ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಅವರ 50 ನೇ ಹುಟ್ಟುಹಬ್ಬಕ್ಕೆ ಹೃದಯ ತಪಾಸಣಾ ಶಿಬಿರ

ಹುಟ್ಟುಹಬ್ಬಕ್ಕೆ ಹೃದಯ ತಪಾಸಣಾ ಶಿಬಿರ

ಜೆಡಿಎಸ್ ಪಕ್ಷ ಸಂಘಟನೆಯ ಮೂಲಕ ತಾಲ್ಲೂಕಿನಲ್ಲಿ ತನ್ನದೇ ವರ್ಚಸ್ಸು ಬೆಳೆಸಿಕೊಂಡ ನಾಗರಾಜು ಅವರ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆಗೆ ಅವರ ಅಭಿಮಾನಿಗಳು ಸಕಲ ಸಿದ್ಧತೆ ನಡೆಸಿದ್ದಾರೆ. ಇದೇ ತಿಂಗಳ 10 ಗುರುವಾರ ಬೆಳಿಗ್ಗೆ ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸೋಮಣ್ಣ ಸೇರಿದಂತೆ ಇನ್ನಿತರ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

Gubbi (Tumkur) News: ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡಲು ಬಿಡುವುದಿಲ್ಲ: ಹೇಮಾವತಿ ಹೋರಾಟ ಸಮಿತಿಯ ನಿರ್ಣಯ

ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡಲು ಬಿಡುವುದಿಲ್ಲ

ಮಕ್ಕಳೇ ಬೇಡ ಅಂತ ಇದ್ರೆ, ಗಂಡಾ ಹೆಣ್ಣಾ ಅಂತ ಟೆಸ್ಟ್ ಮಾಡ್ತೀವಿ ಅನ್ನುವಂತೆ ಯಾವ ಐಐಟಿಯು ಬೇಡ, ಯಾವ ನೈಟಿಯು ಬೇಡ ಎಂದು ವ್ಯಂಗ್ಯ ಪ್ರತಿಕ್ರಿಯಿಸಿದ ಅವರು 25 ವರ್ಷದಿಂದ ಶಾಸಕರು ಆಡಳಿತ ಮಾಡುತ್ತಿದ್ದಾರೆ. ಅವರಿಗೆ ರೈತರ ಆತಂಕದ ಚಿಂತನೆ ಇಲ್ಲ. ಹದಿನೈದು ದಿನದ ಹಿಂದೆ ಸಭೆಯ ದಿನಾಂಕ ನಿಗದಿಯಾಗಿತ್ತು

Assault case: ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ಪ್ರಕರಣ; ಪವಿತ್ರಾ ಗೌಡ ರೀತಿ ಸ್ಕೆಚ್ ಹಾಕಿದ 17 ವರ್ಷದ ಹುಡುಗಿ ಅರೆಸ್ಟ್‌!

ಯುವಕನ ಮೇಲೆ ಹಲ್ಲೆ ಕೇಸ್‌; 17 ವರ್ಷದ ಹುಡುಗಿಯ ಬಂಧನ

Assault case: ಬಂಧನವಾಗಿರುವ 17 ವರ್ಷದ ಹುಡಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಹಲ್ಲೆಗೊಳಗಾದ ಯುವಕ ಕುಶಾಲ್​ನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆದರೆ, ಎರಡು ವರ್ಷದ ಪ್ರೀತಿ ಕೆಲ ದಿನಗಳ ಹಿಂದೆಯಷ್ಟೇ ಬ್ರೇಕ್​ ಅಪ್​ ಆಗಿತ್ತು. ಯುವಕ ಅಶ್ಲೀಲ ಮೆಸೇಜ್‌ ಕಳುಹಿಸಿದ್ದರಿಂದ ಸ್ನೇಹಿತರಿಗೆ ಹೇಳಿ ಹಲ್ಲೆ ಮಾಡಿಸಿದ್ದಾಳೆ.

Tumkur News: ತುಮಕೂರಿನಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಇಬ್ಬರು ಬಲಿ

ತುಮಕೂರಿನಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಇಬ್ಬರು ಬಲಿ

Heart attack: ತುಮಕೂರಿನ ಹನುಮಂತಪುರದ ನಿವಾಸಿಗಳಾದ ಜಯಂತ್ (31) ಹಾಗೂ ಶ್ರೀಧರ್ (52) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ ನಗರದಲ್ಲಿ ಒಂದೇ ಇಬ್ಬರು ಹೃದಯಾಘಾತದಿಂದ ಇಬ್ಬರು ಮೃತಪಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Chit fund scam: ಚೀಟಿ ಹೆಸರಲ್ಲಿ 40 ಕೋಟಿ ವಂಚಿಸಿ ದಂಪತಿ ಪರಾರಿ; ಡಿಸಿಎಂ, ಗೃಹ ಸಚಿವರಿಗೆ ದೂರು

ಚೀಟಿ ಹೆಸರಲ್ಲಿ 40 ಕೋಟಿ ವಂಚಿಸಿ ದಂಪತಿ ಪರಾರಿ!

Chit fund scam: ಬೆಂಗಳೂರಿನ ಜರಗನಹಳ್ಳಿಯಲ್ಲಿ ವಂಚನೆ ಪ್ರಕರಣ ನಡೆದಿದೆ. ಚೀಟಿ ಹೆಸರಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿಗೆ ವಂಚಿಸಿ, 40 ಕೋಟಿ ರೂ.‌ಗಳೊಂದಿಗೆ ದಂಪತಿ ಪರಾರಿಯಾಗಿದ್ದಾರೆ. ವಂಚನೆಗೆ ಒಳಗಾದವರು ನ್ಯಾಯ ಕೊಡಿಸಬೇಕು ಎಂದು ಗೃಹ ಸಚಿವ ಜಿ‌.ಪರಮೇಶ್ವರ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ.

Infant murder case: ನೀರಿನ ಹಂಡೆಯಲ್ಲಿ ಮುಳುಗಿಸಿ ಮಗುವನ್ನು ಕೊಂದ ನಿಷ್ಕರುಣಿ ತಾಯಿ

ನೀರಿನ ಹಂಡೆಯಲ್ಲಿ ಮುಳುಗಿಸಿ ಮಗುವನ್ನು ಕೊಂದ ನಿಷ್ಕರುಣಿ ತಾಯಿ

Infant Murder: ಪವನ್ ಹಾಗೂ ರಾಧೆ ಎಂಬ ದಂಪತಿಗೆ ಈ ಗಂಡು ಮಗು ಜನಿಸಿತ್ತು. ಗಂಡ ಮನೆ ನಿಭಾಯಿಸದೆ ಕುಡಿತದ ಚಟಕ್ಕೆ ಒಳಗಾಗಿದ್ದ. ಬಡತನ ಹಾಗೂ ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆಯಲ್ಲಿ ಹತಾಶಗೊಂಡ ತಾಯಿ ತಡರಾತ್ರಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.

Mandya News: ಫೋಟೋ ತೆಗೆದುಕೊಳ್ಳಲು ಹೋಗಿ ಕಾವೇರಿ ನದಿಗೆ ಬಿದ್ದು ಕೊಚ್ಚಿ ಆಟೋ ಚಾಲಕ!

ಫೋಟೋ ತೆಗೆದುಕೊಳ್ಳಲು ಹೋಗಿ ಕಾವೇರಿ ನದಿಗೆ ಬಿದ್ದು ಕೊಚ್ಚಿ ಆಟೋ ಚಾಲಕ!

Mandya News: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸರ್ವಧರ್ಮ ಆಶ್ರಮದ ಬಳಿ ಘಟನೆ ನಡೆದಿದೆ. ಆಟೋ ಚಾಲಕ ಫೋಟೋ ತೆಗೆಸಿಕೊಳ್ಳಲು ಹೋದಾಗ ಆಯತಪ್ಪಿ ಕಾವೇರಿ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ನೀರು ಹೆಚ್ಚಿದ್ದ ಕಾರಣ ಕೊಚ್ಚಿ ಹೋಗಿದ್ದಾರೆ. ಅವರ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.

contaminated water: ಯಾದಗಿರಿಯ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು, ಹಲವು ಜನ ಗಂಭೀರ

ಯಾದಗಿರಿಯ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು, ಹಲವು ಜನ ಗಂಭೀರ

Contaminated Water: 10 ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ತಿಪ್ಪನಟಗಿ ಗ್ರಾಮಸ್ಥರು ವಾಂತಿ-ಭೇದಿಯಿಂದ ಬಳಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್ ಸೋಮವಾರ (ಜು. 07) ಚಿಕಿತ್ಸೆ ಫಲಿಸದೆ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಆರು ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡೆಟ್ರಾಯ್ಟ್‌ನಲ್ಲಿ ವಿಜೃಂಭಣೆಯ 47ನೇ ವಿಎಸ್ಎನ್ಎ ಮತ್ತು ಬಸವ ಜಯಂತಿ ಮಹಾಸಮಾವೇಶ

ಡೆಟ್ರಾಯ್ಟ್‌ನಲ್ಲಿ ವಿಜೃಂಭಣೆಯ 47ನೇ ವಿಎಸ್ಎನ್ಎ ಮತ್ತು ಬಸವ ಜಯಂತಿ ಸಮಾವೇಶ

ವೀರಶೈವ ಸಮಾಜ ಉತ್ತರ ಅಮೆರಿಕ (VSNA) ಆಯೋಜಿಸಿದ್ದ 47ನೇ ವಾರ್ಷಿಕ ಮಹಾಸಮಾವೇಶ ಮತ್ತು ಬಸವ ಜಯಂತಿ (Basava Jayanthi) ಮಹೋತ್ಸವ ಅತ್ಯಂತ ಭಕ್ತಿಭಾವದಿಂದ ಹಾಗೂ ಸಂಸ್ಕೃತಿಯ ಅದ್ಧೂರಿತನದಿಂದ ಅಮೆರಿಕದ ಡೆಟ್ರಾಯ್ಟ್ (Detroit) ನಗರದಲ್ಲಿ ನೆರವೇರಿತು.

Self Harming: ಮ್ಯಾನೇಜರ್‌ನಿಂದ ಕಿರುಕುಳ, ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಆತ್ಮಹತ್ಯೆ ಯತ್ನ

ಮ್ಯಾನೇಜರ್‌ನಿಂದ ಕಿರುಕುಳ, ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಆತ್ಮಹತ್ಯೆ ಯತ್ನ

Self Harming: ಡಿಪೋ ಮ್ಯಾನೇಜರ್ ಶಾಜಿಯಾ ಬಾನು ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು, ಕೆಲಸದ ವಿಷಯವಾಗಿ ಹರೀಶ್ ಮತ್ತು ಶಾಜಿಯ ಬಾನು ನಡುವೆ ವಾಗ್ವಾದ ನಡೆದಿದೆ. ನಂತರ ವಿಶ್ರಾಂತಿ ಕೊಠಡಿಗೆ ಹೋಗಿ ಹರೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Gold Price Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 7th July 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. 9,010ರೂ. ಇದ್ದು, 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 54 ರೂ. 9,829 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,080 ರೂ. ಬಾಳಿದರೆ, 10 ಗ್ರಾಂಗೆ ನೀವು 90,100 ರೂ. ಹಾಗೂ 100 ಗ್ರಾಂಗೆ 9,01,000 ರೂ. ನೀಡಬೇಕಾಗುತ್ತದೆ.

