ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Tourism Alert: ಪ್ರವಾಸಿಗರ ಗಮನಕ್ಕೆ: ಈ ವಾರಾಂತ್ಯದಲ್ಲಿ ದತ್ತಪೀಠಕ್ಕೆ ಬರಬೇಡಿ

ಪ್ರವಾಸಿಗರ ಗಮನಕ್ಕೆ: ಈ ವಾರಾಂತ್ಯದಲ್ಲಿ ದತ್ತಪೀಠಕ್ಕೆ ಬರಬೇಡಿ

ಬೆಂಗಳೂರಿನಿಂದ ವೀಕೆಂಡ್‌ನಲ್ಲಿ ಸಾವಿರಾರು ಪ್ರವಾಸಿಗರು ಚಿಕ್ಕಮಗಳೂರಿನ ಹಿಲ್‌ ಸ್ಟೇಶನ್‌ಗಳಿಗೆ ಲಗ್ಗೆಯಿಡುತ್ತಾರೆ. ಆದರೆ ಈ ವಾರಾಂತ್ಯದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕಾರಣ ಇಲ್ಲಿನ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ‌ನಡೆಯುತ್ತಿರುವ ಉರೂಸ್ ಕಾರ್ಯಕ್ರಮ.

Shocking news: ನಾಯಿಯನ್ನೂ ಬಿಡದ ಕಾಮುಕ, ಬೆಂಗಳೂರಿನಲ್ಲಿ ಲೈಂಗಿಕ ವಿಕೃತಿ

ನಾಯಿಯನ್ನೂ ಬಿಡದ ಕಾಮುಕ, ಬೆಂಗಳೂರಿನಲ್ಲಿ ಲೈಂಗಿಕ ವಿಕೃತಿ

ನಾಯಿಯನ್ನು ಗಾಯಗೊಳಿಸಿ ಅದರ ಮೇಲೆ ಲೈಂಗಿಕ ವಿಕೃತಿ ತೋರಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಜಯನಗರದ ನಿವಾಸಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಮಾನಸಿಕ ಅಸ್ವಸ್ಥನೇ ಅಥವಾ ಲೈಂಗಿಕ ವಿಕಾರಿಯೇ ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Panchakshari Hiremath: ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಇನ್ನಿಲ್ಲ

ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಇನ್ನಿಲ್ಲ

ಡಾ. ಪಂಚಾಕ್ಷರಿ ಹಿರೇಮಠ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 100ಕ್ಕೂ ಹೆಚ್ಚು ಉಪಯುಕ್ತ ಕೃತಿಗಳನ್ನು ಸಾರಸ್ವಲೋಕಕ್ಕೆ ಕೊಡುಗೆ ನೀಡಿದ್ದಾರೆ. ಅವರ ಹಲವಾರು ಕೃತಿಗಳು ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿರುವುದು ವಿಶೇಷ.

Murder Case: ಮತ್ತೊಬ್ಬಳ ಜೊತೆ ತೋಟದ ಮನೆಯಲ್ಲಿದ್ದ ವಿವಾಹಿತನ ಕೊಲೆ

ಮತ್ತೊಬ್ಬಳ ಜೊತೆ ತೋಟದ ಮನೆಯಲ್ಲಿದ್ದ ವಿವಾಹಿತನ ಕೊಲೆ

ನಿನ್ನೆ ರಾತ್ರಿ ಇಬ್ಬರೂ ತೋಟದ ಮನೆಯಲ್ಲಿ ಒಟ್ಟಾಗಿ ಇದ್ದರು. ಆದರೆ ಬೆಳಗಾಗುವಷ್ಟರಲ್ಲಿ ವ್ಯಕ್ತಿಯ ಹತ್ಯೆಯಾಗಿದೆ. ಈ ಕೊಲೆಯನ್ನು ಆತನ ಜೊತೆ ಸಂಬಂಧದಲ್ಲಿ ಇದ್ದವಳೇ ಮಾಡಿದ್ದಾಳೆ ಎಂದು ಸೂರ್ಯನ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

