ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

H.M. Chandrashekarappa: ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಅನಾರೋಗ್ಯದಿಂದ ನಿಧನ

ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಅನಾರೋಗ್ಯದಿಂದ ನಿಧನ

Shivamogga News: ಕಳೆದ ಎರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಚ್.ಎಂ.ಚಂದ್ರಶೇಖರಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು 1999ರಲ್ಲಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಸ್ಪರ್ಧಿಸಿ ಗೆದ್ದು ಶಿವಮೊಗ್ಗ ನಗರದ ಶಾಸಕರಾಗಿದ್ದರು.

Chikkaballapur News: 'ಬೇಡ ಬ್ರೋ–ರೈಸ್ ಕರ್ನಾಟಕ' ಜಾಗೃತಿ ಜಾಥಾ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯ ಕರೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬೈಕ್ ರ‍್ಯಾಲಿ

ಜಾಗೃತಿ ಅಭಿಯಾನದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್ ಕೋಡ್‌ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಸ್ಕ್ಯಾನ್ ಮಾಡುವ ಮೂಲಕ ನಾಗರಿಕರು ತಮ್ಮ ಸುತ್ತಮುತ್ತ ನಡೆಯುವ ಮಾದಕ ವಸ್ತುಗಳ ಮಾರಾಟ, ಬಳಕೆ ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ

Gubbi News: ದುಡಿಮೆಯ ಒಂದಂಶ ಬಡ ಮಕ್ಕಳ ಶಿಕ್ಷಣಕ್ಕೆ : ಕಳ್ಳಿಪಾಳ್ಯ ಲೋಕೇಶ್

ದುಡಿಮೆಯ ಒಂದಂಶ ಬಡ ಮಕ್ಕಳ ಶಿಕ್ಷಣಕ್ಕೆ

ಆಡಂಬರ ಹುಟ್ಟುಹಬ್ಬ ಆಚರಣೆ ಮಾಡಿ ಹಣ ವ್ಯಯ ಮಾಡುವ ಬದಲು ಹಳ್ಳಿಗಾಡಿನ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಒಂದು ರೀತಿಯ ಸಾರ್ಥಕ ಬದುಕು ಎನಿಸುತ್ತದೆ. ಆರೋಗ್ಯ ಮತ್ತು ಶಿಕ್ಷಣ ಸಮಾಜಕ್ಕೆ ಉಚಿತ ಸೇವೆ ಆಗಬೇಕಿದೆ. ಆದರೆ ದುರದೃಷ್ಟ ರೀತಿಯಲ್ಲಿ ಈ ಎರಡೂ ಕ್ಷೇತ್ರ ಕಮರ್ಷಿಯಲ್ ಆಗಿದೆ ಎಂದು ವಿಷಾದಿಸಿದ ಅವರು ಆಂಗ್ಲ ಮಾಧ್ಯಮ ಶಿಕ್ಷಣ ಹಳ್ಳಿ ಮಕ್ಕಳಿಗೆ ದೊರೆಯಬೇಕು

ಕತಾರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ಕತಾರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾದ ಐಸಿಸಿ ಅಶೋಕ ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಭಾರತದ ರಾಯಭಾರಿ ವಿಪುಲ್ ಅವರಿಗೆ ಅನಿವಾಸಿ ಭಾರತೀಯ ಸಮುದಾಯದಿಂದ ಬೀಳ್ಕೊಡಿಗೆ ನೀಡಲಾಗಿದೆ. ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಕಲ್ಯಾಣ ವೇದಿಕೆ, ಭಾರತೀಯ ಕ್ರೀಡಾ ಕೇಂದ್ರ ಹಾಗೂ ಭಾರತೀಯ ಉದ್ಯಮ ಮತ್ತು ವೃತ್ತಿಪರರ ಮಂಡಳಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.

Gubbi News: ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳ ಆಯ್ಕೆ

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳ ಆಯ್ಕೆ

ಸಾವಿತ್ರಿಬಾಯಿ ಫುಲೆಯವರ ಶೈಕ್ಷಣಿಕ ಮತ್ತು ಸಾಮಾಜಿಕ ಸೌಹಾರ್ದತೆಯ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಈಗ ನಿಮ್ಮ ಹೆಗಲೇರಿದೆ. ಶಿಕ್ಷಣ, ಮಹಿಳಾ ಸಬಲೀಕರಣ, ಸಾಮಾಜಿಕ ಸಮಾನತೆ ಮತ್ತು ಜಾಗೃತಿ ಮೂಡಿಸುವ ನಿಮ್ಮ ಈ ಕಾರ್ಯಕ್ಕೆ ನಮ್ಮೆಲ್ಲರ ಪೂರ್ಣ ಬೆಂಬಲವಿದೆ.

Chikkaballapur News: ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಸಂದೀಪ್ ರೆಡ್ಡಿ

ಗಂಭೀರ ಕಾಯಿಲೆಗಳ ಆರಂಭಿಕ ಪತ್ತೆಗೆ ವಿಶೇಷ ಒತ್ತು

ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಖಾಸಗಿ ಆಸ್ಪತ್ರೆಗಳಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಾಗುತ್ತಿದ್ದರೂ ಮತ್ತು ವೈದ್ಯಕೀಯ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದರೂ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಇನ್ನೂ ಸಂಪೂರ್ಣವಾಗಿ ತಲುಪಿಲ್ಲ

ಕಲಿಕೆಯಲ್ಲಿ ಸ್ವಯಂ ಅನ್ವೇಷಣೆ, ಪ್ರಶ್ನಿಸುವ ಮನೋಭಾವ ಮುಖ್ಯ: ಐಐಟಿ ದೆಹಲಿ ನಿರ್ದೇಶಕ ಪ್ರೊ. ರಂಗನ್ ಬ್ಯಾನರ್ಜಿ

ಕಲಿಕೆಯಲ್ಲಿ ಸ್ವಯಂ ಅನ್ವೇಷಣೆ, ಪ್ರಶ್ನಿಸುವ ಮನೋಭಾವ ಮುಖ್ಯ: ಪ್ರೊ. ರಂಗನ್

PES University Convocation 2026: ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವದಲ್ಲಿ ಐಐಟಿ ದೆಹಲಿಯ ನಿರ್ದೇಶಕ ಪ್ರೊ. ರಂಗನ್ ಬ್ಯಾನರ್ಜಿ ಮಾತನಾಡಿದ್ದಾರೆ. ಕಲಿಕೆ ಪದವಿಯೊಂದಿಗೆ ನಿಲ್ಲುವುದಿಲ್ಲ, ಕಲಿಕೆಯ ಪ್ರಯಾಣವು ಜೀವಿತಾವಧಿಯದ್ದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಳೆಗಟ್ಟಿದ ಈಶ ಗ್ರಾಮೋತ್ಸವ: ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆಗೆ ವೇದಿಕೆ

ಚಿಕ್ಕಬಳ್ಳಾಪುರದಲ್ಲಿ ಕಳೆಗಟ್ಟಿದ ಈಶ ಗ್ರಾಮೋತ್ಸವ

ರೋಚಕ ಪೈಪೋಟಿಯ ಬಳಿಕ ಪುರುಷರ ವಾಲಿಬಾಲ್ ವಿಭಾಗದಲ್ಲಿ ಜಂಗಮಕೋಟೆ ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆದು ವಿಭಾಗೀಯ ಹಂತಕ್ಕೆ ಅರ್ಹತೆ ಗಳಿಸಿತು. ಮಾಸ್ತೇನಹಳ್ಳಿ ಗ್ರಾಮದ ಅಪ್ಪು ಬಾಯ್ಸ್ ತಂಡ ದ್ವಿತೀಯ, ಬೀಚಗಾನಹಳ್ಳಿ ತಂಡ ತೃತೀಯ ಹಾಗೂ ಸೋಮೇನಹಳ್ಳಿ ಬಾಯ್ಸ್ ತಂಡ ನಾಲ್ಕನೇ ಸ್ಥಾನ ಪಡೆಯಿತು.

