ಚೀಟಿ ಹೆಸರಲ್ಲಿ 40 ಕೋಟಿ ವಂಚಿಸಿ ದಂಪತಿ ಪರಾರಿ!
Chit fund scam: ಬೆಂಗಳೂರಿನ ಜರಗನಹಳ್ಳಿಯಲ್ಲಿ ವಂಚನೆ ಪ್ರಕರಣ ನಡೆದಿದೆ. ಚೀಟಿ ಹೆಸರಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿಗೆ ವಂಚಿಸಿ, 40 ಕೋಟಿ ರೂ.ಗಳೊಂದಿಗೆ ದಂಪತಿ ಪರಾರಿಯಾಗಿದ್ದಾರೆ. ವಂಚನೆಗೆ ಒಳಗಾದವರು ನ್ಯಾಯ ಕೊಡಿಸಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ.