ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Assault: ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಎಸ್ಕೇಪ್‌ ಆಗಿದ್ದ ಆರೋಪಿಗೆ ಕಾಲಿಗೆ ಗುಂಡೇಟು

ಉತ್ತರ ಕನ್ನಡದ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಫೈರೋಜ್‌ ಗುರುವಾರ ಮಧ್ಯಾಹ್ನ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯ ಪ್ರದೇಶದಲ್ಲಿ 60 ವರ್ಷದ ಅಂಗವಿಕಲ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ. ಅತ್ಯಾಚಾರ ಮಾಡಿ ಮೊಬೈಲ್ ಹಾಗೂ ₹5,000 ಕಳವು ಮಾಡಿ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದರು.

ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಕಾಲಿಗೆ ಗುಂಡೇಟು

Profile Rakshita Karkera Jun 15, 2025 12:08 PM

ಉತ್ತರಕನ್ನಡ : ಎರಡು ದಿನಗಳ ಹಿಂದೆ ವೃದ್ಧೆ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ(Pysical Assaualt) ಆರೋಪಿ ಕೊನೆಗೂ ಉತ್ತರಕನ್ನಡದ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧನದ ವೇಳೆ ಈತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿ, ಮತ್ತೆ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ವಿಧಿಯಿಲ್ಲದೇ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೊನೆಗೆ ಆತನನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನು ಬಂಧಿತ ಆರೋಪಿಯನ್ನು ಫೈರೋಜ್ ಯರಗಟ್ಟಿ (23) ಎಂದು ಗುರುತಿಸಲಾಗಿದೆ. ಸಿಬ್ಬಂದಿ ಇಮ್ರಾನ್ ಕಂಬಾರಗಣವಿ, ಕೃಷ್ಣಪ್ಪ ಬೆಳ್ಳಿವರಿ ಹಾಗೂ ಆರೋಪಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಏನಿದು ಪ್ರಕರಣ?

ಉತ್ತರ ಕನ್ನಡದ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಫೈರೋಜ್‌ ಗುರುವಾರ ಮಧ್ಯಾಹ್ನ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯ ಪ್ರದೇಶದಲ್ಲಿ 60 ವರ್ಷದ ಅಂಗವಿಕಲ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ. ಅತ್ಯಾಚಾರ ಮಾಡಿ ಮೊಬೈಲ್ ಹಾಗೂ ₹5,000 ಕಳವು ಮಾಡಿ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದರು.

ಆರೋಪಿಯನ್ನು ಪತ್ತೆ ಹಚ್ಚಲು ಸುಮಾರು ನೂರು ಜನರ ಪೋಟೋ ತೋರಿಸಿದ ನಂತರ ವೃದ್ಧೆ ಆರೋಪಿಯ ಗುರುತು ಪತ್ತೆ ಮಾಡಿದ್ದಳು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಳಗಿ ಅರಣ್ಯ ಪ್ರದೇಶದಲ್ಲಿ ಎಸ್‌ಐ ಕಿರಣ್ ಪಾಟೀಲ ನೇತೃತ್ವದ ತಂಡವು ಪತ್ತೆ ಹಚ್ಚಿ ಕರೆದುಕೊಂಡು ಬರುತ್ತಿರುವಾಗ ಪೋಲಿಸರ ಮೇಲೆ ಏಕಾಏಕಿ ಕಲ್ಲು ಮತ್ತು ಚಾಕುವಿನಿಂದ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Murder Case: ಕೋಲಾರದಲ್ಲಿ ಹೇಯ ಕೃತ್ಯ, 80ರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಕೊಲೆ