ಸರ್ಕಾರಿ ಬಸ್ನಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಮುರುಡೇಶ್ವರ ದೇವಸ್ಥಾನ ರಸ್ತೆಯಲ್ಲಿ ದೂರವಾಣಿ ಕೇಂದ್ರದ ಎದುರುಗಡೆ ಸಾಗುತ್ತಿದ್ದ ಸರ್ಕಾರಿ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ. ಈ ಬಸ್ ವಾಯುವ್ಯ ಕರ್ನಾಟಕ ಸಾರಿಗೆ ವಿಭಾಗಕ್ಕೆ ಸೇರಿದ್ದು, ಕುಮಟಾದಿಂದ ಭಟ್ಕಳ ಮಾರ್ಗವಾಗಿ ಮುರುಡೇಶ್ವರ ಬಸ್ ನಿಲ್ದಾಣದತ್ತ ಸಾಗುತ್ತಿತ್ತು.