ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Bengaluru Murder Case: ಯುವತಿಯನ್ನು ಸ್ನೇಹಿತೆಯ ರೂಮ್‌ಗೆ ಕರೆದೊಯ್ದು ಭೀಕರವಾಗಿ ಕೊಲೆಗೈದ ಯುವಕ

ಬೆಂಗಳೂರಿನಲ್ಲಿ ಯುವತಿಯನ್ನು ಭೀಕರವಾಗಿ ಕೊಲೆಗೈದ ಯುವಕ

Bengaluru News: ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಯುವತಿಯ ಭೀಕರ ಹತ್ಯೆ ನಡೆದಿದೆ. ಆಂಧ್ರ ಮೂಲದ ಯುವತಿಯ ಕೊಲೆ ನಡೆದಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

DK Shivakumar: ಡಿಕೆ ಶಿವಕುಮಾರ್‌ ಮನೆಗೆ ನಾಗಾ ಸಾಧುಗಳ ಭೇಟಿ, ಏನಂತ ಆಶೀರ್ವದಿಸಿದ್ರು?

ಡಿಕೆ ಶಿವಕುಮಾರ್‌ ಮನೆಗೆ ನಾಗಾ ಸಾಧುಗಳ ಭೇಟಿ, ಏನಂತ ಆಶೀರ್ವದಿಸಿದ್ರು?

Naga Sadhu in DK Shivakumar home: ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ರಾಜಕೀಯ ಚಟುವಟಿಗಳು ಗರಿಗೆದರಿದೆ. ಇದರ ನಡುವೆಯೇ ಡಿಕೆ ಶಿವಕುಮಾರ್ ಮನೆಗೆ ಹೋದ ನಾಗಾ ಸಾಧುಗಳು, ಡಿಕೆಶಿ ತಲೆ ಮೇಲೆ ಕೈಯಿಟ್ಟು ಆಶೀರ್ವಾದಿಸಿದ್ದಾರೆ. ʻಪವರ್‌ ಫೈಟ್‌ʼ ನಡುವೆ ಕಾಶಿಯಿಂದ ಬಂದ ನಾಗ ಸಾಧುಗಳ ಆಶೀರ್ವಾದ ಡಿಸಿಎಂ ಡಿಕೆಶಿ ಅವರಿಗೆ ದೊರೆತಿದೆ.

Gold Price Today on 24th November 2025: ಗ್ರಾಹಕರಿಗೆ ಕೊಂಚ ನಿರಾಳ; ಚಿನ್ನದ ದರದಲ್ಲಿ ಇಳಿಕೆ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and Silver Rate: ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದ್ದು, ಸ್ವರ್ಣಪ್ರಿಯರಿಗೆ ಸಂತಸ ತಂದಿದೆ. ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ65 ರೂ. ಇಳಿಕೆ ಆಗಿದ್ದು, 11,470 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆಯಲ್ಲಿ 71 ಇಳಿಕೆ ಆಗಿದ್ದು ಇಂದು 12,513 ರೂ. ಇದೆ.

Road Accident: ಬೆಂಗಳೂರು- ಚೆನ್ನೈ ಹೈವೇಯಲ್ಲಿ ಭೀಕರ ಕಾರು ಅಪಘಾತ, ನಾಲ್ವರು ಸಾವು

ಬೆಂಗಳೂರು- ಚೆನ್ನೈ ಹೈವೇಯಲ್ಲಿ ಭೀಕರ ಕಾರು ಅಪಘಾತ, ನಾಲ್ವರು ಸಾವು

Bengaluru- Chennai highway: ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಮಧ್ಯರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು ಬಳಿಕ ಬ್ರಿಡ್ಜ್​​ನಿಂದ ಕೆಳಗೆ ಚಿಮ್ಮಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.

PM Narendra Modi: ನ.28ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ರೋಡ್ ಶೋ ರದ್ದು

ನ.28ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ರೋಡ್ ಶೋ ರದ್ದು

Udupi Sri Krishna Math: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ರೋಡ್ ಶೋ ನಡೆಸಲು ಯೋಜಿಸಲಾಗಿತ್ತು. ಆದರೆ, ಪರಿಷ್ಕೃತ ಪಟ್ಟಿಯಲ್ಲಿ ರೋಡ್ ಶೋ ರದ್ದುಗೊಳಿಸಲಾಗಿದೆ. ಹೆಲಿಪ್ಯಾಡ್‌ನಿಂದ ನೇರವಾಗಿ ಮಧ್ಯಾಹ್ನ 12 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಮೋದಿ, ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ತದನಂತರ ಐತಿಹಾಸಿಕ 'ಲಕ್ಷ ಕಂಠ ಗೀತ ಗಾಯನ' ಕಾರ್ಯಕ್ರಮದಲ್ಲಿ ಭಾಗವಹಿಸಿ, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ʼತಂತ್ರಜ್ಞಾನ ಮತ್ತು ಮಾನವೀಯತೆ ಸದಾ ಜೊತೆಯಾಗಿರಲಿʼ: ಮಾಹೆಯ 33ನೇ ಘಟಿಕೋತ್ಸವದಲ್ಲಿ ಪ್ರತಿಧ್ವನಿಸಿದ ಆಶಯ

ʼತಂತ್ರಜ್ಞಾನ ಮತ್ತು ಮಾನವೀಯತೆ ಸದಾ ಜೊತೆಯಾಗಿರಲಿʼ

ಗ್ಲಾಸ್ಗೊದ ರಾಯಲ್ ಕಾಲೇಜ್ ಆಫ್ ಫಿಸಿಶಿ ಯನ್ಸ್ ಅಂಡ್ ಸರ್ಜನ್ಸ್‌ನ ಅಧ್ಯಕ್ಷರಾದ ಪ್ರೊಫೆಸರ್ ಹ್ಯಾನಿ ಎಟೀಬಾ, ತಂತ್ರಜ್ಞಾನಾ ಧಾರಿತ ಪ್ರಪಂಚದಲ್ಲಿ ಅನುಕಂಪಪೂರಿತ ಸಂವಹನದ ಮಹತ್ವವನ್ನು ಒತ್ತಿ ಹೇಳಿದರು. ಜ್ಞಾನವು ಕಾಳಜಿ ಧನಾತ್ಮಕ ಪರಿಣಾವಾಗಿ ಪರಿವರ್ತನೆ ಯಾಗಲು ಅನುಕಂಪಪೂರಿತ ಸಂವಹನ ಬಲು ಮಹತ್ವದ ಸೇತುವೆಯಾಗುತ್ತದೆ ಎಂದರು.

QSR ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ ಬರ್ಗರ್ ಸಿಂಗ್: ಒಂದೇ ದಿನದಲ್ಲಿ 3300 ಕ್ಕಿಂತ ಹೆಚ್ಚು ಉಚಿತ ಊಟಗಳ ವಿತರಣೆ

QSR ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ ಬರ್ಗರ್ ಸಿಂಗ್

ಗ್ರಾಹಕರಿಗೆ ಬರ್ಗರ್ ಸಿಂಗ್‌ನ ಅತ್ಯಂತ ಜನಪ್ರಿಯ ಆಯ್ಕೆಗಳಾದ ಬಿಗ್ ಕ್ರಿಸ್ಪಿ ಚಿಕನ್ ಮೀಲ್ಸ್ ಮತ್ತು ಉಡ್ತಾ ಪಂಜಾಬ್ 2.0 ಮೀಲ್ಸ್, ಹತ್ತಿರದ ದಿಲ್ಲಿ 6 ಫ್ರೈಸ್ಸ್ ಮತ್ತು ಖಾಸಗಿ ಗುಲಾಬೋ ಪಾನೀಯದೊಂದಿಗೆ ನೀಡಲಾಯಿತು. ಅತಿಥಿಗಳು ಧೈರ್ಯಶಾಲಿ ದೇಸಿ ರುಚಿಗಳು, ಬರ್ಗರ್‌ಗಳ ಜ್ಯೂಸಿನೆಸ್, ವಿಶಿಷ್ಟ ಮಸಾಲೆ ಸವರಿದ ಫ್ರೈಸ್ಸ್ ಮತ್ತು ತಾಜಾ ಮಸಾಲಾ ಸಂಯೋಜಿತ ಗುಲಾ ಬೋ ಪಾನೀಯವನ್ನು ಮೆಚ್ಚಿದರು.

Bengaluru Robbery Case: ಬೆಂಗಳೂರು ದರೋಡೆ ಆರೋಪಿ ಕಾನ್ಸ್‌ಟೇಬಲ್ ವಜಾ, ಖಾಕಿ ಮೇಲೂ ಹದ್ದಿನ ಕಣ್ಣು

ಬೆಂಗಳೂರು ದರೋಡೆ ಆರೋಪಿ ಕಾನ್ಸ್‌ಟೇಬಲ್ ವಜಾ, ಖಾಕಿ ಮೇಲೂ ಹದ್ದಿನ ಕಣ್ಣು

ರಾಬರಿ ಪ್ರಕರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ನೇ ಶಾಮೀಲು ಆಗಿರುವುದರಿಂದ ಪೊಲೀಸ್ ಇಲಾಖೆ (police department) ಅಲರ್ಟ್ ಆಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ (Bengaluru Police Commissioner) ಸೀಮಂತ್ ಕುಮಾರ್ ಸಿಂಗ್, ಬೆಂಗಳೂರಿನ ಎಲ್ಲಾ ಠಾಣೆಯ ಪಿಎಸ್‌ಐ, ಎಎಸ್‌ಐ, ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್‌ಗಳ ಮಾನಿಟರಿಂಗ್‌ಗೆ ಸೂಚನೆ ನೀಡಿದ್ದಾರೆ.

Karnataka Weather: ಇಂದಿನ ಹವಾಮಾನ; ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

ಇಂದಿನ ಹವಾಮಾನ; ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

Karnataka Weather Report: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಇದೆ. ಇನ್ನು ಮುಂದಿನ 6 ದಿನ ರಾಜ್ಯದ ಹವಾಮಾನ ಹೇಗಿರಲಿದೆ ಎಂಬ ಕುರಿತ ವರದಿ ಇಲ್ಲಿದೆ.

Bengaluru News: ವಂದೇ ಭಾರತ್‌ ರೈಲಿಗೆ ಸಿಲುಕಿ ಇಬ್ಬರು ನರ್ಸಿಂಗ್‌ ವಿದ್ಯಾರ್ಥಿಗಳ ಸಾವು

ವಂದೇ ಭಾರತ್‌ ರೈಲಿಗೆ ಸಿಲುಕಿ ಇಬ್ಬರು ನರ್ಸಿಂಗ್‌ ವಿದ್ಯಾರ್ಥಿಗಳ ಸಾವು

Bengaluru News: ಹೆಸರಘಟ್ಟ ರಸ್ತೆಯ ಸಪ್ತಗಿರಿ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ವಿಭಾಗದಲ್ಲಿ ಇಬ್ಬರು ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಸಮೀಪದಲ್ಲೇ ಇಬ್ಬರು ವಾಸವಾಗಿದ್ದರು. ಈ ಘಟನೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ರೈಲಿಗೆ ಆಕಸ್ಮಿಕವಾಗಿ ಸಿಲುಕಿ ಮೃತಪಟ್ಟಿದ್ದಾರೆಯೇ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ತನಿಖೆ ನಡೆದಿದೆ.

ಜಂಗಮಕೋಟೆ ಹೋಬಳಿ ಕೆಐಎಡಿಬಿ ಭೂ ವಶ ಪರ ಹೋರಾಟಗಾರರಿಂದ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭ

ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭ

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ 2823,ಎಕರೆ ಭೂಮಿಯನ್ನು ಸರ್ಕಾರ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಭೂಸ್ವಾದೀನ ಪ್ರಕ್ರಿಯೆಗೆ 2024ರ ಜೂನ್ 24 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ತ್ತು .

‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ದಿಂದ ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಉತ್ಸವ

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವಕ್ಕೆ ವಿಶೇಷ ಗೌರವ

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ "ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ" ಎನ್ನುವ ಸಂದೇಶವು ಈಗ ಒಂದು ಪರಂಪರೆಯೇ ಆಗಿದೆ. ಇದನ್ನು ಮತ್ತಷ್ಟು ವಿಸ್ತರಿಸಲು ಸೇವಾ ಅಭಿಯಾನವು ಅನ್ನ, ಅಕ್ಷರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹಲವು ಸೇವಾ ಉಪಕ್ರಮಗಳನ್ನು ಆರಂಭಿಸಿದೆ.

ರಾಜ್ಯದ 2 ಲಕ್ಷ ಶಿಕ್ಷಕರ ಭವಿಷ್ಯ ಅತಂತ್ರ; ದೆಹಲಿಯಲ್ಲಿ ಸೋಮವಾರ ಪ್ರತಿಭಟನೆ

2 ಲಕ್ಷ ಶಿಕ್ಷಕರ ಭವಿಷ್ಯ ಅತಂತ್ರ; ದೆಹಲಿಯಲ್ಲಿ ನಾಳೆ ಪ್ರತಿಭಟನೆ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಸೋಮವಾರ (ನವೆಂಬರ್‌ 24) ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಜರುಗಲಿದೆ. ʼʼಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ವತಿಯಿಂದ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಸಹಸ್ರಾರು ಶಿಕ್ಷಕರು ಪಾಲ್ಗೊಳ್ಳಲಿದ್ದಾರೆʼʼ ಎಂದು ಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

ನಟ, ರಂಗನಿರ್ದೇಶಕ ದಿಲೀಪ್‌ ಕುಮಾರ್. ಆರ್.ನಿರ್ದೇಶನದ ವಿದುರಾಶ್ವತ್ಥ ಹತ್ಯಾಕಾಂಡ ನಾಟಕಕ್ಕೆ ಪ್ರಥಮ ಸ್ಥಾನ

ವಿದುರಾಶ್ವತ್ಥ ಹತ್ಯಾಕಾಂಡ ನಾಟಕಕ್ಕೆ ಪ್ರಥಮ ಸ್ಥಾನ

ಸಕಲ ರಂಗಹೆಜ್ಜೆ ಟ್ರಸ್ಟ್ (ರಿ.) ಚಿಕ್ಕಬಳ್ಳಾಪುರ, ಸಕಲ ರಂಗಪಯಣ 2025 ರ ನಾಟಕ ಶ್ರೀ ವಿಶ್ವ ವಿವೇಕ ಪಿಯು ಕಾಲೇಜು, ವಾಪಸಂದ್ರ ವಿದ್ಯಾರ್ಥಿಗಳು ಅಭಿನಯಿಸಿದ "ವಿದುರಾಶ್ವತ್ಥ ಹತ್ಯಾ ಕಾಂಡ" ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಪ್ರದರ್ಶನಗೊಂಡು ತೀರ್ಪುಗಾರ ಅಯ್ಕೆಯಂತೆ ಪ್ರಥಮ ಸ್ಥಾನ ಪಡೆದಿದೆ.

Chief Minister Siddaramaiah: ನ.24 ರಂದು 2 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನವುಳ್ಳ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಲೋಕಾರ್ಪಣೆ

ಅಧಿಕ ಅನುದಾನವುಳ್ಳ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಲೋಕಾರ್ಪಣೆ

ಚಿಕ್ಕಬಳ್ಳಾಪುರ ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್. ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾ ಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ ವನ್ನು ನ.24 ರಂದು ಬೆಳಿಗ್ಗೆ 11 ಗಂಟೆಗೆ ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ಹನುಮಂತಪುರ ಗ್ರಾಮದಲ್ಲಿ ಆಯೋಜಿಸಲಾಗಿದೆ.

Chikkaballapur News: ‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ದಿಂದ ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಉತ್ಸವ

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಜನ್ಮಶತಮಾನೋತ್ಸವಕ್ಕೆ ವಿಶೇಷ ಗೌರವ

ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಸೇವಾ ಅಭಿಯಾನವು ಸಾಯಿ ಬಾಬಾ ಅವರ ಸ್ಮರಣೆಯಲ್ಲಿ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ 2025’ ಆಯೋಜಿಸಿತ್ತು. ಆಗಸ್ಟ್ 16 ರಿಂದ ನವೆಂಬರ್ 23, 2025 ರವರೆಗೆ ನಡೆದ ಈ ಉತ್ಸವ ವು ಹಲವು ವೈಶಿಷ್ಟ್ಯಗಳೊಂದಿಗೆ ಎಲ್ಲರ ಗಮನ ಸೆಳೆಯಿತು.

ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ: ವಿಶ್ವ ದಾಖಲೆ ಬರೆದ 'ಒಂದು ಜಗತ್ತು ಒಂದು ಕುಟುಂಬ' ಸಾಂಸ್ಕೃತಿಕ ಮಹೋತ್ಸವ

ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಂಪನ್ನ

Sri Sathya Sai Baba Birth Centenary: ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಚಿಕ್ಕಬಳ್ಳಾಪುರದ ಪ್ರಯುಕ್ತ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ 100 ದಿನಗಳ 'ಒಂದು ಜಗತ್ತು ಒಂದು ಕುಟುಂಬ' ವಿಶ್ವ ಸಾಂಸ್ಕೃತಿಕ ಮಹೋತ್ಸವವು ಸಂಪನ್ನವಾಯಿತು. ಇದೇ ವೇಳೆ 1 'ಒಂದು ಜಗತ್ತು ಒಂದು ಕುಟುಂಬ' ವಿಶ್ವ ಸಾಂಸ್ಕೃತಿಕ ಮಹೋತ್ಸವವು ವಿಶ್ವದ ಅತಿ ದೀರ್ಘ ಸಾಂಸ್ಕೃತಿಕ ಉತ್ಸವ ಎಂದು ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದ್ದು ವಿಶೇಷ.

Chikkanayakanahalli News: ವೈದ್ಯಕೀಯ ಮತ್ತು ಪಡಿತರ ಸೇವೆ ಪ್ರತ್ಯೇಕಿಸಿ: ಒಂದೇ ಚೀಟಿ ಗೊಂದಲ ನಿವಾರಣೆಗೆ ಶಿರಸ್ತೇದಾರ್ ಕಿರಣ್‌ ಕುಮಾರ್ ಸಲಹೆ

ಒಂದೇ ಚೀಟಿ ಗೊಂದಲ ನಿವಾರಣೆಗೆ ಶಿರಸ್ತೇದಾರ್ ಕಿರಣ್‌ ಕುಮಾರ್ ಸಲಹೆ

ಆಹಾರ ಭದ್ರತೆ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಸರಕಾರವು ಪ್ರತ್ಯೇಕ ಕಾರ್ಡ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿಯ ವಿತರಣೆ ಅಥವಾ ಪರಿಷ್ಕರಣೆ ಪ್ರಕ್ರಿಯೆ ವಿಳಂಬವಾದರೆ ಆ ಕುಟುಂಬವು ತುರ್ತು ವೈದ್ಯಕೀಯ ಸೇವೆಗಳನ್ನು ಪಡೆಯಲು ಸಾಧ್ಯ ವಾಗುವುದಿಲ್ಲ

Chikkanayakanahalli News: ದಾರ್ಶನಿಕರ ಜಯಂತಿ ಸ್ವಾಗತಾರ್ಹ ಆದರೆ ಆಚರಣೆಯ ವೈಭವೀಕರಣಕ್ಕೆ ಟೀಕೆ

ದಾರ್ಶನಿಕರ ಜಯಂತಿ ಸ್ವಾಗತಾರ್ಹ, ಆಚರಣೆಯ ವೈಭವೀಕರಣಕ್ಕೆ ಟೀಕೆ

ಗಣಿ ನಿಧಿಯ ಅಡಿಯಲ್ಲಿ ತಕ್ಷಣವೇ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂದು ಆಗ್ರಹಿಸಿ ದರು. ಸಮರ್ಪಕ ಆರೋಗ್ಯ ಸೌಲಭ್ಯಗಳ ಕೊರತೆಯಿಂದ ತಾಲ್ಲೂಕಿನ ಜನರು ತುರ್ತು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಇದನ್ನು ತಪ್ಪಿಸಲು ನಿಧಿಯಲ್ಲಿನ ಹಣ ಬಳಸಿಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು.

ಮಕ್ಕಳಲ್ಲಿ ನರ ಬೆಳವಣಿಗೆಯ ಸಮಸ್ಯೆಗಳು: ಆರಂಭಿಕ ಪತ್ತೆ ಮತ್ತು ಪರಿಹಾರವೇ ಯಶಸ್ಸಿನ ಕೀಲಿಕೈ

ನರ ಬೆಳವಣಿಗೆಯ ಸಮಸ್ಯೆಗಳು: ಪತ್ತೆ ಮತ್ತು ಪರಿಹಾರವೇ ಯಶಸ್ಸಿನ ಕೀಲಿಕೈ...!

ವಿಶೇಷವಾಗಿ ಎರಡನೇ ಹಂತದ ನಗರಗಳಲ್ಲಿ ನೆಲೆಸಿರುವ ಪೋಷಕರಿಗೆ ಇಂತಹ ಸಂಕೀರ್ಣ ಸಮಸ್ಯೆಗಳಿಗೆ ಸೂಕ್ತ ಹಾಗೂ ತ್ವರಿತ ಚಿಕಿತ್ಸೆ ದೊರಕುವುದು ಸವಾಲಿನ ಕೆಲಸ. ಆದುದರಿಂದ, ಆರಂಭಿಕ ಹಂತದಲ್ಲೇ ಈ ಲಕ್ಷಣಗಳನ್ನು ಗುರುತಿಸುವುದು ಅತ್ಯಗತ್ಯ. ಬಾಲ್ಯದ ಆರಂಭಿಕ ಹಂತವು ಮಗುವಿನ ಮೆದುಳಿನ ಬೆಳವಣಿಗೆಗೆ 'ಸುವರ್ಣ ಕಾಲ' ವಿದ್ದಂತೆ.

Share Market: ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡುವುದು ನಿರ್ಣಾಯಕ: ಕೆ.ಜಿ. ಕೃಪಾಲ್‌

ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡುವುದು ನಿರ್ಣಾಯಕ: ಕೆ.ಜಿ. ಕೃಪಾಲ್‌

KG Krupal: ಬೆಂಗಳೂರಿನಲ್ಲಿ ಷೇರುಪೇಟೆ ವಿಚಾರ ಮಂಟಪದಿಂದ ಆಯೋಜಿಸಿದ್ದ ನಾಲ್ಕನೇ ವರ್ಷದ ಅರ್ಥೋತ್ಸವ ಕಾರ್ಯಕ್ರಮದಲ್ಲಿ ಷೇರು ಮಾರುಕಟ್ಟೆ ತಜ್ಞ ಕೆ.ಜಿ. ಕೃಪಾಲ್‌ ಮಾತನಾಡಿದ್ದು, ಷೇರು ಮಾರುಕಟ್ಟೆಯಲ್ಲಿ ನಮ್ಮ ದುರ್ಬಲತೆಯನ್ನು ಅರಿತುಕೊಂಡರೆ ಸಬಲರಾಗಲು ಸಾಧ್ಯವಿದೆ ಎಂದು ಸಲಹೆ ನೀಡಿದ್ದಾರೆ.

Bangalore News: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಕಿ.ಮೀ ಉದ್ದ ಕನ್ನಡ ಧ್ವಜದ ಮೆರವಣಿಗೆ

ರಾಜ್ಯೋತ್ಸವದ ಪ್ರಯುಕ್ತ ಒಂದು ಕಿ.ಮೀ ಉದ್ದ ಕನ್ನಡ ಧ್ವಜದ ಮೆರವಣಿಗೆ

"ಕನ್ನಡ ರಾಜ್ಯೋತ್ಸವ"ದ ಪ್ರಯುಕ್ತ ಸಾವಿರ ಮೀಟರ್‌ನ ಹಾಗೂ ಒಂದು ಕಿಲೋ ಮೀಟರ್‌ ಉದ್ದದ "ಕನ್ನಡ ಧ್ವಜ"ದ ಮೆರವಣಿಗೆ ಮಾಡುವ ಮೂಲಕ ಉದ್ಭವ ಗಣಪತಿ ಗೆಳೆಯರ ಬಳಗ ಹಾಗೂ ಪಟ್ಟೇಗಾರ ಪಾಳ್ಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ನೇತೃವದಲ್ಲಿ "ಕನ್ನಡ ರಾಜ್ಯೋ ತ್ಸವ" ಆಚರಿಸಲಾಯಿತು.

G Parameshwara: ನಾನು ಕೂಡ ರೇಸ್‌ನಲ್ಲಿರ್ತೀನಿ: ಸಿಎಂ ರೇಸ್‌ಗೆ ಪರಮೇಶ್ವರ್‌ ಎಂಟ್ರಿ

ನಾನು ಕೂಡ ರೇಸ್‌ನಲ್ಲಿರ್ತೀನಿ: ಸಿಎಂ ರೇಸ್‌ಗೆ ಪರಮೇಶ್ವರ್‌ ಎಂಟ್ರಿ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಒಳಗುದಿಗಳಿಗೆ ಸಂಬಂಧಿಸಿದಂತೆ, ಹಲವರು ಹಲವು ರೀತಿಯ ಹೇಳಿಕೆ ನೀಡಿದ್ದಾರೆ. ಒಂದೆಡೆ ಸ್ವತಃ ಹೈಕಮಾಂಡ್‌ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಈ ಕುರಿತು ಹೈಕಮಾಂಡ್‌ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದರೆ, ಇನ್ನೊಂದೆಡೆ ಗೃಹ ಸಚಿವ ಜಿ ಪರಮೇಶ್ವರ (G Parameshwara) ಅವರು, ನಾನು ಕೂಡ ಯಾವಾಗ್ಲು ಸಿಎಂ ರೇಸ್‌ನಲ್ಲಿರ್ತೀನಿ ಎಂದಿದ್ದಾರೆ.

Kalaburagi News: ಕಾಳಗಿಯಲ್ಲಿ ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಕಾಳಗಿಯಲ್ಲಿ ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

Farmer consumes poison: ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ರೈತ ಬೆಳೆದಿದ್ದ ಎಲ್ಲಾ ತೊಗರಿ ಬೆಳೆಯು ಸಂಪೂರ್ಣ ನಾಶವಾಗಿತ್ತು. ಬೆಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ದಿಕ್ಕೆಟ್ಟ ರೈತ, ಅಲ್ಪಸ್ವಲ್ಪ ಉಳಿದ ಬೆಳೆಗೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Loading...