E Khata: ರಾಜ್ಯದ ಗ್ರಾಮೀಣ ಆಸ್ತಿಗಳಿಗೂ ಇ-ಖಾತಾ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ರಾಜ್ಯದ ಗ್ರಾಮೀಣ ಆಸ್ತಿಗಳಿಗೂ ಇ-ಖಾತಾ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಶುಕ್ರವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಇ-ಖಾತಾ ಸಮಸ್ಯೆ ಸರಿಪಡಿಸುವ ಸಂಬಂಧ ತಿದ್ದುಪಡಿ ವಿಧೇಯಕ ಕುರಿತಂತೆ ಚರ್ಚೆ ನಡೆಸಲಾಯಿತು. ಅಂತಿಮವಾಗಿ ರಾಜ್ಯ ಸಚಿವ ಸಂಪುಟ ಸಭೆಯು ವಿಧೇಯಕಕ್ಕೆ ಅಂಗೀಕಾರ ನೀಡಿದೆ.

Summer Fashion 2025: ಸೀಸನ್‌ಗೆ ಲಗ್ಗೆ ಇಟ್ಟ ಸಮ್ಮರ್ ಫ್ಯಾಷನ್!

ಸೀಸನ್‌ಗೆ ಲಗ್ಗೆ ಇಟ್ಟ ಸಮ್ಮರ್ ಫ್ಯಾಷನ್!

Summer Fashion 2025: ಬೇಸಿಗೆ ಫ್ಯಾಷನ್‌ಗೆ ರೆಡಿಯಾಗಿದ್ದೀರಾ! ನಿಮ್ಮ ಉತ್ಸಾಹ ಹಾಗೂ ಉಲ್ಲಾಸ ಮೂಡಿಸುವಂತಹ ಫ್ಯಾಷನ್ ಕಾನ್ಸೆಪ್ಟ್ ಈ ಬಾರಿಯ ಸಮ್ಮರ್ ಸೀಸನ್ ಫ್ಯಾಷನ್‌ ಲೋಕಕ್ಕೆ ಎಂಟ್ರಿ ಕೊಟ್ಟಿದೆ. ಉರಿ ಬಿಸಿಲಲ್ಲೂ ತನು- ಮನವನ್ನು ಕೂಲಾಗಿಸುವ ಔಟ್‌ಫಿಟ್‌ಗಳು ಈ ವರ್ಷ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಬಿಡುಗಡೆಗೊಂಡಿವೆ? ಈ ಎಲ್ಲದರ ಕುರಿತಂತೆ ಫ್ಯಾಷನಿಸ್ಟಾಗಳು ಚುಟುಕಾಗಿ ವಿವರಿಸಿದ್ದಾರೆ.

POCSO Case: ಐಸ್‌ ಕ್ರೀಂ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ನೀಚ

ಐಸ್‌ ಕ್ರೀಂ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ನೀಚ

ಚಿತ್ರದುರ್ಗ ನಗರದ ಅಗಸನಹಳ್ಳಿ ಬಡಾವಣೆಯ ಸಾಧಿಕ್ (56) ಎಂಬಾತ ಬಾಲಕಿ ಮೇಲೆ ಹೇಯ ಕೃತ್ಯ ಎಸಗಿದ ಆರೋಪಿಯಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿ 3ನೇ ತರಗತಿಯಲ್ಲಿ ಓದುತ್ತಿದ್ದಳು. ಸಂತ್ರಸ್ತ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Weather Forecast: ಇಂದು ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಮಳೆ ಯಾವಾಗ?

ಇಂದು ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಮಳೆ ಯಾವಾಗ?

Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮುಖ್ಯವಾಗಿ ಶುಭ್ರ ಆಕಾಶ ಇರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Vijayapura News: ನೀರು ಕುಡಿಯಲು ಹೋಗಿ ಬಾವಿಗೆ ಬಿದ್ದ ಬಾಲಕ, ರಕ್ಷಿಸಲು ಹೋದ ಅಜ್ಜಿಯೂ ನೀರುಪಾಲು!

ಬಾವಿಯಲ್ಲಿ ಮುಳುಗಿದ ಬಾಲಕ, ರಕ್ಷಿಸಲು ಹೋದ ಅಜ್ಜಿಯೂ ನೀರುಪಾಲು!

Vijayapura News: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ಘಟನೆ ನಡೆದಿದೆ. ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಅಜ್ಜಿ ತೆರಳಿದ್ದು, ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ಭಾರತೀಯ ಮೋಟಾರ್‌ ಸ್ಪೋರ್ಟ್‌ ವಿಭಾಗವನ್ನು ಉತ್ತಮಗೊಳಿಸಲು ಟಿವಿಎಸ್ ಮೋಟಾರ್ ಕಂಪನಿ ಮತ್ತು ಪೆಟ್ರೊನಾಸ್ ಲೂಬ್ರಿಕೆಂಟ್ಸ್ ಇಂಟರ್‌ ನ್ಯಾಷನಲ್ ಸಹಯೋಗ

ಟಿವಿಎಸ್ ರೇಸಿಂಗ್‌ ಗೆ ಪಿಎಲ್ಐ ಸಂಸ್ಥೆ ಮೂರು ವರ್ಷ ಮುಖ್ಯ ಪ್ರಾಯೋಜಕ

ಪೆಟ್ರೊನಾಸ್ ಲೂಬ್ರಿಕೆಂಟ್ಸ್ ಇಂಟರ್‌ ನ್ಯಾಷನಲ್ (ಪಿಎಲ್ಐ) ಕಂಪನಿಯು ಮುಂದಿ ನ ಮೂರು ವರ್ಷಗಳ ಕಾಲ ಟಿವಿಎಸ್ ರೇಸಿಂಗ್‌ ನ ಮುಖ್ಯ ಪ್ರಾಯೋಜಕರಾಗಿ ಮುಂದು ವರಿಯ ಲಿದ್ದು, ಭಾರತದ ಮೋಟಾರ್‌ ಸ್ಪೋರ್ಟ್‌ ಅನ್ನು ಉತ್ತಮಗೊಳಿಸುವ ಪೆಟ್ರೊನಾಸ್ ಸಂಸ್ಥೆಯ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಈ ಸಹಯೋಗವು ಉತ್ತಮ ಗುಣಮಟ್ಟದ ಲೂಬ್ರಿ ಕೆಂಟ್‌ ವಿಭಾಗಕ್ಕೂ ವಿಸ್ತರಿಸಿದ್ದು, ಪೆಟ್ರೊನಾಸ್ ಸಂಸ್ಥೆಯು ಟಿವಿಎಸ್ ಟಿಆರ್‌ಯು4 ಬ್ರ್ಯಾಂಡ್ ಅಡಿಯಲ್ಲಿ ಪ್ರೀಮಿಯಂ ಸೆಮಿ ಮತ್ತು ಫುಲ್ ಸಿಂಥೆಟಿಕ್ ಆಯಿಲ್ ಗಳನ್ನು ಪೂರೈಸುತ್ತದೆ.

Upper Krishna Project: ರೈತರಿಗೆ ಸಿಹಿಸುದ್ದಿ; ನಾಳೆಯಿಂದ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

ನಾಳೆಯಿಂದ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

Upper Krishna Project: ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 2024-25ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದೆ. ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ಸೇರಿ ಪ್ರತಿ ದಿನ 0.8ಂಟಿ.ಎಂ.ಸಿ ದರದಂತೆ ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Vishwavani Impact: ವಿಶ್ವವಾಣಿ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ: ಯಂತ್ರೋಪಕರಣ ಬಾಡಿಗೆ ಬಾಕಿ ಚುಕ್ತಾ