Assault Case: ಯುವತಿಗೆ ಮೆಸೇಜ್;‌ ಯುವಕನ ಬಟ್ಟೆ ಬಿಚ್ಚಿಸಿ, ಮರ್ಮಾಂಗಕ್ಕೆ ಒದ್ದು ರೇಣುಕಾಸ್ವಾಮಿ ಕೇಸ್‌ ಮಾದರಿಯಲ್ಲಿ ಹಲ್ಲೆ

ಯುವಕನ ಮರ್ಮಾಂಗಕ್ಕೆ ಒದ್ದು ರೇಣುಕಾಸ್ವಾಮಿ ಕೇಸ್‌ ಮಾದರಿಯಲ್ಲಿ ಹಲ್ಲೆ

Assault Case: ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ʼನೀನೂ ರೇಣುಕಾಸ್ವಾಮಿ ರೀತಿ ಸಾಯ್ತೀಯಾʼ ಎಂದು ದಬಾಯಿಸುತ್ತಾ ಯುವಕನಿಗೆ ಥಳಿಸಿದ್ದಾರೆ. ಒಬ್ಬನ ಮೇಲೆ 8 ರಿಂದ 10 ಜನ ದುಷ್ಕರ್ಮಿಗಳು ಮುಗಿಬಿದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ.

Sharan Pumpwell: ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ಗೆ ಚಿಕ್ಕಮಗಳೂರು ಪ್ರವೇಶಿಸದಂತೆ ನಿರ್ಬಂಧ

ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ಗೆ ಚಿಕ್ಕಮಗಳೂರು ಪ್ರವೇಶಿಸದಂತೆ ನಿರ್ಬಂಧ

Sharan Pumpwell: ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಅವರ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದಿವೆ ಎಂದು ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ. ಅಲ್ಲದೇ ಈ ಹಿಂದೆಯೂ ಇದೇ ರೀತಿಯ ಹೇಳಿಕೆಗಳಿಂದ ಶರಣ್ ಪಂಪ್‌ವೆಲ್ ವಿರುದ್ಧ ದೂರುಗಳು ದಾಖಲಾಗಿತ್ತು.

Murder Case: ಲವರ್‌ಗಾಗಿ ಆಕೆಯ ಪತಿಯನ್ನು ಕೊಂದು ರಸ್ತೆ ಬದಿ ಮಲಗಿಸಿದ ಶಾಲಾ ವಾಹನ ಚಾಲಕ

ಲವರ್‌ಗಾಗಿ ಆಕೆಯ ಪತಿಯನ್ನು ಕೊಂದು ರಸ್ತೆ ಬದಿ ಮಲಗಿಸಿದ ಶಾಲಾ ವಾಹನ ಚಾಲಕ

Murder Case: ಹೆದ್ದಾರಿ ಪಕ್ಕದಲ್ಲಿ ಮಧು ಶವ ಕಂಡ ಸ್ಥಳೀಯರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಸ್ಥಳೀಯರು, ಮಧು ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದರು. ಆದರೆ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ, ಮಧು ಅಪಘಾತದಿಂದ ಮೃತಪಟ್ಟಿಲ್ಲ, ಕೊಲೆಯಾಗಿದ್ದಾನೆ ಎಂದು ಗೊತ್ತಾಗಿದೆ.

CM Siddaramaiah: ದುರಹಂಕಾರಿ ಅಂದ್ರೆ ಕೇರ್‌ ಮಾಡಲ್ಲ, ನಾನು ಸ್ವಾಭಿಮಾನಿ: ಸಿಎಂ ಸಿದ್ದರಾಮಯ್ಯ

ದುರಹಂಕಾರಿ ಅಂದ್ರೆ ಕೇರ್‌ ಮಾಡಲ್ಲ, ನಾನು ಸ್ವಾಭಿಮಾನಿ: ಸಿಎಂ ಸಿದ್ದರಾಮಯ್ಯ

CM Siddaramaiah: ಮೇಲ್ಜಾತಿಯ ಬಡವ ಬಂದರೆ ಗೌರವ ಕೊಡುತ್ತೇವೆ. ಕೆಲವರ್ಗದ ಶ್ರೀಮಂತ ಬಂದರೆ ಅವರನ್ನು ಕೀಳಾಗಿ ಕಾಣುತ್ತೇವೆ. ಸ್ವಾಭಿಮಾನಿಗಳಾಗಿ ಬದುಕುವುದು ದುರಹಂಕಾರ ಅಲ್ಲ. ನನ್ನ ನೋಡಿದರೆ ದುರಹಂಕಾರಿ ಅಂತಾರೆ. ನಾನು ಸ್ವಾಭಿಮಾನಿ. ದುರಹಂಕಾರಿ ಅಂತ ಯಾರೇ ಕರೆದರೂ ನಾನು ಅದಕ್ಕೆ ಸೊಪ್ಪು ಹಾಕಲ್ಲ ಎಂದರು.

Self Harming: ಮಧ್ಯಪ್ರದೇಶದಿಂದ ಕಳವು ಚಿನ್ನ ಜಪ್ತಿ ಮಾಡಿ ತಂದ ಮರುದಿನ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ದಾವಣಗೆರೆ ಪಿಎಸ್‌ಐ ಆತ್ಮಹತ್ಯೆ

ಕಳವು ಚಿನ್ನ ಜಪ್ತಿ ಮಾಡಿ ತಂದ ಮರುದಿನ ದಾವಣಗೆರೆ ಪಿಎಸ್‌ಐ ಆತ್ಮಹತ್ಯೆ

ಕಳವು ಪ್ರಕರಣವೊಂದರಲ್ಲಿ ಚಿನ್ನಾಭರಣವನ್ನು ನ್ಯಾಯಾಲಯದ ಅನುಮತಿ ಪಡೆದು ಮಧ್ಯಪ್ರದೇಶದಿಂದ ಜಪ್ತಿ ಮಾಡಿ ತಂದಿದ್ದ ಬಡಾವಣೆ ಠಾಣೆ ಎಸ್‌ಐ ಬಿ ಆರ್‌ ನಾಗರಾಜಪ್ಪ, ಮರುದಿನವೇ ನಾಪತ್ತೆಯಾಗಿದ್ದರು. ವಿಶೇಷ ಕರ್ತವ್ಯ ಮುಗಿಸಿ ಜೂನ್‌ 30ರಂದು ಬೆಳಗ್ಗೆ 11ಕ್ಕೆ ಮನೆಗೆ ಮರಳಿದ್ದ ನಾಗರಾಜಪ್ಪ, ಜುಲೈ 1ರ ನಸುಕಿನಲ್ಲಿ ಮನೆ ತೊರೆದಿದ್ದರು.

Heart Attack: ನಿಲ್ಲದ ಹೃದಯಾಘಾತ ಸಾವಿನ ಸರಣಿ, ನಿನ್ನೆ ಒಂದೇ ದಿನ 8 ಮಂದಿ ಸಾವು

ನಿಲ್ಲದ ಹೃದಯಾಘಾತ ಸಾವಿನ ಸರಣಿ, ನಿನ್ನೆ ಒಂದೇ ದಿನ 8 ಮಂದಿ ಸಾವು

ರಾಜ್ಯದಲ್ಲಿ ಹೃದಯಾಘಾತದಿಂದ (Heart Attack) ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊನ್ನೆ ಆರು ಜನ ಮೃತಪಟ್ಟಿದ್ದರೆ, ನಿನ್ನೆ ಒಂದೇ ದಿನ ಕರ್ನಾಟಕದಲ್ಲಿ ಹೃದಯಾಘಾತದಿಂದ 8 ಮಂದಿ ಮೃತಪಟ್ಟಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Karnataka Weather: ಇಂದಿನ ಹವಾಮಾನ; ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ!

ಇಂದಿನ ಹವಾಮಾನ; ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ!

