ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

MLA B.N. Ravikumar: ಹಿಂದೂ ರುದ್ರಭೂಮಿ ದುರಸ್ತಿ ಮಾಡಲು ಶಾಸಕ ಬಿ.ಎನ್.ರವಿಕುಮಾರ್‌ಗೆ ಮನವಿ ಸಲ್ಲಿಕೆ

ಹಿಂದೂ ರುದ್ರಭೂಮಿ ದುರಸ್ತಿ ಮಾಡಲು ಮನವಿ ಸಲ್ಲಿಕೆ

ಶಿಡ್ಲಘಟ್ಟ ನಗರದ ಕನಕ ನಗರದಲ್ಲಿನ ಹಿಂದೂ ರುದ್ರ ಭೂಮಿಯ ನಿರ್ವಹಣೆ ಇಲ್ಲದೇ ಸೊರಗಿದೆ. ಈ ಕೂಡಲೆ ಇದರ ಅವ್ಯವಸ್ಥೆ ಸರಿಪಡಿಸಬೇಕು. ರುದ್ರ ಭೂಮಿಯ ಕಾಂಪೌಂಡ್, ಗಿಡಗಳು, ಮುಳ್ಳು ಪೊದೆಗಳಲ್ಲಿ ಹುಳ ಹುಪ್ಪಟಗಳು ಸೇರಿದ್ದು ಇದನ್ನು ಸ್ವಚ್ಛ ಮಾಡಿಸಬೇಕು.ಇನ್ನು ಸ್ಮಶಾನದಲ್ಲಿ ಸ್ನಾನಗೃಹದ ವ್ಯವಸ್ಥೆ ಮಾಡಿ ಇದಕ್ಕೆ ನೀರಿನ ಸರಬರಾಜು ಸೇರಿ ಅಗತ್ಯ ಮೂಲಸೌಕರ್ಯ ಒದಗಿಸ ಬೇಕು.

MLA SN Subbareddy: ಶೀಘ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು 2 ಕೋಟಿ ಬಿಡುಗಡೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಶೀಘ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು 2 ಕೋಟಿ ಬಿಡುಗಡೆ

ಅನೇಕ ವರ್ಷಗಳಿಂದ ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ದಲಿತಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದೆ. ಆದರೆ ಅಂಬೇಡ್ಕರ್ ಭವನ ನಿರ್ಮಾಣ ಆಗಿಲ್ಲ. ಅಂಬೇಡ್ಕರ್ ಭವನ ನಿರ್ಮಾಣ ಬಗ್ಗೆ ವಿಧಾನ ಸಭೆಯಲ್ಲಿ ಅಧಿವೇಶನ ದಲ್ಲಿ   ಪ್ರಸ್ತಾಪಿಸುವಂತೆ ಶಾಸಕರಿಗೆ ಮನವಿ ಮಾಡಿದರು

MLA SN Subbareddy: ಗುಡಿಬಂಡೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರು ಮಾಡಿದ ಸ್ಥಳ ಪರಿಶೀಲನೆ ಮಾಡಿದ ಶಾಸಕ

ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರು ಮಾಡಿದ ಸ್ಥಳ ಪರಿಶೀಲನೆ ಮಾಡಿದ ಶಾಸಕ

ಗುಡಿಬಂಡೆಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದು ನನ್ನ ಸುಮಾರು ದಿನಗಳ ಕನಸಾಗಿದೆ. ಈ ಭಾಗದ ಕ್ರೀಡಾಪಟುಗಳು ಸೇರಿದಂತೆ ಅನೇಕರು ಕ್ರೀಡಾಂಗಣ ನಿರ್ಮಾಣಕ್ಕೆ ಮನವಿ ಮಾಡುತ್ತಿದ್ದಾರೆ. ಅವರ ಮನವಿ ಮೇರೆಗೆ ಗುಡಿಬಂಡೆ ಹೊರವಲಯದ ಅಮಾನಿಬೈರಸಾಗರ ಕೆರೆಯ ಬಳಿ 6 ಎಕರೆ ಜಮೀನನ್ನು ಸಹ ಗುರ್ತಿಸ ಲಾಗಿದೆ. ಜೊತೆಗೆ ಎರಡು ಕೋಟಿ ಅನುದಾನ ಸಹ ಬಿಡುಗಡೆಯಾಗಿದೆ.

Gauribidanur News: ಡಿ.20ರಂದು ಸರಕಾರಿ ನೌಕರರ ಸಮಾವೇಶ: ರಾಜ್ಯಾಧ್ಯಕ್ಷ ಷಡಕ್ಷರಿ ಭಾಗಿ

ಡಿ.20ರಂದು ಸರಕಾರಿ ನೌಕರರ ಸಮಾವೇಶ :ರಾಜ್ಯಾಧ್ಯಕ್ಷ ಷಡಕ್ಷರಿ ಭಾಗಿ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಕ್ಷರಿ, ತಹಸೀಲ್ದಾರ್ ಕೆ.ಎಂ. ಅರವಿಂದ್, ತಾಪಂ ಇಓ ಜಿ.ಕೆ. ಹೊನ್ನಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ ಎಸ್ ಗೌಡ ನಾಯ್ಕರ್, ಬಿಇಓ ಜಿ. ಗಂಗರೆಡ್ಡಿ ಭಾಗವಹಿಸ ಲಿದ್ದು, ತಾಲೂಕು ಅಧ್ಯಕ್ಷ ಎನ್.ಆರ್. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ

Prof. Dr. Krishna Gowda: ಕಲಿಕೆಯ ಭಾಷೆ ಇಂಗ್ಲಿಷ್ ಆದರೂ ಹೃದಯದ ಭಾಷೆ ಕನ್ನಡವಾಗಿರಬೇಕು : ಪ್ರೊ.ಡಾ.ಕೃಷ್ಣೇಗೌಡ ಕರೆ

ಕಲಿಕೆಯ ಭಾಷೆ ಇಂಗ್ಲಿಷ್ ಆದರೂ ಹೃದಯದ ಭಾಷೆ ಕನ್ನಡವಾಗಿರಬೇಕು

ಭಾಷೆ ಎನ್ನುವುದು ಕೇವಲ ಸಂವಹನಕ್ಕಿರುವ ಮಾರ್ಗ ಮಾತ್ರವಲ್ಲ ಬದಲಿಗೆ ಅದೊಂದು ಅಸ್ಮಿತೆ, ವ್ಯಕ್ತಿತ್ವದ ಹೆದ್ದಾರಿ. ಪ್ರಪಂಚದ ಅತ್ಯಂತ ಶಕ್ತಿಯುತ ಹಾಗೂ ಅದ್ಭುತ ಅರಿವಿನ ಭಾಷೆ ಎಂದರೆ ಅದು ಮಾತೃಭಾಷೆಯಾದ ಕನ್ನಡವಾಗಿದೆ ಎಂದರು. ಬದುಕು ಇಲ್ಲದಿದ್ದರೆ, ಕೇವಲ ಭಾಷೆಗೆ ಅರ್ಥ ಇರುವುದಿಲ್ಲ. ಅದಕ್ಕೆ ಅರ್ಥವನ್ನು ಕೊಟ್ಟಿದ್ದು ನಾವು.

Karnataka Women Writers' Association: ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿ ಆರ್ ಸುನಂದಮ್ಮ ಆಯ್ಕೆ

ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿ ಆರ್ ಸುನಂದಮ್ಮ ಆಯ್ಕೆ

ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಡಾ. ಆರ್ ಸುನಂದಮ್ಮ 471 ಮಾತುಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಎದುರಾಳಿ ನಿರ್ಮಲ ಯಲಿಗಾರ್ 282 ಮತಗಳನ್ನು ಪಡೆದು ಪರಾಜಿತರಾದರು.ಒಟ್ಟು 757 ಮತಗಳ ಪೈಕಿ 04 ಮತಗಳು ಅಸಿಂಧುವಾದರೆ ಉಳಿದವು ಚಲಾವಣೆಯಾದವು.

ಜಿಬಿಎ ಚುನಾವಣೆ; ನಾಳೆಯಿಂದ 369 ವಾರ್ಡ್‌ಗಳ ಆಕಾಂಕ್ಷಿಗಳ ಅರ್ಜಿ ಸ್ವೀಕಾರ: ಡಿ.ಕೆ. ಶಿವಕುಮಾರ್

ಜಿಬಿಎ ಚುನಾವಣೆ; ನಾಳೆಯಿಂದ ಆಕಾಂಕ್ಷಿಗಳ ಅರ್ಜಿ ಸ್ವೀಕಾರ ಎಂದ ಡಿಕೆಶಿ

ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಮತ ಕಳ್ಳತನ ವಿರುದ್ಧ ನಾವು ಆರಂಭಿಸಿರುವ ಹೋರಾಟ ಮುಂದುವರಿಯಲಿದೆ. ಪ್ರತಿ ಕ್ಷೇತ್ರದಲ್ಲಿ ನಾವು ಲೀಗಲ್ ಬ್ಯಾಂಕ್ ಸ್ಥಾಪಿಸುತ್ತೇವೆ. ನಮ್ಮ ಪಕ್ಷದ ಪರ ಇರುವ ವಕೀಲರನ್ನು ಇದರಲ್ಲಿ ಸೇರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬಿಜೆಪಿಯ 'ಮತಗಳ್ಳತನ' ಸ್ವಾತಂತ್ರ್ಯಾನಂತರ ದೇಶಕ್ಕೆ ಎದುರಾದ ಅತಿದೊಡ್ಡ ಬೆದರಿಕೆ: ಸಿಎಂ ಸಿದ್ದರಾಮಯ್ಯ

'ಮತಗಳ್ಳತನ' ಸ್ವಾತಂತ್ರ್ಯಾನಂತರ ದೇಶಕ್ಕೆ ಎದುರಾದ ಅತಿದೊಡ್ಡ ಬೆದರಿಕೆ: ಸಿಎಂ

Congress rally in Delhi: ಮತಗಳ್ಳತನ ವಿರುದ್ಧ ಕಾಂಗ್ರೆಸ್‌ ವತಿಯಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಬೃಹತ್‌ ರ‍್ಯಾಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. "ಮತಗಳ್ಳತನ" ಕೇವಲ ಸಂಖ್ಯೆಗಳ ಮಾತಲ್ಲ. ಇದು ಘನತೆ, ಸಮಾನತೆ ಮತ್ತು ನಮ್ಮ ಗಣರಾಜ್ಯದ ಆತ್ಮದ ಬಗ್ಗೆಗಿನ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

5 ದಶಕಗಳ ರಾಜಕೀಯ ಜೀವನದಲ್ಲಿ ಒಮ್ಮೆ ಮಾತ್ರ ಸೋಲು ಕಂಡಿದ್ದ ಶಾಮನೂರು ಶಿವಶಂಕರಪ್ಪ!

5 ದಶಕಗಳ ರಾಜಕೀಯದಲ್ಲಿ ಒಮ್ಮೆ ಮಾತ್ರ ಸೋಲು ಕಂಡಿದ್ದ ಶಾಮನೂರು!

Shamanur Shivashankarappa: ಶಾಮನೂರು ಶಿವಶಂಕರಪ್ಪ ಅವರು ತಮ್ಮ 64ನೇ ವಯಸ್ಸಿಯನಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಚುನಾವಣೆಯಲ್ಲಿ ಗೆಲುವು ಪಡೆದಿದ್ದರು. ದಾವಣಗೆರೆಯ ಬಾಪೂಜಿ ಎಜುಕೇಷನಲ್‌ ಅಸೋಸಿಯೇಷನ್ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

92ನೇ ಇಳಿ ವಯಸ್ಸಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಶಾಮನೂರು ಶಿವಶಂಕರಪ್ಪ

92ನೇ ವಯಸ್ಸಿನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಮನೂರು ಶಿವಶಂಕರಪ್ಪ

Shamanur Shivashankarappa: 94 ವರ್ಷದ ಹಿರಿಯ ರಾಜಕಾರಣಿ, ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ದೇಶದ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2023ರಲ್ಲಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ 92 ವರ್ಷ ವಯಸ್ಸಾಗಿತ್ತು.

ಕಳಚಿದ ಕಾಂಗ್ರೆಸ್‌ನ ಹಿರಿಯ ಕೊಂಡಿ; ಶಾಮನೂರು ಶಿವಶಂಕರಪ್ಪ ನಿಧನಕ್ಕೆ ವಿವಿಧ ರಾಜಕೀಯ ನಾಯಕರಿಂದ ಸಂತಾಪ

ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಿಎಂ, ಡಿಸಿಎಂ ಸೇರಿ ಗಣ್ಯರ ಸಂತಾಪ

Shamanur shivashankarappa Death: ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ (ಡಿಸೆಂಬರ್‌ 14) ಸಂಜೆ ನಿಧನರಾದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು, ವಿವಿಧ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

Shamanur shivashankarappa Death: ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ನಿಧನ

ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ನಿಧನ

ಶಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಶಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಭಾನುವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಇವರು 6 ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ.

Bangalore News: ಭವಿಷ್ಯದ ತಂತ್ರಜ್ಞಾನಕ್ಕೆ ವೇದಿಕೆಯಾದ ಮಾಹೆ ಬೆಂಗಳೂರು: 'ಸೂಪರ್‌ಕಂಪ್ಯೂಟಿಂಗ್ ಇಂಡಿಯಾ' ಸಮ್ಮೇಳನಕ್ಕೆ ತೆರೆ

ಭವಿಷ್ಯದ ತಂತ್ರಜ್ಞಾನಕ್ಕೆ ವೇದಿಕೆಯಾದ ಮಾಹೆ ಬೆಂಗಳೂರು

ಮಾಹೆ ಬೆಂಗಳೂರು ಕ್ಯಾಂಪಸ್‌ ಅನ್ನು ತಂತ್ರಜ್ಞಾನ ಹಾಗೂ ಅಂತರರಾಷ್ಟ್ರೀಯ ಸಂಶೋಧನಾ ಸಹಯೋಗದ ಹಬ್ ಆಗಿ ರೂಪಿಸುವಲ್ಲಿ ಈ ಸಮ್ಮೇಳನ ಪರಿಣಾಮಕಾರಿಯಾಯಿತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದ್ದ ಈ ಕಾರ್ಯಕ್ರಮದಲ್ಲಿ ಉನ್ನತ ಮಟ್ಟದ ತಾಂತ್ರಿಕ ಚರ್ಚೆಗಳು ಮತ್ತು ವಿಷಯ ಮಂಡನೆಗಳು ನಡೆದವು.

‘ಸ್ವಯಂಸೇವಕರು ನಿಜವಾದ ಬದಲಾವಣೆಯ ಸೃಷ್ಟಿಕರ್ತರು’

ಸ್ವಯಂಸೇವಕರು ನಿಜವಾದ ಬದಲಾವಣೆಯ ಸೃಷ್ಟಿಕರ್ತರು

CRY ದಕ್ಷಿಣದ ಪ್ರಾದೇಶಿಕ ನಿರ್ದೇಶಕ ಜಾನ್ ರಾಬರ್ಟ್ಸ್ ಅವರು ಸ್ವಯಂಸೇವಕರನ್ನು “ನಿಜವಾದ ಬದಲಾವಣೆಯ ಸೃಷ್ಟಿಕರ್ತರು” ಎಂದು ವರ್ಣಿಸಿದರು. ಅವರು ಒಂದು ಶಕ್ತಿಯುತ ಐತಿಹಾಸಿಕ ಉದಾಹರಣೆಯನ್ನು ನೆನಪಿಸಿದರು: “1990ರ ದಶಕದಲ್ಲಿ, ಶಿಕ್ಷಣ ಇನ್ನೂ ಮೌಲಿಕ ಹಕ್ಕಾಗಿರ ದಿದ್ದಾಗ, ದೇಶಾದ್ಯಂತ ಸ್ವಯಂಸೇವಕರು ‘ವಾಯ್ಸ್ ಆಫ್ ಇಂಡಿಯಾ’ ಎಂಬ ಬೃಹತ್ ಅಭಿಯಾನ ಪ್ರಾರಂಭಿಸಿ ದರು. ಒಂದು ಲಕ್ಷ ಪೋಸ್ಟ್‌ಕಾರ್ಡ್‌ಗಳನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸ ಲಾಯಿತು.

Koratagere News: ಕೊರಟಗೆರೆಯ 13 ಪೌರ ಕಾರ್ಮಿಕರಿಗೆ ಮನೆ ಹಸ್ತಾಂತರಿಸಿದ ಗೃಹ ಸಚಿವ ಪರಮೇಶ್ವರ್‌

ಕೊರಟಗೆರೆ ಪಪಂ ಪೌರ ಕಾರ್ಮಿಕರಿಗೆ ಗೃಹ ಸಚಿವರಿಂದ ಗೃಹ ಭಾಗ್ಯ

ಕೊರಟಗೆರೆ ಪಟ್ಟಣದ ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಸಮೀಪ ನಿರ್ಮಿಸಲಾಗಿರುವ 13 ನೂತನ ಮನೆಗಳನ್ನು ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಉದ್ಘಾಟಿಸಿ, ಪೌರಕಾರ್ಮಿಕರಿಗೆ ಹಸ್ತಾಂತರಿಸಿದರು. ಪ್ರತಿ ಮನೆಯನ್ನು 7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಮಹಿಳೆಗೆ ವಂಚನೆ, ಲೈಂಗಿಕ ಕಿರುಕುಳ ಆರೋಪ; ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್‌ಐಆರ್‌

ಮಹಿಳೆಗೆ ಕಿರುಕುಳ; ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್‌ಐಆರ್‌

Brahmananda Guruji Case: ಸೈಟ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಲ್ಲದೆ, ಅದನ್ನು ವಾಪಸ್ ಕೇಳಿದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ?; ಕೊಹ್ಲಿ ಭಾಗಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ

Chinnaswamy Stadium" ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಲಿದೆಯೇ ಎಂಬುದು ಡಿ.16ರಂದು ಗೊತ್ತಾಗಲಿದೆ. ಈ ಪ್ರಕರಣದ ತನಿಖಾ ಪ್ರಗತಿ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್‌ ಸಿಐಡಿಗೆ ಸೂಚಿಸಿತ್ತು. ಅಂತೆಯೇ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದೆ

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ಹೋರಾಟ: ಡಿಸಿಎಂ ಡಿ.ಕೆ. ಶಿವಕುಮಾರ್

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ಹೋರಾಟ: ಡಿಕೆಶಿ

Congress Protest in Delhi: ದೇಶದ ಚುನಾವಣೆಗಳು ಈಗ ನ್ಯಾಯಸಮ್ಮತವಾಗಿಲ್ಲ. ಮತಕಳ್ಳತನ ಮಾಡಲಾಗುತ್ತಿದೆ. ಹೀಗಾಗಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂಬ ಸಂದೇಶವನ್ನು ಹೋರಾಟದ ಮೂಲಕ ನೀಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Chikkamagaluru News: ಪ್ರೀತಿಸಿದವಳಿಗೆ ಕೈಕೊಟ್ಟು ಬೇರೊಬ್ಬರ ಜೊತೆ ಮದುವೆ; ಕಲ್ಯಾಣ ಮಂಟಪಕ್ಕೆ ನುಗ್ಗಿ ಯುವತಿ ರಂಪಾಟ

ಪ್ರೀತಿಸಿದವನಿಗಾಗಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಯುವತಿ ರಂಪಾಟ

ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಕೈಕೊಟ್ಟು ಬೇರೊಬ್ಬಳ ಜೊತೆ ಮದುವೆಯಾಗುತ್ತಿದ್ದ ಯುವಕನ ಮದುವೆ ಮಂಟಪಕ್ಕೆ ಬಂದು ಗಲಾಟೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮದುವೆ ನಡೆದು ಮುಗಿದ ಬಳಿಕ ಯುವಕನ ಕುಟುಂಬಸ್ಥರು ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Sirsi News: ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ

ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ

ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ. ಆದರೆ ಹಳ್ಳಿಗಳ ಉಳಿಸಿಕೊಳ್ಳುವ ಕಾರ್ಯವನ್ನು ಗ.ನಾ. ಕೋಮಾರರಂಥವರು ಇಂಥ ಮಹನೀಯರು ಸಂಘಟಕರಾಗಿ ಸಮಾಜ ಸೇವೆಯ ಮೂಲಕ ನಿರ್ವಹಿಸುತ್ತಿದ್ದು ನಿಜಕ್ಕೂ ಪ್ರಶಂಸನೀಯ ಅಭಿನಂದನಾರ್ಹ ಎಂದು ವಿಮರ್ಶಕ ಸಾಹಿತಿ ಶ್ತೀಧರ ಬಳಗಾರ ಹೇಳಿದರು

Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಈ ಶಿಬಿರವು ಏಳು ದಿನಗಳ ಕಾಲ ಇರಲಿದ್ದು, ಇಲ್ಲಿಗೆ ಬರುವವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನ ಮೂರು ನಕಲಿ ಪ್ರತಿಗಳನ್ನು ತರಬೇಕು. ದಿವ್ಯಾಂಗರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಿಬಿರದ ಮಾರ್ಗದರ್ಶಕರಾದ ಗೌತಮ್‌ ಚಂದ್‌ ನಹಾರ್‌ ತಿಳಿಸಿದ್ದಾರೆ.

ಫುಟ್‌ʼಪಾತ್‌ ಪಾರ್ಕಿಂಗ್‌ ಹೆಚ್ಚಳ

ಫುಟ್‌ʼಪಾತ್‌ ಪಾರ್ಕಿಂಗ್‌ ಹೆಚ್ಚಳ

ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದರೆ ಸಾವಿರ ರುಪಾಯಿ ದಂಡ ವಿಧಿಸಲು ಅವಕಾಶವಿದೆ. ಇದೇ ರೀತಿ ಮುಂದುವರೆದರೆ ವಾಹನವನ್ನು ಟೋಯಿಂಗ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಇನ್ನು ವಾಹನವನ್ನು ಸಂಚರಿಸಿದರೆ, ಸಾವಿರ ರುಪಾಯಿ ದಂಡದೊಂದಿಗೆ, ಪುನಾರಾವರ್ತನೆ ಮಾಡಿದರೆ ನ್ಯಾಯಾಲಯದ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದು ಮಾಡುವುದಕ್ಕೂ ಅವಕಾಶ ನೀಡಲಾಗಿದೆ.

Anjali Nimbalkar: ವಿಮಾನದಲ್ಲಿ ಕುಸಿದು ಬಿದ್ದ ಮಹಿಳೆಗೆ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಚಿಕಿತ್ಸೆ; ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ವಿಮಾನದಲ್ಲಿ ಕುಸಿದು ಬಿದ್ದ ಮಹಿಳೆಗೆ ಮಾಜಿ ಶಾಸಕಿ ಡಾ. ಅಂಜಲಿ ಚಿಕಿತ್ಸೆ

CM Siddaramaiah: ವಿಮಾನದಲ್ಲಿ ತೀವ್ರ ಅಸ್ವಸ್ಥಗೊಂಡ ಯುವತಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕ ಮೂಲದ ಯುವತಿಯೊಬ್ಬರು ವಿಪರೀತ ನಡುಕ ಉಂಟಾಗಿ, ಆಕೆ ಸ್ಥಳದಲ್ಲೇ ಪ್ರಜ್ಞಾಹೀನರಾಗಿ ಕುಸಿದುಬಿದ್ದಿದ್ದರು.

ದಾವಣಗೆರೆ ಗಡಿ ಗ್ರಾಮದಲ್ಲಿ ನಿಗೂಢ ಶಬ್ದ; ಕಂಪಿಸಿದ ಭೂಮಿ, ಬೆಚ್ಚಿ ಬಿದ್ದ ಗ್ರಾಮಸ್ಥರು

ದಾವಣಗೆರೆ ಗಡಿ ಗ್ರಾಮದಲ್ಲಿ ನಿಗೂಢ ಶಬ್ದ; ಕಂಪಿಸಿದ ಭೂಮಿ

Davanagere News: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಶನಿವಾರ ರಾತ್ರಿ ಭಾರೀ ಶಬ್ಧವೊಂದು ಕೇಳಿ ಬಂದಿದ್ದು, ಜನರು ಬೆಚ್ಚಿ ಬಿದ್ದಿದ್ದಾರರೆ. ಕೆಲ ಕಡೆ ಭೂಮಿ ಕಂಪಿಸಿದ ಅನುಭವವೂ ಆಗಿದೆ ಎಂದು ತಿಳಿದು ಬಂದಿದೆ. ಚಿಕ್ಕಮಲ್ಲನಹೊಳೆ ಗ್ರಾಮವು ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಗಳ ಗಡಿಭಾಗದಲ್ಲಿದೆ.

Loading...