Vishweshwar Bhat Column: ಏರ್ ಟ್ರಾಫಿಕ್ ಕಂಟ್ರೋಲ್ʼನ ಮಹತ್ವ
ವಿಮಾನಗಳ ಹಾರಾಟವನ್ನು ನಿರ್ವಹಿಸುವ ಎಟಿಸಿಯ ಪ್ರಮುಖ ಕೆಲಸಗಳೆಂದರೆ, ಗಗನದಲ್ಲಿ ವಿಮಾನಗಳ ಮಧ್ಯೆ ದೂರ ಕಾಯ್ದುಕೊಳ್ಳುವುದು, ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್ ಗೆ ಅನುಮತಿಸುವುದು, ಗಗನಮಾರ್ಗ ( air routes) ನಿರ್ವಹಣೆ, ತುರ್ತು ಪರಿಸ್ಥಿತಿಯಲ್ಲಿ ಮಾರ್ಗದರ್ಶನ ನೀಡುವುದು ಹಾಗೂ ವಾತಾವರಣದ ತ್ವರಿತ ಮಾಹಿತಿ ಹಂಚಿಕೆ.


ಸಂಪಾದಕರ ಸದ್ಯಶೋಧನೆ
ವಿಮಾನ ನಿಲ್ದಾಣದಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ ( Air Traffic Control- ATC) ಇಡೀ ವಿಮಾನ ಹಾರಾಟದ ನರಮಂಡಲ ಇದ್ದ ಹಾಗೆ. ಟೇಕಾಫ್, ಲ್ಯಾಂಡಿಂಗ್ನಿಂದ ಹಿಡಿದು ವಿಮಾನದ ಪ್ರತಿ ಚಲನವಲನವನ್ನು ನಿಯಂತ್ರಿಸುವುದು ಎಟಿಸಿ.
ಇದು ವಿಮಾನಯಾನದಲ್ಲಿ ಅತ್ಯಂತ ಪ್ರಮುಖ ಹಾಗೂ ಜವಾಬ್ದಾರಿಯುತ ವಿಭಾಗ. ಅದರ ಅಣತಿ ಯಿಲ್ಲದೇ ವಿಮಾನ ಒಂದಂಗುಲ ಕದಲುವುದಿಲ್ಲ. ಇಂಥ ಎಟಿಸಿ ಸಿಬ್ಬಂದಿಯಿಂದಲೂ ತಪ್ಪುಗಳು ಸಂಭವಿಸುವ ಸಾಧ್ಯತೆ ಇದೆಯಾ? ವಿಮಾನಗಳ ಭದ್ರತೆ, ನಿಖರ ದಿಕ್ಕು ನಿರ್ವಹಣೆ, ಸಮಯಪಾಲನೆ ಮತ್ತು ಸುಗಮ ವಾಯುಸಂಚಾರಕ್ಕಾಗಿ ಎಟಿಸಿ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಕೆಲಸವು ಮಾನವೀಯ ಶ್ರಮ ಹಾಗೂ ತಂತ್ರಜ್ಞಾನ ಎರಡರ ಸಹಾಯದಿಂದ ನಡೆಯುತ್ತದೆ.
ನಿಗೂಢವಾಗಿ ನಿಯಂತ್ರಿಸಬೇಕಾದ ಈ ವ್ಯವಸ್ಥೆಯಲ್ಲಿ ಕೆಲವೊಮ್ಮೆ ತಪ್ಪುಗಳು ಸಂಭವಿಸಬಹುದು. ವಿಮಾನಗಳ ಹಾರಾಟವನ್ನು ನಿರ್ವಹಿಸುವ ಎಟಿಸಿಯ ಪ್ರಮುಖ ಕೆಲಸಗಳೆಂದರೆ, ಗಗನದಲ್ಲಿ ವಿಮಾನಗಳ ಮಧ್ಯೆ ದೂರ ಕಾಯ್ದುಕೊಳ್ಳುವುದು, ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್ ಗೆ ಅನುಮತಿಸುವುದು, ಗಗನಮಾರ್ಗ ( air routes ) ನಿರ್ವಹಣೆ, ತುರ್ತು ಪರಿಸ್ಥಿತಿಯಲ್ಲಿ ಮಾರ್ಗ ದರ್ಶನ ನೀಡುವುದು ಹಾಗೂ ವಾತಾವರಣದ ತ್ವರಿತ ಮಾಹಿತಿ ಹಂಚಿಕೆ.
ಇದನ್ನೂ ಓದಿ: Vishweshwar Bhat Column: ವಿಮಾನದ ತುರ್ತು ಭೂಸ್ಪರ್ಶ
ಎಟಿಸಿಯ ಸಿಬ್ಬಂದಿ 3 ಪ್ರಮುಖ ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ. ಮೊದಲನೆಯದು, ಟವರ್ ಕಂಟ್ರೋಲ. ವಿಮಾನ ನಿಲ್ದಾಣದಲ್ಲಿ ಟೇಕಾ-, ಲ್ಯಾಂಡಿಂಗ್ ಹಾಗೂ ಭೂಮಿಯ ಮೇಲಿನ ವಿಮಾ ನದ ಚಲನೆಯ ನಿಯಂತ್ರಣ. ಎರಡನೆಯದು, ವಿಮಾನಗಳು ನಿಲ್ದಾಣದ ಗಗನದಲ್ಲಿ ಪ್ರವೇಶಿಸುವ ಹಂತ ( Approach Control) ದಲ್ಲಿ ನಿಯಂತ್ರಣ ಹಾಗೂ ಮೂರನೆಯದು, ವಿಮಾನಗಳು ನಡು ಗಗನದಲ್ಲಿ ಹಾರುತ್ತಿರುವಾಗ ಅದರ ಪಥ (Area/En-route Control) ನಿರ್ವಹಣೆ.
ಈ ಸಿಬ್ಬಂದಿ 20-30 ವಿಮಾನಗಳ ಸಂಚಾರವನ್ನು ಏಕಕಾಲದಲ್ಲಿ ನಿಯಂತ್ರಿಸುತ್ತಿರುತ್ತಾರೆ. ಪ್ರತಿ ವಿಮಾನಕ್ಕೂ ಬೇರೆಬೇರೆ ಸೂಚನೆಗಳು, ದಿಕ್ಕು, ಎತ್ತರ ಇತ್ಯಾದಿ ನಿಯಮಗಳಿರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ತಪ್ಪುಗಳ ಮೂಲ ಸಿಬ್ಬಂದಿಯ ದೋಷವೂ ಆಗಿರುವುದುಂಟು. ಎಟಿಸಿ ನಿರ್ವಹಣೆ ಸುಲಭವಲ್ಲ. ಅದು ಸದಾ ಅತ್ಯಂತ ಒತ್ತಡದ ಕೆಲಸ. ನಿರಂತರ ಎಚ್ಚರಿಕೆ, ಗಮನ ಹಾಗೂ ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಮಾನವೀಯ ತಪ್ಪುಗಳು ಆಗಬಹುದು.
ಉದಾಹರಣೆಗೆ, ಏಕಕಾಲದಲ್ಲಿ 2 ವಿಮಾನಗಳಿಗೆ ಸಮಾನ ಎತ್ತರ ಹಾಗೂ ದಿಕ್ಕಿನ ಸೂಚನೆ ನೀಡುವುದು. ಇದರ ಪರಿಣಾಮವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಎಟಿಸಿ ಸಿಬ್ಬಂದಿ 8 ಗಂಟೆ ಗಳಷ್ಟು ತೀವ್ರ ಒತ್ತಡದ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಾರೆ. ಅನಿಯಮಿತ ನಿದ್ರೆ, ವಿಶ್ರಾಂತಿಯ ಕೊರತೆ, ಉದ್ವೇಗ, ವೈಯಕ್ತಿಕ ತಾಪತ್ರಯ, ಚಿಂತೆ ಮುಂತಾದವು ದೋಷಗಳಿಗೆ ಕಾರಣವಾಗ ಬಹುದು.
ಉದಾಹರಣೆಗೆ, 2006ರಲ್ಲಿ ಬ್ರೆಜಿಲ್ನಲ್ಲಿ ಸಂಭವಿಸಿದ ವಿಮಾನ ಅಪಘಾತಕ್ಕೆ ಎಟಿಸಿ ಸಿಬ್ಬಂದಿಯ ತಪ್ಪು ಪ್ರಮುಖ ಕಾರಣವಾಗಿತ್ತು. ವಿಮಾನಗಳೊಂದಿಗೆ ಎಟಿಸಿ ನಿಖರ ಸಂಪರ್ಕವನ್ನು ಇಟ್ಟುಕೊಳ್ಳ ಬೇಕು. ಆದರೆ ಕೆಲವು ಸಮಯದಲ್ಲಿ ರೇಡಿಯೋ ತಂತ್ರಜ್ಞಾನದಲ್ಲಿ ಅಡೆತಡೆಯಾಗಬಹುದು ಅಥವಾ ಪೈಲಟ್ ಮತ್ತು ಎಟಿಸಿ
ಸಿಬ್ಬಂದಿ ನಡುವಿನ ಅರ್ಥದ ವ್ಯತ್ಯಾಸದಿಂದ ತಪ್ಪುಗಳು ಸಂಭವಿಸಬಹುದು. ಉದಾಹರಣೆಗೆ, ‘ Descend to 7000 feet' (7000 ಅಡಿಗೆ ಇಳಿಸಿ)ಎನ್ನುವ ಬದಲು ‘Climb to 7000 feet' (7000 ಅಡಿಗೆ ಮೇಲೇರಿಸಿ) ಎಂದು ತಪ್ಪಾಗಿ ಅರ್ಥೈಸಿದರೆ ಅಪಾಯ ಸಂಭವಿಸಬಹುದು. ರಡಾರ್, ಕಮ್ಯುನಿ ಕೇಶನ್ ಸಿಸ್ಟಮ್, ಡೇಟಾ ಲಿಂಕ್ ಇತ್ಯಾದಿಯಲ್ಲಿ ತಾಂತ್ರಿಕ ದೋಷಗಳು ಸಂಭವಿಸಿದರೆ ಎಟಿಸಿ ಸಿಬ್ಬಂದಿಗೆ ಸದ್ಯದ ಮಾಹಿತಿ ಲಭ್ಯವಾಗದೆ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.
ಹೊಸ ಎಟಿಸಿ ಸಿಬ್ಬಂದಿಗೆ ತಕ್ಷಣವೇ ಎಲ್ಲ ತಾಂತ್ರಿಕತೆ, ಮಾನವ ಸಂವಹನ ಹಾಗೂ ತುರ್ತು ನಿರ್ವಹಣಾ ಶಕ್ತಿಯ ಅಭ್ಯಾಸ ಇಲ್ಲದಿರುವ ಸಾಧ್ಯತೆ ಇದೆ. ಇದರಿಂದ ತ್ವರಿತ ನಿರ್ಧಾರಗಳ ವೇಳೆ ತಪ್ಪುಗಳು ಆಗಬಹುದು. ತಪ್ಪಾದ ಗಗನಮಾರ್ಗ ಸೂಚನೆಯಿಂದ ವಿಮಾನವು ಹೆಚ್ಚಾಗಿ ಇಂಧನ ಬಳಕೆ ಮಾಡಬಹುದು ಅಥವಾ ವಿಳಂಬವಾಗಬಹುದು.
ಕೆಲವೊಮ್ಮೆ ತಪ್ಪು ಸಂಯೋಜನೆಯಿಂದಾಗಿ ಎರಡು ವಿಮಾನಗಳು ತುಂಬಾ ಹತ್ತಿರವಾಗುತ್ತವೆ. ಇದನ್ನು near miss ಎನ್ನುತ್ತಾರೆ. ಇದು ಅಪಘಾತದಿಂದ ಮೀರಿ ಉಳಿದ ಸ್ಥಿತಿ. ಎಟಿಸಿ ಸಿಬ್ಬಂದಿ ತಪ್ಪು ಮಾಡಿದರೆ ಒಂದಕ್ಕಿಂತ ಹೆಚ್ಚು ವಿಮಾನಗಳ ಮೇಲೆ ಪರಿಣಾಮ ಬೀರಬಹುದು.