ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NZ vs PAK: ಎರಡನೇ ಪಂದ್ಯದಲ್ಲಿಯೂ ಪಾಕ್‌ಗೆ ಹೀನಾಯ ಸೋಲು, ಒಡಿಐ ಸರಣಿ ವಶಪಡಿಸಿಕೊಂಡ ಕಿವೀಸ್‌!

NZ Vs PAK 2nd Odi Highlights: ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದೆ. ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಮೊಬೈಲ್ ಸಂಖ್ಯೆಗಳಂತೆ ಒಂದೇ ಅಂಕಿಯಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ನ್ಯೂಜಿಲೆಂಡ್ ಪರ ಮಿಚೆಲ್‌ ಹೇ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಬೆನ್ ಸಿಯರ್ಸ್ ಬೌಲಿಂಗ್‌ನಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

NZ vs PA: ಕಿವೀಸ್‌ ಎದುರು ಪಾಕ್‌ಗೆ ಮತ್ತೊಂದು ಸೋಲಿನ ಮುಖಭಂಗ!

ಪಾಕ್‌ ಎದುರು ನ್ಯೂಜಿಲೆಂಡ್‌ಗೆ ಭರ್ಜರಿ ಜಯ.

Profile Ramesh Kote Apr 2, 2025 5:58 PM

ಹ್ಯಾಮಿಲ್ಟನ್‌: ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತೀವ್ರ ಮುಖಭಂಗ ಅನುಭವಿಸುತ್ತಿದೆ. ಮೊದಲಿಗೆ ಟಿ20ಐ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡ, ಇದೀಗ ಏಕದಿನ ಸರಣಿಯನ್ನೂ (PAK vs NZ) ಕಳೆದುಕೊಂಡಿದೆ. ಮಿಚೆಲ್‌ ಹೇ ಅವರ ಬಿರುಸಿನ ಬ್ಯಾಟಿಂಗ್ ಮತ್ತು ಬೆನ್ ಸಿಯರ್ಸ್ (ಐದು ವಿಕೆಟ್) ಅವರ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ನ್ಯೂಜಿಲೆಂಡ್ (New Zealand), ಪಾಕಿಸ್ತಾನ (Pakistan) ತಂಡವನ್ನು 84 ರನ್‌ಗಳಿಂದ ಮಣಿಸಿದೆ. ಇದರೊಂದಿಗೆ ಆತಿಥೇಯ ನ್ಯೂಜಿಲೆಂಡ್‌ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇಲ್ಲಿನ ಸೆಡಾನ್‌ ಪಾರ್ಕ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 293 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಪಾಕಿಸ್ತಾನ ತಂಡ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 41.2 ಓವರ್‌ಗಳಿಗೆ 208 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಪ್ರವಾಸಿ ಪಾಕಿಸ್ತಾನ ತಂಡ ಸೋಲು ಅನುಭವಿಸಿದೆ.

ನ್ಯೂಜಿಲೆಂಡ್ ತಂಡ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಪಾಕಿಸ್ತಾನದ ದೊಡ್ಡ ಬ್ಯಾಟ್ಸ್‌ಮನ್‌ಗಳು ವಿಫಲರಾದರು ಹಾಗೂ ಮೊಬೈಲ್ ಅಂಕಿಗಳಂತೆ ಒಂದಕ್ಕೆ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದ್ದಾರೆ. ಆರಂಭಿಕರಾದ ಅಬ್ದುಲ್ಲಾ ಶಫಿಕ್ 1, ಇಮಾಮ್ ಉಲ್ ಹಕ್ 3, ಬಾಬರ್ ಆಝಮ್ 1, ಕ್ಯಾಪ್ಟನ್ ಮೊಹಮ್ಮದ್ ರಿಝ್ವಾನ್ 5, ಸಲ್ಮಾನ್ ಅಘಾ 9, ಮೊಹಮ್ಮದ್ ವಸಿಂ ಜೂನಿಯರ್ 1, ಹ್ಯಾರಿಸ್ ರೌಫ್ 3, ಅಕಿಫ್ ಜಾವೇದ್ 8 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಈ ಎಲ್ಲಾ ಬ್ಯಾಟರ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.

