ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ: ಬಿಜೆಪಿ ನಾಯಕರಿಂದ ಬೊಗಳೆ: ಬೈರತಿ ಸುರೇಶ್ ಲೇವಡಿ

ಬಿಜೆಪಿ ನಾಯಕರಿಂದ ಬೊಗಳೆ: ಬೈರತಿ ಸುರೇಶ್ ಲೇವಡಿ

ನಮ್ಮ ಹೆಬ್ಬಾಳ ಕ್ಷೇತ್ರಕ್ಕೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈಗಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಳೆದ ಮೂರು ವರ್ಷಗಳಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡಿದ್ದಾರೆ. ಹಣವಿಲ್ಲದಿದ್ದರೆ ಕೇವಲ ಒಂದು ಕ್ಷೇತ್ರಕ್ಕೆ ಇಷ್ಟೊಂದು ಹಣ ಕೊಡಲು ಸಾಧ್ಯವಾಗುತ್ತಿತ್ತೇ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

Gadag Drought: ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸರ್ಕಾರಕ್ಕೆ ಎಚ್.ಕೆ. ಪಾಟೀಲ್ ಎಚ್ಚರಿಕೆ

ಗದಗ ಬರಪೀಡಿತ ಎಂದು ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ

ಗದಗ ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದರೂ ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್‌ ಹಿರಿಯ ಶಾಸಕ ಎಚ್‌.ಕೆ.ಪಾಟೀಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗದಗ ತಾಲೂಕಿನಲ್ಲಿ ಶೇಕಡಾ 49ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೂ ಸರ್ಕಾರ ಇದನ್ನು ಬರಪೀಡಿತ ಪ್ರದೇಶವೆಂದು ಯಾಕೆ ಘೋಷಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ತಾಯಿಗೆ ಅಪಮಾನ; ರಾಹುಲ್ ಗಾಂಧಿ ನೈತಿಕ ದಿವಾಳಿತನಕ್ಕೆ ಇಳಿದಿದ್ದಾರೆ ಎಂದು ಸಚಿವ ಜೋಶಿ ಕಿಡಿ

ಪ್ರಧಾನಿ ತಾಯಿಗೆ ಅಪಮಾನ; ರಾಹುಲ್ ಗಾಂಧಿ ನೈತಿಕ ದಿವಾಳಿತನ ಎಂದ ಜೋಶಿ

Pralhad Joshi: ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿಯನ್ನು ಹೀಗೆ ಅಪಮಾನಿಸುವ ರಾಹುಲ್ ಗಾಂಧಿ ಸದಾ ತಾವೊಬ್ಬ 'ಜವಾಬ್ದಾರಿಯುತ ವಿಪಕ್ಷ ನಾಯಕ' ಎಂಬುದನ್ನೇ ಮರೆತು ವರ್ತಿಸುತ್ತಿರುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಟೀಕಿಸಿದ್ದಾರೆ

Ramanath Rai's Car accident: ಕಾರ್ಕಳದಲ್ಲಿ ಮಾಜಿ ಸಚಿವ ರಮಾನಾಥ ರೈ ಕಾರು- ಬಸ್ ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಾಯ

ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ; ಇಬ್ಬರಿಗೆ ಗಾಯ

ಉಡುಪಿ ಜಿಲ್ಲೆ ಕಾರ್ಕಳದ ಸಾಣೂರು ರಾಮಮಂದಿರ ಡಿವೈಡರ್ ಕ್ರಾಸ್‌ನಲ್ಲಿ ಭಾನುವಾರ ಅಪಘಾತ ನಡೆದಿದೆ. ಕಾರ್ಕಳ - ಮೂಡುಬಿದಿರೆ ಹೆದ್ದಾರಿಯಲ್ಲಿ ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ.

ಪ್ರತಿಯೊಬ್ಬರಿಗೆ ಸಾಲ ಸಿಗಬೇಕು ಎಂಬುದು ಸಂಘದ ಉದ್ದೇಶ: ಐ.ಡಿ.ಹಳ್ಳಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸರೆಡ್ಡಿ

ಪ್ರತಿಯೊಬ್ಬರಿಗೆ ಸಾಲ ಸಿಗಬೇಕು ಎಂಬುದು ಸಂಘದ ಉದ್ದೇಶ: ಕೆ.ಶ್ರೀನಿವಾಸರೆಡ್ಡಿ

ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಭಾನುವಾರ ನಡೆಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಷೇರುದಾರರು, ರೈತರು ಹಾಗೂ ವಿವಿಧ ಮುಖಂಡರು ಭಾಗವಹಿಸಿದ್ದರು.

ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಗುಡ್‌ನ್ಯೂಸ್‌; 869 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ಕಾರಾಗೃಹ ಇಲಾಖೆ

ರಾಜ್ಯ ಕಾರಾಗೃಹ, ಸುಧಾರಣಾ ಸೇವೆ ಇಲಾಖೆಯಲ್ಲಿದೆ 869 ಹುದ್ದೆ

Karnataka Prisons Department Recruitment 2026: ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಉಳಿದ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ 869 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜೈಲರ್‌, ವಾರ್ಡರ್‌, ಇನ್‌ಸ್ಟ್ರಕ್ಟರ್‌ ಗ್ರೇಡ್‌ -II ಮುಂತಾದ ಗುದ್ದೆ ಇದಾಗಿದ್ದು, ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಅಪ್ಲೈ ಮಾಡಲು ಕೊನೆಯ ದಿನ ಅಕ್ಟೋಬರ್ 15.

ಸೂರಜ್ ರೇವಣ್ಣಗೆ ಬಿಗ್‌ ರಿಲೀಫ್‌; ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 2ನೇ ಬಾರಿ ಬಿ ರಿಪೋರ್ಟ್ ಸಲ್ಲಿಕೆ

ಸೂರಜ್ ರೇವಣ್ಣಗೆ ಬಿಗ್‌ ರಿಲೀಫ್‌; 2ನೇ ಬಾರಿ ಬಿ ರಿಪೋರ್ಟ್ ಸಲ್ಲಿಕೆ

Suraj Revanna case: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್ಐಟಿ ಪೊಲೀಸರು ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆಯಿಂದ ಭೀಕರ ಅಗ್ನಿ ಅವಘಡ; ಇಬ್ಬರ ಸಾವು, ಒಬ್ಬರ ಸ್ಥಿತಿ ಗಂಭೀರ

ಹುಬ್ಬಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಇಬ್ಬರ ಸಾವು, ಒಬ್ಬರಿಗೆ ಗಾಯ

Hubballi Gas cylinder explosion: ಹಳೆ ಹುಬ್ಬಳ್ಳಿಯ ಅಯೋಧ್ಯಾ ನಗರದ ಮನೆಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಸಿಲಿಂಡ‌ರ್ ಸ್ಫೋಟಗೊಂಡಿದೆ. ಇದರಿಂದ ಇಬ್ಬರು ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

"ಕಾಂಗ್ರೆಸ್‌ಗೆ ಕರ್ನಾಟಕವೇ ಎಟಿಎಂ"; ಪಿಕ್‌ಪಾಕೆಟ್‌ ಸರ್ಕಾರ ಎಂದು ಕಿಡಿ ಕಾರಿದ ಕುಮಾರಸ್ವಾಮಿ

ಪಿಕ್‌ಪಾಕೆಟ್‌ ಸರ್ಕಾರ ಎಂದು ಕಿಡಿ ಕಾರಿದ ಕುಮಾರಸ್ವಾಮಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆ ಮತ್ತು ಸರ್ಕಾರದ ಇತ್ತೀಚಿನ ಕ್ರಮಗಳ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಹೇಳಿಕೆಗಳ ಕುರಿತು ಟೀಕಿಸಿದ ಸಚಿವರು, "ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಮಹಾನಗರದ ವ್ಯಾಪ್ತಿಯನ್ನು ಹಿಗ್ಗಿಸುವುದರ ಹಿಂದೆ ಅಭಿವೃದ್ಧಿಯ ಉದ್ದೇಶವಿಲ್ಲ.

ಒಂದು ವರ್ಷದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ನೀರು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ

ಒಂದು ವರ್ಷದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ನೀರು

ಈ ಯೋಜನೆಯಡಿಯಲ್ಲಿ ಜಿಲ್ಲೆಯ 4 ಪ್ಯಾಕೇಜ್ ಗಳ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಮೊದಲ ಪ್ಯಾಕೇಜ್ ನಲ್ಲಿ ಗೌರಿಬಿದನೂರು ಭಾಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.90 ರಷ್ಟು ಕಾಮಗಾರಿಯೂ ಮುಗಿದಿದೆ. ಉಳಿದ ತಾಲೂಕುಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ.

ಪ್ರಚೋದನಕಾರಿ ಭಾಷಣ ಆರೋಪ; ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್‌ ದಾಖಲು

ಪ್ರಚೋದನಕಾರಿ ಭಾಷಣ ಆರೋಪ; ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್‌ ದಾಖಲು

ಗಣೇಶೋತ್ಸವ ಶೋಭಾಯಾತ್ರೆಯಂದು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಇತರರ ವಿರುದ್ಧ ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಶೋಭಾಯಾತ್ರೆ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದ್ದರು ಎನ್ನಲಾಗಿದೆ.

KPSC Recruitment Scam: ಜೈಲಿನಲ್ಲಿರುವ ಕೆಪಿಎಸ್‌ಸಿ ಖದೀಮರು ಇಡಿ ವಶಕ್ಕೆ: ಗಂಗ್ವಾರ್‌, ಕನ್ನಾಳೆ ಇ.ಡಿ ಇಕ್ಕಳದಲ್ಲಿ

ಗಂಗ್ವಾರ್‌, ಕನ್ನಾಳೆ ಇ.ಡಿ ಇಕ್ಕಳದಲ್ಲಿ

ಆರೋಪಿಗಳಿಬ್ಬರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ದ್ದರು. ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದಿರುವ ಇಡಿ, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದೆ. ಕಳೆದ ನಾಲ್ಕು ದಿನಗಳಿಂದ ಇಡಿ ಅಧಿಕಾರಿಗಳು ಇಬ್ಬರೂ ಆರೋಪಿಗಳನ್ನು ಜೈಲಿನ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು.

ಮೀಸಲು ಉಲ್ಲಂಘನೆ: ಕಲಬುರ್ಗಿ ಹೈಕೋರ್ಟ್ ಪೀಠ ಮಹತ್ವದ ತೀರ್ಪು: 5 ಸಾವಿರ ಶಿಕ್ಷಕರ ನೇಮಕ ರದ್ದು

5 ಸಾವಿರ ಶಿಕ್ಷಕರ ನೇಮಕ ರದ್ದು

ಕಲ್ಯಾಣ ಕರ್ನಾಟಕ ಭಾಗದಲ್ಲಿ 2023ರಲ್ಲಿ ನಡೆದ ಆರರಿಂದ ಎಂಟನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್‌ಟಿಆರ್) ನೇಮಕಾತಿ ಪಟ್ಟಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠ ರದ್ದುಪಡಿಸಿ ಮಹತ್ವದ ಆದೇಶ ನೀಡಿದೆ. ಇದರೊಂದಿಗೆ ಈಗಾಗಲೇ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 15 ಸಾವಿರ ಶಿಕ್ಷಕರ ಮುಂದಿನ ಸೇವಾ ಸ್ಥಿತಿಗತಿ ಅತಂತ್ರಕ್ಕೆ ಸಿಲುಕಿದೆ.

ಮಗು ಉಳಿಯಿತೆಂಬ ಆನಂದ ಪೋಷಕರ ಕಣ್ಣಲ್ಲಿ ನೋಡುವುದು ದ್ವಿಶತಕ ಸಿಡಿಸುವುದಕ್ಕಿಂತ ಹೆಚ್ಚು ತೃಪ್ತಿ ನೀಡುತ್ತೆ: ಸುನೀಲ್ ಗವಾಸ್ಕರ್

