ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
MLA Veerendra Puppy: ಅಕ್ರಮ ಬೆಟ್ಟಿಂಗ್‌ ಪ್ರಕರಣ; ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಆ.28 ರವರೆಗೆ ಇಡಿ ಕಸ್ಟಡಿಗೆ

ಅಕ್ರಮ ಬೆಟ್ಟಿಂಗ್‌ ಪ್ರಕರಣ; ವೀರೇಂದ್ರ ಪಪ್ಪಿ ಆ.28 ರವರೆಗೆ ಇಡಿ ಕಸ್ಟಡಿಗೆ

illegal betting case: ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ (illegal betting case) ಸಂಬಂಧಿಸಿ ಚಿತ್ರದುರ್ಗ ಕಾಂಗ್ರೆಸ್‌ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಇಡಿ ಅಧಿಕಾರಿಗಳು ಸಿಕ್ಕಿಂನಲ್ಲಿ ಶುಕ್ರವಾರ ಬಂಧಿಸಿದ್ದರು. ಅವರನ್ನು ಆಗಸ್ಟ್ 28 ರವರೆಗೆ ಇಡಿ ಕಸ್ಟಡಿಗೆ ನೀಡಿ ಬೆಂಗಳೂರಿನ 35ನೇ ಸಿಸಿಹೆಚ್ ಕೋರ್ಟ್‌ ಆದೇಶಿಸಿದೆ.

False US Kidnapping Case: ಫೇಕ್‌ ಕಿಡ್ನ್ಯಾಪ್‌ ಕೇಸ್‌ನಲ್ಲಿ ಅಮೆರಿಕದಲ್ಲಿ ಭಾರತೀಯನಿಗೆ ಶಿಕ್ಷೆ

ಸುಳ್ಳು ಅಪಹರಣ ಆರೋಪದಲ್ಲಿ ಶಿಕ್ಷೆಗೊಳಗಾದ ಭಾರತೀಯ

ಸುಳ್ಳು ಅಪಹರಣ ಆರೋಪದಲ್ಲಿ ಭಾರತೀಯ ಮೂಲದ ಮಹೇಂದ್ರ ಪಟೇಲ್ ಎಂಬವರು ಜಾರ್ಜಿಯಾದ ಕಾಬ್ ಕೌಂಟಿ ಜೈಲಿನಲ್ಲಿ 47 ದಿನಗಳನ್ನು ಕಳೆದಿದ್ದಾರೆ. ಈ ವೇಳೆ ತಾವು ತೀವ್ರ ಯಾತನೆ ಅನುಭವಿಸಿದ್ದು, ಜಾರ್ಜಿಯಾದ ಕಾನೂನು ಜಾರಿ ಸಂಸ್ಥೆಗಳು ತಮ್ಮ ಬಳಿ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Road Accident: ಕೆಎಸ್‌ಆರ್‌ಟಿಸಿ ಬಸ್‌ಗೆ ಇನ್ನೋವಾ ಕಾರು ಡಿಕ್ಕಿ; ಕಾರು ಚಾಲಕ ಸ್ಥಳದಲ್ಲೇ ಸಾವು

ಕೆಎಸ್‌ಆರ್‌ಟಿಸಿ ಬಸ್‌ಗೆ ಇನ್ನೋವಾ ಡಿಕ್ಕಿ; ಕಾರು ಚಾಲಕ ಸಾವು

Bagalkot accident: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದ ಹುಬ್ಬಳ್ಳಿ -ವಿಜಯಪುರ ಹೆದ್ದಾರಿಯಲ್ಲಿ ನಡೆದಿದೆ. ಕಾರು ಓವರ್ ಟೇಕ್‌ ಮಾಡಲು ಹೋದ ವೇಳೆ ಅಪಘಾತ ನಡೆದಿದೆ. ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Vachanananda Swamiji: ದೇಶ ಇದ್ರೆ ಮಾತ್ರ ಮಠ, ಪೀಠ, ದೇವಸ್ಥಾನಗಳು: ವಚನಾನಂದ ಸ್ವಾಮೀಜಿ

ದೇಶ ಇದ್ರೆ ಮಾತ್ರ ಮಠ, ಪೀಠ, ದೇವಸ್ಥಾನಗಳು: ವಚನಾನಂದ ಸ್ವಾಮೀಜಿ

Dharma samrakshana samavesha: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದ್ದು, ಅಧರ್ಮ ಹೆಚ್ಚಾದರೆ ಧರ್ಮದ ಕಾರ್ಯಗಳು ಕೂಡ ಹೆಚ್ಚಾಗಬೇಕು. ಇಂತಹ ಕಾರ್ಯದಲ್ಲಿ ಯುವ ಜನಾಂಗ ತೊಡಗಬೇಕು ಎಂದು ಸಲಹೆ ನೀಡಿದರು.

Horanadu Temple: ಸಹ್ಯಾದ್ರಿಯ ಮಡಿಲಲ್ಲಿದೆ ಅನ್ನದಾತೆಯ ಬೀಡು- ಅದೇ ಶ್ರೀ ಕ್ಷೇತ್ರ ಹೊರನಾಡು

ಅನ್ನದಾತೆಯ ಬೀಡು ಶ್ರೀ ಕ್ಷೇತ್ರ ಹೊರನಾಡು

Pravasi Prapancha: ಶ್ರೀಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನ ಕೇವಲ ಧಾರ್ಮಿಕ ಅಥವಾ ಅಧ್ಯಾತ್ಮಿಕ ಪ್ರವಾಸವಲ್ಲ. ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿನಲ್ಲಿರುವ ಸುತ್ತ ಹಸಿರು ಬೆಟ್ಟಗಳಿಂದ ಆವೃತವಾಗಿರುವ ಈ ಕ್ಷೇತ್ರ ಪ್ರಕೃತಿಯ ಅದ್ಭುತವೂ ಹೌದು. ವೈಶಿಷ್ಟ್ಯವೇನು ಎನ್ನುವ ವಿವರ ಇಲ್ಲಿದೆ.

Sameer M D: ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾದ ಯೂಟ್ಯೂಬರ್ ಎಂ.ಡಿ. ಸಮೀರ್

ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾದ ಯೂಟ್ಯೂಬರ್ ಎಂ.ಡಿ. ಸಮೀರ್

Dharmasthala Case: ಎಐ ವಿಡಿಯೋ ಸೃಷ್ಟಿಸಿ ಗಲಭೆಗೆ ಪ್ರಚೋದನೆ ನೀಡಿದ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಸುಮೋಟೋ ಪ್ರಕರಣ ವಿರುದ್ಧ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಸಮೀರ್ ಎಂ.ಡಿ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ.

Priyank Kharge: "RSSಗೆ ತಾಕಿದ ಗಾಳಿ ನಮಗೆ ಸೋಕಬಾರದು"; ಪ್ರಿಯಾಂಕ್ ಖರ್ಗೆ ವಾಗ್ದಾಳಿ

RSSಗೆ ತಾಕಿದ ಗಾಳಿ ನಮಗೆ ಸೋಕಬಾರದು; ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರ್‌ ಎಸ್‌ ಎಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಇದೀಗ ಮತ್ತೆ RSS ಕುರಿತು ಟ್ವೀಟ್ ನಲ್ಲಿ ಕಿಡಿ ಕಾರಿದ್ದಾರೆ. ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿ ಪ್ರಜೆಯೂ RSSಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂದು ಅವರು ಹೇಳಿದ್ದಾರೆ.

ಇನ್‌ಫ್ಲೂಯೆಂಜಾ ಲಸಿಕೆ: ಜಾಗತಿಕ ಮಾರ್ಗಸೂಚಿಗಳಲ್ಲಿನ ಬದಲಾವಣೆಗೆ ಭಾರತದ ಸಹಮತ; ತುರ್ತು ಗಮನ ಹರಿಸಲು ಒಲವು

ಸಾಂಕ್ರಾಮಿಕ ಕಾಯಿಲೆ ತಡೆಗಟ್ಟಲು ತುರ್ತು ಗಮನ ಹರಿಸಲು ಒಲವು

ವಿಶ್ವದಾದ್ಯಂತ ಕಂಡುಬರುವ ಇನ್‌ಫ್ಲೂಯೆಂಜಾ, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಸ್ವರೂಪದ ಆತಂಕವಾಗಿದೆ.  ವೈರಸ್‌ಗಳಿಂದ ಬರುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆ ಯಾಗಿರುವ ಇನ್‌ಫ್ಲೂಯೆಂಜಾ- ಜ್ವರ, ಗಂಟಲು ನೋವು, ತೀವ್ರ ತಲೆನೋವು, ಕೆಮ್ಮು ಮತ್ತು ಅಸ್ವಸ್ಥತೆ ಉಂಟು ಮಾಡುತ್ತದೆ. ಇದು ಪ್ರತಿ ವರ್ಷ ವಿಶ್ವದಾದ್ಯಂತ ಅಂದಾಜು 4,00,000 ಉಸಿರಾಟದ ಸೋಂಕು ಮತ್ತು 3,00,000 ಸಾವುಗಳಿಗೆ ಕಾರಣವಾಗುತ್ತಿದೆ.

Mahesh Shetty Timmarodi:  ಬೇಲ್‌ ಮೇಲೆ ಹೊರ ಬಂದರೂ ತಿಮರೋಡಿಗೆ ತಪ್ಪದ ಸಂಕಷ್ಟ; ಮತ್ತೆ ನೋಟೀಸ್‌ ನೀಡುವ ಸಾಧ್ಯತೆ

ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಸಂಕಷ್ಟ

ತಿಮರೋಡಿ ಅವರಿಗೆ ಮತ್ತೆ ಸಂಕಷ್ಟ ಎದರುರಾಗಿದೆ. ಬೆಳ್ತಂಗಡಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಗೆ ವಿಚಾರಣೆ ನೋಟಿಸ್ ನೀಡಲು ಸಜ್ಜಾಗಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಮಾತನಾಡುವಾಗ ಬಿಜೆಪಿ ನಾಯಕ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉಡುಪಿಯ ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬಂಧಿಸಿದ್ದರು.

Gold Price Today: ಚಿನ್ನದ ದರದಲ್ಲಿ ಯಥಾಸ್ಥಿತಿ- ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಯಥಾಸ್ಥಿತಿ- ಇಂದಿನ ರೇಟ್‌ ಚೆಕ್‌ ಮಾಡಿ

Gold price today on 24th Aug 2025: ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿದ್ದು 9,315 ರೂ. ಇತ್ತು. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 109 ರೂ. ಏರಿಕೆಯಾಗಿ 10,162 ರೂ.ಗೆ ಬಂದು ತಲುಪಿತ್ತು. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 74,520 ರೂ. ಬಾಳಿದರೆ, 10 ಗ್ರಾಂಗೆ ನೀವು 93,150 ರೂ. ಹಾಗೂ 100 ಗ್ರಾಂಗೆ 9,31,500 ರೂ. ನೀಡಬೇಕಾಗುತ್ತದೆ.

Dharmasthala: ಧರ್ಮಸ್ಥಳ ಸಂಚುಕೋರರಿಗೆ ಸೋಲು ಸನಾತನ ಧರ್ಮಕ್ಕೆ ಗೆಲುವು : ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಆಶಯ

ಧರ್ಮಸ್ಥಳ ಸಂಚುಕೋರರಿಗೆ ಸೋಲು ಸನಾತನ ಧರ್ಮಕ್ಕೆ ಗೆಲುವು

ಅಣ್ಣಪ್ಪ ಸ್ವಾಮಿ, ಮಂಜುನಾಥಸ್ವಾಮಿ ಸೇವೆ ಸಲ್ಲಿಸುತ್ತಾ ಸಮಾಜವನ್ನು ಸನ್ಮಾರ್ಗದ ಕಡೆ ಕೊಂಡೊ ಯ್ಯುತ್ತಿದ್ದಾರೆ. ಒಂದೆಡೆ ಭಕ್ತಿ ಮತ್ತೊಂದೆಡೆ ಸಮಾಜ ಸೇವೆ ಹೆಸರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯ ವಿಶ್ವಪ್ರೀತಿ ಪಡೆದಿತ್ತು.ಇಷ್ಟೇ ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿರುವ ಸ್ತ್ರೀಶಕ್ತಿ ಸಂಘಗಳನ್ನು ಒಗ್ಗೂಡಿಸಿ ಅವರಲ್ಲಿ ಆರ್ಥಿಕ ಚೇತನ್ಯವನ್ನು ತುಂಬುವ ಸಾರ್ಥಕ ಕಾರ್ಯ ನಿವಿಘ್ನವಾಗಿ ಸಾಗಿದೆ

ಅಮ್ಮ ಟ್ರಸ್ಟ್ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ: 50 ಯೂನಿಟ್ ಸಂಗ್ರಹ

ಸ್ವಯಂಪ್ರೇರಿತ ರಕ್ತದಾನ ಶಿಬಿರ: 50 ಯೂನಿಟ್ ಸಂಗ್ರಹ

ರಕ್ತದಾನ ಶಿಬಿರ ನಡೆಸುವ ಮೂಲಕ ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಸದಸ್ಯರು ವಾರ್ಷಿಕೋತ್ಸವ ವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.ಟ್ರಸ್ಟ್ನ ಮೊದಲನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು

ರೋಗಿಗಳ ದಾಖಲೆ ನಿರ್ವಹಣೆಗೆ ಎಐ ಚಾಲಿತ ಆತ್ಮ ಐರಾ ಬಿಡುಗಡೆ

ರೋಗಿಗಳ ದಾಖಲೆ ನಿರ್ವಹಣೆಗೆ ಎಐ ಚಾಲಿತ ಆತ್ಮ ಐರಾ ಬಿಡುಗಡೆ

ನಾವು ಕೇವಲ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಗಳಿಂದ ಮೀರಿ ಆ ಮಾಹಿತಿಯನ್ನು ವಿಶ್ಲೇಷಿಸುವ, ಕನೆಕ್ಟ್ ಮಾಡುವ ಮತ್ತು ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆಗಳ ಕಡೆಗೆ ಸಾಗುತ್ತಿದ್ದೇವೆ. ಐರಾದ ಮೂಲಕ ಎಐ ಆಧರಿತ ಯಾಂತ್ರೀಕರಣ ಪ್ರಕ್ರಿಯೆ ನಡೆಯಲಿದೆ ಮತ್ತು ದೊಡ್ಡ ಪ್ರಮಾಣದ ಮಾಹಿತಿಯನ್ನು ಸ್ಪಷ್ಟ ಒಳನೋಟಗಳಾಗಿ ಪರಿವರ್ತಿಸುವ ಕೆಲಸ ನಡೆಯ ಲಿದೆ. ಈ ಮೂಲಕ ರೋಗಿ ಗಳಿಗೆ ನಾವು ಅತ್ಯುತ್ತಮ ಸೇವೆಯನ್ನು ಒದಗಿಸಲಿದ್ದೇವೆ.

V Somanna: ತುಮಕೂರು ವಿವಿಗೆ ಶಿವಕುಮಾರ ಸ್ವಾಮೀಜಿ ಹೆಸರು ಮರುನಾಮಕರಣ; ಸರ್ಕಾರಕ್ಕೆ ಸೋಮಣ್ಣ ಪತ್ರ

ತುಮಕೂರು ವಿವಿಗೆ ಶಿವಕುಮಾರ ಸ್ವಾಮೀಜಿ ಹೆಸರು ಮರುನಾಮಕರಣಕ್ಕೆ ಒತ್ತಾಯ

ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ. ಶಿವಕುಮಾರ ಸ್ವಾಮೀಜಿ (Shivakumar Swamiji) ಹೆಸರು ಮರು ನಾಮಕರಣ ಮಾಡುವಂತೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Festival Trend 2025: ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ‌ ಮೂರ್ತಿಗಳು

ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ ಮೂರ್ತಿಗಳು

ಆಗಸ್ಟ್‌ 27ರಂದು ಗಣೇಶ್‌ ಚತುರ್ಥಿ ನಡೆಯಲಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಇದೀಗ ಇಕೋ ಫ್ರೆಂಡ್ಲಿ ಮಿನಿ ಗೌರಿ-ಗಣೇಶನ ಮೂರ್ತಿಗಳದ್ದೇ ಕಾರುಬಾರು! ಪುಟ್ಟ ಮೂರ್ತಿಗಳಿಂದಿಡಿದು ಆಳೆತ್ತರದ ಮೂರ್ತಿಗಳವರೆಗಿನ ಪರಿಸರ ಸ್ನೇಹಿ ಮೂರ್ತಿಗಳು ಎಲ್ಲೆಡೆ ಲಗ್ಗೆ ಇಟ್ಟಿವೆ. ಈ ಬಗ್ಗೆ ಇಲ್ಲಿದೆ ವರದಿ.

Karnataka weather: ಯೆಲ್ಲೋ ಅಲರ್ಟ್; ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ಯೆಲ್ಲೋ ಅಲರ್ಟ್; ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29°C ಮತ್ತು 21°C ಇರುವ ಸಾಧ್ಯತೆ ಇದೆ.

Dharmasthala case: ಮಟ್ಟಣ್ಣನವರ್‌ ಬಳಿ ಇರುವ ಸಾಕ್ಷ್ಯಗಳೆಲ್ಲಾ ಸುಜಾತಾ ಭಟ್‌ ರೀತಿಯದ್ದು: ಚಕ್ರವರ್ತಿ ಸೂಲಿಬೆಲೆ

ಮಟ್ಟಣ್ಣನವರ್‌ ಬಳಿ ಇರುವ ಸಾಕ್ಷ್ಯಗಳೆಲ್ಲಾ ಸುಜಾತಾ ಭಟ್‌ ರೀತಿಯದ್ದು

Dharmasthala case: ದೊಡ್ಡವರು ಏನು ಬೇಕಾದರೂ ಮಾಡುತ್ತಾರೆ ಎಂದು ಕೆಲ ಜನ ಹೇಳುತ್ತಾರೆ. ಆದರೆ, ದೊಡ್ಡವರು ಎನಿಸಿಕೊಂಡವರು ಹಲವು ಮಂದಿ ಜೈಲಿಗೆ ಹೋಗಿದ್ದಾರೆ. ಈ ನೆಲದ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

Dharmasthala Case: ಧರ್ಮಸ್ಥಳಕ್ಕೆ ಕಳಂಕ ಅಂಟಿಸಿದವರನ್ನು ಅಣ್ಣಪ್ಪ ಸರ್ವನಾಶ ಮಾಡುತ್ತಾನೆ: ವಸಂತ್‌‌ ಗಿಳಿಯಾರ್

ಧರ್ಮಸ್ಥಳಕ್ಕೆ ಕಳಂಕ ಅಂಟಿಸಿದ ಎಲ್ಲರನ್ನೂ ಅಣ್ಣಪ್ಪ ಸರ್ವನಾಶ ಮಾಡುತ್ತಾನೆ

Vasanth Giliyar: ಬೆಂಗಳೂರಿನ ಸಂಜಯ ನಗರದಲ್ಲಿ ಶನಿವಾರ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ವಸಂತ್‌ ಗಿಳಿಯಾರ್ ಮಾತನಾಡಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಎಲ್ಲ ಕುತಂತ್ರಗಳನ್ನು ಬಯಲು ಮಾಡುತ್ತಾರೆ ಎಂದು ತಿಳಿಸಿದ್ದಾರೆ.

Mahesh Shetty Thimarodi: ಏನೂ ಕಿತ್ಕೊಳೋಕೆ ಆಗಲ್ಲ; ಕೋರ್ಟ್‌ ಆವರಣದಲ್ಲೇ ನಾಲಿಗೆ ಹರಿಬಿಟ್ಟ ಮಹೇಶ್‌ ತಿಮರೋಡಿ!

ಏನೂ ಕಿತ್ಕೊಳೋಕೆ ಆಗಲ್ಲ; ನಾಲಿಗೆ ಹರಿಬಿಟ್ಟ ಮಹೇಶ್‌ ತಿಮರೋಡಿ!

Mahesh Shetty Thimarodi: ಹಿರಿಯಡ್ಕ ಸಬ್ ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, ನಮ್ಮ ಹೋರಾಟ ಮುಂದುವರಿಯಲಿದೆ, ಸಹಕಾರ ನೀಡಿದ ವಕೀಲರಿಗೆ ಅಭಿನಂದನೆ ಸಲ್ಲಿಸುವೆ. ಅನಾಮಿಕನ ಬಂಧನದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ

Karnataka Rains: ಯೆಲ್ಲೋ ಅಲರ್ಟ್; ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಅಬ್ಬರಿಸಲಿದೆ ಮಳೆ!

ಯೆಲ್ಲೋ ಅಲರ್ಟ್; ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಅಬ್ಬರಿಸಲಿದೆ ಮಳೆ!

Karnataka Weather: ಆ.24ರಂದು ಕರಾವಳಿ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿe. ಆಗಸ್ಟ್ 26 ಮತ್ತು 27ರಂದು ಕರ್ನಾಟಕ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

S\O Muthanna Movie: ʼS/O ಮುತ್ತಣ್ಣʼ ಸಿನಿಮಾದ ಟ್ರೇಲರ್ ಔಟ್‌; ಚಿತ್ರ ಸೆ.12ಕ್ಕೆ ರಿಲೀಸ್‌

ʼS/O ಮುತ್ತಣ್ಣʼ ಸಿನಿಮಾದ ಟ್ರೇಲರ್ ಔಟ್‌; ಚಿತ್ರ ಸೆ.12ಕ್ಕೆ ರಿಲೀಸ್‌

S\O Muthanna Movie: ಪ್ರಣಮ್ ದೇವರಾಜ್ ನಾಯಕನಾಗಿ ಹಾಗೂ ʼದಿಯಾʼ ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ ʼS/O ಮುತ್ತಣ್ಣʼ ಚಿತ್ರದ ಟ್ರೇಲರ್ ಇತ್ತೀಚೆಗೆ ವಿಕ್ಟರಿ ಸಿನಿಮಾಸ್‌ನಲ್ಲಿ ಬಿಡುಗಡೆಯಾಗಿದೆ. ಚಿತ್ರವು ಸೆಪ್ಟೆಂಬರ್ 12ರಂದು ಬಿಡುಗಡೆಯಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

Mahesh Shetty Thimarodi: ಮಹೇಶ್‌ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು

ಮಹೇಶ್‌ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು

Mahesh Shetty Thimarodi: ಬಿ.ಎಲ್‌. ಸಂತೋಷ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಜಿರೆಯ ನಿವಾಸದಲ್ಲಿ ಸೌಜನ್ಯಾ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಗುರುವಾರ ಅರೆಸ್ಟ್‌ ಮಾಡಿದ್ದರು. ಅವರಿಗೆ ಇದೀಗ ಉಡುಪಿ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

KC Veerendra Puppy: ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅರೆಸ್ಟ್;‌ ಇಡಿಯಿಂದ 12 ಕೋಟಿ ನಗದು, 6 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅರೆಸ್ಟ್;‌ 12 ಕೋಟಿ ನಗದು ಜಪ್ತಿ

illegal betting case: ಚಿತ್ರದುರ್ಗ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಶುಕ್ರವಾರ ಬಂದಿಸಿ, ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್‌ನಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆಯಲಾಯಿತು ಎಂದು ಇಡಿ ತಿಳಿಸಿದೆ.

Dharmasthala case: ನದಿಯಲ್ಲಿ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ; ಮುಸುಕುಧಾರಿಯ ಮುಖವಾಡ ಬಯಲು!

ನದಿಯಲ್ಲಿ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ಚಿನ್ನಯ್ಯ!

Mask Man Chinnaiah: ದೂರುದಾರ ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದು, ಸಿ.ಎನ್ ಚಿನ್ನಯ್ಯ ಅಲಿಯಾಸ್ ಚಿನ್ನಪ್ಪ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಸದ್ಯ ಚಿನ್ನಯ್ಯನನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ (police custody) ನೀಡಿ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ.

Loading...