Chikkaballapur News: ಬಲಿಜ ಕುಲ ಬಾಂಧವರು ಸಂಘಟಿತರಾಗಬೇಕು : ವೆಂಕಟೇಶ್
ತಾತಯ್ಯನವರ ಕಾಲ ಜ್ಙಾನ ಎಂದೆಂದಿಗೂ ಪ್ರಸ್ತುತ. ಸಮಾಜದಲ್ಲಿನ ಅಂಕು ಡೊಂಕು ಗಳನ್ನು ಸರಿಪಡಿಸಲು ಆಕಾಲದಲ್ಲಿ ತಾತಯ್ಯನವರು ಅವರ ಬರವಣಿಗೆಯ ಮೂಲಕ ಪ್ರಯತ್ನಿಸಿ ದರು. ಈ ಪುಟ್ಟ ಗ್ರಾಮದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ವಾಗಲು ನಾಗರೀಕರು ಬಲಿಜ ಕುಲಬಾಂಧವರು ಸಹಕಾರ ನೀಡಿದ್ದಾರೆ

ಬಲಿಜ ಕುಲಭಂಧವರೆಲ್ಲಾ ಸಂಘಟಿತರಾಗಿ ತಾಲೂಕು ಕೆಂದ್ರದಲ್ಲಿ ಬಲಿಜ ಭವನ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ ಎಂದು ಹೊಸೂರು ಗ್ರಾಮದ ನ್ಯಾಷನಲ್ ಶಾಲೆಯ ವಿಶ್ರಾಂತ ಶಿಕ್ಷಕರಾದ ವೆಂಕಟೇಶ್ ತಿಳಿಸಿದರು.

ಗೌರಿಬಿದನೂರು : ಬಲಿಜ ಕುಲಬಾಂಧವರೆಲ್ಲಾ ಸಂಘಟಿತರಾಗಿ ತಾಲೂಕು ಕೆಂದ್ರದಲ್ಲಿ ಬಲಿಜ ಭವನ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ ಎಂದು ಹೊಸೂರು ಗ್ರಾಮದ ನ್ಯಾಷ ನಲ್ ಶಾಲೆಯ ವಿಶ್ರಾಂತ ಶಿಕ್ಷಕರಾದ ವೆಂಕಟೇಶ್ ತಿಳಿಸಿದರು.
ಹೊಸೂರು ಗ್ರಾಮದಲ್ಲಿ ಬಲಿಜ ಸಂಘದಿಂದ ನಡೆದ ಕೈವಾರ ನಾರಾಯಣಪ್ಪ ತಾತನವರ 299ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾತಯ್ಯನವರ ಕಾಲ ಜ್ಙಾನ ಎಂದೆಂದಿಗೂ ಪ್ರಸ್ತುತ. ಸಮಾಜದಲ್ಲಿನ ಅಂಕು ಡೊಂಕು ಗಳನ್ನು ಸರಿಪಡಿಸಲು ಆಕಾಲದಲ್ಲಿ ತಾತಯ್ಯನವರು ಅವರ ಬರವಣಿಗೆಯ ಮೂಲಕ ಪ್ರಯತ್ನಿಸಿದರು.ಈ ಪುಟ್ಟ ಗ್ರಾಮದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ವಾಗಲು ನಾಗರೀಕರು ಬಲಿಜ ಕುಲಬಾಂಧವರು ಸಹಕಾರ ನೀಡಿದ್ದಾರೆ. ಜಯಂತಿ ಕಾರ್ಯ ಕ್ರಮಕ್ಕೆ ಸಹಕಾರ ನೀಡಿದವರಿಗೆಲ್ಲಾ ಕೃತಜ್ಙತೆ ಸಲ್ಲಿಸಿದರು.
ಹೊಸೂರು ಗ್ರಾಮದಲ್ಲಿ ನಡೆದ ಕೈವಾರ ತಾತಯ್ಯನವರ ಜಯಂತ್ಯುತ್ಸವದಲ್ಲಿ ಭಾವಚಿತ್ರ ವನ್ನು ಮೆರವಣಿಗೆ ಮಾಡಲಾಯಿತು.