ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಮತದಾರರ ಪಟ್ಟಿ ಮರು ಪರಿಶೀಲನೆಗೆ ಚುನಾವಣಾ ಆಯೋಗ ಸೂಚನೆ; ಇದು ದೇಶದ ಮತದಾರರ ಹಕ್ಕಿಗೆ ಸಂದ ಜಯ ಎಂದ ಸಿಎಂ

ಮತದಾರರ ಪಟ್ಟಿ ಮರು ಪರಿಶೀಲನೆಗೆ ಚುನಾವಣಾ ಆಯೋಗ ಸೂಚನೆ: ಸಿಎಂ

CM DK Shivakumar: ಸಮಾಜದ ದುರ್ಬಲ ವರ್ಗಗಳ ಮತಗಳನ್ನು ತೆಗೆದು ಹಾಕಲು ಬಿಜೆಪಿಯವರು ಅರ್ಜಿ ನೀಡಿದ್ದಾರೆ. ಇದು ನಾಚಿಕೆ ಗೇಡಿನ ಸಂಗತಿ. ನಮ್ಮ ನಡುವಿನ ಇತರೇ ಸಮುದಾಯಗಳು, ಜಾತಿ ಮತ್ತು ಧರ್ಮಗಳ ನಡುವೆ ಕಂದಕ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ದಲಿತ ಮತ್ತು ಅಲ್ಪಸಂಖ್ಯಾತರ ಮತಗಳನ್ನು ತೆಗೆಸುವುದೇ ಅವರ ಉದ್ದೇಶ. ಇಂತಹವರು ರಾಜಕೀಯದಲ್ಲಿರಲು ನಾಲಾಯಕ್‌ಗಳು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದಾರೆ.

BJP’s Seva Sankalp Yatra: ಸೇವಾ ಸಂಕಲ್ಪ ಯಾತ್ರೆ; ಬಾಗೇಪಲ್ಲಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಲ ನಾಯಕರ ವಾಗ್ದಾಳಿ

ಬಾಗೇಪಲ್ಲಿ ಸೇವಾ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

BY Vijayendra: ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಬರಗಾಲದ ಸಂದರ್ಭದಲ್ಲಿ ಬಿಜೆಪಿ ಪಾದಯಾತ್ರೆ ನಡೆಸಿ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ ಪರಿಹಾರ ಕ್ರಮಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧನುರ್ ಲಗ್ನದಲ್ಲಿ ದಸರಾಕ್ಕೆ ಗವಿಮಠ ಶ್ರೀ ಚಾಲನೆ: ಅ.11ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ-2026ಕ್ಕೆ ಅಧಿಕೃತ ಚಾಲನೆ

ಧನುರ್ ಲಗ್ನದಲ್ಲಿ ದಸರಾಕ್ಕೆ ಗವಿಮಠ ಶ್ರೀ ಚಾಲನೆ

ನಾಡಹಬ್ಬ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಧಾರ್ಮಿಕ ವೈಭವ, ರಾಜಪರಂಪರೆ, ಸಾಹಿತ್ಯ, ಕಲೆ, ಕ್ರೀಡೆ, ಕೃಷಿ, ಗ್ರಾಮೀಣ ಸಂಸ್ಕೃತಿ, ಯುವಜನತೆ ಹಾಗೂ ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿದೆ. ಅ.11ರಿಂದ ಆರಂಭವಾಗುವ ದಸರಾ ಸಂಭ್ರಮ ಅ.21ರ ವಿಜಯದಶಮಿಯ ಮಹಾ ಮೆರವಣಿಗೆ ಹಾಗೂ ಪಂಜಿನ ಕವಾಯತಿನೊಂದಿಗೆ ವೈಭವದ ಪರಾಕಾಷ್ಠೆ ತಲುಪಲಿದೆ.

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಕಾಂಗ್ರೆಸ್‌ ಪ್ರತಿಭಟನೆ; ಸಿಎಂ, ಸಚಿವರ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಕಾಂಗ್ರೆಸ್‌ ಪ್ರತಿಭಟನೆ; ಕ್ರಮಕ್ಕೆ ಆಗ್ರಹ

ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಲ್ಲ. ಅದು ಸಂವಿಧಾನಾತ್ಮಕವಾಗಿ ಸ್ವತಂತ್ರವಾದ ಚುನಾವಣಾ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಇಂತಹ ಸಂಸ್ಥೆಯ ಕಚೇರಿ ಆವರಣವನ್ನೇ ರಾಜಕೀಯ ಪ್ರತಿಭಟನೆಗೆ ಬಳಸಿಕೊಳ್ಳಲು ಅವಕಾಶ ನೀಡಿರುವುದು ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆ ಹಾಗೂ ಸಾರ್ವಜನಿಕರ ವಿಶ್ವಾಸದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಪೊಲೀಸ್‌ ಇಲಾಖೆ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ.

ಪಡಿತರ ಕೆವೈಸಿಗೆ ಮೊಬೈಲ್‌ App

ಪಡಿತರ ಕೆವೈಸಿಗೆ ಮೊಬೈಲ್‌ App

ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮೀಣ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಫಲಾನುಭವಿಗಳು ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಾವೇ ಖುದ್ದಾಗಿ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದೆ. ಹೊಸ ಆಪ್‌ಗೆ ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು ಗುರುವಾರ ಚಾಲನೆ ನೀಡಿದರು.

K.J. George: ರಾಜ್ಯ ಕ್ರಿಕೆಟ್ ತಂಡಗಳಿಗೆ ಪ್ರವಾಸೋದ್ಯಮ ಇಲಾಖೆ, ಕೆಎಸ್‌ಟಿಡಿಸಿ-ಜೆಎಲ್‌ಆರ್ ಪ್ರಾಯೋಜಕತ್ವ: ಕ್ರಿಕೆಟ್ ಮೂಲಕ ರಾಜ್ಯ ಟೂರಿಸಂಗೆ ಪ್ರಚಾರ: ಜಾರ್ಜ್

ಕ್ರಿಕೆಟ್ ಮೂಲಕ ರಾಜ್ಯ ಟೂರಿಸಂಗೆ ಪ್ರಚಾರ: ಜಾರ್ಜ್

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ನಡೆದ ಪ್ರಾಯೋಜಕತ್ವ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕ್ಟಿವ್ ಕರ್ನಾಟಕ ಪರಿಕಲ್ಪನೆಯಡಿ ಕ್ರೀಡೆ ಮತ್ತು ಪ್ರವಾಸೋದ್ಯಮವನ್ನು ಪರಸ್ಪರ ಜೋಡಿಸುವ ಉದ್ದೇಶ ಹೊಂದಲಾಗಿದೆ. ಕ್ರೀಡೆಯ ಮೂಲಕ ಪ್ರವಾಸೋದ್ಯಮ ಉತ್ತೇಜಿ ಸುವುದು ಹಾಗೂ ಪ್ರವಾಸೋದ್ಯಮದ ಮೂಲಕ ಕ್ರೀಡೆಗೆ ಹೊಸ ಅವಕಾಶ ಸೃಷ್ಟಿಸುವುದು ಸಹಭಾಗಿತ್ವದ ಉದ್ದೇಶವಾಗಿದೆ ಎಂದರು.

ಅಲೋಕ್ ವಿರುದ್ದದ ಹಳೇ ಪ್ರಕರಣ ಕೆದಕಿದ ಸರಕಾರ: ಕೆಪಿಎಸ್‌ಸಿ ಅಕ್ರಮ: ಎಸ್‌ʼಐಟಿ ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ

ಎಸ್‌ʼಐಟಿ ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ

ಹೈಕೋರ್ಟ್ ಸೂಚಿಸಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಈ ಹಿಂದೆ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐ ವಿಚಾರಣೆ ಎದುರಿಸಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಯ ಮೇಲಿರುವ ಆರೋಪಗಳ ಕುರಿತ ದಾಖಲೆಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಭ್ಯರ್ಥಿಗಳ ಪರ ವಕೀಲರು, ಸರಕಾರಕ್ಕೆ ಈ ತನಿಖೆಗೆ ಹಿಂಜರಿಕೆ ಏಕೆ? ತಮಗೆ ಬೇಕಾದ ಅಧಿಕಾರಿಗಳನ್ನೇ ನೇಮಿಸಬೇಕೆಂಬ ಉದ್ದೇಶವಿದೆಯೇ? ಅಧಿಕಾರಿಗಳ ಮೇಲೆ ಆಕ್ಷೇಪವಿದ್ದರೆ ಹೈಕೋರ್ಟ್‌ಗೆ ಹೋಗಬೇಕಿತ್ತು ಎಂದು ವಾದಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಭದ್ರತಾ ಲೋಪ; ಖೈದಿ ಬಳಿ ಮೊಬೈಲ್ ಪತ್ತೆ, ನಗದು ಜಪ್ತಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪತ್ತೆ, ನಗದು ಜಪ್ತಿ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಮ್ಮೆ ಭಾರಿ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಜೈಲು ಅಧಿಕಾರಿಗಳು ನಡೆಸಿದ ಜಂಟಿ ಅನಿರೀಕ್ಷಿತ ತಪಾಸಣೆಯ ವೇಳೆ ಕೈದಿಗಳ ಬಳಿ ಇದ್ದ ಒಂದು ಮೊಬೈಲ್‌ ಹಾಗೂ ಮೂರು ಸಿಮ್ ಕಾರ್ಡ್‌ಗಳು ಹಾಗೂ ರೂ. 8,500 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ

Nandi Hills: ಅನಾರೋಗ್ಯದ ಅವಧಿಯಲ್ಲಿ ನಂದಿಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರೆಂದು ದಾಖಲೆಯ ಸಾಕ್ಷಿ

ಗಾಂಧೀಜಿಯ ನಂದಿ ಗಿರಿಧಾಮ ಭೇಟಿ: ಇತಿಹಾಸದ ಒಂದು ನೆನಪು

ನಂದಿ ಗಿರಿಧಾಮವು ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ಸ್ವಾತಂತ್ರ‍್ಯ ಚಳವಳಿಯ ಕಾಲಘಟ್ಟದ ಕೆಲವು ಪ್ರಮುಖ ನೆನಪುಗಳಿಗೂ ಪ್ರಸಿದ್ಧವಾಗಿದೆ. ಲಭ್ಯವಿರುವ ಸ್ಥಳೀಯ ಹಾಗೂ ಸರ್ಕಾರಿ ದಾಖಲೆಗಳ ಪ್ರಕಾರ, ಮಹಾತ್ಮ ಗಾಂಧೀಜಿ ತಮ್ಮ ಸಾರ್ವಜನಿಕ ಜೀವನದ ಅವಧಿಯಲ್ಲಿ ನಂದಿ ಬೆಟ್ಟಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಈ ಎರಡೂ ಅವಧಿಯಲ್ಲಿ 65 ರಿಂದ 66 ದಿನಗಳ ಕಾಲ ಇಲ್ಲಿ ತಂಗಿ ವಿಶ್ರಾಂತಿ ಪಡೆದ ಬಗ್ಗೆ ದಾಖಲೆಗಳಿವೆ.

B Y Vijayendra: 50 ಲಕ್ಷ ಮತದಾರರನ್ನು ಕೈಬಿಡುವ ಷಡ್ಯಂತ್ರದ ಆರೋಪವನ್ನು ಸಿಎಂ ಸಾಬೀತುಪಡಿಸಲಿ: ಬಿ.ವೈ. ವಿಜಯೇಂದ್ರ

ಮತದಾರರನ್ನು ಕೈಬಿಡುವ ಷಡ್ಯಂತ್ರ: ಸಿಎಂ ಆರೋಪ ಸಾಬೀತುಪಡಿಸಲಿ

ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಹಾಗೂ Form-7 ಅರ್ಜಿಗಳ ವಿಚಾರದಲ್ಲಿ ಬಿಜೆಪಿ(Bharatiya Janatha Party) ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Chief Minister D K Shivakumar) ಮಾಡಿರುವ ಆರೋಪಗಳು ಅತ್ಯಂತ ಗಂಭೀರವಾಗಿವೆ. ಅಹಿಂದ(Ahinda) ವರ್ಗದ ಮತದಾರರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿ ದ್ದಾರೆ.