ಕೊಳಬೆ ಬಾವಿಗೆ ಬಿದ್ದ ಮಗು ರಕ್ಷಣೆ: ಬಿಲ್‌ ಪಾವತಿ

2024ರ ಏಪ್ರಿಲ್ 3ರಂದು ಲಚ್ಯಾಣ ಗ್ರಾಮದಲ್ಲಿ ಕೊಳೆಬಾವಿಗೆ ಬಿದ್ದಿದ್ದ ಮಗು ಸಾತ್ವಿಕ ಗುಜ ಗೊಂಡನನ್ನು ಸ್ಥಳೀಯರ ಜೆಸಿಬಿ, ಹಿಟ್ಯಾಚಿ, ಟ್ರ್ಯಾಕ್ಟರ್ ಬ್ರೇಕರ್ಸ್, ಬೋರ್‌ವೆಲ್ ಕ್ಯಾಮೆರಾ ಹೀಗೆ ವಿವಿಧ ಯಂತ್ರೋಪಕರಣಗಳನ್ನು ಬಳಸಿಕೊಂಡು ರಕ್ಷಣಾ ತಂಡವು ಸತತ 22 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕ ಸಾತ್ವಿಕನನ್ನು ಸಾವಿನ ದವಡೆಯಿಂದ ಪಾರುಮಾಡಿ ಹೊರಗೆ ತರುವಲ್ಲಿ ಯಶಸ್ವಿ ಯಾಗಿತ್ತು.

Ananth Nag: ಪದ್ಮಭೂಷಣ ಪುರಸ್ಕೃತ ಹಿರಿಯ ನಟ ಡಾ.ಅನಂತನಾಗ್‌ಗೆ ಸನ್ಮಾನಿಸಿ, ಅಭಿನಂದಿಸಿದ ಪ್ರಲ್ಹಾದ್‌ ಜೋಶಿ

ಪದ್ಮಭೂಷಣ ಪುರಸ್ಕೃತ ಹಿರಿಯ ನಟ ಡಾ.ಅನಂತನಾಗ್‌ಗೆ ಸನ್ಮಾನಿಸಿದ ಜೋಶಿ

ಪದ್ಮಭೂಷಣ ಗೌರವ ಪುರಸ್ಕೃತರಾದ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಅನಂತನಾಗ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಬೆಂಗಳೂರಿನಲ್ಲಿ ಇಂದು ಸನ್ಮಾನಿಸಿ, ಅಭಿನಂದಿಸಿದರು. ಇದೇ ವೇಳೆ ಕಲಾವಿದರಾದ ಅನಂತನಾಗ್ ಮತ್ತು ಗಾಯತ್ರಿ ಅವರ ಕುಶಲೋಪರಿ ವಿಚಾರಿಸಿದ ಸಚಿವರು, ಪರಸ್ಪರ ಹೋಳಿ ಹಬ್ಬದ ಶುಭಾಶಯ ಕೋರಿದರು. ಈ ಕುರಿತ ವಿವರ ಇಲ್ಲಿದೆ.

Rudrappa Lamani: ಬೈಕ್‌ ಡಿಕ್ಕಿಯಾಗಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ

ಬೈಕ್‌ ಡಿಕ್ಕಿಯಾಗಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ

Rudrappa Lamani: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ಅಪಘಾತ ನಡೆದಿದೆ. ಕಾರಿಂದ ಕೆಳಗಿಳಿದು ನಿಂತಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಡಿಕ್ಕಿ ಹೊಡೆದಿದ್ದಾರೆ.

ಪಾವಗಡದಲ್ಲಿ ಅದ್ಧೂರಿಯಾಗಿ ನಡೆದ ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ

ಅದ್ಧೂರಿಯಾಗಿ ನಡೆದ ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ

Kanive Lakshmi Narasimhaswamy Rathotsava: ಪಾವಗಡದ ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಅಗಮಿಸಿದ್ದ ಸಹಸ್ರಾರು ಭಕ್ತರಿಗೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲ ಸೌಲಭ್ಯದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಕೆಲ ಭಕ್ತರು ಜಾತ್ರೆಗೆ ಬಂದವರಿಗೆ ಪಾನಕ, ಮಜ್ಜಿಗೆ ವಿತರಣೆ ಮಾಡಿದರು.