Kaivara News: ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವ ಇಂದಿನಿಂದ ಪ್ರಾರಂಭ

ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವ ಇಂದಿನಿಂದ ಪ್ರಾರಂಭ

ಪ್ರಾತ:ಕಾಲ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ಗುರುಪೂಜೆ-ಸಂಗೀತೋತ್ಸವವು ಪ್ರಾರಂಭವಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದಲೇ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ನಾದಸ್ವರ ಕಛೇರಿ ಗಳೊಂದಿಗೆ ಆರಂಭವಾಗುತ್ತದೆ. ಗುರುಪೂಜಾ ಸಂಗೀತೋತ್ಸವದ ಅಂಗವಾಗಿ ನಿರಂತರ 72 ಗಂಟೆಗಳ ಕಾಲ ದೇಶದ ಹಲವಾರು ವಿದ್ವಾಂಸರುಗಳಿಂದ ಸಂಗೀತ ಸೇವೆ ಸಮರ್ಪಣೆಯಾಗುತ್ತದೆ.

ಸಮಸ್ಯೆಗಳನ್ನು ಅವಕಾಶಗಳಾಗಿ ಪರಿವರ್ತಿಸಿ ಸಮಾಜಕ್ಕೆ ಪರಿಹಾರ ನೀಡುವ ಮನೋಭಾವ ಬೆಳೆಸಿಕೊಳ್ಳಿ: ಸಂಸದ ಡಾ.ಕೆ.ಸುಧಾಕರ್ ಕರೆ

ಸಮಾಜಕ್ಕೆ ಪರಿಹಾರ ನೀಡುವ ಮನೋಭಾವ ಬೆಳೆಸಿಕೊಳ್ಳಿ

ಯಶಸ್ಸಿನ ಹಿಂದೆ ಕಠಿಣ ಪರಿಶ್ರಮ ಮತ್ತು ತ್ಯಾಗ ಅಡಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಬೆಳೆಯಬೇಕು. ಯಶಸ್ಸಿಗಿಂತ ಸಮಾಜಕ್ಕೆ ಎಷ್ಟು ಉಪಯುಕ್ತರಾಗಿದ್ದೀರಿ ಎಂಬುದೇ ವ್ಯಕ್ತಿತ್ವದ ನಿಜವಾದ ಮಾನದಂಡವಾಗಬೇಕು ಎಂದು ತಿಳಿಸಿದರು.

ಕರಾವಳಿ ಸಂಸ್ಕೃತಿಯ ಭಾಗವಾದ ʼಕಂಬಳʼ ತುಳುನಾಡಿನ ಸೀಮೆ ದಾಟಿ ಹೋಗಬಾರದು: ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ

ʼಕಂಬಳʼ ತುಳುನಾಡು ದಾಟಿ ಹೋಗಬಾರದು: ವಿಶ್ವ ಸಂತೋಷ ಭಾರತೀ ಸ್ವಾಮೀಜಿ

ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತುಳುವೆರೆ ಚಾವಡಿ ವತಿಯಿಂದ ಆಯೋಜಿಸಿದ್ದ 28ನೇ ವರ್ಷದ 'ಪರ್ಬದ ಲೇಸ್' ಕಾರ್ಯಕ್ರಮದಲ್ಲಿ ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಮಾತನಾಡಿದ್ದಾರೆ. ಕಂಬಳ ಅಂದ್ರೆ ಬರೀ ಕೋಣಗಳ ಓಟವಲ್ಲ. ತುಳುನಾಡಿನ ಇತಿಹಾಸ, ಪರಂಪರೆ ಹಾಗೂ ದೈವರಾಧನೆಯ ಹಿನ್ನೆಲೆಯಿಂದ ಕಂಬಳ ಪಾವಿತ್ರ್ಯತೆ ಪಡೆದುಕೊಂಡಿದೆ. ಹಾಗಾಗಿ ಕಂಬಳ ಪ್ರತಿಷ್ಠೆಯ ಅಖಾಡವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

CT Ravi: ಮುಸ್ಲಿಂ ಸಮಾಜದ ಬಗ್ಗೆ ನಾನು ಎಂದೂ ಮಾತಾಡಿಲ್ಲ, ದುಷ್ಕೃತ್ಯದಲ್ಲಿ ತೊಡಗುವವರ ವಿರುದ್ಧವಷ್ಟೇ ಟೀಕಿಸಿದ್ದೇನೆ: ಎಫ್‌ಐಆರ್ ಬಗ್ಗೆ ಸಿ.ಟಿ. ರವಿ ಆಕ್ರೋಶ

ಮುಸ್ಲಿಂ ಸಮಾಜದ ಬಗ್ಗೆ ನಾನು ಎಂದೂ ಮಾತಾಡಿಲ್ಲ: ಸಿ.ಟಿ. ರವಿ

ತಮ್ಮ ವಿರುದ್ಧ ಪೊಲೀಸರು ಎಫ್‌ಐಆರ್ ಹಾಕಿರುವುದಕ್ಕೆ ಸುದ್ದಿಗೋಷ್ಠಿಯಲ್ಲಿ ಸಿ.ಟಿ.ರವಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಜಿಹಾದಿಗಳು, ಭಯೋತ್ಪಾದಕರು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಕ್ರಿಮಿನಲ್‌ಗಳ ವಿರುದ್ಧ ಮಾತನಾಡಿದ್ದೇನೆ. ಮುಸ್ಲಿಂ ಸಮಾಜದ ವಿರುದ್ಧ ಒಂದೇ ಒಂದು ಪದವೂ ಬಳಸಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಜೋಶಿ ಸಮರ್ಥವಾಗಿ ಶಿಕ್ಷಣ ಖಾತೆ ನಿಭಾಯಿಸಲಿದ್ದಾರೆ: ಡಾ.ರಾಧಾಮೋಹನ್ ದಾಸ್ ಅಗರ್ವಾಲ್

ಜೋಶಿ ಸಮರ್ಥವಾಗಿ ಶಿಕ್ಷಣ ಖಾತೆ ನಿಭಾಯಿಸಲಿದ್ದಾರೆ: ರಾಧಾಮೋಹನ್ ದಾಸ್

ಪ್ರಲ್ಹಾದ್‌ ಜೋಶಿ ಅವರು ಸಂಸದೀಯ ವ್ಯವಹಾರ, ಕಲ್ಲಿದ್ದಲು ಖಾತೆ ಸಚಿವ ಸೇರಿದಂತೆ ವಿವಿಧ ಖಾತೆಗಳನ್ನು ನಿಭಾಯಿಸಿದವರು. ಅವರು ಶಿಕ್ಷಣ ಖಾತೆಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ತಿಳಿಸಿದ್ದಾರೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಜನ್ಮದಿನ ಸಂಭ್ರಮ; 4 ನೂತನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗ ಆರಂಭ

ಮಧುಸೂದನ ಸಾಯಿ ಜನ್ಮದಿನ ಸಂಭ್ರಮ; 4 ವೈದ್ಯಕೀಯ ವಿಭಾಗ ಆರಂಭ

SMSIMSR Medical college: ಸದ್ಗುರು ಶ್ರೀ ಮಧುಸೂದನ ಸಾಯಿ ಅವರ 47ನೇ ಜನ್ಮದಿನದ ಅಂಗವಾಗಿ ಮುದ್ದೇನಹಳ್ಳಿಯ 'ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ'ದಲ್ಲಿ 4 ನೂತನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗಗಳನ್ನು ಉದ್ಘಾಟಿಸಲಾಗಿದೆ.

KPSC scam: ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ತಾತ್ಕಾಲಿಕ ತಡೆ; ಅಕ್ರಮ ತನಿಖೆಗೆ ಆಂತರಿಕ ವಿಚಾರಣಾ ಉಪಸಮಿತಿ ರಚಿಸಿದ ಕೆಪಿಎಸ್‌ಸಿ

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ತನಿಖೆಗೆ KPSC ಉಪಸಮಿತಿ ರಚನೆ

KPSC Veterinary Officer Recruitment: ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದ್ದು, ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MLA S N Subbareddy: ಶಾಸಕ ಸುಬ್ಬಾರೆಡ್ಡಿ ವಿರುದ್ಧ ಸುಳ್ಳು ಆರೋಪ: ಸಂದೇಶ್ ವಿರುದ್ಧ ಎಫ್‌ಐಆರ್‌ಗೆ ಕಾಂಗ್ರೆಸ್ ಆಗ್ರಹ

ಜಮೀನು ಕಬಳಿಕೆ ಆರೋಪ ನಿರಾಧಾರ ಎಂದ ಮುಖಂಡರು

ಕೃಷ್ಣೇಗೌಡ ಮಾತನಾಡಿ, ಜು.25ರಂದು ಸಂದೇಶ್ ಹಾಗೂ ಅವರ ಬೆಂಬಲಿಗರು ಸೋಮಲಾಪುರ ಜಮೀನಿನ ಬಳಿ ತೆರಳಿ ಸ್ಥಳೀಯ ನಿವಾಸಿ ಗಂಗಾಧರಪ್ಪ ಅವರನ್ನು ಪ್ರಶ್ನಿಸಿದ್ದು, ಆ ವೇಳೆ ಶಾಸಕರಿಗೆ ಅಲ್ಲಿ ಯಾವುದೇ ಜಮೀನು ಇಲ್ಲ ಎಂದು ಗಂಗಾಧರಪ್ಪ ಸ್ಪಷ್ಟಪಡಿಸಿದ್ದಾರೆ. ಇದರಿಂದ ಆಕ್ರೋಶ ಗೊಂಡ ಸಂದೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.

Chinthamani News: ಮುತ್ತುಕದಹಳ್ಳಿಯಲ್ಲಿ ಮಾರಮ್ಮ, ಚೌಡೇಶ್ವರಮ್ಮ, ಪಟಾಲಮ್ಮ ದೇವಿಯರ ವೈಭವದ ವಾರ್ಷಿಕೋತ್ಸವ

ಎರಡನೇ ವರ್ಷದ ಉತ್ಸವಕ್ಕೆ ನೂರಾರು ಭಕ್ತರ ಸಾಕ್ಷಿ

ಗ್ರಾಮದ ಯುವಕರು, ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಜಾತಿ, ಧರ್ಮ, ಪಕ್ಷ ಭೇದವಿಲ್ಲದೆ ಒಗ್ಗಟ್ಟಿನಿಂದ ಉತ್ಸವವನ್ನು ಆಯೋಜಿಸಿದ್ದು ವಿಶೇಷವಾಗಿತ್ತು. ಹಲವು ದಶಕಗಳ ಹಿಂದೆ ಸ್ಥಗಿತ ಗೊಂಡಿದ್ದ ಈ ಸಂಪ್ರದಾಯವನ್ನು ಕಳೆದ ವರ್ಷ ಪುನರಾರಂಭಿಸಲಾಗಿದ್ದು, ಎರಡನೇ ವರ್ಷದ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗಿದೆ

Gubbi News: ಪ್ರಸ್ತುತ ದುಡಿದು ಹಂಚಿ ತಿನ್ನುವ ಗುಣ ಬೇಕಿದೆ : ಶ್ರೀ ಚಂದ್ರಶೇಖರ ಸ್ವಾಮೀಜಿ

ಪ್ರಸ್ತುತ ದುಡಿದು ಹಂಚಿ ತಿನ್ನುವ ಗುಣ ಬೇಕಿದೆ

ಮಕ್ಕಳಿಗೆ ಸನ್ಮಾನಿಸಿ ಗೌರವಿಸಿ ಪುರಸ್ಕಾರ ನೀಡುವ ಕೆಲಸ ಕಳೆದ 20 ವರ್ಷದಿಂದ ನಡೆಸಿರುವ ನೌಕರರ ಸಂಘ ಮೌಲ್ಯಾಧಾರಿತ ಅರಿವು ನೀಡುವ ವೇದಿಕೆ ಆಯೋಜಿಸುತ್ತಾರೆ. ಇಲ್ಲಿ ಸೇರುವ ಆಸ್ತಿಕ ಬಂಧುಗಳು ತಮ್ಮ ದಾನಧರ್ಮ ಎಂದಿಗೂ ನಿಲ್ಲಿಸದೆ ಹೆಚ್ಚಿಸಿ ನಮ್ಮ ಸಮುದಾಯ ಕಟ್ಟಬೇಕು. ಈ ಜೊತೆಗೆ ಕೋಟಿಗಟ್ಟಲೆ ಆಸ್ತಿ ಹೊಂದಿದ ನಮ್ಮ ಜನರಲ್ಲಿ ಸ್ವಾರ್ಥ ಬೆಳೆದು ಈಗ ವಾರಸುದಾರ ಇಲ್ಲದೇ ಹಾಗೆಯೇ ಆಸ್ತಿ ಬಿದ್ದಿರುವ ನಿದರ್ಶನ ನಮ್ಮ ತಾಲ್ಲೂಕಿನಲ್ಲಿದೆ

ಹಿರಿಯೂರಿನ 114 ಕೆರೆ ತುಂಬಿಸುವುದು ಸುಧಾಕರ್ ಕನಸು, ಯೋಜನೆಗೆ 244 ಕೋಟಿ ರೂ.: ಸಿಎಂ

ಸುಧಾಕರ್ ಕನಸಿನ ಯೋಜನೆಗೆ 244 ಕೋಟಿ ರೂ. ಅನುದಾನ: ಸಿಎಂ

ರೈತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಸುಧಾಕರ್ ಅವರ ಬಹುದೊಡ್ಡ ಕನಸಾಗಿದ್ದ 114 ಕೆರೆಗಳಿಗೆ ನೀರುಣಿಸುವ ಯೋಜನೆಗೆ ಅನುಮೋದನೆ ನೀಡಬೇಕೆಂದು ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಒತ್ತಾಯಿಸಿದ್ದರು. ಆ ಯೋಜನೆ ಜಾರಿಗೊಳಿಸಲು ನಾವು ಮುಂದಾಗಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Harapanahalli News: ಶಿಕ್ಷಕರು ರಾಷ್ಟ್ರದ ನಿರ್ಮಾಪಕರು ಇದ್ದಂತೆ : ಶ್ರೀ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು

ಶಿಕ್ಷಕರು ರಾಷ್ಟ್ರದ ನಿರ್ಮಾಪಕರು ಇದ್ದಂತೆ

ಹರಪನಹಳ್ಳಿ ತೆಗ್ಗಿನ ಮಠದ ಟಿ.ಎಂ.ಎ.ಇ ಸಂಸ್ಥೆಯಲ್ಲಿ ಅತಿ ಹೆಚ್ಚು ಟಿ.ಸಿ.ಹೆಚ್.ಶಿಕ್ಷಣ ಪಡೆದು ಶಿಕ್ಷಕರಾಗಿ ವೃತ್ತಿಜೀವನ ನಡೆಸುತ್ತಿರುವವರು ಬಹಳ ಜನ ಶಿಕ್ಷಕರು ಇದ್ದಾರೆ. ಅವರನ್ನೂ ನೋಡಿದ್ದು ಬಹಳ ಸಂತೋಷವಾಗಿದೆ. ಸಮಾಜದ ಬದಲಾವಣೆಯ ತರುವ ಏಕೈಕ ವೃತ್ತಿ ಯಾವುದಾರೂ ಇದ್ದರೆ ಆದು ಶಿಕ್ಷಕ ವೃತ್ತಿ ಆ ವೃತ್ತಿಯನ್ನು ಗೌರವಾಯುತವಾಗಿ ನಡೆದುಕೊಳ್ಳುವುದು ಎಲ್ಲರ ಆದ್ಯಕರ್ತವ್ಯ

Pravasi Prapancha: ತಂಬುಳಿ ಮನೆ...ಅಜ್ಜಿಯ ಕೈರುಚಿ ನೆನಪಿಸುವ ಮನೆ; ಮಲೆನಾಡ ಖಾದ್ಯ ರಾಜಧಾನಿಯಲ್ಲಿ

ತಂಬುಳಿ ಮನೆ ಎಂಬ ಅಜ್ಜಿಯ ಕೈರುಚಿ ನೆನಪಿಸುವ ಮನೆ

Tambuli Mane: ಆ ಕಳೆದುಹೋಗುತ್ತಿರುವ 'ಮಲೆನಾಡಿನ ಅಪ್ಪಟ ರುಚಿ' ಮತ್ತು 'ಆರೋಗ್ಯಕರ ಆಹಾರ ಪದ್ಧತಿ'ಯನ್ನು ಮತ್ತೆ ಜೀವಂತವಾಗಿಸುತ್ತಿರುವ ಒಂದು ಅದ್ಭುತ ಜಾಗವೇ ʼತಂಬುಳಿ ಮನೆʼ. ಇದನ್ನು ರಾಜ್ಯವ್ಯಾಪಿ ಬಡಿಸಬೇಕು ಎಂದು ಕನಸು ಕಂಡವರು ಮಲೆನಾಡಿನವರೇ ಅದ ಕಾರ್ತಿಕ್‌ ಎಚ್‌. ಶ್ರೀಧರ್‌ ಹಾಗೂ ಅವರ ಸ್ನೇಹಿತರು.

AICC: ಸಂಘಟನೆ ಸೃಜನ್ ಅಭಿಯಾನಕ್ಕೆ ವೇಗ; ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಯುವ ನಾಯಕತ್ವ, ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಗೆ ಆದ್ಯತೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜು.25ರಿಂದಲೇ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 16ರೊಳಗೆ ವರದಿ ಸಲ್ಲಿಸಲಾಗುವುದು ಎಂದರು. ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಹಾಗೂ ಪ್ರಜಾತಾಂತ್ರಿಕ ವಾಗಿರಲೆಂಬ ಉದ್ದೇಶದಿಂದ ಎಐಸಿಸಿ ವಿಶೇಷ ವೀಕ್ಷಕರನ್ನು ನೇಮಕ ಮಾಡಿದ್ದು, ಅವರು ಸ್ಥಳೀಯ ನಾಯಕರು, ಜನಪ್ರತಿನಿಧಿಗಳು, ಬ್ಲಾಕ್ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪಕ್ಷದ ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸಿ ಸಮಗ್ರ ವರದಿ ಸಿದ್ಧಪಡಿಸಲಿದ್ದಾರೆ

Chikkaballapur News: ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿದ 4237 ರಕ್ತದಾನಿಗಳಿಗೆ ಕೋಟಿ ನಮನ: ಕೆ.ವಿ. ನವೀನ್ ಕಿರಣ್

ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿದ 4237 ರಕ್ತದಾನಿಗಳಿಗೆ ಕೋಟಿ ನಮನ

ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸ್ವಯಂಪ್ರೇರಿತ ರಕ್ತದಾನದ ಪಾತ್ರ ಅತ್ಯಂತ ಮಹತ್ವ ದ್ದಾಗಿದೆ. ಹಾಲು, ರೇಷ್ಮೆ ಮತ್ತು ಹೂವಿನ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಚಿಕ್ಕಬಳ್ಳಾಪುರ ಜಿಲ್ಲೆ, ಇದೀಗ ರಕ್ತದಾನದ ಕ್ಷೇತ್ರದಲ್ಲಿಯೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ಸಂಗತಿಯಾಗಿದೆ

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಕಾಮುಕನಿಗೆ ಕಪಾಳಮೋಕ್ಷ ಮಾಡಿದ ಚಾಲಕ; ವಿಡಿಯೊ ವೈರಲ್‌

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಪಾಠ ಕಲಿಸಿದ ಬಸ್‌ ಚಾಲಕ

Viral News: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್‌ನಲ್ಲಿ ಮಹಿಳೆ ಜತೆ ಕಾಮುಕನೊಬ್ಬ ಅಸಭ್ಯ ವರ್ತನೆ ತೋರಿದ್ದಾನೆ‌. ಬಸ್ ಚಾಲಕನಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಆತನಿಗೆ ಕಪಾಳಮೋಕ್ಷ ಮಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Loading...