ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Auto Price hike: ಬೆಂಗಳೂರಿಗರಿಗೆ ಇನ್ನೊಂದು ಶಾಕ್‌, ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್

ಬಿಎಂಟಿಸಿ ಟಿಕೆಟ್‌ ದರ, ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೆ ಆಟೋ ಮೀಟರ್ ದರ ಹೆಚ್ಚಳಕ್ಕೆ ಆಟೋ ಚಾಲಕ ಮಾಲಿಕರಿಂದ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 12ರಂದು 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.

ಬೆಂಗಳೂರಿಗರಿಗೆ ಇನ್ನೊಂದು ಶಾಕ್‌, ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್

ಹರೀಶ್‌ ಕೇರ ಹರೀಶ್‌ ಕೇರ Mar 5, 2025 1:30 PM

ಬೆಂಗಳೂರು: ರಾಜಧಾನಿ (Bangalore) ನಿವಾಸಿಗಳಿಗೆ ಶಾಕ್‌ ಮೇಲೆ ಶಾಕ್‌ಗಳು ಅಪ್ಪಳಿಸುತ್ತಿವೆ. ಜನವರಿಯಲ್ಲಿ ಬಿಎಂಟಿಸಿ (BMTC) ಟಿಕೆಟ್‌ ದರ ಏರಿಕೆ, ಫೆಬ್ರವರಿಯಲ್ಲಿ ಮೆಟ್ರೋ (Metro) ದರ ಏರಿಕೆ ಬಳಿಕ ಇದೀಗ ಮಾರ್ಚ್‌ನಲ್ಲಿ ಆಟೋ ಮೀಟರ್ ದರ (Auto price hike) ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಬಿಎಂಟಿಸಿ ಟಿಕೆಟ್‌ ದರ, ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೆ ಆಟೋ ಮೀಟರ್ ದರ ಹೆಚ್ಚಳಕ್ಕೆ ಆಟೋ ಚಾಲಕ ಮಾಲಿಕರಿಂದ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 12ರಂದು 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ನಡೆಯಲಿರುವ ಮೀಟಿಂಗ್‌ನಲ್ಲಿ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಯಲಿದೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮೀಟರ್ ದರ ಹೆಚ್ಚಳ ಮಾಡುವಂತೆ ಆಟೋ ಚಾಲಕ ಸಂಘಟನೆಗಳು ಕಳೆದ ವರ್ಷವೇ ಮನವಿ ಮಾಡಿದ್ದವು. ಒಂದು ಕಿ.ಮೀಗೆ 5 ರುಪಾಯಿ, ಎರಡು ಕಿಮೀಗೆ 10 ರುಪಾಯಿ ಏರಿಕೆ ಮಾಡುವಂತೆ ಮನವಿ ಮಾಡಲಾಗಿತ್ತು. ಬೆಂಗಳೂರಲ್ಲಿ ಕನಿಷ್ಠ ಆಟೋ ಮೀಟರ್ ದರ ಎರಡು ಕಿಮೀಗೆ 30 ರುಪಾಯಿ ಇದೆ. ಮಿನಿಮಮ್ ದರವನ್ನು 40 ರುಪಾಯಿಗೆ ಏರಿಕೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು.

12ರಂದು ನಡೆಯಲಿರುವ ಸಭೆಯಲ್ಲಿ ದರ ಏರಿಕೆ ಬಗ್ಗೆ ತೀರ್ಮಾನ ಆಗಲಿದೆ. ಈ ಹಿಂದೆ ಕಡೆಯದಾಗಿ 2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು. ಇತ್ತ ಆಟೋ ಸಿಎನ್‌ಜಿ ಒಂದು ಕೆಜಿಗೆ 88 ರುಪಾಯಿ ಆಗಿದೆ. ಎಲ್‌ಪಿಜಿ ಕೆಜಿಗೆ 61 ರುಪಾಯಿ ಆಗಿದೆ. ಹಾಗಾಗಿ ಮೀಟರ್ ದರವೂ ಏರಿಕೆ ಮಾಡಲೇಬೇಕೆಂದು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ.

ಈ ಸಭೆಯಲ್ಲಿ ಟ್ರಾಫಿಕ್ ಈಸ್ಟ್ ಡಿಸಿಪಿ, ಆಟೋ ರಿಕ್ಷಾ ರಹದಾರಿ ಕಚೇರಿ ಆರ್ಟಿಓ, ರಾಜಾಜಿನಗರ ಆರ್ಟಿಓ ಅಧಿಕಾರಿ, ಜಯನಗರ ಆರ್ಟಿಓ ಅಧಿಕಾರಿ, ಕಾನೂನು ಮಾಪನ ಇಲಾಖೆಯ ಓರ್ವ ಅಧಿಕಾರಿ, ಗ್ರಾಹಕರ ವೇದಿಕೆಯಿಂದ ಒಬ್ಬರು ಪ್ರತಿನಿಧಿ ಹಾಗೂ ಬೆಂಗಳೂರಿನ ಎಲ್ಲಾ ಆಟೋ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ದರದಲ್ಲಿ 25 ಪೈಸೆ ಹೆಚ್ಚಳ: ಪ್ರಮುಖ ನಗರಗಳಲ್ಲಿ ಹೋಗಿದೆ ದರ...