Udupi News: 2025ರ ಕ್ಯೂಎಸ್ ಸಬ್ಜೆಕ್ಟ್ ಶ್ರೇಯಾಂಕದಲ್ಲಿ ಮಹತ್ವದ ಸಾಧನೆ ಮಾಡಿದ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌

ಲೈಫ್ ಸೈನ್ಸಸ್ ಮತ್ತು ಮೆಡಿಸಿನ್ ವಿಭಾಗದಲ್ಲಿ 24 ಸ್ಥಾನಗಳ ಏರಿಕೆ

ಹೊಸ ಕ್ಯೂಎಸ್ ಶ್ರೇಯಾಂಕದಲ್ಲಿ ಮಾಹೆ, ಲೈಫ್ ಸೈನ್ಸಸ್ ಮತ್ತು ಮೆಡಿಸಿನ್, ಕೆಮಿಸ್ಟ್ರಿ, ಬಯಾಲಾಜಿಕಲ್ ಸೈನ್ಸಸ್, ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫರ್ಮೇಷನ್ ಸಿಸ್ಟಮ್ಸ್, ದಂತ ವೈದ್ಯಕೀಯ, ಕೆಮಿಕಲ್ ಎಂಜಿನಿಯರಿಂಗ್, ಮೆಡಿಸಿನ್, ಫಾರ್ಮಸಿ ಆಂಡ್ ಫಾರ್ಮಕಾಲಜಿ, ಮತ್ತು ಎಕಾನಾಮಿಕ್ಸ್ ಆಂಡ್ ಎಕನಾಮೆಟ್ರಿಕ್ಸ್‌ ನಂತಹ ಪ್ರಮುಖ ಸಬ್ಜೆಕ್ಟ್ ಗಳಲ್ಲಿ ಮನ್ನಣೆ ಗಳಿಸಿದೆ.

Jewargi Protest: ಪುರಸಭೆ ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಜೇವರ್ಗಿಯಲ್ಲಿ ಪೌರ ಸೇವಾ ನೌಕರರ ಪ್ರತಿಭಟನೆ

ಪುರಸಭೆ ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಜೇವರ್ಗಿಯಲ್ಲಿ ಪ್ರತಿಭಟನೆ

Jewargi Protest: ಪುರಸಭೆ ನೈರ್ಮಲ್ಯ ನಿರೀಕ್ಷಕರ ಮೇಲೆ ಡಾ. ಮಹೇಶ್ ರಾಠೋಡ ಹಾಗೂ ಇತರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಹಾಗೂ ತಹಸಿಲ್ದಾರ್ ಕಚೇರಿ ಮುಂದೆ ಪೌರ ಸೇವಾ ನೌಕರರ ಸೇವಾ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

BY Vijayendra: ಬೆಲೆ ಏರಿಕೆ ಗ್ಯಾರಂಟಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ ಕಿಡಿ

ಕಾಂಗ್ರೆಸ್ ಸರ್ಕಾರದಿಂದ ಬೆಲೆ ಏರಿಕೆ ಗ್ಯಾರಂಟಿ ಜಾರಿ: ವಿಜಯೇಂದ್ರ

BY Vijayendra: ಒಂದೆಡೆ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ನಾಡಿನ ಜನರ, ಕೃಷಿಕರ, ಬಡವರ ಕಣ್ಣೀರನ್ನು ಒರೆಸಬೇಕಿದ್ದ ಬಜೆಟ್, ಆ ನಿರೀಕ್ಷೆಗಳನ್ನು ಸಾಕಾರಗೊಳಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Gold Smuggling case: ಚಿನ್ನ ಕಳ್ಳಸಾಗಣೆ ಕೇಸ್‌; ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ

ಚಿನ್ನ ಕಳ್ಳಸಾಗಣೆ ಕೇಸ್‌; ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ

Gold Smuggling case: ಒಂದೆಡೆ ನಟಿ ರನ್ಯಾ ರಾವ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದ್ದರೆ, ಮತ್ತೊಂದೆಡೆ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ ವಿರುದ್ಧ ಮಾಧ್ಯಮಗಳು ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಆದೇಶಿಸಿದೆ.

Stars Holi Fashion 2025: ವೈವಿಧ್ಯಮಯ ಹೋಳಿ ಔಟ್‌ಫಿಟ್ಸ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ತಾರೆಯರು

ವೈವಿಧ್ಯಮಯ ಹೋಳಿ ಔಟ್‌ಫಿಟ್ಸ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ತಾರೆಯರು

Stars Holi Fashion 2025: ವೈವಿಧ್ಯಮಯ ಉಡುಪಿನಲ್ಲಿ ಬಾಲಿವುಡ್ ತಾರೆಯರು ಹೋಳಿ ಹಬ್ಬವನ್ನು ರಂಗು ರಂಗಾಗಿ ಆಚರಿಸಿದರು. ಹೋಳಿಯಾಚರಣೆಯ ಥೀಮ್ ಹಾಗೂ ಕಾನ್ಸೆಪ್ಟ್‌ಗೆ ತಕ್ಕಂತೆ ನಟ-ನಟಿಯರು ಹೇಗೆಲ್ಲಾ ಆಕರ್ಷಕವಾಗಿ ಕಾಣಿಸಿಕೊಂಡರು? ಎಂಬುದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

Karnataka weather: ಮಾ.18 ರಿಂದ ಕರಾವಳಿ ಸೇರಿ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಮಾ.18 ರಿಂದ ಕರಾವಳಿ ಸೇರಿ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

Karnataka weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮುಖ್ಯವಾಗಿ ಶುಭ್ರ ಆಕಾಶ ಇರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

CM Siddaramaiah: ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ- ಸಿಎಂ ಸಿದ್ದರಾಮಯ್ಯ

ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ- ಸಿಎಂ

CM Siddaramaiah: ವರದಿ ಬರುವ ಮೊದಲೇ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತೇವೆ ಎನ್ನುವುದು ಸರಿಯಲ್ಲ. ಇಂಥಾ ತೀರ್ಮಾನ ನಮ್ಮಿಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ ಅವರು, ಉಪ ಸಮಿತಿ ವರದಿ ಬರುವ ಮೊದಲೇ ಬಿಜೆಪಿಗೆ ಆತಂಕ ಏಕೆ ಎಂದು ಸದನದಲ್ಲಿ ತಿಳಿಸಿದ್ದಾರೆ.

Water tariff hike: ನೀರಿನ ದರ ಲೀಟರ್‌ಗೆ 1 ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್

ನೀರಿನ ದರ ಲೀಟರ್‌ಗೆ 1 ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ: ಡಿಕೆಶಿ

Water tariff hike: ಜಲ ಮಂಡಳಿಯವರು ಲೀಟರ್‌ಗೆ 7-8 ಪೈಸೆಗೆ ಏರಿಸಲು ಪ್ರಸ್ತಾಪ ಮಾಡಿದ್ದರು. ಆದರೆ, ಸದ್ಯಕ್ಕೆ 1 ಪೈಸೆಯಷ್ಟು ಮಾತ್ರ ಏರಿಕೆ ಮಾಡಲು ಚಿಂತನೆ ಮಾಡಲಾಗಿದ್ದು, ಮಂಡಳಿ ಅನುಭವಿಸುತ್ತಿರುವ ನಷ್ಟ ಭರಿಸಲು ಈ ತೀರ್ಮಾನ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Lakshmi Hebbalkar: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ- ಲಕ್ಷ್ಮೀ ಹೆಬ್ಬಾಳಕರ್

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ- ಲಕ್ಷ್ಮೀ ಹೆಬ್ಬಾಳಕರ್

Lakshmi Hebbalkar: ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಿರುವ ರಾಜ್ಯಗಳ ಪೈಕಿ ಇಡೀ ದೇಶದಲ್ಲೇ ನಮ್ಮ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರಕ್ಕೆ ಅಂಗನವಾಡಿ ಸಹಾಯಕರು ಹಾಗೂ ಕಾರ್ಯಕರ್ತೆಯರ ಬಗ್ಗೆ ಕಾಳಜಿ ಇದ್ದು, ಹಾಗಾಗಿಯೇ ಅವರ ಗೌರವ ಧನ ಹೆಚ್ಚಳ ಮಾಡಲು ಸರ್ಕಾರ ಮತ್ತು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.