PAK vs NZ: ನ್ಯೂಜಿಲೆಂಡ್ ವಿರುದ್ಧ ಎರಡನೇ ಒಡಿಐ ಸೋತ ಬೆನ್ನಲ್ಲೆ ಪಾಕಿಸ್ತಾನಕ್ಕೆ ದಂಡ! ಇದಕ್ಕೆ ಕಾರಣವೇನು?
ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲ್ ಮಾಡಿದ ಪಾಕಿಸ್ತಾನ ತಂಡಕ್ಕೆ ದಂಡ ವಿಧಿಸಲಾಗಿದೆ. ಇದರಿಂದಾಗಿ ಇಡೀ ತಂಡಕ್ಕೆ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 5 ರಷ್ಟು ದಂಡವನ್ನು ವಿಧಿಸಲಾಗಿದೆ.

ಪಾಕಿಸ್ತಾನ ತಂಡಕ್ಕೆ ದಂಡ ವಿಧಿಸಿದ ಐಸಿಸಿ.

ನವದೆಹಲಿ: ನ್ಯೂಜಿಲೆಂಡ್ (New Zealand) ಪ್ರವಾಸವು ಪಾಕಿಸ್ತಾನ (Pakistan) ಕ್ರಿಕೆಟ್ ತಂಡದ ಪಾಲಿಗೆ ಅತ್ಯಂತ ಕೆಟ್ಟದಾಗಿ ಸಾಗುತ್ತಿದೆ. ಮೊದಲಿಗೆ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 4-1 ಅಂತರದ ಹೀನಾಯ ಸೋಲನ್ನು ಕಂಡಿದ್ದ ಪಾಕ್, ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ (NZ vs PAK) ಕಳೆದುಕೊಂಡಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೆ ಮೊಹಮ್ಮದ್ ರಿಝ್ವಾನ್ ನಾಯಕತ್ವದ ಪಾಕಿಸ್ತಾನ ತಂಡವನ್ನು ಐಸಿಸಿ ದಂಟವನ್ನು ವಿಧಿಸಿದೆ. ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾರಣ ಪಾಕ್‌ಗೆ ಪಂದ್ಯದ ಸಂಭಾವನೆಯಲ್ಲಿ ಶೇ 5 ರಷ್ಟು ದಂಡವನ್ನು ಹಾಕಲಾಗಿದೆ.
ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ನಿಧಾನಗತಿಯ ಬೌಲ್ ಮಾಡಿ ಪ್ರಮಾದವನ್ನು ಎಳೆದುಕೊಂಡಿದೆ. ಮ್ಯಾಚ್ ರೆಫರಿ ಜೆಫ್ ಕ್ರೋವ್ ಅವರು ಪಾಕಿಸ್ತಾನ ತಂಡದ ಎಲ್ಲಾ ಆಟಗಾರರಿಗೂ ಪಂದ್ಯದ ಸಂಭಾವನೆಯ ಶೇಕಡಾ 5 ರಷ್ಟು ದಂಡ ವಿಧಿಸಿದ್ದಾರೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಪಾಕಿಸ್ತಾನ ತಂಡವು ನಿಗದಿತ ಸಮಯದ ವೇಳೆಗೆ ಒಂದು ಓವರ್ ಕಡಿಮೆ ಬೌಲ್ ಮಾಡಿತ್ತು. ಇದರಿಂದಾಗಿ ಮ್ಯಾಚ್ ರೆಫರಿ ಈ ಶಿಕ್ಷೆಯನ್ನು ನೀಡಿದ್ದಾರೆ. ಪಾಕಿಸ್ತಾನ ತಂಡದ ಎಲ್ಲಾ ಆಟಗಾರರು ಈ ಶಿಕ್ಷೆಗೆ ಗುರಿಯಾಗಿದ್ದಾರೆ.
NZ vs PAK: ಎರಡನೇ ಪಂದ್ಯದಲ್ಲಿಯೂ ಪಾಕ್‌ಗೆ ಹೀನಾಯ ಸೋಲು, ಒಡಿಐ ಸರಣಿ ವಶಪಡಿಸಿಕೊಂಡ ಕಿವೀಸ್!
ಪಾಕಿಸ್ತಾನ ತಂಡಕ್ಕೆ ಸತತ ಎರಡನೇ ಬಾರಿ ದಂಡ
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸತತ ಎರಡನೇ ಬಾರಿ ದಂಡ ವಿಧಿಸಲಾಗಿದೆ. ಮೊದಲ ಏಕದಿನ ಪಂದ್ಯದಲ್ಲೂ ಪಾಕಿಸ್ತಾನ ತಂಡಕ್ಕೆ ನಿಗದಿತ ಸಮಯಕ್ಕೆ ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಎರಡನೇ ಪಂದ್ಯದಲ್ಲೂ ಅದೇ ಪ್ರಮಾದ ನಡೆಯಿತು. ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಝ್ವಾನ್, ಮ್ಯಾಚ್ ರೆಫರಿ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಯಾವುದೇ ವಿಚಾರಣೆ ಇರುವುದಿಲ್ಲ.
Pakistan sanctioned after conceding the ODI series to New Zealand.
— ICC (@ICC) April 3, 2025
Details 🔽https://t.co/hkHMv4bMBW
ಈ ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಮೊದಲ ಏಕದಿನ ಪಂದ್ಯದಲ್ಲಿ 73 ರನ್‌ಗಳಿಂದ ಸೋತಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನವನ್ನು 84 ರನ್‌ಗಳಿಂದ ಸೋಲಿಸಿತು. ಈ ಎರಡೂ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ತುಂಬಾ ಸಾಧಾರಣವಾಗಿದೆ. ಇದಲ್ಲದೆ, ಈಗ ಸರಣಿಯ ಮೂರನೇ ಪಂದ್ಯವು ಏಪ್ರಿಲ್ 5 ರಂದು ಬೇ ಓವಲ್‌ನಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಕಿವೀಸ್ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.