ಚಿಂತಾಮಣಿ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಢಿಕ್ಕಿ
ಚಿಂತಾಮಣಿ-ಶಿಡ್ಲಘಟ್ಟ ರಸ್ತೆಯ ಉಪ್ಪರಪೇಟೆ ಬಳಿ ರಾತ್ರಿ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ತೀವ್ರವಾಗಿ ಗಾಯ ಗೊಂಡಿದ್ದಾರೆ. ಅಪಘಾತದಲ್ಲಿ ಶಿಡ್ಲಘಟ್ಟ ಪಟ್ಟಣದ ನಿವಾಸಿಗಳಾದ ಕೃಷ್ಣ (21 ವರ್ಷ), ರಮಾದೇವಿ(40 ವರ್ಷ) ನಿಜಾಮುಲ್ಲಾ(40 ವರ್ಷ), ಶಾಮೀರ್ (25 ವರ್ಷ)ಎಂದು ಗುರುತಿಸಲಾಗಿದ್ದು, ಇವರು ತೀವ್ರವಾಗಿ ಗಾಯಗೊಂಡಿದ್ದಾರೆ.