CM's Medal recipient CPI Sharanabasappa Kodla suspended: ಅಕ್ಕಿ ಕಳ್ಳರ ಜತೆ ಪೊಲೀಸರ ‘ಡೀಲ್’: ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಸೇರಿ ನಾಲ್ವರು ಅಮಾನತು

ಅಕ್ಕಿ ಕಳ್ಳರ ಜತೆ ಪೊಲೀಸರ ‘ಡೀಲ್’: ಸಿಪಿಐ ಸೇರಿ ನಾಲ್ವರು ಅಮಾನತು

ಮುಖ್ಯಮಂತ್ರಿ ಪದಕ ಪಡೆದಿದ್ದ ಸಿಪಿಐ ಶರಣಬಸಪ್ಪ ಕೋಡ್ಲಾ ಅವರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿ ಬಂದು ಅಮಾನತು ಕ್ರಮಕ್ಕೆ ಒಳಗಾಗಿರುವುದು ಪೊಲೀಸ್ ಇಲಾಖೆಯಲ್ಲಿ ಗಮನ ಸೆಳೆದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರ ತವರು ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Srikanth Shetty Karkala: ಅಂಬೇಡ್ಕರ್‌ರಿಂದ ಹಿಂದೂ ಸಮಾಜ ಬಲಪಡಿಸುವ ಕಾರ್ಯ: ಶ್ರೀಕಾಂತ್ ಶೆಟ್ಟಿ

ಅಂಬೇಡ್ಕರ್‌ರಿಂದ ಹಿಂದೂ ಸಮಾಜ ಬಲಪಡಿಸುವ ಕಾರ್ಯ

ಕಲಬುರಗಿ ಕೋಟೆಯ ಮುಂಭಾಗದಲ್ಲಿ ಪ್ರತಿಷ್ಠಾಪನೆಗೊಂಡಿರುವ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿದ ಹಿಂದೂ ಕೋಡ್ ಬಿಲ್‌ನಲ್ಲಿ ಕ್ರೈಸ್ತ, ಮುಸ್ಲಿಂ, ಯಹೂದಿ ಹಾಗೂ ಪಾರ್ಸಿಗಳನ್ನು ಹೊರತುಪಡಿಸಿ ಉಳಿದವರನ್ನು ಹಿಂದೂಗಳೆಂದು ಪರಿಗಣಿಸುವ ಮೂಲಕ ಸಮಾಜವನ್ನು ಏಕಸೂತ್ರದಡಿ ತರಲು ಪ್ರಯತ್ನಿಸ ಲಾಗಿತ್ತು ಎಂದರು.

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ವರುಣನ ಅಬ್ಬರ; ಯಾವ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ?

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ವರುಣನ ಅಬ್ಬರ

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. . ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನೇಕ ಕಡೆ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.

ದಲಿತ ಸಮುದಾಯದ ಪರ ಶಾಸಕ ಪ್ರದೀಪ್ ಈಶ್ವರ್ ಖಡಕ್ ನಿಲುವು; ಜಿಲ್ಲೆಯ ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ತಿರುವು

ಹಳಸಿದ ಗುರು–ಶಿಷ್ಯರ ಸಂಬಂಧಕ್ಕೆ ದೇವಾಲಯ ಪ್ರವೇಶ ನಿರಾಕರಣೆಯ ಕಿಡಿ!

ಸೆ.29ರಂದು ಬರೆದಿರುವ ಪತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ದಲಿತರ ಮೇಲಿನ ದೌರ್ಜನ್ಯ, ದೇವಾಲಯ ಪ್ರವೇಶ ನಿರಾಕರಣೆ ಹಾಗೂ ಚಿಂತಾಮಣಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿರುವ ಕುರಿತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಊಲವಾಡಿ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ದಲಿತರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಫಾರ್ಮ್‌ 7 ಬಗ್ಗೆ ಕಾಂಗ್ರೆಸ್‌ ಮಾಡಿರುವ ಆರೋಪ ಸಂಪೂರ್ಣ ಸುಳ್ಳು: ಆರ್‌. ಅಶೋಕ್‌

ಫಾರ್ಮ್‌ 7 ಬಗ್ಗೆ ಕಾಂಗ್ರೆಸ್‌ ಮಾಡಿರುವ ಆರೋಪ ಸಂಪೂರ್ಣ ಸುಳ್ಳು

R Ashok: ಫಾರ್ಮ್‌ 7 ಮುದ್ರಿಸುವುದು ತಪ್ಪಾದರೆ ಅದರ ವಿರುದ್ಧ ಕಾಂಗ್ರೆಸ್‌ ಕೋರ್ಟ್‌ ಮೊರೆ ಹೋಗಬೇಕು. ಅದನ್ನು ಬಿಟ್ಟು ಈ ರೀತಿ ಬಿಜೆಪಿ ವಿರುದ್ಧ ಆರೋಪ ಮಾಡಬಾರದು. ದೂರು ನೀಡದಿದ್ದರೂ ಚುನಾವಣಾ ಆಯೋಗ ಏಕೆ ಉತ್ತರ ನೀಡಬೇಕು? ಪಾರದರ್ಶಕತೆ ಬೇಕೆಂದರೆ ಅದಕ್ಕೂ ಎಸ್‌ಐಟಿ ರಚಿಸಲಿ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಹೇಳಿದ್ದಾರೆ.

Chikkaballapur News: ಹಿರಿಯರ ಅನುಭವ ಹೊಸ ಪೀಳಿಗೆಗೆ ದಾರಿದೀಪವಾಗಲಿ: ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ

ಹಿರಿಯರನ್ನು ನಿರ್ಲಕ್ಷಿಸುವುದು ನಾಗರಿಕ ಸಮಾಜದ ಲಕ್ಷಣವಲ್ಲ

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 2026-27ನೇ ಸಾಲಿನ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Voter Deletion Claims: ರಾಜ್ಯ ಕಾಂಗ್ರೆಸ್‌ ಪ್ರತಿಭಟನೆಗೆ ಚುನಾವಣಾ ಆಯೋಗ ಸ್ಪಂದನೆ; SIRನಲ್ಲಿ ಸುಳ್ಳು ಆಕ್ಷೇಪಣೆ ಮೂಲಕ ಫಾರಂ-7 ಸಲ್ಲಿಸಿದವರ ವಿರುದ್ಧ ಕ್ರಮಕ್ಕೆ ಆದೇಶ

SIR ಅಕ್ರಮ; ಸುಳ್ಳು ಆಕ್ಷೇಪಣೆ ಸಲ್ಲಿಸಿದವರ ವಿರುದ್ಧ ಕ್ರಮಕ್ಕೆ ಆದೇಶ

Congress Protest: ಚುನಾವಣಾ ನೋಂದಣಿ ಅಧಿಕಾರಣಿಗಳಿಗೆ (ERO) ನಮೂನೆ 7 ರಲ್ಲಿ ಬೃಹತ್ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವ ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ. ಅರ್ಜಿಯಲ್ಲಿ ಲಿಖಿತವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆ ಅಥವಾ ಘೋಷಣೆ ನೀಡಿದ ಅರ್ಜಿದಾರರ ವಿರುದ್ಧ ಸಂಬಂಧಪಟ್ಟ EROಗಳು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೂಚನೆ ನೀಡಿದ್ದಾರೆ.

Vishwavani Impact: ವಿಶ್ವವಾಣಿ ವರದಿಗೆ ಎಚ್ಚೆತ್ತ ಅಧಿಕಾರಿಗಳು: ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

ನೀರಿನ ಕಾಮಗಾರಿ ಪರಿಶೀಲನೆ

ಅಗ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಭಾವಿ ಗ್ರಾಮದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ ಕುರಿತು ವಿಶ್ವವಾಣಿಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದಾರೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಎಚ್ .ಡಿ. ಪಾಟೀಲ್ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Korthi Bridge: ಕತ್ತಲಿನ ನಡುವೆ ತಡೆಗೋಡೆಗಳ ಅಪಾಯ: ಕತ್ತಲಾದ ಕೋರ್ತಿ ಸೇತು

ಕತ್ತಲಾದ ಕೋರ್ತಿ ಸೇತು

ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬರುವ ಕೃಷ್ಣಾ ನದಿಗೆ ಅಡ್ಡಲಾಗಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋರ್ತಿಯಿಂದ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ. ಉದ್ದದ ಬೃಹತ್ ಸೇತುವೆ ನಿರ್ಮಿಸಿದ್ದು, ಅಲ್ಲಿ ವಿದ್ಯುತ್ ದೀಪಗಳು ಇದ್ದರೂ ರಾತ್ರಿ ವೇಳೆಯಲ್ಲಿ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ.

ಮೂರು ಯೋಜನೆಗಳಿಂದ ಜಿಲ್ಲೆಯ ವ್ಯವಸ್ಥೆ ಅಸ್ತವ್ಯಸ್ತ: ಅಶಾಂತಿ, ಆತಂಕದ ಸುಳಿಯಲ್ಲಿ ಉತ್ತರ ಕನ್ನಡ ಜಿಲ್ಲೆ

ಅಶಾಂತಿ, ಆತಂಕದ ಸುಳಿಯಲ್ಲಿ ಉತ್ತರ ಕನ್ನಡ ಜಿಲ್ಲೆ

ಒಂದೆಡೆ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಕತ್ತಿ ಮಸೆಯುತ್ತಿರುವ ಕಾನೂನುಗಳು, ಮತ್ತೊಂದೆಡೆ ಜನ ವಿರೋಧಿ ನದಿ ತಿರುವು ಯೋಜನೆಗಳು ಹಾಗೂ ಸ್ಥಳೀಯ ಸ್ವಾಯತ್ತತೆಗೆ ಧಕ್ಕೆ ತರುವ ಆಡಳಿ ತಾತ್ಮಕ ಆದೇಶಗಳು ಜಿಲ್ಲೆಯ ಜನರನ್ನು ಬೀದಿಗಿಳಿಯುವಂತೆ ಮಾಡಿದೆ. ತಮ್ಮ ಅಸ್ತಿತ್ವ, ಬದುಕು ಮತ್ತು ಉಳಿವಿಗಾಗಿ ಜಿಲ್ಲೆಯ ಜನತೆ ಹೋರಾಟದ ಹಾದಿ ಹಿಡಿದಿದ್ದು, ಈ ಮೂರು ಪ್ರಮುಖ ಬಿಕ್ಕಟ್ಟುಗಳು ಜಿಲ್ಲೆಯ ಒಟ್ಟು ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿವೆ.

ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಸಾಹಸ ಶ್ಲಾಘಿಸಿದ ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲೇಟ್‌ ಜನರಲ್‌

ಸ್ಮಿತ್ ಮಚ್ಚಾರ್‌ ಸಾಹಸ ಶ್ಲಾಘಿಸಿದ ಇಸ್ರೇಲ್‌ನ ಕಾನ್ಸುಲೇಟ್‌ ಜನರಲ್‌

Captain Smit Machchhar: ಫ್ಲೈದುಬೈ ವಿಮಾನ ಪತನಗೊಳಿಸಲು ಯತ್ನಿಸಿದ್ದ ಒಮಾನ್‌ ದೇಶದ ಕೋ ಪೈಲಟ್‌ನ ದುಷ್ಕೃತ್ಯ ವಿಫಲಗೊಳಿಸಿರುವ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರ ಸಾಹಸವನ್ನು ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲೇಟ್‌ ಜನರಲ್‌ ಒರ್ಲಿ ವಿಟ್ಜ್‌ಮನ್‌ ಶ್ಲಾಘಿಸಿದ್ದಾರೆ.

Athletic sports: ರಾಷ್ಟ್ರೀಯ ಅಂತರ ಜಿಲ್ಲಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ತಂಡ ಆಯ್ಕೆ

ಅಂತರ ಜಿಲ್ಲಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ತಂಡ ಆಯ್ಕೆ

14 ಮತ್ತು 16 ವರ್ಷದ ಬಾಲಕ–ಬಾಲಕಿಯರ ವಿಭಾಗದಲ್ಲಿ ವಿವಿಧ ಓಟ, ಜಿಗಿತ, ಗುಂಡು ಎಸೆತ, ಭರ್ಜಿ ಎಸೆತ ಸೇರಿದಂತೆ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಆಯ್ಕೆ ನಡೆಯಲಿದ್ದು, ಜಿಲ್ಲೆಯಿಂದ 13 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ. 14 ವರ್ಷದ ವಿಭಾಗಕ್ಕೆ 17-11-2012ರಿಂದ 16-11-2014ರೊಳಗೆ ಹಾಗೂ 16 ವರ್ಷದ ವಿಭಾಗಕ್ಕೆ 17-11-2010ರಿಂದ 16-11-2012ರೊಳಗೆ ಜನಿಸಿದ ಕ್ರೀಡಾಪಟುಗಳು ಅರ್ಹರಾಗಿರುತ್ತಾರೆ

ಸಕ್ಕರೆ ದಾಸ್ತಾನು 1,000 ಕ್ವಿಂಟಲ್‌ ಮೀರುವಂತಿಲ್ಲ; ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರ ಕ್ರಮ

ಸಕ್ಕರೆ ದಾಸ್ತಾನು 1,000 ಕ್ವಿಂಟಲ್‌ ಮೀರುವಂತಿಲ್ಲ: ಕೇಂದ್ರ ಸರ್ಕಾರ ಆದೇಶ

Pralhad Joshi: ಸಕ್ಕರೆ ವ್ಯಾಪಾರಿಗಳಲ್ಲಿ ದಾಸ್ತಾನು ಸ್ವೀಕರಿಸಿದ ದಿನಾಂಕದಿಂದ 15 ದಿನ ಮೀರಿದ ಅವಧಿಗೆ ದಾಸ್ತಾನು ಇಡುವಂತಿಲ್ಲ. ದೇಶಾದ್ಯಂತ ಯಾವುದೇ ಸಮಯ-ಸ್ಥಳದಲ್ಲಿ ಸಾವಿರ ಕ್ವಿಂಟಲ್‌ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದಿರಬಾರದು ಎಂದು ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಚಿವ ಎಚ್.ಸಿ.ಬಾಲಕೃಷ್ಣ ವಿರುದ್ಧ 36 ಎಕರೆ ಸರ್ಕಾರಿ ಭೂಮಿ ಒತ್ತುವರಿ ಆರೋಪ; ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಜೆಡಿಎಸ್‌

ಎಚ್.ಸಿ.ಬಾಲಕೃಷ್ಣ ವಿರುದ್ಧ 36 ಎಕರೆ ಸರ್ಕಾರಿ ಭೂಮಿ ಒತ್ತುವರಿ ಆರೋಪ!

ಬಡವರಿಗೆ ಹಂಚಿಕೆ ಆಗಬೇಕಿದ್ದ ಸರಕಾರಿ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ಸಚಿವ ಬಾಲಕೃಷ್ಣ ಅವರು ತಮ್ಮ ಪತ್ನಿ ರಮಾ ಬಾಲಕೃಷ್ಣ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಕೇವಲ 15 ದಿನಗಳ ಹಿಂದೆ ಆ ಭೂಮಿಯನ್ನು ಇನ್ನೊಬ್ಬರ ಹೆಸರಿಗೆ ಮಾಡಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್‌ ಆರೋಪಿಸಿದ್ದಾರೆ.

Loading...