ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ ಡಿಕೆಶಿ; ಗೋದಾವರಿ-ಕಾವೇರಿ, ಬೇಡ್ತಿ-ವರದಾ ನದಿ ಜೋಡಣೆ ಸೇರಿ ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ; ಮಹತ್ವದ ಚರ್ಚೆ

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಚಂದ್ರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ, ಕರ್ನಾಟಕದ ಭವಿಷ್ಯ ಮತ್ತು ಜನರ ಕ್ಷೇಮಾಭಿವೃದ್ಧಿಗೆ ಅತ್ಯಂತ ಮುಖ್ಯವಾಗಿರುವ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆಗೆಳ ಕುರಿತು ಚರ್ಚಿಸಿದ್ದಾರೆ.

Mysuru Dasara 2026: ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ

ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಆಹ್ವಾನ

ಕೊಪ್ಪಳದ ಗವಿಮಠಕ್ಕೆ ಸಚಿವ ಶಿವರಾಜ್ ತಂಗಡಗಿ ಅವರು ತೆರಳಿ, ಶ್ರೀ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದು, ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುವಂತೆ ಸರ್ಕಾರದ ಪರವಾಗಿ ಶ್ರೀಗಳಿಗೆ ಆಹ್ವಾನ ನೀಡಿದ್ದಾರೆ. ಅಕ್ಟೋಬರ್ ‌11ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ.

ಬೇಡ್ತಿ–ವರದಾ ನದಿ ತಿರುವು ಯೋಜನೆ; ಬಯಲುಸೀಮೆಯ ಬರ ನೀಗಿಸುವ ಕನಸು, ಪಶ್ಚಿಮಘಟ್ಟದ ಪರಿಸರಕ್ಕೆ ಆತಂಕ!

ಬೇಡ್ತಿ–ವರದಾ ನದಿ ತಿರುವು; ಬಯಲುಸೀಮೆಯ ಬರ ನೀಗಿಸುವ ಕನಸು

Bedti-Varada River Linking Project: ಪಶ್ಚಿಮಘಟ್ಟದಿಂದ ಹರಿದು ಸಮುದ್ರ ಸೇರುವ ಬೇಡ್ತಿ ನದಿಯ ನೀರನ್ನು ತಿರುಗಿಸಿ, ಬರಪೀಡಿತ ಪ್ರದೇಶಗಳಿಗೆ ಹರಿಸುವ ಯೋಜನೆ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯಾಗಿದ್ದು, ಈ ಯೋಜನೆಯಿಂದ ಉತ್ತರ ಕರ್ನಾಟಕದ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯ ನಡುವೆಯೇ, ಪಶ್ಚಿಮಘಟ್ಟದ ಪರಿಸರ ವ್ಯವಸ್ಥೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

Dasara Holidays 2026: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ಈ ಬಾರಿ 19 ದಿನ ದಸರಾ ರಜೆ!

ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ಈ ಬಾರಿ 19 ದಿನ ದಸರಾ ರಜೆ ಘೋಷಣೆ

ಶಿಕ್ಷಣ ಇಲಾಖೆಯ ಆದೇಶವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸುವ ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ. ​ದಸರಾ ಹಬ್ಬದ 19 ದಿನಗಳ ಸುದೀರ್ಘ ವಿರಾಮದ ನಂತರ, ಅಕ್ಟೋಬರ್ 22ರ ಗುರುವಾರದಿಂದ ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಳ್ಳಲಿವೆ.

ಸಿದ್ಧಿವಿನಾಯಕ ಸೇವಾ ಸಮಿತಿಯ 50ನೇ ವರ್ಷದ ಗಣಪತಿ ಪೂಜೆ; ಮುತ್ತೈದೆಯರಿಗೆ ಬಾಗಿನ ನೀಡಿ ಗೌರವ

ಸಿದ್ಧಿವಿನಾಯಕ ಸೇವಾ ಸಮಿತಿಯ 50ನೇ ವರ್ಷದ ಗಣಪತಿ ಪೂಜೆ

Tumkur News: ತುಮಕೂರು ನಗರದಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ 50ನೇ ವರ್ಷದ ಗಣಪತಿ ಪೂಜಾ ಮಹೋತ್ಸವದಲ್ಲಿ, ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಮುತ್ತೈದೆಯರಿಗೆ ಬಾಗಿನ ನೀಡಿ ಗೌರವಿಸಿದರು. ಈ ಕುರಿತ ವಿವರ ಇಲ್ಲಿದೆ.

KPSC scam: ಬಸವರಾಜ್ ಕನ್ನಾಳೆ ರಹಸ್ಯ ಡೈರಿ ಪತ್ತೆ; ಅಭ್ಯರ್ಥಿಗಳೊಂದಿಗೆ ಲಕ್ಷ ಲಕ್ಷ ಡೀಲ್!

ಬಸವರಾಜ್ ಕನ್ನಾಳೆ ಡೈರಿ ಪತ್ತೆ; ಅಭ್ಯರ್ಥಿಗಳೊಂದಿಗೆ ಭಾರಿ ಡೀಲ್‌!

ತನಿಖಾಧಿಕಾರಿಗಳು ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ರಹಸ್ಯ ಸಿಕ್ಕಿದೆ. ಆತ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಟ್ಟಿ, ಪಾವತಿಯಾದ ಮೊತ್ತ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಜಲಸಂಪನ್ಮೂಲ ಇಲಾಖೆಯ ಉಲ್ಲೇಖದೊಂದಿಗೆ ಲೆಕ್ಕ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.

Kalaburagi News: ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ: ಗೃಹ ಸಚಿವರ ತವರಿನಲ್ಲಿಯೇ ಪೊಲೀಸರಿಂದ ಕಳ್ಳ ಪೊಲೀಸ್ ಆಟ?

ಗೃಹ ಸಚಿವರ ತವರಿನಲ್ಲಿಯೇ ಪೊಲೀಸರಿಂದ ಕಳ್ಳ ಪೊಲೀಸ್ ಆಟ?

ಆಳಂದ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣ ಇದೀಗ ಪೊಲೀಸ್ ಇಲಾಖೆ ಯ ಕಾರ್ಯವೈಖರಿ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸುಮಾರು 400 ಚೀಲ ಅಕ್ಕಿ ಸಾಗಿಸು ತ್ತಿದ್ದ ಲಾರಿಯನ್ನು 112 ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಾಹನ ಠಾಣೆಯಲ್ಲಿದ್ದ ವೇಳೆ ಅಕ್ಕಿ ದಂಧೆಕೋರರೊಂದಿಗೆ ಫೋನ್ ಮೂಲಕ ಮಾತುಕತೆ ನಡೆದಿದ್ದು, ಸುಮಾರು ₹1 ಲಕ್ಷಕ್ಕೆ ಡೀಲ್ ಕುದುರಿಸಿ ಲಾರಿ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮದುವೆ ಮಾಡಿಸದಿದ್ದರೆ ಕೆಳಗೆ ಬೀಳುವುದಾಗಿ ಬೆದರಿಕೆ; ದೇವರ ಹೆಸರಿನಲ್ಲಿ ಆಣೆ ಮಾಡಿ ಮನವೊಲಿಕೆ

ಪ್ರೀತಿಸಿದವಳನ್ನೇ ಮದುವೆಯಾಗಲು ಟವರ್ ಏರಿದ ಯುವಕ

ಮಾಡಿಯಾಳ ಗ್ರಾಮದ ಮಹೇಶ್ ಭಜಂತ್ರಿ ಎಂಬ ಯುವಕ ಪ್ರೀತಿಸಿದ ಯುವತಿಯೊಂದಿಗೆ ವಿವಾಹ ಮಾಡಿಸಬೇಕು ಎಂದು ಪಟ್ಟು ಹಿಡಿದು ಮೊಬೈಲ್‌ ಟವರ್ ಏರಿ ಕುಳಿತಿದ್ದ. ಕೆಳಗಿಳಿಯುವಂತೆ ಗ್ರಾಮಸ್ಥ ರು ಹಾಗೂ ಸಂಬಂಧಿಕರು ಮನವಿ ಮಾಡಿದರೂ, ತನ್ನ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಕೆಳಗಿಳಿಯುವುದಿಲ್ಲ ಎಂದು ಹಠ ಹಿಡಿದಿದ್ದಾನೆ.

ಬೆಂಗಳೂರಲ್ಲಿ ಕಾಡಾನೆ ಪ್ರತ್ಯಕ್ಷ: ವಾಕಿಂಗ್ ಮಾಡ್ತಿದ್ದ 60 ವರ್ಷದ ವೃದ್ಧನನ್ನು ತುಳಿದು ಸಾಯಿಸಿದ ಒಂಟಿ ಸಲಗ

ಬೆಂಗಳೂರಲ್ಲಿ ಕಾಡಾನೆ ಪ್ರತ್ಯಕ್ಷ!

ಜನನಿಬಿಡ ವಸತಿ ಪ್ರದೇಶಕ್ಕೆ ಕಾಡಾನೆಯೊಂದು ನುಗ್ಗಿ ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವೃದ್ಧರೊಬ್ಬರನ್ನು ದಾರುಣವಾಗಿ ತುಳಿದು ಸಾಯಿಸಿರುವ ಭೀಕರ ಘಟನೆ ಬೆಂಗಳೂರಿನ ಆರ್‌.ಆರ್. ವೈದ್ಯಕೀಯ ಕಾಲೇಜಿನ ಹಿಂಭಾಗದ ಅಂಚೇಪಾಳ್ಯದಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಅಂಚೇಪಾಳ್ಯದ ನಾಗರಾಜ್‌ ಎಂದು ಗುರುತಿಸಲಾಗಿದೆ.

ಧರ್ಮಸ್ಥಳ ಅಸಹಜ ಸಾವು: ಅಂಕಿಅಂಶಗಳಲ್ಲಿ ವ್ಯತ್ಯಾಸ: 16 ವರ್ಷಗಳಲ್ಲಿ 30 ಪ್ರಕರಣಗಳ ಏರುಪೇರು

16 ವರ್ಷಗಳಲ್ಲಿ 30 ಪ್ರಕರಣಗಳ ಏರುಪೇರು

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವುಗಳ ಕುರಿತು ವಿಶೇಷ ತನಿಖಾ ತಂಡ ಸರಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಕಡತಗಳ ವ್ಯತ್ಯಾಸಗಳು ಪತ್ತೆಯಾ ದರೂ ಕೊಲೆ ಪಿತೂರಿ, ಅತ್ಯಾಚಾರ, ವ್ಯವಸ್ಥಿತ ಷಡ್ಯಂತ್ರಗಳು ಬಹಿರಂಗಗೊಂಡಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಎಸ್‌ಐಟಿ ವರದಿಯ ಅಂಕಿಅಂಶಗಳು, ಹಳೆಯ ಪೊಲೀಸ್ ವಹಿಗಳು ಮತ್ತು ಪಂಚಾಯಿತಿ ದಾಖಲೆಗಳ ನಡುವಿನ ತಾಂತ್ರಿಕ ವ್ಯತ್ಯಾಸಗಳನ್ನು ತೆರೆದಿಟ್ಟಿವೆ.

86 ರು. ಔಷಧಕ್ಕೆ 4228 ರು. ದರ: 254 ಕಂಪನಿಗಳ ಅಕ್ರಮ ಜಾಲ ಪತ್ತೆ; ಔಷಧ ಕಂಪನಿಗಳ ಕಳ್ಳಾಟ ಬಯಲು

ಔಷಧ ಕಂಪನಿಗಳ ಕಳ್ಳಾಟ ಬಯಲು

ಎಫ್‌ʼಡಿಎ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ, ಔಷಧಗಳ ಉತ್ಪಾದನಾ, ಲ್ಯಾಂಡಿಂಗ್ ವೆಚ್ಚಕ್ಕೂ ಹಾಗೂ ಆಸ್ಪತ್ರೆಗಳು-ಔಷಧ ಮಳಿಗೆಗಳು ರೋಗಿಗಳಿಗೆ ವಿಧಿಸುವ ಎಂಆರ್‌ಪಿ ಬೆಲೆಗೂ ಭಾರಿ ವ್ಯತ್ಯಾಸ ಬೆಳಕಿಗೆ ಬಂದಿದೆ. 86 ರು.ಗೆ ಖರೀದಿಸಿದ ಸಾಮಾನ್ಯ ಔಷಧ-1 ರ ಎಂಆರ್‌ಪಿ ಬೆಲೆ 4528 ರು. ನಿಗದಿಪಡಿಸ ಲಾಗಿದೆ.

ಹರಿಹರ ಪೀಠದ ಅವ್ಯವಹಾರ: ಗವರ್ನರ್‌ ಎಂಟ್ರಿ

ಹರಿಹರ ಪೀಠದ ಅವ್ಯವಹಾರ: ಗವರ್ನರ್‌ ಎಂಟ್ರಿ

ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ವೀರಶೈವ ಪಂಚಮಸಾಲಿ ಮಠದ ಟ್ರಸ್ಟ್‌ʼನಿಂದ 10 ಕೋಟಿ ರುಪಾಯಿ ಅವ್ಯವಹಾರ ಆರೋಪ ಕೇಳಿ ಬಂದಿತ್ತು. ಹಿಂದುಳಿದ ವರ್ಗಗಳ ಇಲಾಖೆಯಿಂದ ವಸತಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ 10 ಕೋಟಿ ರು. ಅನುದಾನದಲ್ಲಿ ಹಣ ದುರ್ಬಳಕೆಯಾಗಿದೆ ಎಂದು ಪಂಚಮಸಾಲಿ ಮಠದ ಲೆಕ್ಕಕೊಡಿ ಚಳವಳಿ ಅಧ್ಯಕ್ಷ ಎಂ.ಜಿ.ಪರಮೇಶ್ವರ ಗೌಡ ಹಾಗೂ ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಅವರು ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿದ್ದರು.

ನಿಗಮ ಮಂಡಳಿ, ಸಂಪುಟ ವಿಸ್ತ್ರರಣೆ ಬಗ್ಗೆ ಚರ್ಚೆ ಸಾಧ್ಯತೆ: ದೆಹಲಿಗೆ ಡಿಕೆ, ಪಟ್ಟಿ ಫೈನಲ್‌ ?

ದೆಹಲಿಗೆ ಡಿಕೆ, ಪಟ್ಟಿ ಫೈನಲ್‌ ?

ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಸಭೆಯ ಬಳಿಕ ರಾಜ್ಯದ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಹಾಗೂ ಎರಡು ಸಚಿವ ಸ್ಥಾನಗಳ ಭರ್ತಿಗೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕ ರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದಕ್ಕೆ ಪೂರಕವಾಗಿ ಸಿಎಂ ಡಿಕೆಶಿ ಸಹ, ದೆಹಲಿಯಲ್ಲಿ ಎಲ್ಲವೂ ನಿರ್ಧಾರ ವಾಗಲಿದ್ದು, ಪ್ರಕ್ರಿಯೆ ಶೀಘ್ರವೇ ಪೂರ್ಣ ಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ನಕಲಿ ಔಷಧ ಜಾಲದ ಕಿಂಗ್‌ಪಿನ್ ಪ್ರಶಾಂತ್  ರಂಜನ್​ ಬಾಬು ಬಂಧನ

ನಕಲಿ ಔಷಧ ಜಾಲದ ಕಿಂಗ್‌ಪಿನ್ ಪ್ರಶಾಂತ್ ರಂಜನ್​ ಬಾಬು ಬಂಧನ

ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾಗಿದ್ದ ನಕಲಿ ಔಷಧ ಜಾಲ ಪ್ರಕರಣದ ಕಿಂಗ್‌ಪಿನ್‌ ಎನಿಸಿಕೊಂಡಿದ್ದ ಪ್ರಶಾಂತ್ ರಂಜನ್ ಬಾಬುನನ್ನು ಅಜರ್‌ಬೈಜಾನ್‌ನಿಂದ ವಾಪಸಾದ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಅಧಿಕಾರಿಗಳು ಬಂಧಿಸಿದ್ದಾರೆ. ನಕಲಿ ಔಷಧಿ ಪ್ರಕರಣದಲ್ಲಿ ಆರೋಪಿ ವೀರೇಶ್ ಜೈನ್ ನೀಡಿರುವ ಹೇಳಿಕೆಯ ಆಧಾರದ ಮೇಲೆ ಪ್ರಶಾಂತ್‌ನನ್ನ ಬಂಧಿಸಲಾಗಿದೆ.

ಭಾರತ ಮಂಟಪ ಮಾದರಿಯಲ್ಲಿ 'ಕರ್ನಾಟಕ ಮಂಟಪ' ನಿರ್ಮಾಣಕ್ಕೆ ಚಿಂತನೆ: ಸಿಎಂ ಡಿ.ಕೆ. ಶಿವಕುಮಾರ್

ಭಾರತ ಮಂಟಪ ಮಾದರಿಯಲ್ಲಿ 'ಕರ್ನಾಟಕ ಮಂಟಪ' ನಿರ್ಮಾಣ: ಸಿಎಂ

Karnataka Mandapam: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಮೊದಲ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿದ್ದಾರೆ. ಭಾರತೀಯರಿಗೂ ಪ್ರವಾಸದಲ್ಲಿ ಆಸಕ್ತಿಯಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಎಲ್ಲವೂ ಲಭ್ಯವಿದೆ. ನಮ್ಮ ಸರ್ಕಾರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.

Dr G Parameshwar: ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ನೀಡಲು ಮನವಿ

ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ನೀಡಲು ಮನವಿ

ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಈ ಹಿಂದೆ ಬಿಡುಗಡೆಯಾಗಿದ್ದ ಅನುದಾನದಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಹಣ ಬಳಕೆಯಾಗಿದ್ದು, ಚಿಕ್ಕಬಳ್ಳಾಪುರಕ್ಕೆ ಕೇವಲ ರೂಪಾಯಿ 10 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈ ಮೊತ್ತದಿಂದ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ತೊಂದರೆಯಾಗಿದ್ದು, ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ತಿಳಿಸಿದರು.

Bagepally News: ಯುವಜನತೆ ದೇಶದ ಬಹುದೊಡ್ಡ ಉತ್ಪಾದನಾ ಶಕ್ತಿ: ಎ.ಎ.ರಹೀಮ್

ಯುವಜನತೆ ದೇಶದ ಬಹುದೊಡ್ಡ ಉತ್ಪಾದನಾ ಶಕ್ತಿ: ಎ.ಎ.ರಹೀಮ್

ಕರ್ನಾಟಕದಲ್ಲಿ ಯುವಜನತೆ ನಿರುದ್ಯೋಗದ ಸಮಸ್ಯೆಯಿಂದ ಸಂಕಷ್ಟ ಎದುರಿಸುತ್ತಿದೆ. ಶಿಕ್ಷಣಕ್ಕೆ ತಕ್ಕ ಉದ್ಯೋಗ ದೊರೆಯದೆ ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಪಡೆದ ಪದವೀಧರರು ತಮ್ಮ ವಿದ್ಯಾರ್ಹತೆಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ತೊಡಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೌಶಲ್ಯಕ್ಕೆ ತಕ್ಕ ಅವಕಾಶಗಳು ದೊರೆಯುತ್ತಿಲ್ಲ. ಕಾರ್ಮಿಕರು ಹಾಗೂ ದುಡಿಯುವ ವರ್ಗದ ಜನರಿಗೆ ಆತ್ಮಗೌರವ, ಸಾಮಾಜಿಕ ಭದ್ರತೆ ಮತ್ತು ಸಂಘಟಿತ ಹಕ್ಕುಗಳು ದೊರೆಯಬೇಕು

ಪರಿವರ್ತನೆಯೇ ಅನ್ನಬ್ರಹ್ಮ ಚಾತುರ್ಮಾಸ್ಯದ ಮೂಲ ಉದ್ದೇಶ, ಖ್ಯಾತಿ-ಪ್ರಚಾರವಲ್ಲ: ರಾಘವೇಶ್ವರ ಶ್ರೀ

ಪರಿವರ್ತನೆಯೇ ಅನ್ನಬ್ರಹ್ಮ ಚಾತುರ್ಮಾಸ್ಯದ ಮೂಲ ಉದ್ದೇಶ

Annabrahma Chaturmasya: ಯಾವುದೇ ಮಠ ಎರಡು ತಿಂಗಳ ಚಾತುರ್ಮಾಸ್ಯವನ್ನು ಆಹಾರಕ್ಕಾಗಿ ಮೀಸಲಿಡಲು ಸಾಧ್ಯವಿಲ್ಲ. ಯಾವುದೇ ಮಸಾಲೆ ಇಲ್ಲದ ಪಾರಂಪರಿಕ ಪ್ರವಚನ ಸರಣಿಯು ನಿರಂತರವಾಗಿ ರಾಮಚಂದ್ರಾಪುರ ಮಠದಲ್ಲಿ ನಡೆಯಿತು ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ತಿಳಿಸಿದ್ದಾರೆ.

Chikkaballapur News: ಸಮುದಾಯದ ಆರ್ಥಿಕ ಬಲವರ್ಧನೆಗೆ ಸಹಕಾರ ಸಂಘಗಳು ಅಗತ್ಯ: ಡಾ. ಸಿದ್ದಲಿಂಗಪ್ಪ

ಸಮುದಾಯದ ಆರ್ಥಿಕ ಬಲವರ್ಧನೆಗೆ ಸಹಕಾರ ಸಂಘಗಳು ಅಗತ್ಯ

ನಗರದ ಜೆಕೆ ಕಂಫರ್ಟ್ನಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ ಸರ್ವಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ  ಮಾತನಾಡಿದ ಅವರು, ಪಿಗ್ಮಿ ಉಳಿತಾಯ, ಠೇವಣಿ, ಎಫ್‌ಡಿ ಸೇರಿದಂತೆ ತಮ್ಮ ಎಲ್ಲ ಸಾಧ್ಯವಾದಷ್ಟು ಆರ್ಥಿಕ ವ್ಯವಹಾರಗಳನ್ನು ಸಂಘದ ಮೂಲಕವೇ ನಡೆಸಿದಾಗ ಸಂಸ್ಥೆಯ ಬಂಡವಾಳ ಹೆಚ್ಚುವುದರ ಜತೆಗೆ ಸಮುದಾಯದ ಜನರಿಗೂ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಇಂಡಿಗೋ ವಿಮಾನಕ್ಕೆ ಹಾನಿ; ತಪ್ಪಿದ ಭಾರಿ ದುರಂತ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಹಾನಿ

IndiGo Flight: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಭಾರಿ ದುರಂತವೊಂದು ತಪ್ಪಿದೆ. ಗುವಾಹಟಿಯಿಂದ ಆಗಮಿಸಿದ ಇಂಡಿಗೋ ವಿಮಾನ ಇಳಿಯುವ ವೇಳೆ ಹಿಂಭಾಗಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ವಾತಾವರಣದಲ್ಲಿನ ಬದಲಾವಣೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

Hassan News: ಪತ್ನಿಗೆ ಅಕ್ರಮ ಸಂಬಂಧ; ಕಣ್ಣೀರಿಡುತ್ತಾ ವಿಡಿಯೊ ಮಾಡಿ ಪತಿ ಆತ್ಮಹತ್ಯೆ!

ಪತ್ನಿಗೆ ಅಕ್ರಮ ಸಂಬಂಧ; ಬೇಸತ್ತು ವಿಡಿಯೊ ಮಾಡಿ ಪತಿ ಆತ್ಮಹತ್ಯೆ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಘಟನೆ ನಡೆದಿದೆ. ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾಗಿದ್ದ. ಆದರೆ, ಕಳೆದ 15 ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ತವರು ಮನೆ ಸೇರಿದ್ದಳು. ಆಕೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಜನಿಸಿದ ಎರಡೇ ದಿನಗಳಲ್ಲಿ 4 ಸಿಂಹದ ಮರಿಗಳ ಸಾವು!

ಶಿವಮೊಗ್ಗ ಮೃಗಾಲಯದಲ್ಲಿ 4 ಸಿಂಹದ ಮರಿಗಳ ಸಾವು!

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯಯದಲ್ಲಿ ಸೆ.16ರಂದು 4 ಮರಿಗಳಿಗೆ ಸಿಂಹಿಣಿ ‘ಸಾರಾ’ ಜನ್ಮ ನೀಡಿತ್ತು. ಜನಿಸಿದ ಎರಡು ದಿನದಲ್ಲೇ ನಾಲ್ಕೂ ಮರಿಗಳು ಮೃತಪಟ್ಟಿವೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಿಂಹಿಣಿ ಸರಿಯಾಗಿ ಹಾಲು ನೀಡದ ಹಿನ್ನೆಲೆ ಮರಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಎಐ ಕ್ಯಾಮೆರಾ ಎಡವಟ್ಟು; ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಸವಾರನ ಗಿಟಾರ್‌ ಬ್ಯಾಗನ್ನೇ ಹಿಂಬದಿ ಸವಾರ ಎಂದು ಭಾವಿಸಿ 500 ರೂಪಾಯಿ ದಂಡ!

ಬೆಂಗಳೂರಿನಲ್ಲಿ ಎಐ ಕ್ಯಾಮೆರಾದ ಎಡವಟ್ಟನಿಂದ ಗಿಟಾರ್‌ಗೆ ಬಿದ್ದ ದಂಡ

Viral News: ಬೆಂಗಳೂರಿನ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂಚಾರ ನಿಯಂತ್ರಣ ಕ್ಯಾಮೆರಾವೊಂದು ಎಡವಟ್ಟು ಮಾಡಿರುವ ಘಟನೆ ವರದಿಯಾಗಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಕರೊಬ್ಬರು ತೆರಳುತ್ತಿದ್ದು ಬೆನ್ನ ಹಿಂದೆ ಗಿಟಾರ್‌ ಬ್ಯಾಗ್‌ ಧರಿಸಿದ್ದರು. ಆದರೆ ಬೆನ್ನಲ್ಲಿದ್ದ ಗಿಟಾರ್ ಬ್ಯಾಗ್‌ ಅನ್ನು ಹೆಲ್ಮೆಟ್ ಧರಿಸದ ಹಿಂಬದಿ ಸವಾರ ಎಂದು ತಪ್ಪಾಗಿ ಗ್ರಹಿಸಿದ ಎಐ ಕ್ಯಾಮೆರಾ 500 ರೂಪಾಯಿ ದಂಡ ವಿಧಿಸಿದೆ.

ಪ್ರವಾಸೋದ್ಯಮಕ್ಕೆ ಇಂಧನ ತುಂಬಿದ ಕೆ.ಜೆ. ಜಾರ್ಜ್; ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು-ಸಚಿವರ ದೂರದೃಷ್ಟಿಯ ನಾಯಕತ್ವ

ಪ್ರವಾಸೋದ್ಯಮಕ್ಕೆ ಇಂಧನ ತುಂಬಿದ ಕೆ.ಜೆ. ಜಾರ್ಜ್

Pravasi Prapancha: ದೂರದ ದುಬೈಯ ಅರೇಬಿಯನ್‌ ಟ್ರಾವೆಲ್‌ ಮಾರ್ಕೆಟ್‌ನಿಂದ ಕರಾವಳಿಯ ಸಸಿಹಿತ್ಲು ಬೀಚ್‌ವರೆಗೆ-ಕರ್ನಾಟಕದ ಪ್ರವಾಸೋದ್ಯಮಕ್ಕೆ ಈಗ ಜಾಗತಿಕ ರೆಕ್ಕೆಪುಕ್ಕ ಬಂದಿದೆ. 1,080 ಕೋಟಿ ರೂಪಾಯಿ ಹೂಡಿಕೆ, 13 ರೋಪ್‌ವೇ ಯೋಜನೆ, ಕರಾವಳಿ-ಮಲೆನಾಡು ನೀತಿ ಮತ್ತು ಭವಿಷ್ಯದ ಪಾಡ್‌ ಟ್ರಾನ್ಸ್‌ಪೋರ್ಟ್‌ ಕನಸಿನೊಂದಿಗೆ ಸಚಿವ ಕೆ.ಜೆ. ಜಾರ್ಜ್‌ ʼಒಂದು ರಾಜ್ಯ ಹಲವು ಜಗತ್ತುಗಳುʼ ಎಂಬುದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಬ್ರ್ಯಾಂಡ್‌ ಕರ್ನಾಟಕದ ಈ ಹೊಸ ಪಯಣದ ಕಥನ ಇಲ್ಲಿದೆ.

Loading...