Karnataka Rains: ಜುಲೈ 7ರಂದು ಕೂಡ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಬಳ್ಳಾರಿ, ಬೆಂಗಳೂರು ಸೇರಿ ಇನ್ನುಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

Kolhar (Vijayapura) News: ಭಾವೈಕ್ಯತೆಯ ಪ್ರತೀಕ ಕೊಲ್ಹಾರ ಮೊಹರಂ

ಭಾವೈಕ್ಯತೆಯ ಪ್ರತೀಕ ಕೊಲ್ಹಾರ ಮೊಹರಂ

ಕೊಲ್ಹಾರ ಪಟ್ಟಣದ ಮೊಹರಂ ಹಬ್ಬವು ಅವಳಿ ಜಿಲ್ಲೆಗೆ ಹೆಸರುವಾಸಿಯಾಗಿದೆ. ಪಟ್ಟಣದ ಹಿಂದು ಹಾಗೂ ಮುಸ್ಲಿಂ ಬಾಂಧವರು ಜೊತೆಯಾಗಿ ಈ ಹಬ್ಬವನ್ನು ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ವನ್ನು ಸಾರುತ್ತೆವೆ, ಮುಂದಿನ ಪೀಳಿಗೆಯವರು ಕೂಡ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸ ಬೇಕು

Kurubara Sangha: 34 ಕೋಟಿ ರೂ. ವೆಚ್ಚದಲ್ಲಿ ಕುರುಬರ ಸಂಘದ ನೂತನ ಕಟ್ಟಡ ನಿರ್ಮಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಕುರುಬರ ಸಂಘದ ನೂತನ ಕಟ್ಟಡ ನಿರ್ಮಿಸಲು ಕ್ರಮ: ಸಿಎಂ

Kurubara Sangha: ಕಾಗಿನೆಲೆ ಗುರುಪೀಠದ ಶಾಖಾಮಠದ ಭಕ್ತರ ಭಂಡಾರದ ಕುಟೀರಕ್ಕೆ ಹಿಂದೆ ನಾನೇ ಶಂಕುಸ್ಥಾಪನೆ ಮಾಡಿ, ಈಗ ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ. ಕಾಗಿನೆಲೆ ಗುರುಪೀಠದ ಸ್ವಾಮಿಗಳು ಶಾಖಾಮಠದ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Vijayapura (Indi) News: ಅಧ್ಯಕ್ಷರಾಗಿ ಗುರುಪಾದ ಕೋಳಾರಿ, ಉಪಾಧ್ಯಕ್ಷ ಮಲ್ಲಪ್ಪ ಮಿರಗಿ ಆಯ್ಕೆ

ಅಧ್ಯಕ್ಷರಾಗಿ ಗುರುಪಾದ ಕೋಳಾರಿ, ಉಪಾಧ್ಯಕ್ಷ ಮಲ್ಲಪ್ಪ ಮಿರಗಿ ಆಯ್ಕೆ

ರೈತ ದೇಶದ ಬೆನ್ನೇಲಬು ಇಂದು ರೈತರ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಒಂದು ಕಡೆ ನಿಸರ್ಗದ ಸಮಸ್ಯೆ ಇನ್ನೊಂದು ಕಡೆ ರೈತರು ಬೆಳೆದ ದವಸ ಧಾನ್ಯಗಳಿಗೆ ಸರಿಯಾದ ನಿಯಂತ್ರಿತ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಇರುವುದು. ರೈತರಿಗೆ ಬರಬೇಕಾದ ಸರಕಾರದ ಸೌಲಭ್ಯಗಳು ಮನೆ ಬಾಗಿಲಿಗೆ ತಲುಪಿಸಬೇಕು.

