ಮಾತ್ರ ಹಣ ಬಜೆಟ್‌ನಲ್ಲಿ ತೆಗೆದಿಟ್ಟಿದೆ. ಆದರೆ ಕಾಂಗ್ರೆಸ್ ಸರ್ಕಾರ ಶೇ. 7.46 ರಷ್ಟು ಹಣ ಮೀಸಲಿಟ್ಟು, ಖರ್ಚು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
Book Release: ಸೌತ್ ಇಂಡಿಯನ್ ಬ್ಯಾಂಕ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದು ಮಹಿಳೆಯರ ಸ್ಪೂರ್ತಿದಾಯಕ ಪ್ರಯಾಣವನ್ನು ವಿವರಿಸುವ ವಿಶೇಷ ಕಾಫಿ ಟೇಬಲ್ ಪುಸ್ತಕ 'ವುಮೆನ್ ಲೈಕ್ ಯು' ಅನ್ನು ಬಿಡುಗಡೆ ಮಾಡಿದೆ. ಸೌತ್ ಇಂಡಿಯನ್ ಬ್ಯಾಂಕಿನ ನಿರ್ದೇಶಕಿ ಲಕ್ಷ್ಮೀ ರಾಮಕೃಷ್ಣ ಶ್ರೀನಿವಾಸ್ ಅವರು ಪುಸ್ತಕವನ್ನು ಅನಾವರಣಗೊಳಿಸಿದರು.
CM Siddaramaiah: ನಿರ್ಮಲಾ ಸೀತಾರಾಮನ್ ಅವರನ್ನು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಒದಗಿಸಿ ಎಂದು ಮೂರು ಬಾರಿ ಭೇಟಿಯಾಗಿ ಮನವಿ ಮಾಡಿದ್ದರೂ, ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಘೋಷಿಸಿದ್ದರೂ ಒಂದು ರೂಪಾಯಿ ಬರಲಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Power Star Fashion: ನಮ್ಮ ನಿಮ್ಮೆಲ್ಲರ ನೆನಪಿನಾಳದಲ್ಲಿ ಉಳಿದಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಒಂದೊಂದು ಸಿನಿಮಾ ಲುಕ್ & ಸ್ಟೈಲಿಂಗ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿತ್ತು, ಮಾದರಿಯಾಗಿತ್ತು. ಸಾಕಷ್ಟು ಬಾರಿ ಟ್ರೆಂಡ್ ಕೂಡ ಸೆಟ್ ಮಾಡಿತ್ತು. ಅವರ ಹುಟ್ಟಿದ ದಿನದ ಹಿನ್ನೆಲೆಯಲ್ಲಿ ಅಪ್ಪು ಅವರ ಫ್ಯಾಷನ್ & ಸ್ಟೈಲ್ ಸ್ಟೇಟ್‌ಮೆಂಟ್ಸ್ ಕುರಿತ ಹಳೆಯ ಸಂದರ್ಶನದ ಸಾರಾಂಶವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಮೂಲಕ ಅವರಿಗೆ ವಿಶ್ವವಾಣಿ ನ್ಯೂಸ್‌ನ ಫ್ಯಾಷನ್ ಲೋಕ ನಮನ ಸಲ್ಲಿಸಿದೆ.
Job Guide: ಕರ್ನಾಟಕದಲ್ಲೇ ಉತ್ತಮ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ರಾಜ್ಯಾದ್ಯಂತ ಖಾಲಿ ಇರುವ ಬರೋಬ್ಬರಿ 2,500 ಅಂಗನವಾಡಿ ವರ್ಕರ್ ಮತ್ತು ಹೆಲ್ಪರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏ. 4.
CM Siddaramaiah: ಬಿಜೆಪಿ ಅಧಿಕಾರದಲ್ಲಿದ್ದಾಗ ಕ್ಯಾಪಿಟಲ್ ಹೂಡಿಕೆಗಳಿಗೆ 2,70,695 ಕೋಟಿ ಕಾಮಗಾರಿಗಳನ್ನು ಅನುದಾನ ಒದಗಿಸದೇ ತೆಗೆದುಕೊಂಡಿರಿ. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ 1,66,426 ಕೋಟಿ ನೀಡಲಾಗಿದೆ. 36 ಸಾವಿರ ಕೋಟಿ ಬಾಕಿ ಬಿಲ್‌ಗಳು ನಿಮ್ಮ ಬಳುವಳಿ. ನಿಮ್ಮಿಂದ ನಾವು ಕಷ್ಟಪಡುವ ಸಂದರ್ಭ ಒದಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
Lakshmi Hebbalkar: ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ಇವೆಲ್ಲದರ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ನಿಗಾ ವಹಿಸಬೇಕಿದೆ. ನಗರ, ಹಳ್ಳಿಗಳೆನ್ನದೆ ಎಲ್ಲ ಕಡೆಗಳಲ್ಲೂ ಬಹಳ ಸೂಕ್ಷ್ಮವಾಗಿ ಮತೀಯ ಶಕ್ತಿಗಳ ಮೇಲೆ ಕಣ್ಣು ಇಡಬೇಕಾಗಿದೆ. ಹೆಚ್ಚು ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ಕಾರ್ಯಕ್ರಮಗಳು, ಯೋಜನೆಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಜನತೆಗೆ ತಿಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಮಾರ್ಚ್ 17, ಕನ್ನಡದ ಸೂಪರ್‌ಸ್ಟಾರ್ ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಅವರು 2021ರಲ್ಲಿ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಕಾಲಿಕ ಮರಣವು ರಾಷ್ಟ್ರದಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿತ್ತು.. ಅವರ ಜನ್ಮ ದಿನದಂದು, ಅವರು ನಟಿಸಿದ ಟಾಪ್ 10 ಮೂವಿಗಳ ಬಗ್ಗೆ ಸಣ್ಣ ಪರಿಚಯ ಇಲ್ಲಿದೆ ನೋಡಿ.