ಗಾನಯಾನ ಯುವಪೀಳಿಗೆಗೆ ಹೊಸ ಚೈತನ್ಯ: ರಾಜಪ್ಪ ದಳವಾಯಿ
ನಗರದಲ್ಲಿ ಇಂಡಿಯನ್ ಫೋಕ್ ಬ್ಯಾಂಡ್ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದಲ್ಲಿ ನಡೆದ ‘ಗೊಲ್ಲಹಳ್ಳಿ ಗಾನಯಾನ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಲ್ಕೈದು ದಶಕಗಳಲ್ಲಿ ತಾವು ಬರೆದ ಅರಿವಿನ ಪದಗಳು, ಪರಿಸರದ ಪದಗಳು, ಬದುಕಿನ ಹಾಡುಗಳು ಹಾಗೂ ಜನಪದ ಗೀತೆಗಳನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಗಾನಯಾನ ರೂಪುಗೊಂಡಿದೆ ಎಂದರು.