ಸದ್ಗುರುಗಳ ಸೇವಾ ಕಾರ್ಯಕ್ಕೆ ಸುನೀಲ್‌ ಗವಾಸ್ಕರ್‌ ಮೆಚ್ಚುಗೆ

Sunil Gavaskar: ಬೆಂಗಳೂರು ನಗರದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಮಧುಸೂದನ ಸಾಯಿ ಅವರ 'ಕಂಪ್ಯಾಷನ್ ಇನ್ ಆ್ಯಕ್ಷನ್' (ಕ್ರಿಯಾರೂಪದ ಕರುಣೆ) ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಅವರು ಮಾತನಾಡಿದ್ದು, ಸದ್ಗುರುಗಳ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಚಿತ ಯುಪಿಐ ವಹಿವಾಟಿನಲ್ಲಿ ವ್ಯಾಪಾರಿಗಳಿಗೆ ಶುಲ್ಕದ ಬಲೆ, ಅಂತಿಮವಾಗಿ ಗ್ರಾಹಕನಿಗೆ ಬರೆ: ಡಾ. ಆನಂದ ಕುಮಾರ್‌

ಉಚಿತ ಯುಪಿಐ ವಹಿವಾಟಿನಲ್ಲಿ ವ್ಯಾಪಾರಿಗಳಿಗೆ ಶುಲ್ಕದ ಬಲೆ

ಡಿಜಿಟಲ್‌ ಪಾವತಿ ವ್ಯವಸ್ಥೆಯ ಯುಪಿಐಗೆ ಈಗ ಶುಲ್ಕದ ಕರಿನೆರಳು ಆವರಿಸಿದೆ. ವರ್ಷಗಳ ಕಾಲ “ಸರಳ, ವೇಗ, ಸುರಕ್ಷಿತ ಮತ್ತು ಉಚಿತ” ಎಂಬ ಭರವಸೆಯೊಂದಿಗೆ ಜನರನ್ನು ನಂಬಿಸಿ ಡಿಜಿಟಲ್‌ ಪಾವತಿಯತ್ತ ಕರೆದೊಯ್ದ ಬಳಿಕ, ₹2,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ 0.4% ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (ಎಂ.ಡಿ.ಆರ್‌) ತೆರಿಗೆ ವ್ಯವಸ್ಥೆ ಜಾರಿಗೆ ತರಲಾಗಿದೆ.

7ನೇ ತರಗತಿ ಮಕ್ಕಳ ಕಲಿಕಾ ಮಟ್ಟ ಪರಿಶೀಲನೆ: 180 ಶಿಕ್ಷಕರಿಗೆ ನೋಟಿಸ್: ಪ್ರಾಥಮಿಕ ಶಿಕ್ಷಣದ ಗುಣಮಟ್ಟಕ್ಕೆ ಒತ್ತು ನೀಡಿದ ಶಾಸಕ ಪ್ರದೀಪ್ ಈಶ್ವರ್

ಪ್ರಾಥಮಿಕ ಶಿಕ್ಷಣದ ಗುಣಮಟ್ಟಕ್ಕೆ ಒತ್ತು ನೀಡಿದ ಶಾಸಕ ಪ್ರದೀಪ್ ಈಶ್ವರ್

ಶಾಸಕರು ನಮ್ಮೂರಿಗೆ ನಮ್ಮ ಶಾಸಕ ಎಂಬ ಕಾರ್ಯಕ್ರಮದ ಮುಖೇನ ಕ್ಷೇತ್ರ ಸಂಚಾರದ ವೇಳೆ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ, ಕೆಲವು 7ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡದ ಮೂಲ ಅಕ್ಷರಮಾಲೆ ಬರೆಯಲು ಹಾಗೂ ಸರಳ ಸಂಕಲನ–ವ್ಯವಕಲನದಂತಹ ಮೂಲ ಗಣಿತದ ಲೆಕ್ಕಗಳನ್ನು ಬಿಡಿಸಲು ಕಷ್ಟವಾಗುತ್ತಿರುವುದು ಗಮನಕ್ಕೆ ಬಂದಿತ್ತು

Praja Seva: ಅರ್ಜಿ ಸಲ್ಲಿಸುವ ವಿಧಾನ ತಿಳಿದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನೀಡಿ ಶೇ.100ರಷ್ಟು ವಿಲೇವಾರಿಗೆ ಕ್ರಮ

ಪ್ರಜಾಸೇವಾ ಆಂದೋಲನದ ಸದ್ಬಳಕೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಜಿ.ಪ್ರಭು

ಸಾರ್ವಜನಿಕರು ಪ್ರಜಾಸೇವಾ ಆಂದೋಲನದ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸದ್ಬಳಕೆ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸುವ ವಿಧಾನವನ್ನು ಸರಿಯಾಗಿ ತಿಳಿದು, ಅಗತ್ಯ ದಾಖಲೆ ಗಳೊಂದಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದುಕೊಂಡರೆ, ಅರ್ಜಿಗಳ ಶೇ.100ರಷ್ಟು ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಹೇಳಿದರು.

ದೇಶದಲ್ಲಿ ಆರೋಗ್ಯ-ಉನ್ನತ ಶಿಕ್ಷಣ ಸೇವೆಗಳ ವಿಸ್ತರಣೆಗೆ ಒತ್ತು: ಸಚಿವ ಪ್ರಲ್ಹಾದ್‌ ಜೋಶಿ

ದೇಶದಲ್ಲಿ ಆರೋಗ್ಯ-ಉನ್ನತ ಶಿಕ್ಷಣ ಸೇವೆಗಳ ವಿಸ್ತರಣೆಗೆ ಒತ್ತು: ಜೋಶಿ

Pralhad Joshi: ಇಂದು ಭಾರತದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸುತ್ತಿದೆ. ದೇಶ, ಸಮಾಜದಲ್ಲಿ ಶಾಂತಿ ಮತ್ತು ಸುಸ್ಥಿರತೆ ಇದ್ದಾಗ ಮಾತ್ರ ಸಮೃದ್ಧಿ ಕಾಣಲು ಸಾಧ್ಯ. ಅದರಂತೆ ಮೋದಿ ಅವರ ಸರ್ಕಾರ ಆರೋಗ್ಯ, ಶಿಕ್ಷಣ, ರಕ್ಷಣೆ, ಶಾಂತಿ-ಸುವ್ಯವಸ್ಥೆಗೆ ಆದ್ಯತೆ ನೀಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.

Sri Madhusudan Sai: ಸಮಾಜದ ಕೆಲಸಕ್ಕಾಗಿ ಸಾಲ ಮಾಡಿದ್ದೇವೆ, ಭಿಕ್ಷೆ ಎತ್ತಿದ್ದೇವೆ: ಸದ್ಗುರು ಶ್ರೀ ಮಧುಸೂದನ ಸಾಯಿ

ಸಮಾಜದ ಕೆಲಸಕ್ಕಾಗಿ ಸಾಲ ಮಾಡಿದ್ದೇವೆ, ಭಿಕ್ಷೆ ಎತ್ತಿದ್ದೇವೆ: ಸದ್ಗುರು

ಬೆಂಗಳೂರಿನಲ್ಲಿ ನಡೆದ 'ಕಂಪ್ಯಾಷನ್ ಇನ್ ಆ್ಯಕ್ಷನ್' (ಕ್ರಿಯಾರೂಪದ ಕರುಣೆ) ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಅವರ ಪ್ರಶ್ನೆಗಳಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಉತ್ತರಿಸಿದ್ದಾರೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು, ಹಸಿದು ಶಾಲೆಗೆ ಹೋಗಬಾರದು. ಆರೋಗ್ಯ ಸೇವೆಯಿಂದ ದೂರವಾಗಬಾರದು ಎನ್ನುವುದೇ ನನ್ನ ಕನಸು. ಇದಕ್ಕಾಗಿ ಇನ್ನಷ್ಟು ಕಷ್ಟಪಡಲು ನಾನು ತಯಾರಿದ್ದೇನೆ ಎಂದು ಸದ್ಗುರು ಘೋಷಿಸಿದ್ದಾರೆ.

ದೆಹಲಿ ವಿವಿ ಚುನಾವಣೆ ಗೆದ್ದ ABVP ಅಭ್ಯರ್ಥಿಗಳಿಗೆ ಸಚಿವ ಪ್ರಲ್ಹಾದ್‌ ಜೋಶಿ ಅಭಿನಂದನೆ

ದೆಹಲಿ ವಿವಿ ಚುನಾವಣೆ ಗೆದ್ದ ABVP ಅಭ್ಯರ್ಥಿಗಳಿಗೆ ಸಚಿವ ಜೋಶಿ ಅಭಿನಂದನೆ

Pralhad Joshi: ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ ಚುನಾವಣೆ ಫಲಿತಾಂಶ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ, 2026ರ ಡಿಯುಎಸ್‌ಯು ಚುನಾವಣೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಎಬಿವಿಪಿ ಗೆದ್ದುಕೊಂಡಿದ್ದು, ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

Raichur Murder: ರಾಯಚೂರಿನಲ್ಲಿ ಕಲ್ಲಿನಿಂದ ಜಜ್ಜಿ ಮಹಿಳೆಯ ಭೀಕರ ಹತ್ಯೆ; ರಕ್ತಸಿಕ್ತವಾಗಿದ್ದ ತಾಯಿಯ ಬಳಿ ಕುಳಿತು 2 ವರ್ಷದ ಮಗು ರೋದನೆ

ರಾಯಚೂರಿನಲ್ಲಿ ಕಲ್ಲಿನಿಂದ ಜಜ್ಜಿ ಮಹಿಳೆಯ ಭೀಕರ ಹತ್ಯೆ!

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಆರ್‌ಎಚ್.ಕ್ಯಾಂಪ್ 5ರ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಯನಹಳ್ಳಿ, ಗೌರಿಬಿದನೂರಿನಲ್ಲಿ ಆಯೋಜನೆ: ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 93 ಯೂನಿಟ್ ರಕ್ತ ಸಂಗ್ರಹ

ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 93 ಯೂನಿಟ್ ರಕ್ತ ಸಂಗ್ರಹ

ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಶ್ರೀ ಚೆನ್ನಕೇಶವಸ್ವಾಮಿ ವಿನಾಯಕ ಗೆಳೆಯರ ಬಳಗ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 26 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇದೇ ವೇಳೆ ಗೌರಿಬಿದನೂರು ತಾಲ್ಲೂಕಿನ ಸೂರ್ಯ ಕಲ್ಯಾಣ ಮಂಟಪದಲ್ಲಿ ಮೋಹನ್ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ 67 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಒಟ್ಟು 93 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

Dr.M.C.Sudhakar: ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು: ಡಾ.ಎಂ.ಸಿ.ಸುಧಾಕರ್

ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕ ಗಳಿಸುವುದೇ ಶಿಕ್ಷಣದ ಅಂತಿಮ ಗುರಿಯಾಗಬಾರದು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ವೈಜ್ಞಾನಿಕ ಚಿಂತನೆ, ಮಾನವೀಯತೆ, ಸಂವಿಧಾನದ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಹಾಗೂ ಆತ್ಮವಿಶ್ವಾಸ ಬೆಳೆಸುವ ಶಿಕ್ಷಣ ಅಗತ್ಯವಾಗಿದೆ. ತಂತ್ರ ಜ್ಞಾನ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಕರು ಕೂಡ ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸಬೇಕು

Vastu Astrologer BK Subhash Chandra Jain: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಕರಾವಳಿಯ ಖ್ಯಾತ ಜೈನ ಜ್ಯೋತಿಷಿ ಬಿ.ಕೆ.ಸುಭಾಷ್ ಚಂದ್ರ ಜೈನ್ ಭೇಟಿ

ಮುಖ್ಯಮಂತ್ರಿರವರನ್ನು ಭೇಟಿಯಾದ ಕರಾವಳಿಯ ಜೈನ ಜ್ಯೋತಿಷಿ

ಬೆಂಗಳೂರಿನಲ್ಲಿ ಚಾತುರ್ಮಾಸ ಮಾಡುತ್ತಿರುವ ಪ್ರಖ್ಯಾತ ಜೈನಮುನಿ ಗಳಾದ ಅನೇಕಾಂತ ಸಾಗರ ಮಹಾರಾಜರ ಅಪೇಕ್ಷೆಯಂತೆ ಅಕ್ಟೋಬರ್ 25ನೇ ತಾರೀಕು ನಗರದ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಯುವ "ಬೃಹತ್ ಸಿದ್ದ ನವಗ್ರಹ ತೀರ್ತಂಕರ ಮಹಾ ಆರಾಧನಾ ಮಹೋತ್ಸವ" ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ವೈಯಕ್ತಿಕವಾಗಿ ಆಮಂತ್ರಿಸಿದ್ದು ಖಂಡಿತ ಜೈನ ಸಮುದಾಯದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Loading...