ಸಿಎಂ ಕುರ್ಚಿ, ಇಬ್ಬರು ಮಹನೀಯರ ಸಾವು: ಕೋಡಿ ಶ್ರೀ ಭವಿಷ್ಯವಾಣಿ ಹೀಗಿದೆ!
ಹೊಸ ವರ್ಷದ ಆರಂಭದಲ್ಲೇ ರಾಜ್ಯ ರಾಜಕೀಯದ ಬಗ್ಗೆ ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬೀದರ್ನಲ್ಲಿ ಮಾತಾಡಿದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಸದ್ಯದ ರಾಜ್ಯ ರಾಜಕೀಯದ ಪರಿಸ್ಥಿತಿ ನೋಡಿದರೆ ಬದಲಾವಣೆ ಕಷ್ಟ. ಈ ಬಾರಿ ಕೂಡ ಸಿಎಂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸ್ತಾರೆ ಎಂದಿದ್ದಾರೆ.