ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Bomb Threat: ಬೆಂಗಳೂರಿನ 40 ಶಾಲೆಗಳಿಗೆ ಬಾಂಬ್‌ ಬೆದರಿಕೆ

ಬೆಂಗಳೂರಿನ 40 ಶಾಲೆಗಳಿಗೆ ಬಾಂಬ್‌ ಬೆದರಿಕೆ

Bomb Threat: ಬೆಂಗಳೂರು ನಗರದ ಆರ್ ಆರ್ ನಗರ, ಕೆಂಗೇರಿ ಸೇರಿದಂತೆ ಒಟ್ಟು 40 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ವಿಷಯ ತಿಳಿದ ತಕ್ಷಣ ಎಲ್ಲ ಶಾಲೆಗಳಿಗೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

CM Siddaramaiah: ತಪ್ಪು ಕನ್ನಡ ಅನುವಾದ, ಸಿಎಂ ಸಿದ್ದರಾಮಯ್ಯ ಕ್ಷಮೆ ಯಾಚಿಸಿದ ಮೆಟಾ

ತಪ್ಪು ಕನ್ನಡ ಅನುವಾದ, ಸಿಎಂ ಕ್ಷಮೆ ಯಾಚಿಸಿದ ಮೆಟಾ

CM Siddaramaiah: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ವಿಷಯದ ದೋಷಪೂರಿತ ಸ್ವಯಂ ಅನುವಾದದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಇದು ಸತ್ಯಗಳನ್ನು ವಿರೂಪಗೊಳಿಸಲು ಮತ್ತು ಬಳಕೆದಾರರನ್ನು ದಾರಿತಪ್ಪಿಸಲು ಕಾರಣವಾಗುತ್ತಿದೆ ಎಂದು ಹೇಳಿದ್ದರು.

Anganwadi: ಅಕ್ಟೋಬರ್‌ನಿಂದ ರಾಜ್ಯದ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ

ಅಕ್ಟೋಬರ್‌ನಿಂದ ರಾಜ್ಯದ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ

Anganwadi: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ಬೆಂಗಳೂರಿನಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯಲು ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.

A Khata: ಬೆಂಗಳೂರಿಗರಿಗೆ ಸಿಹಿ ಸುದ್ದಿ: ಬಿ-ಖಾತಾಗಳಿಗೆ ಎ-ಖಾತಾ ಕಾನೂನು ಮಾನ್ಯತೆ ಭಾಗ್ಯ

ಬೆಂಗಳೂರಿಗೆ ಸಿಹಿ ಸುದ್ದಿ: ಬಿ ಖಾತಾಗಳಿಗೆ ಎ ಖಾತಾ ಕಾನೂನು ಮಾನ್ಯತೆ ಭಾಗ್ಯ

A Khata: ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಬಿಬಿಎಂಪಿಯು 2009 ರಿಂದ ಈಚೆಗೆ ಬಿ-ಖಾತಾ ನೀಡುತ್ತಿತ್ತು. ಬಿ-ಖಾತಾ ನೀಡುವ ಪ್ರಕ್ರಿಯೆಯನ್ನು 2024ರ ಸೆ.30 ರಂದು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ 2009 ರಿಂದ 2024ರ ಸೆ.30ರ ನಡುವೆ ನೀಡಿರುವ ಬಿ-ಖಾತಾ ಆಸ್ತಿ ಸಮಸ್ಯೆ ಪರಿಹರಿಸಲು ಸುದೀರ್ಘ ಚರ್ಚೆ ನಡೆಸಲಾಯಿತು.

Prabhu Chauhan: ಮದುವೆಯಾಗುವುದಾಗಿ ನಂಬಿಸಿ ವಂಚನೆ, ಯುವತಿಯಿಂದ ಬಿಜೆಪಿ ಶಾಸಕನ ಪುತ್ರನ ಮೇಲೆ ದೂರು

ಮದುವೆಯಾಗುವುದಾಗಿ ನಂಬಿಸಿ ವಂಚನೆ, ಬಿಜೆಪಿ ಶಾಸಕನ ಪುತ್ರನ ಮೇಲೆ ಯುವತಿ ದೂರು

Prabhu Chauhan: ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಲೈಂಗಿಕವಾಗಿಯೂ ಬಳಸಿಕೊಂಡು ಮೋಸ ಮಾಡಿದ್ದಾನೆಂದು ಯುವತಿ, ಶಾಸಕ ಪಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಆರೋಪಿಸಿದ್ದು, ಈ ಸಂಬಂಧ ನ್ಯಾಯ ಒದಗಿಸುವಂತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

Byrathi Basavaraj: ರೌಡಿಶೀಟರ್‌ ಹತ್ಯೆ, ಶಾಸಕ ಬೈರತಿ ಬಸವರಾಜ್‌ಗೆ ಪೊಲೀಸ್‌ ನೋಟಿಸ್‌, ಐವರ ಬಂಧನ

ರೌಡಿಶೀಟರ್‌ ಹತ್ಯೆ, ಶಾಸಕ ಬೈರತಿ ಬಸವರಾಜ್‌ಗೆ ಪೊಲೀಸ್‌ ನೋಟಿಸ್‌, ಐವರ ಬಂಧನ

Byrathi Basavaraj: ಹೆಣ್ಣೂರು ಸಮೀಪದ ಬೈರತಿಯಲ್ಲಿರುವ ಬೈರತಿ ಬಸವರಾಜ್ ನಿವಾಸಕ್ಕೆ ಪೊಲೀಸರು ತೆರಳಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ಎರಡು ದಿನಗಳ ಒಳಗೆ ವಿಚಾರಣೆಗೆ ಆಗಮಿಸುವಂತೆ ಬೈರತಿ ಬಸವರಾಜ್ ಪುತ್ರ ನೀರಜ್ ಅವರ ಕೈಗೆ ನೋಟಿಸ್ ನೀಡಿ ತೆರಳಿದ್ದಾರೆ.

Karnataka Weather: ರಾಜ್ಯದಲ್ಲಿ ಇಂದೂ ಮುಂದುವರಿಯಲಿದೆ ಮಳೆ ಅಬ್ಬರ; ಹಲವು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ರಾಜ್ಯದಲ್ಲಿ ಇಂದೂ ಮುಂದುವರಿಯಲಿದೆ ಮಳೆ ಅಬ್ಬರ

Karnataka Rains: ಇಂದು (ಶುಕ್ರವಾರ) ಕರಾವಳಿ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Tumkur (Gubbi) News: ಬಿದರೆ ಗ್ರಾಪಂ ಅಧ್ಯಕ್ಷರಾಗಿ ರೇಣುಕಮ್ಮ ರಾಮಕೃಷ್ಣಯ್ಯ ಅವಿರೋಧ ಆಯ್ಕೆ

ಬಿದರೆ ಗ್ರಾಪಂ ಅಧ್ಯಕ್ಷರಾಗಿ ರೇಣುಕಮ್ಮ ರಾಮಕೃಷ್ಣಯ್ಯ ಅವಿರೋಧ ಆಯ್ಕೆ

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ತಾಪಂ ಇಓ ಶಿವಪ್ರಕಾಶ್ ನಡೆಸಿಕೊಟ್ಟರು. ಸಾಮಾನ್ಯ ಮಹಿಳೆ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಎಂ.ಎಸ್. ವರಲಕ್ಷ್ಮೀ ರಮೇಶ್ ಸಲ್ಲಿಸಿದ್ದ ರಾಜೀನಾಮೆ ಹಿನ್ನಲೆ ತೆರವಾದ ಸ್ಥಾನಕ್ಕೆ ಚುನಾ ವಣೆ ನಡೆಸಲಾಗಿ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರೇಣುಕಮ್ಮ ಅವರನ್ನು ಅಧ್ಯಕ್ಷ ರಾಗಿ ಸರ್ವ ಸದಸ್ಯರ ಸಮ್ಮುಖದಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

Vijayapura (Indi) news: ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣೆ ಕಾರ್ಯ: ಆದೇಶಕ್ಕೆ ಖಂಡನೆ

ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣೆ ಕಾರ್ಯ: ಆದೇಶಕ್ಕೆ ಖಂಡನೆ

ಬಿ.ಎಲ್. ಓ ಕೆಲಸ ಮಾಡುವುದು ಅಂಗವಾಡಿ ಕಾರ್ಯಕರ್ತರಿಗೆ ಸಾಧ್ಯವಿಲ್ಲ. ಇದರಿಂದ ಮುಕ್ತಿ ನೀಡಬೇಕು ಅಂಗನವಾಡಿ ಕಾರ್ಯಕರ್ತರು ಈಗಾಗಲೇ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಚಿಕ್ಕಮಕ್ಕಳ ಆರೋಗ್ಯದ ಜೊತೆ ಎಲ್ಲಾ ರೀತಿಯಿಂದ ನೋಡಿಕೊಳ್ಳಬೇಕು. ಅಂಗನವಾಡಿ ಕಾರ್ಯ ಕರ್ತೆಯರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಅಂಗನವಾಡಿ ಬಾಡಿಗೆ ಕೂಡಾ ನೀಡುತ್ತಿಲ್ಲ ಒಟ್ಟಾರೆ ಅಂಗವಾಡಿ ಕಾರ್ಯಕರ್ತೆಯರಿಗೆ ಬಿ.ಎಲ್ ಓ ಆದೇಶ ರದ್ದುಪಡಿಸಬೇಕು

ಅಭಿವೃದ್ಧಿ ಕಾಮಗಾರಿಗಳ ಜೊತೆ ಶಾಲೆಗಳ ಭೇಟಿ ನಮ್ಮ ಜವಾಬ್ದಾರಿ: ಶಾಸಕ ಸಿ.ಬಿ. ಸುರೇಶ್‌ಬಾಬು

ಅಭಿವೃದ್ಧಿ ಕಾಮಗಾರಿಗಳ ಜೊತೆ ಶಾಲೆಗಳ ಭೇಟಿ ನಮ್ಮ ಜವಾಬ್ದಾರಿ

ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳೇ ಕಾರಣ. ಈ ವರ್ಷವೂ ರಾಜ್ಯ ಮಟ್ಟದಲ್ಲಿ ನಮ್ಮ ತಾಲ್ಲೂಕಿನ ಹೆಸರು ಫಲಿತಾಂಶದಲ್ಲಿ ಬರಬೇಕು ಎಂಬ ಉದ್ದೇಶದಿಂದ ಪ್ರತಿ ಭಾನುವಾರ ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗಿದೆ.

Factory Labour Strike on 2nd day: ಎರಡನೇ ದಿನಕ್ಕೆ ರೈಮೆಂಡ್ಸ್ ಕಾರ್ಖಾನೆ ಕಾರ್ಮಿಕರ ಮುಷ್ಕರ: ತಹಸೀಲ್ದಾರ್ ಭೇಟಿ

ಎರಡನೇ ದಿನಕ್ಕೆಕಾರ್ಖಾನೆ ಕಾರ್ಮಿಕರ ಮುಷ್ಕರ : ತಹಸೀಲ್ದಾರ್ ಭೇಟಿ

ಸರ್ಕಾರ ಕಾರ್ಮಿಕರಿಗೆ ೧೦ ಗಂಟೆ ಕೆಲಸ ಮಾಡಿ ವಾರದಲ್ಲಿ ಎರಡು ದಿನ ರಜೆ ಪಡೆಯಿರಿ ಎಂಬ ಅವೈಜ್ಞಾನಿಕ ನೀತಿಯನ್ನು ಜಾರಿ ಮಾಡಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದ ಅವರು  ಎಂಟು ಗಂಟೆ ಕೆಲಸ ಎಂಟು ಗಂಟೆ ವಿಶ್ರಾಂತಿ ಉಳಿದ ಸಮಯ ಮನೆ ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆಯ ಸುತ್ತೋಲೆ ಇದೆ

ಕೃಷಿ ಹೊಂಡ ವಿಚಾರ: ಎರಡು ಗುಂಪುಗಳ ನಡುವೆ ಮಾರಾಮಾರಿ

ಕೃಷಿ ಹೊಂಡ ವಿಚಾರ: ಎರಡು ಗುಂಪುಗಳ ನಡುವೆ ಮಾರಾಮಾರಿ

ದ್ವಾರಪಲ್ಲಿ ಗ್ರಾಮದ ನಾರಾಯಣಮ್ಮ ಕೋಂ ಲೇಟ್ ಹನುಮಪ್ಪ(60 ವರ್ಷ) ರವರ ಗ್ರಾಮದ ಸರ್ವೆ ನಂ:13 ರ 1-25 ಗುಂಟೆ ಜಮೀನಿನಲ್ಲಿ ಕೃಷಿ ಹೊಂಡವಿದ್ದು ಪಕ್ಕದ ಜಮೀನವರಾದ ಕದಿರಪ್ಪ ಎಂಬುವರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ  ಎಂದು ಚಿಂತಾಮಣಿ ಸಾರ್ವಜನಿಕ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣಮ್ಮ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

Chikkaballapur News: ಗಮನ ಸೆಳೆದ ಮಾಯಾಮೃಗ ಹಾಗೂ ಬಾನು ಮುಷ್ತಾಕ್ ಅವರ ಎದೆಯ ಹಣತೆ ನಾಟಕ ಪ್ರದರ್ಶನ

ಬಾನು ಮುಷ್ತಾಕ್ ಅವರ ಎದೆಯ ಹಣತೆ ನಾಟಕ ಪ್ರದರ್ಶನ

ತೇಜಸ್ವಿ ಮತ್ತು ಬಾನು ಮಸ್ತಾಕ್ ಅವರು ಪ್ರಗತಿಪರ ಲೇಖಕರು ಅವರು ತಮ್ಮ ಕಥೆಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಮುಲಾಮು ಹುಡುಕುವ ಕೆಲಸ ಮಾಡಿದ್ದಾರೆ. ಇನ್ನು ಪೂರ್ಣಚಂದ್ರ ತೇಜಸ್ವಿ ಅವರ ಮಾಮಾಯಾಮೃಗ ಕಥೆಯಲ್ಲಿ  ಅಸ್ತಿತ್ವ ಮತ್ತು ಭ್ರಮೆಯ ನಡುವಿನ ಎಳೆಯನ್ನು ಭೂತಗಳ ಹುಡುಕಾಟಕ್ಕೆ ಸ್ಮಶಾನಕ್ಕೆ ಹೋಗಿ ಇಬ್ಬರು ಸ್ನೇಹಿತರು ಎದುರಿಸುವ ವಿಚಿತ್ರ ಘಟನೆಗಳ ಮೂಲಕ ಸೊಗಸಾಗಿ ಚಿತ್ರಿಸಿದ್ಧಾರೆ.

Chikkaballapur News: ಚಿಕ್ಕಬಳ್ಳಾಪುರ ನಗರಸಭೆಗೆ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ : ಅಧ್ಯಕ್ಷರೊಂದಿಗೆ ಸಭೆ

ಚಿಕ್ಕಬಳ್ಳಾಪುರ ನಗರಸಭೆಗೆ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ

ಚಿಕ್ಕಬಳ್ಳಾಪುರ ನಗರಸಭೆಯ ಜನವಿರೋಧಿ ಕಾರ್ಯನಿರ್ವಹಣೆ, ಕಡತಗಳ ನಾಪತ್ತೆ, ಕಸದಂತೆ ಬಿ-ಖಾತಾ ದಾಖಲಾತಿ ಪತ್ರಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು,ಸಕಾಲ ಕೌಂಟರ್ ತೆರೆಯದಿರು ವುದು, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮಾಡದಿರುವುದು ಹೀಗೆ ಇಲ್ಲಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸೇರಿದಂತೆ ನಗರಸಭೆಯ ಆಡಳಿತ ಪಕ್ಷದ ಸದಸ್ಯರು ಸುದ್ದಿಗೋಷ್ಟಿಯನ್ನು ನಡೆಸಿ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

HD Kumaraswamy: ಕೇಂದ್ರ ಸಚಿವ ಎಚ್‌ಡಿಕೆಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್‌ ರಿಲೀಫ್‌; ನ್ಯಾಯಾಂಗ ನಿಂದನೆ ವಿಚಾರಣೆಗೆ ತಡೆ

ಎಚ್‌ಡಿಕೆಗೆ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಗೆ ಸುಪ್ರೀಂ ತಡೆ

Supreme Court: ರಾಮನಗರದ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಕುಮಾರಸ್ವಾಮಿ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

ಪಾವಗಡ: ಮುಂದುವರಿದ ಖದೀಮರ ಕೈಚಳಕ; ಪುರಸಭೆ ಮಾಜಿ ಅಧ್ಯಕ್ಷರ ಮನೆಯಲ್ಲಿ ಹಾಡಹಗಲೇ ಕಳವು

ಪಾವಗಡ: ಪುರಸಭೆ ಮಾಜಿ ಅಧ್ಯಕ್ಷರ ಮನೆಯಿಂದ ಹಾಡಹಗಲೇ ಕಳವು

Theft Case: ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶ್ರೀನಿವಾಸ ನಗರದಲ್ಲಿರುವ ಪುರಸಭೆ ಮಾಜಿ ಅಧ್ಯಕ್ಷರ ಮನೆಯಿಂದ ಕಳ್ಳರು ಹಾಡಹಗಲೇ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಪ್ರದೇಶದಲ್ಲಿ ನಡೆಯುತ್ತಿರುವ 7ನೇ ಕಳವು ಪ್ರಕರಣ ಇದಾಗಿದೆ.

KY Nanjegowda: ಕಾಂಗ್ರೆಸ್ ಶಾಸಕ ನಂಜೇಗೌಡಗೆ ಇಡಿ ಶಾಕ್; 1.32 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಶಾಸಕ ನಂಜೇಗೌಡಗೆ ಇಡಿ ಶಾಕ್; 1.32 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ED: ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಮತ್ತು ಇತರರಿಗೆ ಸೇರಿದ 1.32 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿಕೊಂಡಿದೆ. 2023ರಲ್ಲಿ ನಡೆದ ಕೋಮುಲ್ ನೇಮಕಾತಿ ಹಗರಣ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಜೊಹೊದಿಂದ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ತನ್ನದೇ ಆದ ಎಲ್.ಎಲ್.ಎಂ. ಮಾಡೆಲ್ ಮತ್ತು ಎ.ಎಸ್.ಆರ್. ಮಾಡೆಲ್ ಬಿಡುಗಡೆ

ಇತರೆ ಭಾರತೀಯ ಭಾಷೆಗಳಿಗೆ ಎ.ಎಸ್.ಆರ್. ಸದ್ಯದಲ್ಲೇ ಬಿಡುಗಡೆ

ಜೊಹೊ 25ಕ್ಕೂ ಹೆಚ್ಚು ಪ್ರಿ-ಬಿಲ್ಟ್ ಏಜೆಂಟ್ಸ್ ಬಿಡುಗಡೆ ಮಾಡಿದ್ದು ಅವುಗಳಲ್ಲಿ ಕೆಲವನ್ನು ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಪರಿಶೀಲನೆಗಳಿಗೆ ಭಾರತದ ಮಾರುಕಟ್ಟೆಗೇ ರೂಪಿಸಲಾಗಿದೆ. ಇದಲ್ಲದೆ, ಕಂಪನಿಯು ಭಾರತದಲ್ಲಿ 2024ರಲ್ಲಿ ಶೇ.32ರಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳಿದೆ. ಬೆಂಗಳೂರಿ ನಲ್ಲಿ ಈ ವರ್ಷ ನಡೆದ ಕಂಪನಿಯ ವಾರ್ಷಿಕ ಬಳಕೆದಾರರ ಸಮ್ಮೇಳನ ಜೊಹೊಲಿಕ್ಸ್ ಇಂಡಿಯಾದಲ್ಲಿ ಇದನ್ನು ಪ್ರಕಟಿಸಲಾಯಿತು.

HM Ramesh Gowda: ಆಯ್ಕೆಗೊಂಡ ಪಿಎಸ್‌ಐ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ: ಎಚ್.ಎಂ. ರಮೇಶ್‌ ಗೌಡ ಆಗ್ರಹ

ಆಯ್ಕೆಗೊಂಡ ಪಿಎಸ್‌ಐ ಅಭ್ಯರ್ಥಿಗಳ ಪ್ರತಿಭಟನೆ: ಜೆಡಿಎಸ್‌ ಬೆಂಬಲ

ರಾಜ್ಯ ಸರ್ಕಾರವು 2021ರಲ್ಲಿ 402 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 4 ವರ್ಷಗಳ ನಂತರ ಪರೀಕ್ಷೆ ನಡೆಸಿತ್ತು. 2024 ಡಿಸೆಂಬರ್‌ 26ರಂದು ಫಲಿತಾಂಶವನ್ನೂ ಪ್ರಕಟಿಸಿತ್ತು. ಅದಾದ ಮೇಲೆ ಪರೀಕ್ಷೆಯಲ್ಲಿ ಅರ್ಹರಾದ ಎಲ್ಲಾ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ನಡೆದು 7 ತಿಂಗಳು ಕಳೆದರೂ ಇನ್ನೂ ನೇಮಕಾತಿ ಆದೇಶ ನೀಡದಿರುವುದು ಸರಿಯಲ್ಲ. ಕೂಡಲೇ ನೇಮಕಾತಿ ಆದೇಶ ಪತ್ರಗಳನ್ನು ನೀಡಬೇಕು ಎಂದು ಜೆಡಿಎಸ್‌ ಪಕ್ಷದ ನಗರ ಘಟಕದ ಅಧ್ಯಕ್ಷ ಎಚ್‌.ಎಂ. ರಮೇಶ್‌ ಗೌಡ ಒತ್ತಾಯಿಸಿದ್ದಾರೆ.

Laxmi Hebbalkar: ಬಿಜೆಪಿಯವರು ಕರ್ನಾಟಕದ ಗ್ಯಾರಂಟಿ ಸ್ಕೀಂಗಳನ್ನು ಕಾಪಿ ಹೊಡೆದು ಪಾಸಾಗಿರುವ ಸ್ಟೂಡೆಂಟ್ಸ್ ಎಂದ ಹೆಬ್ಬಾಳ್ಕರ್

ಬಿಜೆಪಿಯವರು ಮಾತನಾಡುವುದು ಒಂದು, ಮಾಡುವುದು ಮತ್ತೊಂದು: ಹೆಬ್ಬಾಳ್ಕರ್

Laxmi Hebbalkar: ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಾರೆ. ಆದರೆ, ಕರ್ನಾಟಕ ಮಾಡೆಲ್ ಇಟ್ಟುಕೊಂಡು ನರೇಂದ್ರ ಮೋದಿ ರಾಜಕಾರಣ ಮಾಡುತ್ತಿದ್ದಾರೆ. ಕರ್ನಾಟಕದ ಯೋಜನೆಗಳನ್ನು ಹಾಗೂ ಮಾಡೆಲ್ ಅನ್ನು ಟೀಕೆ ಮಾಡುವ ನೈತಿಕತೆ ಇದೆಯೇ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

WIPRO: ವಿಪ್ರೊದಿಂದ ಜೂನ್ 30ಕ್ಕೆ ಅಂತ್ಯವಾದ ತ್ರೈಮಾಸಿಕ ಫಲಿತಾಂಶಗಳ ಪ್ರಕಟಣೆ

ವಿಪ್ರೊದಿಂದ ಜೂನ್ 30ಕ್ಕೆ ಅಂತ್ಯವಾದ ತ್ರೈಮಾಸಿಕ ಫಲಿತಾಂಶಗಳ ಪ್ರಕಟಣೆ

ಮುಂಚೂಣಿಯ ಎಐ-ಸನ್ನದ್ಧ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೊ ಲಿಮಿಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂಐಟಿ, ಬಿ.ಎಸ್.ಇ: 507685, ಎನ್.ಎಸ್.ಇ: ವಿಪ್ರೊ) ಜೂನ್ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಹಣಕಾಸು ವರದಿಗಾರಿಕೆ ಮಾನದಂಡಗಳು (ಐ.ಎಫ್.ಆರ್.ಎಸ್.) ಅನ್ವಯ ಪ್ರಕಟಿಸಿದೆ

ಆಟೋಮೋಟಿವ್ ಐಷಾರಾಮದ ಹೊಸ ಯುಗ: MG SELECT ಬೆಂಗಳೂರಿನಲ್ಲಿ ಎರಡು ಅನುಭವ ಕೇಂದ್ರಗಳ ಉದ್ಘಾಟನೆ

MG SELECT ಬೆಂಗಳೂರಿನಲ್ಲಿ ಎರಡು ಅನುಭವ ಕೇಂದ್ರಗಳ ಉದ್ಘಾಟನೆ

ಉನ್ನತ ಅನುಭವಗಳು, ವೈಯಕ್ತೀಕರಿಸಿದ ಸೇವೆಗಳು, ಹೊಸ ಯುಗದ ಐಷಾರಾಮಿ, ನಾವೀನ್ಯತೆ ಮತ್ತು ಸುಸ್ಥಿರತೆಯೊಂದಿಗೆ ಬೆರೆತ ಅಪ್ರತಿಮ ಉತ್ಪನ್ನ ಶ್ರೇಣಿಯನ್ನು ನೀಡುವ MG SELECT ಅನುಭವ ಕೇಂದ್ರಗಳು. ಎಲೆಕ್ಟ್ರಾನಿಕ್ ಸಿಟಿ ಮತ್ತು ಅಶೋಕ್ ನಗರದಲ್ಲಿರುವ ಈ MG SELECT ಅನುಭವ ಕೇಂದ್ರಗಳು ಬೆಂಗಳೂರು ಪ್ರದೇಶದ ಹೊಸ ಯುಗದ ಐಷಾರಾಮಿ ಕಾರು ಖರೀದಿದಾರರಿಗೆ ಸೇವೆ ಸಲ್ಲಿಸಲಿವೆ. ನಮ್ಮ ಹೊಸ ಯುಗದ ಐಷಾರಾಮಿ ಬ್ರಾಂಡ್ ಗೆ ಗ್ರಾಹಕರನ್ನು ಒಂದು ಹೆಜ್ಜೆ ಹತ್ತಿರ ತರಲು, ನಾವು ಭಾರತದಾದ್ಯಂತ 13 ಪ್ರಮುಖ ನಗರಗಳಲ್ಲಿ 14 ಕೇಂದ್ರಗಳನ್ನು ಉದ್ಘಾಟಿಸುತ್ತಿದ್ದೇವೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ: ವರದಿಯ ಅಧ್ಯಯನಕ್ಕೆ ಸಚಿವ ಸಂಪುಟ ತೀರ್ಮಾನ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ: ಸಚಿವ ಸಂಪುಟ ಹೇಳಿದ್ದೇನು?

Bengaluru Stampede: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ನಡೆಯಿತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.

IPL 2025: ಕಾಲ್ತುಳಿತ ಪ್ರಕರಣ ಸಂಬಂಧ ಆರ್‌ಸಿಬಿ, ಕೆಎಸ್‌ಸಿಎ ವಿರುದ್ದ ಎಫ್‌ಐಆರ್‌?

ಕಾಲ್ತುಳಿತ ಪ್ರಕರಣ ಸಂಬಂಧ ಆರ್‌ಸಿಬಿ, ಕೆಎಸ್‌ಸಿಎ ವಿರುದ್ದ ಎಫ್‌ಐಆರ್‌?

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಕಾಲ್ತುಳಿತದಿಂದ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟ ಪ್ರಕರಣ ಸಂಬಂಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ವಿರುದ್ದ ಎಫ್‌ಐಆರ್‌ ದಾಖಲಿಸಲು ಕರ್ನಾಟಕ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

Loading...