Tumkur (Gubbi) News: ಡಾ.ಬಾಬು ಜಗಜೀವನ ರಾಮ್ ರವರ 39ನೇ ಪುಣ್ಯ ಸ್ಮರಣೆ

ಡಾ.ಬಾಬು ಜಗಜೀವನ ರಾಮ್ ರವರ 39ನೇ ಪುಣ್ಯ ಸ್ಮರಣೆ

ಇಡೀ ದೇಶವನ್ನು ಆಳುವಂಥ ಸಮರ್ಥ ನಾಯಕರಾಗಿದ್ದು ಪ್ರಧಾನಮಂತ್ರಿ ಹುದ್ದೆಯನ್ನು ಹೊಂದುವ ಅರ್ಹತೆ ಇದ್ದರು ಇವರಿಗೆ ಉಪ ಪ್ರಧಾನಿಯನ್ನು ಮಾಡಿದರು. ಸ್ವತಂತ್ರ ಪೂರ್ವದಲ್ಲಿ ಸ್ವತಂತ್ರಕ್ಕಾಗಿ ಹೋರಾಡಲು ಶೋಷಿತ ವರ್ಗದವರನ್ನು ಒಟ್ಟುಗೂಡಿಸಿ ಮುಂಚೂಣಿ ನಾಯಕರಾಗಿ ಸ್ವತಂತ್ರ ಪಡೆಯಲು ಹೋರಾಡಿದವರಲ್ಲಿ ಒಬ್ಬ ನಾಯಕರಾಗಿದ್ದಾರೆ.

ಮುನಗನಹಳ್ಳಿಯಲ್ಲಿ ಮಾಯವಾಗುತ್ತಿರುವ ಕೆರೆ ಮಣ್ಣು: ಅಧಿಕಾರಿಗಳು ಸೈಲೆಂಟ್

ಕೆರೆ ಮಣ್ಣು ಅಕ್ರಮ ‌ಸಾಗಣೆ: ಕೆರೆಗಳ ಮೂಲ ಸ್ವರೂಪಕ್ಕೆ ಧಕ್ಕೆ

ಬೇಸಿಗೆ ಕಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನಿತ್ಯ ಜೆಸಿಬಿಯೊಂದಿಗೆ ಹತ್ತಾರು ಟ್ರ್ಯಾಕ್ಟರ್‌ ಬಳಸಿ ಮಣ್ಣು ತೆಗೆಯುವ ದಂಧೆ ಹೆಚ್ಚಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ,ಸೇರಿದಂತೆ ಇತರ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೆರೆಗಳಲ್ಲಿ ಇರುವ ಹೂಳು ತೆಗೆದು ಕೆರೆಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದರೆ ಮತ್ತೊಂದು ಕಡೆ ಕೆಲವರು ಅಕ್ರಮ ಮಣ್ಣುಗಾರಿಕೆ ಯಿಂದ ಹಣ ಸಂಪಾದಿಸಲು ಕೆರೆಗಳನ್ನು ಹಾಳು ಮಾಡಲು ಹೊರಟಿದ್ದಾರೆ

Chikkaballapur News: ಶ್ರೀ ಗುರುಮೂರ್ತಿ ಸ್ವಾಮಿ, ಎಲ್ಲಮ್ಮದೇವಿ ದೇವಾಲಯದ ಅಭಿವೃದ್ಧಿಗೆ ಸಹಕರಿಸಿ

ದೇವಾಲಯದ ನೂತನ ಟ್ರಸ್ಟ್ ಉದ್ಘಾಟನಾ ಸಮಾರಂಭ

ಗುರುಮೂರ್ತಿಸ್ವಾಮಿ, ಎಲ್ಲಮ್ಮದೇವಿ ಸಹಿತ ವೆಂಕಟರಮಣಸ್ವಾಮಿ ದೇವಾಲಯವನ್ನು ಅಭಿವೃದ್ಧಿ ಪಡಿಸಿ, ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಕೊಳ್ಳಲು ತೀರ್ಮಾನಿಸಿಕೊಂಡು, ಸದರಿ ದೇವಾಲಯದ ನೂತನ ಟ್ರಸ್ಟ್ ರಚಿಸಿಕೊಂಡು ಇಂದು ದೇವಾಲಯದ ಆವರಣದಲ್ಲಿ ನೂತನ ಟ್ರಸ್ಟ್ ನ ಉದ್ಘಾಟನಾ ಸಮಾರಂಭವನ್ನು ದೇವರನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡುವುದರ ಮೂಲಕ ಮಾಡಲಾ ಯಿತು.