NZ vs PAK: ಏಕದಿನ ಕ್ರಿಕೆಟ್‌ನಲ್ಲಿ ಕೃಣಾಲ್‌ ಪಾಂಡ್ಯ ದಾಖಲೆ ಮುರಿದ ಮುಹಮ್ಮದ್‌ ಅಬ್ಬಾಸ್‌!

73 ರನ್‌ ಕಲೆ ಹಾಕಿದ‌ ಫಹೀಮ್ ಅಶ್ರಫ್‌

ಫಹೀಮ್ ಅಶ್ರಫ್ ಪಾಕಿಸ್ತಾನದ ಪರ ವೈಯಕ್ತಿಕ ಗರಿಷ್ಠ 73 ರನ್ ಗಳಿಸಿದರು ಮತ್ತು ನಸೀಮ್ ಶಾ ಅವರೊಂದಿಗೆ 9 ನೇ ವಿಕೆಟ್‌ಗೆ 60 ರನ್‌ಗಳ ಜೊತೆಯಾಟವನ್ನು ಮಾಡಿದರು. ನಸೀಮ್ ಶಾ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿ 51 ರನ್ ಗಳಿಸಿದ್ದಾರೆ. ಇದು ಇವರಿಬ್ಬರ ಮೊದಲ ಏಕದಿನ ಅರ್ಧಶತಕವಾಗಿದೆ. ನ್ಯೂಜಿಲೆಂಡ್ ಪರ ವಿಲ್ ಒ'ರೂರ್ಕ್ ಮೊದಲ ಆರು ಓವರ್ಗಳಲ್ಲಿ ಎಂಟು ರನ್ ನೀಡಿ ಒಂದು ವಿಕೆಟ್ ಪಡೆದರು. ಅವರ ಚೆಂಡು ಪಾಕಿಸ್ತಾನದ ನಾಯಕ ಮೊಹಮ್ಮದ್ ರಿಝ್ವಾನ್‌ಗೆ ಎರಡು ಬಾರಿ ಬಡಿದಿತ್ತು.



ಇದಾದ ನಂತರ ಹ್ಯಾರಿಸ್ ರೌಫ್ ಅವರ ಬೌನ್ಸರ್‌ನಿಂದ ಹೆಲ್ಮೆಟ್‌ಗೆ ಚೆಂಡನ್ನು ತಗುಲಿಸಿಕೊಂಡಿದ್ದರು. ಕನ್ಕ್‌ಷನ್‌ (ಗಾಯದ ಕಾರಣ ಪ್ರಜ್ಞಾಹೀನನಾಗಿದ್ದ) ಪರೀಕ್ಷೆಯಲ್ಲಿ ವಿಫಲವಾದ ನಂತರ ರೌಫ್ ಗಾಯಗೊಂಡು ನಿವೃತ್ತರಾದರು ಮತ್ತು ನಸೀಮ್ಶಾ, ಹ್ಯಾರಿಸ್‌ ರೌಫ್‌ ಸ್ಥಾನದಲ್ಲಿ ಕಣಕ್ಕೆ ಇಳಿದರು. ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಸಿಯರ್ಸ್ ಐದು ವಿಕೆಟ್ ಪಡೆದರೆ, ಜಾಕೋಬ್ ಡಫಿ ಮೂರು ವಿಕೆಟ್ ಪಡೆದರು.



292 ರನ್‌ ಕಲೆ ಹಾಕಿದ್ದ ಕಿವೀಸ್‌

ಇದಕ್ಕೂ ಮುನ್ನ ನ್ಯೂಜಿಲೆಂಡ್ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 292 ರನ್ ಗಳಿಸಿತು, ಇದರಲ್ಲಿ ಮಿಚ್ ಹೇ 99 ರನ್ ಕೊಡುಗೆ ನೀಡಿದರು. ಅವರು ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 22 ರನ್ ಗಳಿಸಿದರು ಆದರೆ ,ಒಂದು ರನ್‌ನಿಂದ ಶತಕವನ್ನು ತಪ್ಪಿಸಿಕೊಂಡರು. ನೇಪಿಯರ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ 73 ರನ್‌ಗಳಿಂದ ಗೆದ್ದಿತ್ತು. ಮೂರನೇ ಪಂದ್ಯ ಶನಿವಾರ ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ.