KCET ವಿದ್ಯಾರ್ಥಿಗಳಿಗೆ ಶಾಕ್! ಕೌನ್ಸೆಲಿಂಗ್ ಮುಂದೂಡಿದ ಕೆಇಎ
ಯುಜಿ ಸಿಇಟಿ ಫಲಿತಾಂಶ ಈಗಾಗಲೇ ಹೊರ ಬಿದ್ದಿದ್ದು ವಿದ್ಯಾರ್ಥಿಗಳಿಗೆ ಇದೀಗ ಕೆಇಎ ಶಾಕ್ ನೀಡಿದೆ. ಉನ್ನತ ಶಿಕ್ಷಣ ಇಲಾಖೆಯಿಂದ ಅಂತಿಮ ಸೀಟ್ ಮ್ಯಾಟ್ರಿಕ್ಸ್ (ಸೀಟುಗಳ ಹಂಚಿಕೆ ಪಟ್ಟಿ) ಮತ್ತು ಶುಲ್ಕದ ರಚನೆ ಸಿಗುವುದು ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡಿದೆ.