ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಗೃಹ ಲಕ್ಷ್ಮಿ ಯೋಜನೆಯ ದುರುಪಯೋಗವಾಗಿದ್ದು ಹೇಗೆ? ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ಪಷ್ಟನೆಯಲ್ಲಿ ಏನಿದೆ?

ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ಪಷ್ಟನೆ

Gruha Lakshmi Scheme: ಗೃಹಲಕ್ಷ್ಮಿ ಯೋಜನೆಗಳಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಹಲವು ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಾಗಿ, ಒಂದೇ ಫಲಾನುಭವಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದಾಗಿ, ಬ್ಯಾಂಕ್ ಖಾತೆ ಹೊಂದಿರದ ಫಲಾನುಭವಿಗಳಿಗೂ ಧನಸಹಾಯ ಪಾವತಿಯಾಗುತ್ತಿರುವ ಬಗ್ಗೆ ತಿಳಿಸಿದೆ.

ರಾಯಲ್ ಬರ್ಮಿಂಗ್‌ಹ್ಯಾಮ್ ಲಲಿತಕಲಾ ಕೇಂದ್ರದ ಗೌರವ ಫೆಲೋಶಿಪ್‌ʼಗೆ ಭಾಜನರಾದ ಡಾ. ರಾಧಿಕಾ ಬಾಲಕೃಷ್ಣನ್

ಗೌರವ ಫೆಲೋಶಿಪ್‌ʼಗೆ ಭಾಜನರಾದ ಡಾ.ರಾಧಿಕಾ ಬಾಲಕೃಷ್ಣನ್

ಈ ಮಾನ್ಯತೆಯು ಕರ್ನಾಟಕದ ಶಾಸ್ತ್ರೀಯ ಕಲಾ ಸಮುದಾಯಕ್ಕೆ ಒಂದು ಮಹತ್ವದ ಕ್ಷಣವಾಗಿದೆ. ಕರ್ನಾಟಕ ಸಂಗೀತದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿರುವ ನಮ್ಮ ರಾಜ್ಯವು ಬಹಳ ಹಿಂದಿ ನಿಂದಲೂ ಆಳವಾದ ಗುರು-ಶಿಷ್ಯ ಸಂಪ್ರದಾಯಗಳು, ಪ್ರಭಾವಶಾಲಿ ಸಂಗೀತ ಸಂಯೋಜಕರು, ಉತ್ಸಾಹಿ ಕಲಾ ಪ್ರದರ್ಶನ ಪರಿಸರ ವ್ಯವಸ್ಥೆಯ ಮೂಲಕ ತೆಲೆಮಾರುಗಳಿಂದ ಸಂಗೀತಗಾರರನ್ನು ಮತ್ತು ಶಿಕ್ಷಕರನ್ನು ಪೋಷಿಸುತ್ತಿದೆ

2 ದಿನಗಳ ಅಂತರದಲ್ಲಿ ನಮ್ಮ ಮೆಟ್ರೋದಲ್ಲಿ ಮತ್ತೆ ಸಮಸ್ಯೆ; 25 ನಿಮಿಷಗಳ ಆತಂಕದ ಬಳಿಕ ಪುನರಾರಂಭಗೊಂಡ ರೈಲು ಸಂಚಾರ

2 ದಿನಗಳ ಅಂತರದಲ್ಲಿ ನಮ್ಮ ಮೆಟ್ರೋದಲ್ಲಿ ಮತ್ತೆ ಸಮಸ್ಯೆ

Bengaluru Metro: ಕೇವಲ 2 ದಿನಗಳ ಹಿಂದೆಯಷ್ಟೇ ಕೆಟ್ಟುನಿಂತು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ನಮ್ಮ ಮೆಟ್ರೋ ಗುರುವಾರ (ಜೂನ್‌ 25) ಮತ್ತೊಮ್ಮೆ ಕೈಕೊಟ್ಟಿತು. ಕಬ್ಬನ್‌ ಪಾರ್ಕ್‌ ಸ್ಟೇಷನ್‌ನಲ್ಲೇ ಮತ್ತೊಮ್ಮೆ ಯಡವಟ್ಟಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸದ್ಯ ಸಮಸ್ಯೆ ಬಗೆ ಹರಿಸಲಾಗಿದೆ.

ಬೆಂಗಳೂರಿನಲ್ಲಿ ನಟ ದರ್ಶನ್ ಪುತ್ರ ವಿನೀಶ್ ಚಲಾಯಿಸುತ್ತಿದ್ದ ಕಾರ್‌ ಅಪಘಾತ; ಸ್ಕೂಟರ್‌ಗೆ ಡಿಕ್ಕಿ

ಬೆಂಗಳೂರಿನಲ್ಲಿ ನಟ ದರ್ಶನ್ ಪುತ್ರ ವಿನೀಶ್ ಚಲಾಯಿಸುತ್ತಿದ್ದ ಕಾರ್‌ ಅಪಘಾತ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಪುತ್ರ ವಿನೀಶ್‌ ಕೂಡ ಇದೀಗ ಯಡವಟ್ಟು ಮಾಡಿಕೊಂಡಿದ್ದಾನೆ. ವಿನೀಶ್‌ ಚಲಾಯಿಸುತ್ತಿದ್ದ ಐಷಾರಾಮಿ ಕಾರು ರಾಜರಾಜೇಶ್ವರಿ ನಗರದಲ್ಲಿ ಅಪಘಾತಕ್ಕೀಡಾಗಿದೆ. ನೀಶ್‌ ಡ್ರೈವ್‌ ಮಾಡುತ್ತಿದ್ದ ಪೋರ್ಡ್‌ ಎಂಡೋವರ್‌ ಕಾರು, ಮುಂಭಾಗದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

Gubbi News: ಅನರ್ಹ ಮತಗಳ ತೆರವಿನ ಎಸ್ಐಆರ್ ಯಶಸ್ವಿಗೆ ಗುಬ್ಬಿ ಬಿಜೆಪಿ ಸಿದ್ದ

ಅನರ್ಹ ಮತಗಳ ತೆರವಿನ ಎಸ್ಐಆರ್ ಯಶಸ್ವಿಗೆ ಗುಬ್ಬಿ ಬಿಜೆಪಿ ಸಿದ್ದ

ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಾಗಾರದಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಏಜೆಂಟ್ಸ್, ಸದಸ್ಯರು ಸ್ಥಳೀಯ ಮುಖಂಡರು ಆಗಮಿಸಿ 30 ದಿನಗಳ ಕಾಲ ವಿಶೇಷ ಮತದಾರ ಪರಿಷ್ಕರಣೆ ಹೇಗೆ ಪಾಲ್ಗೊಂಡು ಬಿಜೆಪಿ ಪರ ಮತಗಳನ್ನು ಉಳಿಸಿ ಕೊಳ್ಳುವ ಕೆಲಸ ಮಾಡಬೇಕು ಎಂಬ ಮಾಹಿತಿ ತಿಳಿಸಲಾಯಿತು.

ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌; ಆಗಿದ್ದು ವಾಟರ್‌ ವಾರಿಯರ್‌: ಗುರುನಂದನ್‌ ಎಂಬ ಆಧುನಿಕ ಭಗೀರಥನ ಸಾಹಸಗಾಥೆ

ರಾಜಧಾನಿಯಲ್ಲೊಬ್ಬ ವಾಟರ್‌ ವಾರಿಯರ್‌

Water Warrior: ಮೆಕ್ಯಾನಿಕಲ್‌ ಎಂಜಿನಿಯರ್‌ ಗುರುನಂದನ್‌ ಹ್ಯಾಂಡ್ಸ್‌ಆನ್‌ ಎನ್‌ಜಿಒ ಹುಟ್ಟು ಹಾಕಿ, ತಮ್ಮದೇ ತಂಡ ಕಟ್ಟಿಕೊಂಡು ಸುಮಾರು ಒಂದೂವರೆ ದಶಕದಿಂದ ಕೆರೆಗಳ ಪುನಶ್ಚೇತನ, ಗಿಡ ನಾಟಿ, ನೆಟ್ಟ ಗಿಡದ ಆರೈಕೆ ಹೀಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಗಿನ್ನಿಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ನ ಭಾಗವಾಗಲಿದ್ದಾರೆ.

ʼʼಬದನೆಕಾಯಿ ಮಾರಾಟ ಮಾಡಿ ಬಿಡದಿ ಬಳಿ ಕುಮಾರಣ್ಣ ಜಮೀನು ತಗೊಂಡ್ರಾ?ʼʼ ಪ್ರದೀಪ್‌ ಈಶ್ವರ್‌ ವ್ಯಂಗ್ಯ

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಪ್ರದೀಪ್‌ ಈಶ್ವರ್‌ ವಾಗ್ದಾಳಿ

Pradeep Eshwar: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ವಾಗ್ದಾಳಿ ನಡೆಸಿದ್ದಾರೆ. ಅನಿತಕ್ಕ (ಅನಿತಾ ಕುಮಾರಸ್ವಾಮಿ) ಅವರಿಗೆ ಬಿಡದಿಯಲ್ಲಿ 32 ಎಕ್ರೆ ಎಲ್ಲಿಂದ ಬಂತು? ಬಿಡದಿ ಬಳಿ ನೂರಾರು ಎಕ್ರೆ ಹೇಗೆ ಬಂತು? ಇದನ್ನೆಲ್ಲ ರಾಮನಗರದಲ್ಲಿ ಬದನೆಕಾಯಿ ಮಾರಿ ಪಡೆದಿದ್ದಾ? ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್; ರಾಜ್ಯದ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ

ರಾಜ್ಯದ ಮಾವು ಬೆಳೆಗಾರರ ನೆರವು ಘೋಷಿಸಿದ ಕೇಂದ್ರ ಸರ್ಕಾರ

HD Kumaraswamy: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಚರ್ಚೆ ನಡೆಸಿದ ಫಲವಾಗಿ ಕೇಂದ್ರ ಸರ್ಕಾರ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸಿದೆ.

ಡಾ‌. ಪ್ರದೀಪ್‌ ಕೆಂಚನೂರುಗೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಡಾ‌. ಪ್ರದೀಪ್‌ ಕೆಂಚನೂರುಗೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಮುಂಬೈನಲ್ಲಿ ನಡೆದ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಕಿರುಚಿತ್ರ 'ದಿ ಹಗ್ ಆಫ್ ಎಂಪಿನೆಸ್' (ಖಾಲಿತನದ ಅಪ್ಪುಗೆ) ರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಚಿತ್ರದ ನಿರ್ದೇಶಕ ಡಾ. ಪ್ರದೀಪ್ ಕೆಂಚನೂರು ಅವರಿಗೆ ಪ್ರೀ ಪ್ರೆಸ್ತಿ ಅಂತಾರಾಷ್ಟ್ರೀಯ ಕ್ರಿಟಿಕ್ ಅಸೋಸಿಯೇಷನ್ ನೀಡುವ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.

ತುಂಗಭದ್ರಾ ಜಲಾಶಯದ 33 ಸ್ಪಿಲ್ ವೇ ಗೇಟುಗಳ ಲೋಕಾರ್ಪಣೆ; ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಡಿ.ಕೆ. ಶಿವಕುಮಾರ್

ತುಂಗಭದ್ರಾ ಜಲಾಶಯದ 33 ಸ್ಪಿಲ್ ವೇ ಗೇಟುಗಳ ಲೋಕಾರ್ಪಣೆ

CM DK Shivakumar: ತುಂಗಭದ್ರಾ ಅಣೆಕಟ್ಟಿನ 33 ಟಿಎಂಸಿ ನೀರನ್ನು ಉಳಿಸುವ ಬಗ್ಗೆ ರೈತ ಮುಖಂಡರು ಸಲ್ಲಿಸಿರುವ ಮನವಿ ಸೇರಿದಂತೆ ಯಾವ ರೀತಿ ರಕ್ಷಿಸಿ, ರೈತ ಕುಟುಂಬಗಳನ್ನು ಕಾಪಾಡಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ನವಲಿ ಸಮನಾಂತರ ಜಲಾಶಯ, ಹೂಳೆತ್ತುವ ವಿಚಾರ ಸೇರಿದಂತೆ ಎಲ್ಲಾ ಅವಕಾಶಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿ ನಾವೆಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದೇವೆ. ಈ ತೀರ್ಮಾನವನ್ನು ಕೇಂದ್ರ ಸಚಿವರೇ ಪ್ರಕಟಿಸಲಿದ್ದಾರೆ. ಇಂದು ನಾವು ಒಂದು ತಾಸುಗಳ ಕಾಲ ಮಾಡಿರುವ ಚರ್ಚೆ ದೇಶದ ನೀರಾವರಿ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ಇತಿಹಾಸದ ಪುಟಕ್ಕೆ ಸೇರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾದ ರಾಜ್ಯ ಚುನಾವಣಾ ಆಯೋಗ: ಛಲವಾದಿ ನಾರಾಯಣಸ್ವಾಮಿ ಆರೋಪ

ರಾಜ್ಯ ಸರ್ಕಾರದ ಕೈಗೊಂಬೆ ರಾಜ್ಯ ಚುನಾವಣಾ ಆಯೋಗ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಈಗಾಗಲೇ ಭಾರತ ಚುನಾವಣಾ ಆಯೋಗವು ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‍ಐಆರ್) ನಡೆಸುತ್ತಿದೆ. ಆದರೆ ಇದಕ್ಕೆ ಸಮಾನಾಂತರವಾಗಿ ರಾಜ್ಯ ಚುನಾವಣಾ ಆಯೋಗವು ಎಸ್‍ಐಆರ್ ನಡೆಸುತ್ತಿದೆ. ಇದು ತಪ್ಪು. ಈ ಬಗ್ಗೆ ರಾಜ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಕೃಷ್ಣ ಭೈರೇಗೌಡಗೆ ಬೆಂಗಳೂರು ನಗರ, ಡಾ. ಜಿ. ಪರಮೇಶ್ವರ್‌ಗೆ ತುಮಕೂರು ಜವಾಬ್ದಾರಿ

ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರ ನೇಮಕ

DK Shivakumar: ಕೆಲವು ಜಿಲ್ಲೆಗಳ ತಾತ್ಕಾಲಿಕ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ಜಿಲ್ಲೆಗಳ ಜವಾಬ್ದಾರಿಯನ್ನು ಹಿರಿಯ ನಾಯಕರಿಗೆ ಹಂಚಿಕೆ ಮಾಡಲಾಗಿದೆ. ಡಿಸಿಎಂ ಡಾ. ಜಿ. ಪರಮೇಶ್ವರ್‌, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಪ್ರಮುಖ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಬೈಕ್‌ ಪ್ರಿಯರಿಗೆ ಗುಡ್ ನ್ಯೂಸ್: ಈಗ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲೂ ಸಿಗುತ್ತೆ ಕ್ಲಾಸಿಕ್ ಲುಕ್‌ನ 'ಜಾವಾ 42 ಐವರಿ' ಬೈಕ್!

ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲೂ ಸಿಗುತ್ತೆ 'ಜಾವಾ 42 ಐವರಿ' ಬೈಕ್!

Jawa 42 Ivory Bike: 'ಜಾವಾ 42 ಐವರಿ' ಬೈಕ್‌ಗೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆಯನ್ನು ಗಮನಿಸಿರುವ ಕಂಪನಿಯು, ದೇಶದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೇ ಕ್ಲಿಕ್‌ಗಳ ಮೂಲಕ ನಿಮ್ಮ ನೆಚ್ಚಿನ ಬೈಕ್ ಅನ್ನು ಬುಕ್ ಮಾಡಬಹುದಾಗಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೆಂದ್ರ: ತೋತಾಪುರಿ ಮಾವು ಕ್ವಿಂಟಾಲ್‌ಗೆ 1,750 ರುಪಾಯಿ ಸಹಾಯಧನ ಘೋಷಣೆ

ತೋತಾಪುರಿ ಮಾವು ಕ್ವಿಂಟಾಲ್‌ಗೆ 1,750 ರುಪಾಯಿ ಸಹಾಯಧನ ಘೋಷಣೆ

Pralhad Joshi: ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಕರ್ನಾಟಕದ ಮಾವು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಧಾವಿಸಿದೆ. 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ 1,750 ರೂಪಾಯಿ ಸಹಾಯಧನವನ್ನು ರೈತರಿಗೆ ನೀಡಲು ಅನುಮೋದನೆ ನೀಡಿದೆ.

K N Rajanna: 29ರಂದು ಜಿಸಿಸಿ ಸೊಸೈಟಿಯ ಆಡಳಿತ ಕಚೇರಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಚಾಲನೆ

29ರಂದು ಜಿಸಿಸಿ ಸೊಸೈಟಿಯ ಆಡಳಿತ ಕಚೇರಿಗೆ ಮಾಜಿ ಸಚಿವ ಚಾಲನೆ

ಬನಶಂಕರಿ, ಶ್ರೀನಿವಾಸ ನಗರದ ಕನಕಾ ಕಾಂಪ್ಲೆಕ್ಸ್ ನಲ್ಲಿ ಗ್ಲೋಬಲ್ ಸಿಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ನೂತನ ಆಡಳಿತ ಕಚೇರಿಯನ್ನು ಜೂ.29ರಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ(K N Rajanna) ಉದ್ಘಾಟಿಸಲಿದ್ದಾರೆ. ಗ್ಲೋಬಲ್ ಸಿಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಪ್ರಮುಖ ಸಹಕಾರಿ ಬ್ಯಾಂಕ್ ಆಗಿದ್ದು, ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ.

ಜೂ.27ಕ್ಕೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ

ಜೂ.27ಕ್ಕೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಒಕ್ಕಲಿಗರ ಸಂಘ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯನ್ನು ಜೂ.27 ರಂದು ಬೆಳಗ್ಗೆ 11.30 ಗಂಟೆಗೆ ನಗರದ ಕನ್ನಡ ಭವನದಲ್ಲಿ ಆಯೋಜಿಸ ಲಾಗಿದೆ.

​ಎಸ್ಐಆರ್ ಪ್ರಕ್ರಿಯೆ ಕುರಿತು ಕಾಂಗ್ರೆಸ್ ನಾಯಕರ ಅಪಪ್ರಚಾರ: ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಕಿಡಿ

​ಎಸ್ಐಆರ್ ಕುರಿತು ಕೈ ನಾಯಕರ ಅಪಪ್ರಚಾರ: ಸದಾನಂದ ಭಟ್ ಕಿಡಿ

ಚುನಾವಣಾ ಆಯೋಗವು 24 ವರ್ಷಗಳ ನಂತರ ರಾಷ್ಟ್ರದಾದ್ಯಂತ ಅರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ದೃಷ್ಟಿಯಿಂದ ಈ ಪ್ರಕ್ರಿಯೆ ಯನ್ನು ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ಅನುಮೋದನೆ ನೀಡಿದೆ. ಹೀಗಿದ್ದರೂ, ಕಾಂಗ್ರೆಸ್ ನಾಯಕರು ಜನರಲ್ಲಿ ತಪ್ಪು ಮಾಹಿತಿ ಹರಡುತ್ತಾ, ಬಿಜೆಪಿಯ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವುದು ಖಂಡನೀಯ

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್‌ ಆತ್ಮಹತ್ಯೆ!

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್‌ ಆತ್ಮಹತ್ಯೆ

ನಟಿ ಕೃಷಿ ತಾಪಂಡ ಅವರ ಆರ್‌ ಆರ್‌ ನಗರದಲ್ಲಿರುವ ಮನೆಯಲ್ಲಿ ಉದ್ಯಮಿ ವೈಶಾಖ್ (Vaishak) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ನಟಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ವೈಶಾಕ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಕೃಷಿ ತಾಪಂಡಗೆ ಕರೆ ಮಾಡಿದ್ದ ವೈಶಾಕ್‌ ನಾನಿನ್ನು ಬದುಕುವುದಿಲ್ಲ, ಸಾಯುತ್ತೇನೆ ಎಂದು ಹೇಳಿದ್ದರು.

20% commission scam: ಔಷಧಿ ಖರೀದಿಯಲ್ಲಿ ಶೇ. 20 ರಷ್ಟು ಕಮಿಷನ್ ದಂಧೆ: ಎಸ್‌ಸಿ/ಎಸ್‌ಟಿ ಸಭೆಯಲ್ಲಿ ಆಕ್ರೋಶ!

ಔಷಧಿ ಖರೀದಿಯಲ್ಲಿ ಶೇ. 20 ರಷ್ಟು ಕಮಿಷನ್ ದಂಧೆ: ಆಕ್ರೋಶ

ಬಡ ರೋಗಿಗಳಿಗೆ ಅನುಕೂಲವಾಗಲು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸಜ್ಜಿತ ಸ್ಕ್ಯಾನಿಂಗ್ ಯಂತ್ರ ಅಳವಡಿಸಬೇಕು," ಎಂದು ಅವರು ಆಡಳಿತ ಮಂಡಳಿಯನ್ನು ಬಲವಾಗಿ ಒತ್ತಾಯಿಸಿದರು. ವೈದ್ಯಾಧಿಕಾರಿ ಡಾ. ಸುನೀಲ್ ಪ್ರತಿಕ್ರಿಯಿಸಿ, "ಆಸ್ಪತ್ರೆಯಲ್ಲಿ ಕೇವಲ 6 ವೈದ್ಯರಿದ್ದು, 33 ಇರಬೇಕಾದ 'ಡಿ' ಗ್ರೂಪ್ ಸಿಬ್ಬಂದಿಯಲ್ಲಿ ಕೇವಲ 13 ಜನರಿದ್ದಾರೆ," ಎಂದು ಸಿಬ್ಬಂದಿ ಕೊರತೆಯ ನೆಪವೊಡ್ಡಿ ಕೈಚೆಲ್ಲಿದರು

Indi News: ದೇಶ ಸೇವೆ ಮಾಡುವುದು ಪವಿತ್ರವಾದ ಕಾರ್ಯ

ದೇಶ ಸೇವೆ ಮಾಡುವುದು ಪವಿತ್ರವಾದ ಕಾರ್ಯ

ದೇಶ ಸೇವೆಗೆ ಗಂಡು ಹೆಣ್ಣು ಬೇಧವಿಲ್ಲ ವಿದ್ಯಾರ್ಥಿ ದೆಸೆಯಿಂದಲೇ ದೇಶ ಸೇವೆ ಮಾಡುವ ಗುರಿ ಇಟ್ಟುಕೊಂಡು ಪ್ರಯತ್ನಿಸ ಬೇಕು. ಒಬ್ಬ ರೈತ ಹಾಗೂ ಒಬ್ಬ ಸೈನಿಕ ಈ ದೇಶಕ್ಕೆ ದೊಡ್ಡ ಶಕ್ತಿ ಇವರಿಬ್ಬರ ನಿಸ್ವಾರ್ಥ ಸೇವೆ ಯಿಂದ ನಾವೆಲ್ಲ ಸಮೃದ್ಧಿ ಜೀವನ ನಡೆಸಲು ಸಾಧ್ಯವಾಗಿದೆ ತಾವುಗಳು ನಿಷ್ಠೆಯಿಂದ ದೇಶಕ್ಕಾಗಿ ದುಡಿಯಬೇಕು ಎಂದು ಯೋಧರಿಗೆ ಕರೆ ನೀಡಿದರು

ನಕಲಿ ವೈದ್ಯನ ಮನೆ ಮೇಲೆ ತಾಲೂಕು ಆರೋಗ್ಯ ಅಧಿಕಾರಿಗಳ ತಂಡದಿಂದ ದಿಢೀರ್ ದಾಳಿ

ನಕಲಿ ವೈದ್ಯನ ಮನೆ ಮೇಲೆ ತಾಲೂಕು ಆರೋಗ್ಯ ತಂಡದಿಂದ ದಿಢೀರ್ ದಾಳಿ

ಅಧಿಕಾರಿಗಳ ತಂಡ ಬಟ್ಲಹಳ್ಳಿ ಗ್ರಾಮದಲ್ಲಿರುವ ನಾರಾಯಣ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ,ನಕಲಿ ವೈದ್ಯರೆಂದು ನಾಮಫಲಕ ಹಾಕಿಕೊಂಡಿದ್ದ ಬಿ. ನಾರಾಯಣ್ ರೆಡ್ಡಿ ಮನೆಯಲ್ಲಿ ಇರಲಿಲ್ಲ.ಆದರೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ಮನೆಯಲ್ಲಿದ್ದರು.ಅವರ ಸಮ್ಮುಖದಲ್ಲೇ ಇಡೀ ಮನೆಯನ್ನು ತಪಾಸಣೆ ನಡೆಸಿದಾಗ,ರೋಗಿಗಳಿಗೆ ಬಳಸಲಾಗುತ್ತಿದ್ದ ಅನೇಕ ಸೂಜಿಗಳು ಸಿರಿಂಜ್ ವಿವಿಧ ಮಾತ್ರೆಗಳು ಹಾಗೂ ಗ್ಲುಕೋಸ್ ಬಾಟಲಿಗಳು ಪತ್ತೆಯಾಗಿವೆ.

New Tungabhadra gate: ತುಂಗಭದ್ರೆ ಹೊಸ ಗೇಟ್‌ʼಗಳು ಇಂದು ಲೋಕಾರ್ಪಣೆ

ತುಂಗಭದ್ರೆ ಹೊಸ ಗೇಟ್‌ʼಗಳು ಇಂದು ಲೋಕಾರ್ಪಣೆ

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜನರ ಜೀವನಾಡಿ, ತುಂಗಭದ್ರಾ ಜಲಾಶಯದ 33 ನೂತನ ಸ್ಪಿಲ್ ವೇ ಗೇಟ್‌ಗಳ ಲೋಕಾರ್ಪಣೆ ಗುರುವಾರ ನಡೆಯಲಿದೆ. ಐತಿಹಾಸಿಕ ಕ್ಷಣಕ್ಕೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ಮುಖ್ಯಮಂತ್ರಿಗಳು ಸಾಕ್ಷಿಯಾಗ ಲಿದ್ದಾರೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.

ಅಡ್ಡ ಮತದಾನ: ಐವರು ಬಿಜೆಪಿ ಶಾಸಕರ ಉಚ್ಛಾಟನೆ ?

ಅಡ್ಡ ಮತದಾನ: ಐವರು ಬಿಜೆಪಿ ಶಾಸಕರ ಉಚ್ಛಾಟನೆ ?

ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತ ದಾನ ಮಾಡಿರುವವರಿಗೆ ದೊಡ್ಡ ಮೊತ್ತದ ಹಣ ನೀಡಲಾಗಿದೆ ಎಂಬ ಗುಸುಗುಸು ಬಿಜೆಪಿಯೊಳಗೆ ಕೇಳಿ ಬರುತ್ತಿದ್ದು, ಅಡ್ನಾಡಿಗಳು ಯಾರೆಂಬ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ನೀಡಲಾಗಿರುವ ವರದಿಯಲ್ಲಿ ಪಕ್ಷದೊಳಗೆ ಯಾರು ಅಡ್ಡಮತ ದಾನ ಮಾಡಿದ್ದಾರೆಂಬ ವಿಸ್ತೃತ ವರದಿ ನೀಡಲಾಗಿದೆ.

ಮಂತ್ರಿ ಪಟ್ಟ: ಲಾಬಿಗೆ ʼಹೈʼ ತಡೆ

ಮಂತ್ರಿ ಪಟ್ಟ: ಲಾಬಿಗೆ ʼಹೈʼ ತಡೆ

ಇನ್ನೊಂದು ವಾರದ ರಾಜ್ಯದಲ್ಲಿಯೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ, ರಾಜ್ಯ ನಾಯಕರ ದೆಹಲಿ ಪ್ರವಾಸ ಈ ತಿಂಗಳಲ್ಲಿ ಆಗುವುದು ಅನುಮಾನ. ರಾಹುಲ್ ಗಾಂಧಿ ವಿದೇಶದಿಂದ ಜೂ.28ಕ್ಕೆ ದೆಹಲಿಗೆ ಮರಳಲಿದ್ದಾರೆ. ಅನಂತರವೇ ಈ ಮೂವರು ನಾಯಕರನ್ನು ದೆಹಲಿಗೆ ಕರೆಸಿಕೊಂಡು, ಚರ್ಚಿಸುವ ಸಾಧ್ಯತೆಯಿದೆ. ಆದ್ದರಿಂದ ಜುಲೈನ ಮೂರನೇ ವಾರದಲ್ಲಿ ನಡೆಯುವ ಮಳೆಗಾಲದ ಅಧಿವೇಶನದ ವೇಳೆಗೆ ಸಂಪುಟ ವಿಸ್ತರಣೆಯಾಗುವುದು ನಿಶ್ಚಿತ ಎನ್ನಲಾಗಿದೆ.

Loading...