ಶಿಕ್ಷಣ ಪ್ರವಾಹವಿದ್ದಂತೆ: ಗುರುಮಾತೆ ಚೆನ್ನಮ್ಮಾ ಝಳಕಿ ಅಭಿಮತ
ಭಾರತ ಹಳ್ಳಿಗಳ ದೇಶ ಭಾರತದ ದೇಶದ ಸಂಸ್ಕೃತಿ ,ಪರಂಪರೆ ಗ್ರಾಮೀಣ ಭಾಗಗಳಲ್ಲಿ ಸಿಗುತ್ತದೆ. ಗ್ರಾಮೀಣ ಬದಕಿನಲ್ಲಿ ಹಾಡು, ಕತೆ ,ಕವನ, ಜಾನಪದ , ಬಿಸುಕಲ್ಲಿನ ಹಾಡು, ಹಂತಿ ಹಾಡು, ಸೋಬಾನೆ ಇತ್ಯಾದಿ ಕಲೆಗಳು ಸಾಕಷ್ಟು, ಇಂತಹ ವಿಭಿನ್ನ ಸೊಗಡನ್ನು ಮಕ್ಕಳಿಂದ ಅರಳಿಸಬೇಕು . ಶಿಕ್ಷಣ ಎಂದರೆ ಮಗುವಿನಲ್ಲಿ ಅಡಗಿರುವ ಸುಪ್ತ ಶಕ್ತಿ ಹೊರ ತೆಗೆಯುವುದೇ ಶಿಕ್ಷಣ ಕಲಿಕಾ ಹಬ್ಬದ ಉದ್ದೇಶ ಕೂಡಾ ಮಗುವಿಗೆ ಪ್ರತಿ ಹಂತದಲ್ಲಿ ಒತ್ತಡಗಳನ್ನು ಕಡಿಮೆ ಮಾಡಿ ಬೇರೆ ಮಾರ್ಗದಲ್ಲಿ ತೊಡಗಿಸುವ ಕೌಶಲ್ಯವಾಗಿದೆ